ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸವಿ ನೆನಪಿನಲ್ಲಿ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ (8 ಸೆಪ್ಟೆಂಬರ್ 1938 - 5 ಏಪ್ರಿಲ್ 2007) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
![]() |
| ತಂದೆ ಪುಟ್ಟಪ್ಪ ಮತ್ತು ತಾಯಿಯ ಜೊತೆ ತೇಜಸ್ವಿ |
ಜನನ
ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು.
ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು.
ಶಿಕ್ಷಣ
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.
ವೃತ್ತಿ-ಪ್ರವೃತ್ತಿ
ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ವೈವಾಹಿಕ ಬದುಕು
![]() |
| ರಾಜೇಶ್ವರಿ ತೇಜಸ್ವಿ |
ಇವರ ಪತ್ನಿ ರಾಜೇಶ್ವರಿ. ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ನಿಧನ
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.
ಸಾಹಿತ್ಯ ಕೃಷಿ
ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಕವನ ಸಂಕಲನ
ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು (೧೯೬೨)
ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು (೧೯೬೨)
ಕಾದಂಬರಿಗಳು
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩)
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩)
ನೀಳ್ಗತೆಗಳು
ಸ್ವರೂಪ (೧೯೬೬)
ನಿಗೂಢ ಮನುಷ್ಯರು (೧೯೭೩)
ಸ್ವರೂಪ (೧೯೬೬)
ನಿಗೂಢ ಮನುಷ್ಯರು (೧೯೭೩)
ಕಥಾಸಂಕಲನ
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕಿರಗೂರಿನ ಗಯ್ಯಾಳಿಗಳು (೧೯೯೧)
ಪಾಕಕ್ರಾಂತಿ ಮತ್ತು ಇತರ ಕತೆಗಳು
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕಿರಗೂರಿನ ಗಯ್ಯಾಳಿಗಳು (೧೯೯೧)
ಪಾಕಕ್ರಾಂತಿ ಮತ್ತು ಇತರ ಕತೆಗಳು
ನಾಟಕ
ಯಮಳ ಪ್ರಶ್ನೆ (೧೯೬೪)
ಆತ್ಮಕಥನ
ಅಣ್ಣನ ನೆನಪು (೧೯೯೬) ಕುವೆಂಪು ಅವರ ಕುರಿತು
ಪ್ರವಾಸ ಕಥನ
ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)
ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)
ವಿಮರ್ಶಾ ಕೃತಿಗಳು
ವ್ಯಕ್ತಿ ವಿಶಿಷ್ಟ ಸಿಧ್ಧಾಂತ (೧೯೬೪)
ವಿಮರ್ಶೆಯ ವಿಮರ್ಶೆ
ಹೊಸ ವಿಚಾರಗಳು
ವ್ಯಕ್ತಿ ವಿಶಿಷ್ಟ ಸಿಧ್ಧಾಂತ (೧೯೬೪)
ವಿಮರ್ಶೆಯ ವಿಮರ್ಶೆ
ಹೊಸ ವಿಚಾರಗಳು
ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು
ಪರಿಸರದ ಕತೆ (೧೯೯೧)
ಮಿಸ್ಸಿಂಗ್ ಲಿಂಕ್ (೧೯೯೧)
ಸಹಜ ಕೃಷಿ (೧೯೯೨)
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (೧೯೯೩)
ಹಕ್ಕಿ ಪುಕ್ಕ
ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧
ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨
ವಿಸ್ಮಯ -೧,೨,೩ (೧೯೯೩)
ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨ (೧೯೯೩)
ನಡೆಯುವ ಕಡ್ಡಿ ಹಾರುವ ಎಲೆ

ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ
ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಮಹಾಯುಧ್ಧ,ಹಾರುವ ತಟ್ಟೆಗಳು,ಮಹಾನದಿ ನೈಲ್ ಇತ್ಯಾದಿ.
ಮಿಲೇನಿಯಮ್ ಸರಣಿ
ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.

ಮಿಲೇನಿಯಮ್ ೧ - ಹುಡುಕಾಟ
ಮಿಲೇನಿಯಮ್ ೨ - ಜೀವನ ಸಂಗ್ರಾಮ
ಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳು
ಮಿಲೇನಿಯಮ್ ೪ - ಚಂದ್ರನ ಚೂರು
ಮಿಲೇನಿಯಮ್ ೫- ಮಿಸ್ಸಿಂಗ್ ಲಿಂಕ್
ಮಿಲೇನಿಯಮ್ ೬ - ಮಹಾಯುದ್ದ - ೧
ಮಿಲೇನಿಯಮ್ ೭ - ಮಹಾಯುದ್ದ - ೨
ಮಿಲೇನಿಯಮ್ ೮ - ಮಹಾಯುದ್ದ - ೩
ಮಿಲೇನಿಯಮ್ ೯- ದೇಶವಿದೇಶ - ೧
ಮಿಲೇನಿಯಮ್ ೧೦-ದೇಶವಿದೇಶ - ೨
ಮಿಲೇನಿಯಮ್ ೧೨ - ದೇಶವಿದೇಶ - ೪
ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧
ಮಿಲೇನಿಯಮ್ ೧೪ - ಮಹಾಪಲಾಯನ
ಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨
ಮಿಲೇನಿಯಮ್ ೧೬ - ಅಡ್ವೆಂಚರ್
ಮಿಲೇನಿಯಮ್ ೨ - ಜೀವನ ಸಂಗ್ರಾಮ
ಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳು
ಮಿಲೇನಿಯಮ್ ೪ - ಚಂದ್ರನ ಚೂರು
ಮಿಲೇನಿಯಮ್ ೫- ಮಿಸ್ಸಿಂಗ್ ಲಿಂಕ್
ಮಿಲೇನಿಯಮ್ ೬ - ಮಹಾಯುದ್ದ - ೧
ಮಿಲೇನಿಯಮ್ ೭ - ಮಹಾಯುದ್ದ - ೨
ಮಿಲೇನಿಯಮ್ ೮ - ಮಹಾಯುದ್ದ - ೩
ಮಿಲೇನಿಯಮ್ ೯- ದೇಶವಿದೇಶ - ೧
ಮಿಲೇನಿಯಮ್ ೧೦-ದೇಶವಿದೇಶ - ೨
ಮಿಲೇನಿಯಮ್ ೧೨ - ದೇಶವಿದೇಶ - ೪
ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧
ಮಿಲೇನಿಯಮ್ ೧೪ - ಮಹಾಪಲಾಯನ
ಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨
ಮಿಲೇನಿಯಮ್ ೧೬ - ಅಡ್ವೆಂಚರ್
ಅನುವಾದ
ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
ಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
ಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩) (೧೯೯೪) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
ಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪)
ರುದ್ರಪ್ರಯಾಗದ ಭಯಾನಕ ನರಭಕ್ಷಕ (೧೯೯೫) - ಜಿಮ್ ಕಾರ್ಬೆಟ್‍ರವರ 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ.
ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ

ಚಿತ್ರ ಸಂಕಲನ
ಮಾಯೆಯ ಮುಖಗಳು
ಮಾಯೆಯ ಮುಖಗಳು
ಪ್ರಶಸ್ತಿಗಳು
ಚಿದಂಬರ ರಹಸ್ಯ ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ,೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು.ಪಂಪ ಪ್ರಶಸ್ತಿ ೨೦೦೧ ರಲ್ಲಿ ರಾಜ್ಯೋತ್ಸವ ಪ್ರಶಸ ್ತಿಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ. ಕುಬಿ ಮತ್ತು ಇಯಾಲ ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.
ಚಲನಚಿತ್ರ ಮಾಧ್ಯಮದಲ್ಲಿ
ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ.
ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ.