ಕಾಲೇಜ್ ಜೀವನದ ಕೆಲವು ಮಧುರ ಕ್ಷಣಗಳನ್ನು ಹಂಚಿಕೊಳ್ಳವ ಬಯಕೆಯಿಂದ ಇದನ್ನು ಬರೆಯುತ್ತಿದ್ದೆನೆ.
ನಾನು ಪ್ರೀತಿ ಪ್ರೇಮ ಈ ವಿಚಾರದಲ್ಲಿ ಉಪೇಂದ್ರನ ಶಿಷ್ಯ ಅಂದುಕೊಳ್ಳಿ ಏಕೆಂದರೆ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತನೇ ಭಾವಿಸಿಕೊಂಡು ನನ್ನದೇ ಆದ ಪ್ರಪಂಚದಲ್ಲಿ ಜೀವಿಸುತ್ತಿದ್ದೆ,
ಒಮ್ಮೆ ಮಳೆಗಾಲದ ದಿನಗಳಲ್ಲಿ ಜಡಿಮಳೆ ಜಿನುಗುತ್ತಿತ್ತು ಅಂತಹ ದಿನಗಳಲ್ಲಿ ಕಾಲೇಜಿಗೆ ಹೋಗುವುದಕ್ಕೆ ಬಹಳ ಕಷ್ಟವಾಗುತ್ತಿತ್ತು.ಬಸ್ಟ್ಯಾಂಡ್‌ನಿಂದ ಕಾಲೇಜು ಸುಮಾರು 2km ದೂರವಿತ್ತು.ಮಳೆಯಲ್ಲಿ ನೆನೆಯುತ್ತಾ ಕಾಲೇಜು ತಲುಪಿದೆ,ಕಾಲೇಜಿನ ಗೇಟ್ ಬಳಿಯೇ ಇದ್ದ ಲೈಬ್ರರಿ ಹತ್ತಿರ ನಿಂತಿದ್ದೆ.ಆ ಜಡಿಮಳೆಯಲ್ಲಿಯೇ ಅವಳು ಓಡೋಡಿ ಬರುತ್ತಿದ್ದಳು ಅದು ಸೀರೆಯಲ್ಲಿ!.
ಅವಳು ನನ್ನ ಜೊತೆಯಲ್ಲಿಯೇ ಓದುವವಳೇ ಆಗಿದ್ದರೂ ಆವತ್ತೆಕೊ ಸ್ವರ್ಗದಿಂದ ಧರೆಗಿಳಿದ ಅಪ್ಸರೆ ತರ ಕಾಣತ್ತಿದ್ದಳು;ಮಳೆ ಪ್ರಭಾವವೆನೋ👰..
ಆವತ್ತಿನ ಮಳೆಗೆ ಕಾಲೇಜ್‌ನ ಗೇಟ್ ಹತ್ತಿರ ಕೆಸರು ಗದ್ದೆಯ ರೀತಿಯಾಗಿತ್ತು ಇವಳ ಒಂದು ಕೈಯಲ್ಲಿ ಬ್ಯಾಗ್ ಇನ್ನೊಂದು ಕೈಯಲ್ಲಿ ಕಪ್ಪು ಸೀರೆಯನ್ನು ಸ್ವಲ್ಪ ಮೇಲೆ ಹಿಡ್ಕೊಂಡು ಕೆಸರಾಗದಂತೆ ಬರುತ್ತಿದ್ದಳು, ಅವಳ ಬಿಳಿ ಕಾಲಲ್ಲಿ ತೆಳುವಾದ ಕಾಲಗೆಜ್ಜೆಗಳು ಬಟ್ಟಲು ಕಣ್ಣುಗಳು ಅದೆನೋ ಸೆಳೆತ ಇತ್ತು ನಾನು ಅವಳ ಕಣ್ಣೋಟಕ್ಕೆ ಮನಸೋತೆ..
ಸದಾ ಏನಾನೋ ಹುಡುಕುವ ರೀತಿಯಲ್ಲಿತ್ತು ಅವಳ ಕಣ್ಣೋಟ ಆ ಮುಗ್ಧ ಮುಖ ನನಗೆ ಇನ್ನೂ ತುಂಬಾ ಕಾಡುತ್ತಿದ್ದೆ.. ಲೈಬ್ರರಿ ಹತ್ತಿರ ಬರಬಹುದು ಅಂತ ನೋಡ್ತಿದ್ದೆ ಆದರೆ ಅವಳು ನನ್ನ ನೋಡಿ ಹಾಗೇ ಕ್ಲಾಸ್ ರೂಮ್ ಕಡೆ ಓಡಿದಳು..ಅಂದಿನಿಂದ ದಿನಾ ಅವಳನ್ನು ನೋಡುವುದೇ ಒಂದು ಹವ್ಯಾಸವಾಗಿತ್ತು,
ಕಾಲೇಜು ಮುಗಿದರೂ ಒಮ್ಮೆಯೂ ಅವಳ ಜೊತೆ ಮಾತನಾಡಲು ಆಗಲಿಲ್ಲ..
ಆ ಹುಡುಗಿಯನ್ನು ನೆನೆಸಿಕೊಂಡರೆ ಈಗಲೂ ಮುಖದಲ್ಲಿ ಅದೆನೋ ಮಂದಹಾಸ..😊

No comments:
Post a Comment