ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Tuesday, August 27, 2019

ಅರ್ನೆಸ್ಟೋ ಚೆ ಗುವೆರಾ

                                 ಅರ್ನೆಸ್ಟೋ ಚೆ ಗುವೆರಾ

⇛ಕ್ರಾಂತಿಕಾರಿಯಾಗಬೇಕೆನ್ನುವವನು ಮೊದಲು ಶಿಕ್ಷಿತನಾಗಬೇಕು. ಶಿಕ್ಷಣವು ಕೇವಲ ಉಳ್ಳವರ ಸ್ವತ್ತಲ್ಲ.
"ಕ್ರಾಂತಿಯೆನ್ನುವುದು ಮಾಗಿದ ಸೇಬು ಕೆಳಕ್ಕೆ ಬೀಳುವ ಪ್ರಕ್ರಿಯೆಯಲ್ಲ; ಅದನ್ನು ಬೀಳುವಂತೆ ಮಾಡುವುದು!"
⇛ಅನ್ಯಾಯವನ್ನು ಕಂಡಾಗಲೆಲ್ಲ ನಿನ್ನಲ್ಲಿ ಸಾತ್ವಿಕ ರೋಷ ಉರಿದೆದ್ದರೆ, ಆಗ ನೀನು ನನ್ನ ಕಾಮ್ರೆಡ್ ಆಗಲು ಅರ್ಹ!

⇛ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅದು ನಿನಗೇ ಆದಂತೆ ಭಾವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊ!

⇛ಈ ಜಗತ್ತು ನಿನ್ನನ್ನು ಬದಲಾಯಿಸಲಿ! ಆಗ ನೀನು ಜಗತ್ತನ್ನು ಬದಲಾಯಿಸಬಹುದು!

⇛ನಾವು ಬದುಕಲು ಏನೇನು ಬೇಕೆಂದು ಬಯಸುತ್ತೇವೆಯೋ, ಅವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿರಬೇಕು.

⇛ನಾನು ವಿಮೋಚಕನಲ್ಲ; ವಿಮೋಚಕರೆನ್ನುವವರು ಇಲ್ಲವೇ ಇಲ್ಲ; ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ವಿಮೋಚಿಸಿಕೊಳ್ಳಬೇಕು.