ಪ್ರಾಣಿಯನ್ನೂ ಕೊಂದು ಮಾಂಸವನ್ನು ಮಾರುವ ಕಟುಕನಿಗೂ, ಸಾಯುವ ಪ್ರಾಣಿಯನ್ನು ಬದುಕಿಸಲು ಇಟ್ಟ ಔಷಧಿಯನ್ನು ಮಾರುವ ಡಾಕ್ಟರಿಗೂ ಒಂದೇ ಗುರಿ...
ಸುಳ್ಳನ್ನು ಸಾಧಿಸಿ ನ್ಯಾಯಕ್ಕೆ ಅಪಜಯ ತರುವ ವಕೀಲನಿಗೂ, ನಿಜವನ್ನು ಪರಿಶೀಲಿಸಿ ನ್ಯಾಯವನ್ನು ವಿಧಿಸುವ ನ್ಯಾಯಾಧೀಶರಿಗೂ ಅದೇ ಗುರಿ...
ಅಡವಿಯಲ್ಲಿ ತಿರುಗಿ ದನಗಳನ್ನು ಕಾಯುವವನಿಗೂ,
ಕುರ್ಚಿಯಲ್ಲಿ ಕುಳಿತು ಮಕ್ಕಳನ್ನು ಕಾಯುವವನಿಗೂ ಒಂದೇ ಗುರಿ...
ಕಾಮುಕರಿಗಾಗಿ ದೇಹವನ್ನು ನೀಡುವ ವೇಶ್ಯೆಗೂ,
ದೇವಾಲಯದಲ್ಲಿ ಬರುವ ಭಕ್ತರಿಗಾಗಿ ಪ್ರಸಾದವನ್ನು ನೀಡುವ ಪೂಜಾರಿಗೂ ಒಂದೇ ಗುರಿ...
ತ್ಯಾಗದ ಸೋಗು ಹಾಕಿ ದುಡಿಯದೆ ಮಾತನಾಡುವವನಿಗೂ, ಬಾಗಿದ ಬೆನ್ನು ಹೊತ್ತು ಮಾತನಾಡದೆ ದುಡಿಯುವವನಿಗೂ ಒಂದೇ ಗುರಿ..
ರೀತಿಗಳು ಬೇರೆ ಇದ್ದರೂ ನೀತಿ ಮಾತ್ರ ಒಂದೇ..
ಇಂದು ಜೀವನದ ಉಸಿರು ಹಣ!!!