“ಚರಿತ್ರೆ ಕಾಯುತ್ತಿದೆ”
" ಪ್ರಪಂಚವನ್ನೇ ಗೆಲ್ಲಲು ಹೊರಟ ಅಲೆಗ್ಸಾಂಡರ್, ಹಾಗೂ ಜಗತ್ತನ್ನೇ ಬಳಸಿ ಬರಲು ಹೊರಟ ಮೆಗಲನ್, ಹಾದಿಯ ಜೊತೆಯಲ್ಲಿ ಬದ್ದತೆಯನ್ನೂ ಗುರಿಯಾಗಿಸಿ ಕೊಳ್ಳದ ಕಾರಣಕ್ಕೆ, ಮಹತ್ವಾಕಾಂಕ್ಷೆಯ ನಡುವೆಯೇ ಕಾಲನ ಜೊತೆ ಬಹುಬೇಗ ನಡೆದುದ್ದು ಇತಿಹಾಸ. ಸಮಕಾಲಿನ ಪ್ರಪಂಚದಲ್ಲೂ ಅಂತಹ ಮಹತ್ವಾಕಾಂಕ್ಷಿ ಗಳು, ಬದ್ದತೆಯನ್ನು ಮರೆಯುವ ಕಾರಣ, ಮತ್ತೆ ಮೆಗಲನ್ ಹಾಗೂ ಅಲೆಕ್ಸಾಂಡರ್ ಗಳಂತೆ ಪತನದಂಚಿಗೆ ನಿಲ್ಲವ ವಿಷಾದವನ್ನು ಸೂಚಿಸುತ್ತಿದೆ ಈ ಕವನ.
“ಚರಿತ್ರೆ ಕಾಯುತ್ತಿದೆ”
*********************
ಮಗ್ಗಲು ಬದಲಿಸಿ ಹಿಂದಡಿಯಿಟ್ಟ ಹಾಯಿಗೆ
ಕಠಾರಿಯಲಿ ತಿವಿದು,
ಭವಿತವ್ಯದ ಮಸಾಲೆಯ ಕಟು ಘಾಟಿಗೆ ಮನ
ಮೋಹಿಸಿ
ಸ್ಪೇನಿನ ಬಂದರಿನಲಿ ಲಂಗರು ಕಿತ್ತು
ಲಂಗುಲಗಾಮಿಲ್ಲದೇ ಕಡಲನ್ನುತಡವಿಕೊಂಡವನ ಹೆಸರು,
ಅದೇ ಫರ್ಡಿನೆಂಡ್ ಮೆಗಲನ್ .
ಗಿರಕಿ ಹೊಡೆದಿದ್ದಾದರೂ ಎಲ್ಲಿಗೆ ಪಶ್ಚಿಮದ ಘಟ್ಟ ಹತ್ತಿಳಿದು
ಕಡಲ ತೆರೆಯಲ್ಲಿ ಹೊರಳಿದ್ದಾದರೂ
ಎಲ್ಲಿಗೆ?.
ರಾಶಿ ರಾಶಿ ಭೋಗ ಬೊಗಸೆ ಕನಸುಗಳ
ಹಾಯಿ ಹಡಗಿನ ಕೀಲಾಗಿಸಿ
ಏಲಿಯನ್ ತೆರದಿ ನಭದ ನಕ್ಷತ್ರ ಗಳ ನೆರಳಿಡಿದು
“ನಾ ಮಾಯೆಯೊಳಗೊ!ಮಾಯೆಯು
ನನ್ನೊಳಗೊ”ಎಂಬ ಕನಸಿನ ನೀಲದಲಿ ತೇಲಿದವ ನೀ
ಅದೇ ಫರ್ಡಿನೆಂಡ್ ಮೆಗಲನ್
ನೀ ತೇಲಿದಾದರೂ ಎಲ್ಲಿಗೆ ಸಾವು ಓಡುವ
ಆವರಣಕೆ.
ಉದಯಿಸಿದ ಯೇಸುವಿಗೆ ಮುದದಿ ವಂದಿಸಿ
ಕ್ಷಿತಿಜದೆತ್ತರಕೆ
ಹಾರಿಸುವ ಹಂಬಲಕೆ ಮಸಾಲೆಯ ಘಾಟು ಮರೆತು
ರಕ್ತ ರುಧಿರಕೆ, ಕೈ ಹಾಕಿದವನ
ಎದೆಗೆ ಬಿದ್ದ ಲಪು ಲಪುವಿನ ಏಟಿಗೆ ,ಬಿದಿರಿನ ಚೂಪಿಗೆ,
ಜತನದಿ ಕಾಪಿಟ್ಟ ಧರ್ಮ ,ಅಕ್ಷರ,ಕಾಮಗಳ
ತೊರೆದು,
ದ್ವೀಪ ತೀರದಿ ವಿಲವಿಲನೆ ಗತ ಪ್ರಾಣನಾದವನ ಹೆಸರು,
ಅದೇ ಫರ್ಡಿನೆಂಡ್ ಮೆಗಲನ್. ನಿನಗೀತರ ಸಾವು
ತರವೆ!!.
ಮರುಕಳಿಸಿತು ಮತ್ತದೇ ಅಲೆಕ್ಸಾಂಡರನ ಕಥೆ
ಜಗವ ಗೆಲ್ಲದ ದಾರುಣ ವ್ಯಥೆ.
ಅಬಿಸೀನಿಯಾದ ಹರಳಿನ ಉಡಿಯಲ್ಲಿ ನಿಸ್ಸಂಕೋಚ
ಮೈಚಾಚಿ,ಉಸಿರೆಳೆದು ಕೈ ಎತ್ತಿದವನ,
ಇತಿಹಾಸ ಚರಿತೆ,
ಮತ್ತೆ ಪುನರುತ್ಥಾನವಿಲ್ಲಿ ಮೆಗಲಾನಿನ ಮನದಲ್ಲಿ,
ಜಗವ ಸುತ್ತುವ ಛಲಕೆ
ಧುಮುಕಿಟ್ಟವನ
ಅದೇ ಕಥೆ ಅದೇ ವ್ಯಥೆ, ಮುಗಿಯದ
ಮಾನುಷ ರಕ್ತ ಹಿಂಸೆ
ಶೋಕ ಗೀತೆ.
ಮತ್ತೆ ಸುಳಿದ ಮತ್ತೊಬ್ಬ ಫಿಲಿಪ್ ನಂತವನ ಮಗ,
ಅವನು ಮೋಹಿಸಿದ್ದು,
ಉಸಿರು ಕಟ್ಟಿಸುವ ಪರಿಮಳಕೋ,ಇಲ್ಲ ನೀಲಿಯುಕ್ಕುವ
ಸಾಗರವ ಹತ್ತಿಕ್ಕಿ
ಯೇಸುವ ಬೆಳೆಸುವ ಹಂಬಲಕೋ,
ಬಾನಂಚಿನಲಿ ಮಿನುಗುವ ಗ್ಯಾಲಕ್ಸಿಯಲಿ ,ಮೆಗಲನ್
ಎಂದು ಸೀಲು ಹೊಡೆದು ತಬ್ಬಿಬ್ಬಾದ ಚರಿತ್ರೆ,
ಮತ್ತೆ ಮೆಗಲಾನರ ಹುಡುಕಿ ಅರಸಿ,ಕುಣಿಕೆ ಹಿಡಿದು
ಅವರ ಉತ್ತರಕ್ಕಾಗಿ ಕಾಯುತ್ತಿದೆ.
ಕವಿ ಮಿತ್ರ (ಹೆಮ್ಮನಹಳ್ಳಿ, ಗಿರೀಶ್ ಗಾಣದಾಳ್.).
ಚಿತ್ರ ಕೃಪೆ ;ಗೂಗಲ್.

No comments:
Post a Comment