ಪುಸ್ತಕ:-ದಾಸಕೂಟ
ಲೇಖಕರು:-ಬೀChi
ಕನ್ನಡ ವಾಙ್ಮಯ ಪ್ರಪಂಚದಲ್ಲಿ ಸಂಪ್ರದಾಯ ಶರಣತೆಗೆ ಸೆಡ್ಡು ಹೊಡೆದು,ವೈಚಾರಿಕತೆಗೆ ಪ್ರಾಶಸ್ತ್ಯ ನೀಡಿ, ತಮ್ಮದೇ ಆದ ಅಪರೂಪದ, ಮೊನಚಾದ ವ್ಯಂಗ್ಯ ಶೈಲಿಯನ್ನು ಸಾಧಿಸಿಕೊಂಡು,ದಿಟ್ಟ ಬರವಣಿಗೆಗೆ ಹೆಸರಾದ ಬೀchiಯವರ ಮೊದಲ ಕಾದಂಬರಿ ದಾಸಕೂಟ..
ಕಥಾನಾಯಕ:-ಉಮೇಶ
ಪಾತ್ರಗಳು:-ಉಮೇಶ,ನಾಗಮ್ಮ,ಕಾವೇರಿ,ಸುಬ್ಬಕ್ಕ,ರಾಮಮೂರ್ತಚಾರ್ಯರು, ....
ಕಥಾವಸ್ತು:-ಉಮೇಶನ ಜೀವನಕ್ಕೆ ಹೊಂದಿಕೊಂಡಂತೆ ಸಮಾಜದಲ್ಲಿನ ಅನಿಷ್ಟಗಳು,ಭ್ರಷ್ಟವ್ಯವಸ್ಥೆ,ಜಾತೀಯತೆ,ಸ್ತ್ರೀ ಸ್ವಾತಂತ್ರ್ಯ ಹೀಗೆ ಹಲವು ವಿಚಾರಗಳ ಸುತ್ತ ಸುತ್ತುವ ಕಥೆ..
ದಾಸಕೂಟವೆಂದರೆ ಏನಿರಬಹುದು?!!, ಇದು ಯಾವ ದಾಸರ ಕೂಟವೆಂದರೆ..
√ನಿಷ್ಠಾವಂತ,ಪ್ರಾಮಾಣಿಕ ಉಮೇಶ; ಕೆಲಸ ಮಾಡುವ ಕಚೇರಿ ಭ್ರಷ್ಟರಿಂದ ಅಪ್ರಮಾಣಿಕರಿಂದ ತುಂಬಿದ ದಾಸಕೂಟ..
√ ಆಡಿ ನಲಿಯುವ ವಯಸ್ಸಿನಲ್ಲಿ ಮುದುಕನ ಪತ್ನಿಯಾದ ಕಾವೇರಿ; ನಿತ್ಯ ನರಕ ಅನುಭವಿಸುವ ದಾಸಕೂಟ..
√ ಬ್ರಿಟಿಷರಿಂದ ಮುಕ್ತಗೊಂಡ ಭಾರತಕ್ಕೆ ದೊರೆತದ್ದು; ಭ್ರಷ್ಟ ರಾಜಕಾರಣಿ ಮುಖಂಡರ ದಾಸಕೂಟ..
ಕಥಾನಾಯಕ ಉಮೇಶ ಗಾಂಧೀಜಿಯವರ ಉದಾತ್ತ ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡ ಅಪ್ಪಟ ಪ್ರಾಮಾಣಿಕ ಸಾಚ ವ್ಯಕ್ತಿ. ಕಾಲೇಜಿನಿಂದಲೇ ಹೋರಾಟದ ಮನೋಭಾವ ಹೊಂದಿದವನು, ಅನ್ಯಾಯ ಕಂಡರೆ ಸ್ವಲ್ಪವೂ ಸಹಿಸದವನು.. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ,ಪ್ರಾಮಾಣಿಕತೆ,ಬಾಲ್ಯವಿವಾಹ ಹೀಗೆ ಹಲವು ವಿಷಯಗಳಲ್ಲಿ ಉದ್ದುದ್ದ ಭಾಷಣ ಮಾಡುತ್ತಿದ್ದ..
ಆದರೆ ಮುಂದೆ ಇವನು ಕೆಲಸ ಮಾಡುವ ಕಚೇರಿ ಭ್ರಷ್ಟರ ತಾಣವಾಗಿರುತ್ತದೆ ಅಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ..
ತಾನು ಎತ್ತಿ ಆಡಿಸಿದ ಚಿಕ್ಕ ಹುಡುಗಿ ಕಾವೇರಿಯನ್ನು ಇವನ ತಂದೆ ಮದುವೆಯಾಗುವನು.. ತನಗಿಂತ ಚಿಕ್ಕವಳಾಗಿದ್ದಾಗ ಕಾವೇರಿ ಉಮೇಶನಿಗೆ ತಾಯಿಯಾಗುವಳು, ಬಾಲ್ಯ ವಿವಾಹವಾದ ಕಾವೇರಿ ಪತಿಯಿಂದ ಸುಖ ಕಾಣದೆ ನರಳುವುದು..
ನನಗಿಷ್ಟವಿಲ್ಲದಿದ್ದರೂ ಉಮೇಶ ನಾಗಮ್ಮಳೊಂದಿಗೆ ಸಂಸಾರ ನಡೆಸುವುದು..
ಹೀಗೆ ಜಗತ್ತೇ ಒಂದು ದಾಸಕೂಟ.. ಜಗತ್ತಿನ ಆಗು-ಹೋಗುಗಳಲ್ಲಿ ಜೀವನ ಸಮಸ್ಯೆಗಳು ಅನಂತ. ಹುಟ್ಟು-ಸಾವುಗಳು ವ್ಯಕ್ತಿಗಳಿಗೆ ಮಾತ್ರವೇ ಹೊರತು, ವಿಚಾರಗಳಿಗಲ್ಲ..
ಇಂತಹ ದಾಸ್ಯರಿಂದಲೇ ತುಂಬಿದ ಕಾದಂಬರಿಯಲ್ಲಿ ನನ್ನ ಮನಸ್ಸಿನಲ್ಲಿ ಉಳಿದ ಪಾತ್ರವೆಂದರೆ ಸುಬ್ಬಕ್ಕ..
ಸುಬ್ಬಕ್ಕ ನಾಗಮ್ಮನ ಅತ್ತಿಗೆ.. ಆಹಾ! ಅದೆಂತಹ ಪಾತ್ರ.. ಗೊಡ್ಡು ಸಂಪ್ರದಾಯಗಳನ್ನು ಮೆಟ್ಟಿನಿಲ್ಲುವ ದಿಟ್ಟ ಮಹಿಳೆ ಸುಬ್ಬಕ್ಕ..
ಕಾದಂಬರಿಯ ಉಮೇಶ ನಮ್ಮೆಲ್ಲರಲ್ಲಿಯೂ ಇರುವನು. ಮಗು ಹುಟ್ಟಿದಾಗ ವಿಶ್ವಮಾನವನಾಗಿ ಬೆಳೆದಂತೆಲ್ಲ ಜಾತಿ,ಧರ್ಮ,ಸಮಾಜದ ಕಟ್ಟಳೆಗಳ ಬಂಧನದಲ್ಲಿ ಸಿಲುಕಿ ಅಲ್ಪನಾಗುತ್ತಾನೆ.. ಆದರೆ ಈ ಬಂಧನಗಳಿಂದ ಮುಕ್ತನಾಗಿ ಬದುಕಬೇಕು ನಮ್ಮೊಳಗಿನ ಮೌಲ್ಯಗಳನ್ನು ಕಳೆದುಕೊಳ್ಳದೆ ಜೀವಿಸಬೇಕು ಎಂಬುದು ದಾಸಕೂಟದ ಆಶಯ..
ಬೀಚಿಯವರ ಕಾವ್ಯರಚನಾ ಶೈಲಿ ಅದ್ಭುತವಾಗಿದೆ..ನವಿರಾದ ಹಾಸ್ಯ ವ್ಯಂಗ್ಯದ ಮೂಲಕವೇ ಸಮಾಜದ ಅನಿಷ್ಟಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಕಾದಂಬರಿಯ ಪ್ರತಿಯೊಂದು ಸಾಲು ಇಂದಿನ ಸಮಾಜದ ಸ್ಥಿತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ..

No comments:
Post a Comment