ಪುಸ್ತಕ:- ಮಲೆನಾಡಿನ ರೋಚಕ ಕಥೆಗಳು (ಭಾಗ-1)
ಲೇಖಕರು:- ಗಿರಿಮನೆ ಶ್ಯಾಮರಾವ್
ನನಗೆ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಗಳನ್ನು ಓದುವುದು ಹಾಗೂ ಮಲೆನಾಡಿನ ಪ್ರಕೃತಿ ಬೆಟ್ಟ-ಗುಡ್ಡ ಪ್ರಾಣಿ-ಪಕ್ಷಿಗಳ ಬಗ್ಗೆ ತಿಳಿಯುವ ಅತೀವ ಕುತೂಹಲ. ಹಾಗಾಗಿ ಮೊದಲಿಗೆ ನಾನು ಲೇಖಕರ "ಜೇನುಕಲ್ಲಿನ ರಹಸ್ಯ ಕಣಿವೆ (ಭಾಗ-4)" ಎಂಬ ಪುಸ್ತಕವನ್ನು ಖರೀದಿಸಿದೆ. ಈ ಪುಸ್ತಕವು ಇದೇ ಲೇಖಕರ "ಅರಮನೆ ಗುಡ್ಡದ ಕರಾಳ ರಾತ್ರಿಗಳು (ಭಾಗ-2)" ಎಂಬ ಪುಸ್ತಕ ಓದಲು ಪ್ರೇರೇಪಿಸಿತು. ಇದು ಸಹ ಅತ್ಯಂತ ಕುತೂಹಲಭರಿತ ಓದಿಸಿಕೊಂಡು ಹೋಗುವ ಕಾದಂಬರಿ.. ಹೀಗೆ ಗಿರಿಮನೆ ಶ್ಯಾಮರಾವರವರ ಈ ಎರಡು ಪುಸ್ತಕಗಳು ಎಷ್ಟೊಂದು ರೋಚಕತೆ ಒಳಗೊಂಡಿವೆಂದರೆ ಅವರ ಇನ್ನಿತರ ಪುಸ್ತಕಗಳನ್ನು ಓದಬೇಕೆಂಬ ಹಂಬಲ ಹುಟ್ಟಿಸಿದವು. ಇದರ ಫಲವಾಗಿಯೇ ನಾನು 'ಮಲೆನಾಡಿನ ರೋಚಕ ಕಥೆಗಳು' ಎಂಬ ಸೀರಿಯಲ್ಲಿನ ಅಷ್ಟು ಪುಸ್ತಕಗಳನ್ನು ಖರೀದಿಸಿದೆ. ಇದರ ಮೊದಲ ಪುಸ್ತಕವೇ "ಮಲೆನಾಡಿನ ರೋಚಕ ಕಥೆಗಳು(ಭಾಗ-1)"..
ಈ ಪುಸ್ತಕ ಮೊದಲಿಗೆ "ಕಾಫಿ ನಾಡಿನ ಕಿತ್ತಳೆ" ಎಂಬ ಹೆಸರಿನಿಂದ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ನಂತರ ಇದನ್ನು 'ಮಲೆನಾಡಿನ ರೋಚಕ ಕಥೆಗಳು' ಎಂಬ ಹೆಸರಿನಿಂದ ಪ್ರಕಟಿಸಲಾಯಿತು.. ಬಯಲುಸೀಮೆಯವನಾದ ನನಗೆ ಮಲೆನಾಡಿನ ಪರಿಸರದ ಚಿತ್ರಣವನ್ನು ಕಣ್ಣಮುಂದೆ ಕಟ್ಟಿಕೊಡುವುದು.. ಲೇಖಕರು ಹುಟ್ಟೂರಿನಲ್ಲಿ ನೆಲೆಸಿದ್ದಾಗ ಅಲ್ಲಿಯ ಮಲೆನಾಡಿನ ಸೌಂದರ್ಯವನ್ನು ತಮ್ಮ ಜೀವನ ಅನುಭವಗಳೊಂದಿಗೆ ಹಂಚಿಕೊಳ್ಳುತ್ತಾರೆ.. ಪುಸ್ತಕವು ಮಲೆನಾಡಿನ ಮಳೆ, ಪಶ್ಚಿಮ ಘಟ್ಟಗಳ ನಿಗೂಢತೆ, ಬ್ಯಾರಿಗಳ ವ್ಯಾಪಾರ ಚಾಣಾಕ್ಷತೆ, ವರ್ಷವಿಡೀ ಮಲೆನಾಡು ಯಾವ ರೀತಿಯಲ್ಲಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ.. ಪುಸ್ತಕದಲ್ಲಿನ 'ಚಿಂಟಿ' ಎಂಬ ಅಧ್ಯಾಯ ತುಂಬಾ ಚೆನ್ನಾಗಿದೆ...
ಇದರಲ್ಲಿ ಮಲೆನಾಡಿನ ಹಳ್ಳಿಯ ರೋಚಕತೆಗಳು ಹೇಳತೀರದಷಟ್ಟಿವೆ.. ಇಲ್ಲಿನ ದಟ್ಟವಾದ ಕಾಡು,ಮಂಜು,ಒಂಟಿತನ,ಪರಿಸರ ನಾಶ,ಕಳ್ಳಭಟ್ಟಿ ಕಾಯಿಸುವುದು.. ಇದರ ಜೊತೆಯಲ್ಲಿ ಹಳ್ಳಿಯಿಂದ ನಗರಗಳಿಗೆ ವಲಸೆ ಹೋಗಲು ಕಾರಣ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಪುಸ್ತಕವು ಬೆಳಕು ಚೆಲ್ಲುತ್ತದೆ..





