ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, April 24, 2020

ಸಂಸ್ಕಾರ

ಪುಸ್ತಕ:- ಸಂಸ್ಕಾರ
ಲೇಖಕರು:- ಯು_ಆರ್_ಅನಂತಮೂರ್ತಿ

ನಾನು ಪಿಯುಸಿ ಓದುವಾಗ ಈ ಕಾದಂಬರಿಯ ಬಗ್ಗೆ ಒಂದು ಲೇಖನ ಓದಿದೆ.ಅದರಲ್ಲಿ ಕಾದಂಬರಿಯ  ಪರ-ವಿರೋಧದ ವಿಷಯ ಬಗ್ಗೆ ಚರ್ಚಿಸಲಾಗಿತ್ತು..
ವಿರೋಧಿಸಲು ಪ್ರಮುಖ ಕಾರಣವೆಂದರೆ ಅಂದು ಮಂಗಳೂರು ವಿಶ್ವವಿದ್ಯಾನಿಲಯ ಈ ಕಾದಂಬರಿಯನ್ನು ಪದವಿಯ ಪಠ್ಯ ವಿಷಯವಾಗಿ ಸೇರಿಸಿರುತ್ತದೆ.ಆಗ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳೇಲ್ಲಾ ಈ ಕಾದಂಬರಿಯನ್ನು ತಗೆದು ಹಾಕಲು ಪ್ರತಿಭಟನೆ ಮಾಡುತ್ತಾರೆ ಕಾರಣ ಇದರಲ್ಲಿ  ಬಳಸಿರುವ ಕೆಲ ಪದಗಳನ್ನು ಕೀಳುಮಟ್ಟದ್ದು ಎಂದು.?! ಇನ್ನೊಂದು ಕಾರಣವೆಂದರೆ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿ ಬರೆಯಲಾಗಿದೆ ಎಂದು...
ಉಪನ್ಯಾಸಕರು,ವಿದ್ಯಾರ್ಥಿಗಳು ಪ್ರತಿಭಟಿಸಿದ್ದರೆಂದರೆ ಅದೆಂತಹ ಸಾಹಿತ್ಯ ಇರಬಹುದು ಎಂಬ ಕುತೂಹಲ ಕೆರಳಿತು ಈ ಕಾದಂಬರಿಯನ್ನು ಓದಲೇ ಬೇಕೆಂದು ಅಂದೇ ನಿಶ್ಚಯಿಸಿದೆ..ನಾಲ್ಕೈದು ಬಾರಿ ಓದಿದೆ.ಅದ್ಭುತವಾದ ಕಾದಂಬರಿ.ಎಷ್ಟು ಓದಿದರೂ ಮತ್ತೊಮ್ಮೆ ಓದುವ ಬಯಕೆ..

ಸಂಸ್ಕಾರ ಕಾದಂಬರಿಯ ಕೇಂದ್ರಬಿಂದುವೇ ನಾರಣಪ್ಪ..
ಕಾದಂಬರಿ ಪ್ರಾರಂಭವಾಗುವುದೇ ನಾರಣಪ್ಪನ ಶವಸಂಸ್ಕಾರ ವಿಚಾರವಾಗಿ..

ದೂರ್ವಾಸಪುರವೆಂಬ ಅಗ್ರಹಾರದ ಬ್ರಾಹ್ಮಣರ ಯಾಂತ್ರಿಕ ಆಚರಣೆಗಳನ್ನು ಪ್ರಶ್ನಿಸುತ್ತಾ, ತನ್ನ ಇಚ್ಛೆಯಂತೆ ಬದುಕುವ ಬಂಡುಕೋರ ಬ್ರಾಹ್ಮಣ ನಾರಣಪ್ಪ ಜಡ ಸಮಾಜಕ್ಕೆ ಸವಾಲಾಗಿದ್ದಾನೆ.ಅನಿಷ್ಟ ಗೊಡ್ಡು ಸಾಂಪ್ರದಾಯಗಳು ಕಿತ್ತೆಸೆದು  ಕೆಳಜಾತಿಯ ಸೂಳೆ ಚಂದ್ರಿಯ ಜೊತೆ ಬದುಕುತ್ತಿದ್ದ ಮದ್ಯಪಾನ ಮಾಂಸಾಹಾರ ಸೇವಿಸುತ್ತಿದ್ದ ಅವನ ಶವಸಂಸ್ಕಾರವನ್ನು ತಾವು ಮಾಡಬಹುದೋ ಇಲ್ಲವೋ ಎಂಬ ಪ್ರಶ್ನೆ ಅವನ ಅಗ್ರಹಾರದ ಬ್ರಾಹ್ಮಣರಿಗೆ ಎದುರಾಗುತ್ತದೆ.

ಅದೇ ಅಗ್ರಹಾರದಲ್ಲಿ ಕಾಯಿಲೆಯಿಂದ ಹಾಸಿಗೆ ಹಿಡಿದ ಹೆಂಡತಿಯ ಆರೈಕೆ ಮಾಡುತ್ತಾ,‘ವೇದಾಂತ ಶಿರೋಮಣಿ’ಮಹಾನ್ ಧರ್ಮ ಜ್ಞಾನಿ ಎನ್ನಿಸಿಕೊಂಡ ಪ್ರಾಣೇಶಾಚಾರ್ಯರು ಜನರಿಗೆ ಧರ್ಮಸೂಕ್ಷ್ಮಗಳನ್ನು ವಿವರಿಸುತ್ತಾ ಬದುಕುತ್ತಿರುತ್ತಾರೆ.

"ನಾರಣಪ್ಪನನ್ನು ಅವರು ಬದಲಿಸಲೆತ್ನಿಸಿದರೆ, ನಾರಣಪ್ಪನೂ ಅವರನ್ನು ಬದಲಿಸಲೆತ್ನಿಸುತ್ತಾನೆ"; ಅವರ ಪಾವಿತ್ರ್ಯದ ಕಲ್ಪನೆಗಳಿಗೆ ಸವಾಲೆಸೆಯುತ್ತಾನೆ..
ನಾರಣಪ್ಪನ ಶವಸಂಸ್ಕಾರದ ಪ್ರಶ್ನೆಗೆ ಪ್ರಾಣೇಶಾಚಾರ್ಯರು ತಿರುವಿ ಹಾಕುವ ಧರ್ಮಶಾಸ್ತ್ರಗಳಲ್ಲೂ ಉತ್ತರವಿಲ್ಲ ಹಾಗೂ ಆಕಸ್ಮಿಕವಾಗಿ ಅವರೂ ಚಂದ್ರಿಯ ಜೊತೆ ಹಾಸಿಗೆ ಹಂಚಿಕೊಳ್ಳವ ಘಟನೆ!; ಅಲ್ಲಿಂದಾಚೆಗೆ ಅವರ ಜೀವನದ ದಿಕ್ಕು ಬದಲಾಗುತ್ತದೆ..

ಜೀವನದಲ್ಲಿ ಯಾವುದು ಮುಖ್ಯ..??
ಆಸೆ ಆಕಾಂಕ್ಷೆಗಳೇ-ಸಂಪ್ರದಾಯ ರೀತಿನೀತಿಗಳೇ..??
ನಾರಣಪ್ಪನ ರೀತಿ ಬದುಕಬೇಕೇ-ಪ್ರಾಣೇಶಚಾರ್ಯರ ರೀತಿಯೇ..??
ಯಾರು ಸರಿ..??
ಕಾದಂಬರಿ ಇಂತಹ ಹಲವು ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ..
ಕೊನೆಗೆ ಇಡೀ ಅಗ್ರಹಾರವೇ ಪ್ಲೇಗ್ ರೋಗಕ್ಕೆ ತುತ್ತಾಗಿ ಜೀವನ ನಶ್ವರ ಎಂಬ ಅರ್ಥವನ್ನು ಕೊಡುತ್ತದೆ...

Monday, April 6, 2020

ಮಾತನಾಡುವ ಮುನ್ನ ಓದಿ..

ಬೇರೆಯವರ ಬಗ್ಗೆ ಇಲ್ಲಸಲ್ಲದ್ದು ಹೇಳಿದಾಗ  ತಕ್ಷಣ ನಂಬುವವರು ಒಮ್ಮೆ ಓದಿ

ಒಂದು ದಿನ ಸಾಕ್ರಟಿಸ್
ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ,
‘ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ,
ಆ ಸಂಗತಿ ನಿನಗೆ ಗೊತ್ತಿದೆಯಾ?’ ಎಂದು ಕೇಳಿದ.

ಅದಕ್ಕೆ ಸಾಕ್ರಟಿಸ್,
"ಒಂದು ನಿಮಿಷ ತಾಳು,
ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ.
ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ.

ಅದಕ್ಕೆ ಆತ ಒಪ್ಪಿಕೊಂಡ.

‘ಮೊದಲ ಹಂತ ಅಂದ್ರೆ ಸತ್ಯ.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?’ ಎಂದ ಸಾಕ್ರಟೀಸ್.

ಅದಕ್ಕೆ ಸ್ನೇಹಿತ
‘ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ.
ನನಗೆ ಯಾರೋ ಹೇಳಿದರು.
ನಾನು ಅದನ್ನು ಕೇಳಿದೆ ಅಷ್ಟೆ’ ಎಂದ.

ಅವನ ಮಾತಿಗೆ ಸಾಕ್ರಟಿಸ್,
‘ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.

ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ.
ಇದು 'GOODNESS' ಪರೀಕ್ಷೆ.

ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ.

ಅದಕ್ಕೆ ಸ್ನೇಹಿತ,
‘ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ’ ಎಂದ.

‘ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು.
ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ.
ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್.

ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.

ಸಾಕ್ರಟಿಸ್ ಮುಂದುವರಿಸಿದ
‘ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’

ಅದಕ್ಕೆ ಸ್ನೇಹಿತ,
ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.

ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-‘ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ?
ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು"
ಎಂದು ಹೇಳಿದರು.