ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, October 2, 2022

ಕಾಂತಾರ


 "ಕಾಂತಾರ ಒಂದು ದಂತಕಥೆ" ಕನ್ನಡ ನಾಡಿನ ಮಣ್ಣಿನ ಸೊಗಡನ್ನು ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ. ಮನುಷ್ಯ ಮತ್ತು ಕಾಡಿನ ನಡುವಿನ ಬಾಂದವ್ಯ ಹಾಗೂ ದೈವದ ಮಹತ್ವ ಇವುಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ದಕ್ಷಿಣ ಕರ್ನಾಟಕದ ಆಚರಣೆಗಳು,ಕಂಬಳ, ಇಲ್ಲಿಯ ದೈವಾರಾಧನೆ ಪಂಜುರ್ಲಿ, ಭೂತ ಕೋಲ ಮುಂತಾದ ವಿಚಾರಗಳನ್ನು ಪರಿಚಯಿಸುವ "ಕಾಂತಾರ" ಕನ್ನಡ ಸಿನಿರಂಗದ ಅತ್ಯುತ್ತಮ ಸಿನಿಮಾಗಳ ಸಾಲಿನಲ್ಲಿ ಬರುವ ಚಿತ್ರ. ರಿಷಬ್ ಶೆಟ್ಟಿ ಅವರು ಅಭಿನಯ ನಿರ್ದೇಶನಕ್ಕೆ ಖಂಡಿತವಾಗಿ ಮನಸ್ಸೋಲುತ್ತದೆ.. 

ಕನ್ನಡ ಸಿನಿಮಾದ RRR ಅಂದರೆ ರಕ್ಷಿತ್,ರಿಷಬ್,ರಾಜ್ ಶೆಟ್ಟಿ.. ಕಡಲ ತೀರದಿಂದ ಬಂದ ಈ ಪ್ರತಿಭೆಗಳು ಪ್ರಪಂಚದ ಸಿನಿರಸಿಕರನ್ನು ಕನ್ನಡ ಸಿನಿಮಾದ ಕಡೆ ನೋಡುವಂತೆ ಮಾಡಿದ್ದಾರೆ..

ಕಾಂತಾರ ಸಿನಿಮಾದಲ್ಲಿ ಬರುವ 'ಶಿವ'(ರಿಷಬ್) ತನ್ನ ಗಣದೊಂದಿಗೆ ಮೋಜು ಮಸ್ತಿಯಲ್ಲಿರುವ ವ್ಯಕ್ತಿ..‌ ಶಿಕಾರಿ ಸಾಹುಕಾರನ ಚಾಕರಿ ಇವನ ಕೆಲಸ.. ಕೈಲಾಸದಲ್ಲಿ ಇವನ ಆವಾಸ.. ಕಾಡಿಗೆ ಹೊಂದಿಕೊಂಡಿರುವ ಕರಾಡಿ ಇವರೂರು. ಶಿವನಿಗೊಬ್ಬಳು ಲೀಲಾ,‌ಇವರಿಬ್ಬರ ಶಿವಲೀಲೆ.. 

ಕಾಡಿನ ರಕ್ಷಣೆಗೆ ಬರುವ ಪ್ರಾಮಾಣಿಕ ಅರಣ್ಯಾಧಿಕಾರಿ ಮುರುಳಿ(ಕಿಶೋರ್)..‌ ಇವನು ಊರಿನ ಜನರಿಂದಾದ ಕಾಡಿನ ಒತ್ತುವಳಿಯನ್ನು ವಿರೋಧಿಸಿ ಕಾಡು, ಕಾಡಿನ ಸಂಪತ್ತಿನ ಉಳಿವಿಗಾಗಿ ಹೋರಾಡುವನು..

ಕಥೆ ಕೇಂದ್ರ ತುಳುನಾಡಾಗಿರುವುದರಿಂದ ಇಲ್ಲಿ ಕಂಬಳ ನೋಡಬಹುದು,ಹಾಗೂ ಅಲ್ಲಿನ ಜನರ ದೈವದ ನಂಬಿಕೆ ಭೂತಕೋಲ ಹಾಗೂ ಪಂಜುರ್ಲಿಯ ದೃಶ್ಯಗಳು ಮೈ ರೋಮಗಳು ನೆಟ್ಟಗಾಗಿಸುತ್ತವೆ..

ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರ ಹುಲಿ ಕುಣಿತ;

ಗರುಡಗಮನ ವೃಷಭವಾಹನ ಸಿನಿಮಾದಲ್ಲಿ ರಾಜ್ ಶೆಟ್ಟಿಯವರು ಶಿವ ತಾಂಡವ;

ಕಾಂತಾರದಲ್ಲಿ ರಿಷಬ್ ಅವರ ಕೋಲ ದೈವಾರಾಧನೆ ನೋಡಿದರೆ ಮುಖಸ್ಮಿತರಾಗುವುದು ಖಚಿತ.. ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ರಿಷಬ್ ಅವರ ಅಭಿನಯ ಸಿನಿಮಾವನ್ನು ಮತ್ತೊಂದು ಸ್ತರಕ್ಕೇರಿಸುತ್ತದೆ.. ಧರ್ಮೋ ರಕ್ಷತಿ ರಕ್ಷಿತಃ  ಎಂಬಂತೆ ನಾಡು ನುಡಿ ಸಂಪ್ರದಾಯಗಳಿಗಾಗಿ ಹೋರಾಡುವವರ ಜೊತೆ ದೈವವಿರುವುದು ಎಂಬ ಸಂದೇಶ ನೀಡುತ್ತದೆ..


ಶಟ್ರು ಮತ್ತೊಮ್ಮೆ ತಮ್ಮ ಸಿನಿಮಾ ಮತ್ತು ಕತೆಯಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.. ಇಂತಹ ಹಲವು ಚಿತ್ರಗಳ ತಮ್ಮಿಂದ ಬರಲಿ ಅಂತ ನಿರೀಕ್ಷಿಸುತ್ತಾ, ಮುಂದಿನ ಸಿನಿಮಾಕ್ಕೆ ಶುಭವಾಗಲಿ..

ಸಿನಿಮಾ ನೋಡಿಲ್ಲ ಎಂದರೆ ದಯವಿಟ್ಟು ಥಿಯೇಟರ್‌ಗೆ ಹೋಗಿ ನೋಡಿ.. ಅದ್ಭುತವಾಗಿ..


#kantara #RishabShetty #HombaleFilms #ಕಾಂತಾರ

No comments: