ಪುಸ್ತಕ:- ಜೇನುಕಲ್ಲಿನ ರಹಸ್ಯ ಕಣಿವೆ
ಲೇಖಕರು:- ಗಿರಿಮನೆ ಶ್ಯಾಮರಾವ್
ಗಿರಿಮನೆ ಶ್ಯಾಮರಾವ್ ಅವರ ಪಶ್ಚಿಮಘಟ್ಟಗಳ ರಮಣೀಯ ಸೌಂದರ್ಯದ ಜೊತೆ ಅಲ್ಲಿನ ಕರಾಳ ಮುಖ ಪರಿಚಯಿಸುವ ಸರಣಿ ಕಾದಂಬರಿಗಳಾದ "ಮಲೆನಾಡಿನ ರೋಚಕ ಕತೆಗಳು" ಇದರ ಭಾಗ-4ನೇ ಪುಸ್ತಕವೇ ಜೇನುಕಲ್ಲಿನ ರಹಸ್ಯ ಕಣಿವೆ..
ಕಥಾವಸ್ತು:- ಪಶ್ಚಿಮಘಟ್ಟಗಳಲ್ಲಿ ಜೇನುಹುಳಗಳ ಬಗ್ಗೆ ರಿಸರ್ಚ್ ಮಾಡಲು ಹೋಗುವ ಸೈಂಟಿಸ್ಟ್;ಅಲ್ಲಿ ಗಾಂಜಾ ಬೆಳೆಯುವ ಮಾಫಿಯಾದಿಂದ ಜೇನುಕಣಿವೆಯಲ್ಲಿ ಹತನಾಗುವುದು.ಗಾಂಜಾ ಬೆಳೆಯಲು ನೆರವು ನೀಡಿದ್ದ ಅರಣ್ಯಾಧಿಕಾರಿಯ ಮಕ್ಕಳು ಅದೇ ಗಾಂಜಾದ ದಾಸರಾಗುವ ಕಥಾ ಹಂದರವಿದೆ..
ಪಾತ್ರಗಳು:- ಡಾ.ಮುಖರ್ಜಿ(ಸೈಂಟಿಸ್ಟ್),
ಚಂದ್ರಪಾಲ್(ಅರಣ್ಯಾಧಿಕಾರಿ)
ಕಿಷನ್ ಮಲ್ಲಿಕ್(ಡ್ರಗ್ಸ್ ಮಾಫಿಯಾ ಡಾನ್),
ಮಧುಮಿತ, ಮನೋಹರ,ಸುಲೇಖ,ಸಿಂಧೂ etc..
ಸುತ್ತಲೂ ಎತ್ತರದ ಪಶ್ಚಿಮ ಘಟ್ಟ ಸಾಲಿನ ಬೆಟ್ಟಗಳ ನಡುವಿರುವ ಸುಂದರ ಸ್ಥಳ ಸಕಲೇಶಪುರ.. ಇಲ್ಲಿನ ಅರಣ್ಯಾಧಿಕಾರಿಯಾಗಿದ್ದ ಚಂದ್ರಪಾಲ ಹಣದಾಸೆಯಿಂದ ತನ್ನ ವ್ಯಾಪ್ತಿಯ ಕಾಡಿನಲ್ಲಿ ಗಾಂಜಾ ಬೆಳೆಯಲು ನೆರವು ನೀಡಿ ಲಕ್ಷ ಲಕ್ಷ ಗಳಿಸುತ್ತ ನೆಮ್ಮದಿಯಾಗಿದ್ದನು..
ಜೇನುಹುಳು ಬಗ್ಗೆ ಸಂಶೋಧನೆ ಮಾಡಲು ಸುಪ್ರಸಿದ್ಧ ವಿಜ್ಞಾನಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಈ ಅರಣ್ಯಾಧಿಕಾರಿಯ ವ್ಯಾಪ್ತಿಯಲ್ಲಿಯೇ ಬರುವ ಜೇನಿಗೆ ಪ್ರಸಿದ್ಧವಾದ ಜೇನುಕಲ್ಲಿನ ಬೆಟ್ಟದಲ್ಲಿ ಸಂಶೋಧನೆ ನಡೆಸಿಲು ನಿರ್ಧರಿಸುತ್ತಾರೆ..
ತನ್ನ ಜೊತೆ ಇಬ್ಬರು ಸಹಾಯಕರು(ಮನೋಹರ ,ಮಧುಮಿತ) ಹಾಗೂ ಇಬ್ಬರು ಫಾರೆಸ್ಟ್ ಗಾರ್ಡ್ಗಳು(ಮೇದಪ್ಪ,ಜವರೇಗೌಡ) ಹಾಗೂ ಒಬ್ಬ ಸ್ಥಳೀಯನೊಂದಿಗೆ(ಸಿದ್ಧ) ಮುಖರ್ಜಿಯವರು ಜೇನು ಕಲ್ಲಿನ ಬೆಟ್ಟಕ್ಕೆ ಬಂದು ಡೇರೆಯನ್ನು ಹಾಕಿ ಸಂಶೋಧನೆಯನ್ನು ಪ್ರಾರಂಭಿಸಿದರು.. ಪ್ರತಿದಿನ ಪ್ರಕೃತಿಯ ಬಗೆಬಗೆಯ ಸೌಂದರ್ಯವನ್ನು ಸವಿಯುತ್ತ ಜೇನುಹುಳುಗಳ ವಿನಾಶಕ್ಕೆ ಕಾರಣವನ್ನು ಪತ್ತೆಹಚ್ಚುವ ಸಂಶೋಧನೆಯು ಸಾಗಿತ್ತು. ಹೀಗಿರುವಾಗ ಒಮ್ಮೆ ರಾತ್ರಿ ಇವರ ಡೇರೆಗೆ ಟೈಗಾನ್(ಹುಲಿ ಸಿಂಹ ಮಿಶ್ರತಳಿ) ದಾಳಿ ಮಾಡುತ್ತದೆ. ಈ ಪ್ರಾಣಿಯನ್ನು ಕಂಡು ಆಶ್ಚರ್ಯಚಕಿತರಾದ ಮುಖರ್ಜಿಯವರು ಇದರ ಬಗ್ಗೆ ಹೆಚ್ಚು ತಿಳಿಯಲು ಜೇನುಕಲ್ಲಿನ ಬೆಟ್ಟದಿಂದ ಆಚೆ ಇರುವ ಬೆಟ್ಟಗಳಿಗೆ ಹೋದಾಗ ಅಲ್ಲಿ ಎಕರೆಗಟ್ಟಲೆ ಬೆಳೆದ ಗಾಂಜಾ ಬೆಳೆಯನ್ನು ಕಾಣುತ್ತಾರೆ.. ಮಾಫಿಯಾ ಗ್ಯಾಂಗ್‌ನ ದುಷ್ಟರು ಇವರು ಯಾರೆಂದು ತಿಳಿಯದೆ ವಿಜ್ಞಾನಿ ಮತ್ತು ಫಾರೆಸ್ಟ್ ಗಾರ್ಡ್ ಮೇದಪ್ಪನನ್ನು ಜೇನುಕಲ್ಲು ಕಣಿವೆಯ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡುತ್ತಾರೆ. ಮಾಫಿಯದವರು ಮುಖರ್ಜಿಯವರ ಕೊಲೆ ಮಾಡುವುದನ್ನು ಮಧುಮಿತ ನೋಡಿದ್ದಳು. ಆದರೆ ಮಾಫಿಯದವರು ಮಧುಮಿತಳೇ ಕೊಲೆ ಮಾಡಿದಳೆಂದು ಸಾಬೀತು ಮಾಡಲು ಪ್ರಯತ್ನಿಸುತ್ತಾರೆ, ಈ ಪ್ರಯತ್ನದಲ್ಲಿ ಭ್ರಷ್ಟನಾದ ಚಂದ್ರಪಾಲನು ಸೇರಿರುತ್ತಾನೆ..
ಮತ್ತೊಂದೆಡೆ ಭ್ರಷ್ಟ,ಧನದಾಹಿ ಚಂದ್ರಪಾಲ್‌ನ ಸಂಸಾರದ ವ್ಯಥೆಯ ಕಥೆಯನ್ನು ಕಾಣುತ್ತೇವೆ. ಇವನ ಪತ್ನಿ(ಸುಲೇಖ)80 ಸಾವಿರ ಸಂಬಳ ಬರುವ ನೌಕರಿ ಮಾಡುತ್ತಿರುತ್ತಾಳೆ.ಹೀಗೆ ಪತಿ-ಪತ್ನಿ ಹಣದ ಹಿಂದೆ ಓಡುತ್ತಾ ತಮ್ಮ ಮಕ್ಕಳಿಗೆ(ಮಗಳು-ಸಿಂಧೂ, ಮಗ-ಸುಮಿತ್) ಕೊಡಬೇಕಾದ ಅಕ್ಕರೆ ಪ್ರೀತಿಯನ್ನು ದೂರ ಮಾಡುತ್ತಾರೆ.. ತಂದೆ-ತಾಯಿಯರ ಪ್ರೀತಿಯನ್ನು ಕಾಣದ ಮಕ್ಕಳು ಡ್ರಗ್ಸ್ ಚಟಕ್ಕೆ ಬಲಿಯಾಗಿ ಅದರ ದಾಸರಾಗುತ್ತಾರೆ. ಇದನ್ನು ತಿಳಿದ ದಂಪತಿಗಳು ಮಕ್ಕಳನ್ನು ಚಟದಿಂದ ಮುಕ್ತರನ್ನಾಗಿ ಮಾಡಲು ನಡೆಸುವ ಪ್ರಯತ್ನಗಳು ಕಾಣಬಹುದು.. ಗಾಂಜಾ ಬೆಳೆಯಲು ನೆರವು ನೀಡಿ ತನ್ನ ಮಕ್ಕಳ ಜಾಲದಲ್ಲಿ ಸಿಕ್ಕಿಕೊಂಡಾಗ ವ್ಯಥೆಪಡುವ ಚಂದ್ರಪಾಲನ್ನು ತನ್ನ ತಪ್ಪಿನ ಅರಿವಾಗಿ ಮಧುಮಿತಳನ್ನು ಜೈಲು ಶಿಕ್ಷೆಯಿಂದ ಪಾರು ಮಾಡುವುದು ಮುಂತಾದ ರೋಚಕ ವಿಚಾರಗಳನ್ನು ನಾವು ಈ ಪುಸ್ತಕದಲ್ಲಿ ಕಾಣುತ್ತೇವೆ..
ಮಾಡಿದ ಕರ್ಮಗಳಿಗೆ ತಕ್ಕ ಫಲ ಪಡೆದೇ ಪಡೆಯುತ್ತೇವೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ ಚಂದ್ರಪಾಲನ ಸಂಸಾರ.. "ಮಾಡಿದ್ದನ್ನು ಅನುಭವಿಸಲೇಬೇಕು" ಎನ್ನುವ ಸಾರ ಕಾದಂಬರಿಯಲ್ಲಿದೆ..
ಲೇಖಕರು ಡಾ.ಮುಖರ್ಜಿ ಅವರ ಸಂಶೋಧನೆಯ ಕತೆ ಹಾಗೂ ಚಂದ್ರಪಾಲನ ಸಂಸಾರದ ವ್ಯಥೆ ಎರಡನ್ನು ಜೊತೆಯಾಗಿ ಹೇಳುತ್ತಾ ಓದುಗರಿಗೆ ಕುತೂಹಲವನ್ನು ಕೆರಳಿಸುತ್ತಾ, ಎಲ್ಲೂ ಬೇಸರವಾಗದಂತೆ ಅತ್ಯುತ್ತಮವಾಗಿ ಕಥೆಯನ್ನು ಹೆಣೆದಿದ್ದಾರೆ..