ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Wednesday, July 31, 2019

ರಾವಣೋತ್ತಮ




ರಾವಣನ ಬಗ್ಗೆ ನೀವು ತಿಳಿದಿರದ ರಹಸ್ಯ ಸಂಗತಿಗಳು

ರಾಮಾಯಣದಲ್ಲಿ ರಾವಣನು ನಕಾರಾತ್ಮಕ ಪಾತ್ರವಾಗಿ ಚಿತ್ರಿಸಲ್ಪಟ್ಟಿದ್ದರೂ, ಅವನು ನಿಜವಾಗಿಯೂ ಗೌರವಾನ್ವಿತ ಬ್ರಾಹ್ಮಣನಾಗಿದ್ದನು. ಅವನು ಒಬ್ಬ ಮಹಾನ್ ಪಂಡಿತರಾಗಿದ್ದನು, ಒಬ್ಬ ಮಹಾನ್ ರಾಜ ಮತ್ತು ವೀಣೆಯಲ್ಲಿ ಹೆಚ್ಚಿನ ಪಾಂಡಿತ್ಯವನ್ನು ಹೊಂದಿದ್ದನು. ಅವನು ಓರ್ವ ಪಾಂಡಿತ್ಯ ಹೊಂದಿದ ಬ್ರಾಹ್ಮಣ,ಸಿದ್ಧ (ಜ್ಞಾನದ ವಿವಿಧ ರೂಪಗಳಲ್ಲಿ ಪಾರಂಗತರಾಗಿರುವವರು) ಮತ್ತು ಭಗವಾನ್ ಶಿವನ ಭಕ್ತನಾಗಿದ್ದನು.ಭಾರತದಲ್ಲಿ ಹಲವು ಪ್ರದೇಶಗಳ ಬ್ರಾಹ್ಮಣ ಸಮುದಾಯವು ದೀಪಾವಳಿಯನ್ನು ಆಚರಿಸುವುದಿಲ್ಲ.
ಬದಲಾಗಿ, ಅವರು ಭೂಮಿಯ ಮೇಲೆ ಜನಿಸಿದ ಒಬ್ಬ ಬುದ್ಧಿವಂತ ಬ್ರಾಹ್ಮಣನಿಗೆ ಗೌರವವನ್ನು ನೀಡುತ್ತಾರೆ. ರಾವಣನನ್ನು ಶ್ರೀಲಂಕಾ ಮತ್ತು ಬಾಲಿಯಲ್ಲಿ ಸಹ ಪೂಜಿಸುತ್ತಾರೆ. ರಾವಣನು ತಮ್ಮ ಪೂರ್ವಜನೆಂದು ಅವರು ನಂಬುತ್ತಾರೆ ಮತ್ತು ಆದ್ದರಿಂದ, ತಮ್ಮ ಪೂರ್ವಜನ ಮರಣ ವಾರ್ಷಿಕೋತ್ಸವ ದಿನವನ್ನು ನೆನಪಿಸಿಕೊಳ್ಳುತ್ತಾರೆ.

ರಾವಣರಿಂದ ನೀಡಲ್ಪಟ್ಟ ರಹಸ್ಯಗಳು
ಲಕ್ಷ್ಮಣನು ರಾವಣನ ಹತ್ತಿರ ಬಂದಾಗ, ರಾವಣನು ಜೀವನದಲ್ಲಿ ಬಹಳ ಮುಖ್ಯವಾದ ಮೂರು ದೊಡ್ಡ ಪಾಠಗಳನ್ನು ಹೇಳಿದನು, ಆ ಮೂರು ಪಾಠಗಳು ಹೀಗಿವೆ:
ನೀವು ಮಾಡಬೇಕಾದ ಸರಿಯಾದ ವಿಷಯಗಳನ್ನು ವಿಳಂಬ ಮಾಡಬೇಡಿ
ರಾಮನಲ್ಲಿನ ದೈವತ್ವವನ್ನು ಅರಿತುಕೊಳ್ಳಲು ತುಂಬಾ ತಡವಾಯಿತೆಂದು ರಾವಣನು ಹೇಳಿದನು. ರಾಮನು ದೇವರ ಅವತಾರವೆಂಬುದು ಮೊದಲೇ ತಿಳಿಯಬೇಕಾಯಿತು. ದೇವರನ್ನು ಸೋಲಿಸುವುದು ಅಸಾಧ್ಯ. ರಾಮನು ಒಳ್ಳೆಯವನು ಮತ್ತು ಒಳ್ಳೆಯತನ ಶಾಶ್ವತವಾಗಿ ಉಳಿಯುವುದು. ರಾವಣನು ಸ್ವಲ್ಪ ಸಮಯದ ನಂತರ ರಾಮನ ಪಾದದ ಬಳಿ ಬಂದನು. ಆದ್ದರಿಂದ, ಲಕ್ಷ್ಮಣನಿಗೆ, ಮಾಡಬೇಕಾದ ಸರಿಯಾದ ವಿಷಯಗಳನ್ನು ವಿಳಂಬ ಮಾಡಬೇಡ ಎಂದು ಸಲಹೆ ನೀಡಿದನು; ನೀವು ಮಾಡಬೇಕು ಎಂದುಕೊಂಡ ಕೆಟ್ಟ ಕೆಲಸವನ್ನು. ಸಾಧ್ಯವಾದಷ್ಟು ವಿಳಂಬಿಸಲು ಪ್ರಯತ್ನಿಸಬೇಕು ಎಂದು ರಾವಣನು ಸಲಹೆ ನೀಡಿದನು.
ಉದಾಹರಣೆಗೆ, ಸೀತಾಳನ್ನು ಅಪಹರಿಸಬೇಕೆಂಬ ಆಶಯ ಅವನಿಗೆ ಇಲ್ಲದಿದ್ದರೆ, ರಾಮನು ಆ ಬಂಗಾರದ ಜಿಂಕೆಯೊಂದಿಗೆ ಹಿಂದಿರುಗುತ್ತಿದ್ದನು, ಮತ್ತು ರಾವಣ ಅವಳನ್ನು ಅಪಹರಣ ಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದನು. ಈ ಘಟನೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಇದು ನೆರವಾಗುತ್ತಿತ್ತು, ಇದು ಅವನನ್ನು ಅವನತಿಗೆ ಒಳಗಾಗಿಸಿದ ಪ್ರಮುಖ ಕಾರಣವಾಗಿದೆ.
ನಿಮ್ಮ ಶತ್ರುಗಳನ್ನು ಎಂದಿಗೂ ಕಡೆಗಣಿಸಬೇಡಿ
ಒಬ್ಬ ವ್ಯಕ್ತಿಯು, ಶತ್ರುಗಳನ್ನು ಎಂದಿಗೂ ಕಡೆಗಣಿಸಬಾರದು ಎಂದು ಅವನು ಹೇಳಿದನು. ಮಂಗಗಳು ಮತ್ತು ಹಿಮಕರಡಿಗಳು ಎಂದಿಗೂ ಅವನನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವನು ನಂಬಿದ್ದನು, ಆದರೆ ಅದೇ ಕೋತಿಗಳು ಮತ್ತು ಹಿಮಕರಡಿಗಳು ರಾಮನ ಪ್ರಮುಖ ಬೆಂಬಲಿಗರಾಗಿದ್ದರು. ಇವುಗಳು ದೈವಿಕ ಅವತಾರವೆಂದು ಅವನಿಗೆ ತಿಳಿದಿರಲಿಲ್ಲ. ಒಳ್ಳೆಯತನ, ಅವನ ಹೆಮ್ಮೆಯನ್ನು ಅಂತ್ಯಕ್ಕೆ ತರುವಲ್ಲಿ ಯಶಸ್ವಿಯಾಯಿತು. ರಾವಣನು ತನ್ನ ತಪ್ಪನ್ನು ಅರಿತುಕೊಂಡನು. ಆದ್ದರಿಂದ ಒಬ್ಬನು ಅವನ ಶತ್ರುವನ್ನು ಎಂದಿಗೂ ಕಡೆಗಣಿಸಬಾರದು. ಒಳ್ಳೆಯತನ, ಅವನ ಹೆಮ್ಮೆಯನ್ನು ಅಂತ್ಯಕ್ಕೆ ತರುವಲ್ಲಿ ಯಶಸ್ವಿಯಾಯಿತು. ರಾವಣನು ತನ್ನ ತಪ್ಪನ್ನು ಅರಿತುಕೊಂಡನು. ಆದ್ದರಿಂದ ಒಬ್ಬನು ಅವನ ಶತ್ರುವನ್ನು ಎಂದಿಗೂ ಕಡೆಗಣಿಸಬಾರದು.
ಯಾರೊಬ್ಬರೂ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ
ರಾವಣನು ಹಂಚಿಕೊಂಡ ಮೂರನೇ ದೊಡ್ಡ ಪಾಠ ಆಧುನಿಕ ಕಾಲಕ್ಕೆ ಸಾಕಷ್ಟು ಚೆನ್ನಾಗಿ ಅನ್ವಯಿಸುತ್ತದೆ. ತನ್ನ ಜೀವನದ ಒಂದು ಪ್ರಮುಖ ತಪ್ಪು ಏನೆಂದೆರೆ ವಿಭೀಷಣನಿಗೆ ಅವನ ಸಾವಿನ ರಹಸ್ಯವನ್ನು ಹೇಳಿದ್ದು ಎಂದು ತಿಳಿಸಿದನು, ಕಾರಣ ಅದನ್ನು ವಿಭೀಷಣನು ರಾಮನಿಗೆ ತಿಳಿಸಿದನು. ಆದ್ದರಿಂದ ಒಬ್ಬನು ಯಾರೊಬ್ಬರಿಗೂ ರಹಸ್ಯವನ್ನು ಬಹಿರಂಗಪಡಿಸಬಾರದು.

Tuesday, July 30, 2019

👥 ಜನ ಇದ್ದಾರೆ 👥

ನೀನು ನಿನ್ನಲ್ಲಿನ ಒಳ್ಳೆಯತನ
ಹುಡುಕು...
ಕೊರತೆಗಳನ್ನು ಹುಡುಕಲು ಜನರಿದ್ದಾರೆ.

ಹೆಜ್ಜೆ ಇಡುವುದೇ ಆದರೆ..
ಮುಂದಕ್ಕೆ ಇಡು,
ಹಿಂದಕ್ಕೆ ಎಳೆಯಲು
ಜನ ಇದ್ದಾರೆ.

ಕನಸು ಕಾಣುವುದೇ...
ಆದರೆ ಎತ್ತರಕ್ಕೆ ನೋಡು,
ಕೀಳುಗಳಿಯಲು ಜನ ಇದ್ದಾರೆ.

ನಿನ್ನೊಳಗಿನ ಹುಚ್ಚಿನ ಕಿಡಿ ಬೆಳಗಿಸು,
ಉರಿಯುವುದಕ್ಕೆ ಜನ ಇದ್ದಾರೆ.

ಏನಾದರೂ ಮಾಡುವುದು
ಇದ್ದರೆ ನೆನಪಾಗುವಂತೆ ಮಾಡು,
ಮಾತಾಡುವುದಕ್ಕೆ ಜನರಿದ್ದಾರೆ.

ಪ್ರೀತಿ ಮಾಡುವುದಿದ್ದರೆ...
ಸ್ವತಃ ನಿನ್ನನ್ನೇ ಮಾಡು,
ದ್ವೇಷ ಮಾಡುವುದಕ್ಕೆ ಜನ ಇದ್ದಾರೆ.

ಇರುವುದಿದ್ದರೆ..
ಮಗುವಿನ ಹಾಗೆ ಇದ್ದು ಬಿಡು,
ವಿವೇಕವಂತರಾಗಿ ಇರಲು
ಜನರಿದ್ದಾರೆ.

ಭರವಸೆ ಇಡುವುದಾದರೆ...
ನಿನ್ನಲ್ಲಿ ನೀನು ಇಡು,
ಅನುಮಾನಿಸಲು ಜನರಿದ್ದಾರೆ.

ನೀನು ನಿನ್ನನ್ನು ಸಂಭಾಳಿಸಿಕೋ...
ಕನ್ನಡಿ ತೋರಿಸಲು ಜನರಿದ್ದಾರೆ.

ನಿನ್ನದೇ ಆದ ಬೇರೆ ಪರಿಚಯ ಮಾಡಿಕೋ...
ಗುಂಪಿನಲ್ಲಿ ನಡೆಯಲು ಜನರಿದ್ದಾರೆ.

ನೀನು ಏನಾದರೂ ಸಾಧಿಸಿ ಜಗಕ್ಕೆ ತೋರಿಸು...
ಏನಾದರೂ ಸಾಧಿಸಿ
 ತೋರಿಸು ಸಾಕು,
 ಚಪ್ಪಾಳೆ ತಟ್ಟಲು ಜನರಿದ್ದಾರೆ.

Sunday, July 28, 2019

ಸಾವು


ಶಿಕ್ಷಕ ವೃತ್ತಿ


ಒಂದು ಶಾಲೆಗೆ ಶೈಕ್ಷಣಿಕ ತನಿಕೆಗಾಗಿ  BEO ಆಕಸ್ಮಿಕವಾಗಿ ಬಂದರು. ಅವರನ್ನು ನೋಡಿದ ಮುಖ್ಯೋಪಾಧ್ಯಾಯರು ಓಡುತ್ತಾ ಗೇಟಿನಡೆಗೆ  ಬಂದು ಅವರನ್ನು ಸ್ವಾಗತಿಸಿದರು. ಇದನ್ನು ಕಂಡ ವಿದ್ಯಾರ್ಥಿ BEO ಮುಖ್ಯೋಪಾಧ್ಯಾಯರಿಗಿಂತಾ ಅತಿ ದೊಡ್ಡ ವ್ಯಕ್ತಿ ಯೆಂದು ತಿಳಿದ.
ಅಷ್ಟರಲ್ಲೇ ಅದೇ ದಾರಿಯಲ್ಲಿ ಸಾಗುತಿದ್ದ  DDPI ಸಹಾ ಕಾರು ನಿಲ್ಲಿಸಿ ಶಾಲೆಯ ತಪಾಸಣೆ ಗೆಂದು ಬಂದರು. ಇದನ್ನು ನೋಡಿ,ಮುಖ್ಯೋಪಾಧ್ಯಾಯರು,BEO ಒಟ್ಟಿಗೆ ಓಡುತ್ತಾ ಶಾಲೆಯ ಆವರಣದತ್ತಾ ಓಡುತ್ತಾ ಬಂದು ಅವರನ್ನು ಸ್ವಾಗತಿಸಿದರು.ಇದನ್ನು ಕಂಡ ವಿದ್ಯಾರ್ಥಿ BEO ಗಿಂತಾ DDIP ಅತಿ ದೊಡ್ಡ ಅಧಿಕಾರಿ ಇರಬಹುದೆಂದು ಯೋಚಿಸಿದ.
ಅಷ್ಟರಲ್ಲೇ ಕಾಕತಾಳೀಯವೋ ಎಂಬಂತೆ ಶಿಕ್ಷಣ ಕಾರ್ಯದರ್ಶಿ ಗಳ ಕಾರು ಆ ದಾರಿಯಲ್ಲಿ ಸಾಗುವಾಗ DDPI, BEO ಕಾರುಗಳನ್ನ  ಕಂಡ ಶಿಕ್ಷಣ ಕಾರ್ಯದರ್ಶಿ ತಮ್ಮ ಕಾರನ್ನು ನಿಲ್ಲಿಸಿ ಶಾಲೆಯತ್ತ ಬರುವುದನ್ನು ಕಂಡು ಗಡಿಬಿಡಿಯಿಂದ ಧಾವಿಸಿ  ಅತಿ ನಮ್ರತೆಯಿಂದ ಸ್ವಾಗತಿಸಿದರು. ಇದನ್ನು ಕಂಡ ವಿದ್ಯಾರ್ಥಿ DDIP ಗಿಂತಾ ಶಿಕ್ಷಣ ಕಾರ್ಯದರ್ಶಿ ಇನ್ನೆಷ್ಟು ದೊಡ್ಡ ಅಧಿಕಾರಿ ಇರಬಹುದೆಂದು ಯೋಚಿಸಿದ. ಇನ್ನು ಸರಿಯೇ ಶಿಕ್ಷಣ ಮಂತ್ರಿಗಳು ಬಂದಾಗಲಂತೂ ಎಲ್ಲಾ ಅಧಿಕಾರಿಗಳು ಒಟ್ಟಿಗೆ ಅತಿ ಭಯ ಭಕ್ತಿಗಳಿಂದ ಬರ ಮಾಡಿಕೊಂಡರು. ವಿದ್ಯಾರ್ಥಿಯ ಆಶ್ಚರ್ಯಕ್ಕೆ ಪಾರವೇ ಇಲ್ಲದಂತಾಯಿತು. ನಿಶ್ಚಯಿಸಿಯೇ ಬಿಟ್ಟ ಆಗುವುದಾದರೆ ಮಂತ್ರಿಯೇ ಆಗಬೇಕೆಂದು.
ಅಷ್ಟರಲ್ಲಿ ಶಾಲಾ ತಪಾಸಣೆ ಮುಗಿಯಿತು. ಮಂತ್ರಿಗಳು ಎದ್ದು ಶಾಲೆಯ ಪಕ್ಕದಲ್ಲಿರುವ ಒಂದು ಸಣ್ಣ ಸಂದಿಯಲಿ ನಡೆಯತೊಡಗಿದರು. ಮಂತ್ರಿ ಗಳನ್ನು  ಹಿಂಬಾಲಿಸುತ್ತಾ ಎಲ್ಲರೂ ಒಂದು ಚಿಕ್ಕ ಮನೆಯೊಳಗೆ ನಡೆದರು.  ಆ ಮನೆಯಲ್ಲಿ ಒಂದು ಚಿಕ್ಕ ಮಂಚದ ಮೇಲೆ ಕೃಷವಾದ  ಶರೀರ ದೊಂದಿಗೆ ವ್ಯಕ್ತಿಯೊಬ್ಬರು ಮಲಗಿದ್ದರು. ಮಂತ್ರಿಗಳು ಆ
ವ್ಯಕ್ತಿಯ ಕಾಲನ್ನು ಮುಟ್ಟಿ ನಮಸ್ಕರಿಸಿದರು, ಎಲ್ಲಾ ಅಧಿಕಾರಿಗಳು ಸಹಾ ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದರು. ಇದನ್ನೆಲ್ಲಾ ಕಂಡ  ವಿದ್ಯಾರ್ಥಿ ಆಶ್ಚರ್ಯಚಕಿತನಾದ. ಆ ಕೃಷ  ವ್ಯಕ್ತಿ ಈ ಮಂತ್ರಿ ಮತ್ತು ಎಲ್ಲಾ ಅಧಿಕಾರಿಗಳಿಗೆ ವಿದ್ಯೆ ನೀಡಿದ ಗುರುವಾಗಿದ್ದರು. ಆ ವಿದ್ಯಾರ್ಥಿ ಆಂದೇ ನಿಶ್ಚಯಿಸಿ ಬಿಟ್ಟ ಆಗುವುದಾದರೆ   ಎಲ್ಲರೂ ಗೌರವಿಸುವ ಉತ್ತಮ ಶಿಕ್ಷಕನಾಗಬೇಕೆಂದು.
ಶಿಕ್ಷಕರನ್ನು ಮತ್ತು ಶಿಕ್ಷಕ ವೃತ್ತಿಯನ್ನುಎಲ್ಲರೂ ಗೌರವಿಸೋಣ.
💐🙏💐🙏💐🙏💐

Saturday, July 27, 2019

“ಚರಿತ್ರೆ ಕಾಯುತ್ತಿದೆ”

                          “ಚರಿತ್ರೆ ಕಾಯುತ್ತಿದೆ”

"   ಪ್ರಪಂಚವನ್ನೇ ಗೆಲ್ಲಲು ಹೊರಟ ಅಲೆಗ್ಸಾಂಡರ್, ಹಾಗೂ ಜಗತ್ತನ್ನೇ ಬಳಸಿ ಬರಲು ಹೊರಟ ಮೆಗಲನ್, ಹಾದಿಯ ಜೊತೆಯಲ್ಲಿ ಬದ್ದತೆಯನ್ನೂ ಗುರಿಯಾಗಿಸಿ ಕೊಳ್ಳದ ಕಾರಣಕ್ಕೆ, ಮಹತ್ವಾಕಾಂಕ್ಷೆಯ ನಡುವೆಯೇ ಕಾಲನ ಜೊತೆ ಬಹುಬೇಗ ನಡೆದುದ್ದು ಇತಿಹಾಸ.  ಸಮಕಾಲಿನ ಪ್ರಪಂಚದಲ್ಲೂ ಅಂತಹ ಮಹತ್ವಾಕಾಂಕ್ಷಿ ಗಳು, ಬದ್ದತೆಯನ್ನು ಮರೆಯುವ ಕಾರಣ, ಮತ್ತೆ ಮೆಗಲನ್ ಹಾಗೂ ಅಲೆಕ್ಸಾಂಡರ್ ಗಳಂತೆ ಪತನದಂಚಿಗೆ ನಿಲ್ಲವ ವಿಷಾದವನ್ನು ಸೂಚಿಸುತ್ತಿದೆ ಈ ಕವನ.

“ಚರಿತ್ರೆ ಕಾಯುತ್ತಿದೆ”
*********************

ಮಗ್ಗಲು ಬದಲಿಸಿ ಹಿಂದಡಿಯಿಟ್ಟ ಹಾಯಿಗೆ
ಕಠಾರಿಯಲಿ ತಿವಿದು,
ಭವಿತವ್ಯದ ಮಸಾಲೆಯ ಕಟು ಘಾಟಿಗೆ ಮನ
ಮೋಹಿಸಿ
ಸ್ಪೇನಿನ ಬಂದರಿನಲಿ ಲಂಗರು ಕಿತ್ತು
ಲಂಗುಲಗಾಮಿಲ್ಲದೇ ಕಡಲನ್ನುತಡವಿಕೊಂಡವನ ಹೆಸರು,
ಅದೇ ಫರ್ಡಿನೆಂಡ್ ಮೆಗಲನ್ .
ಗಿರಕಿ ಹೊಡೆದಿದ್ದಾದರೂ ಎಲ್ಲಿಗೆ ಪಶ್ಚಿಮದ ಘಟ್ಟ ಹತ್ತಿಳಿದು
ಕಡಲ ತೆರೆಯಲ್ಲಿ ಹೊರಳಿದ್ದಾದರೂ
ಎಲ್ಲಿಗೆ?.

ರಾಶಿ ರಾಶಿ  ಭೋಗ ಬೊಗಸೆ ಕನಸುಗಳ
ಹಾಯಿ ಹಡಗಿನ ಕೀಲಾಗಿಸಿ
ಏಲಿಯನ್ ತೆರದಿ ನಭದ ನಕ್ಷತ್ರ ಗಳ ನೆರಳಿಡಿದು
“ನಾ ಮಾಯೆಯೊಳಗೊ!ಮಾಯೆಯು
ನನ್ನೊಳಗೊ”ಎಂಬ ಕನಸಿನ ನೀಲದಲಿ ತೇಲಿದವ ನೀ
ಅದೇ ಫರ್ಡಿನೆಂಡ್ ಮೆಗಲನ್
ನೀ ತೇಲಿದಾದರೂ ಎಲ್ಲಿಗೆ ಸಾವು ಓಡುವ
ಆವರಣಕೆ.

ಉದಯಿಸಿದ ಯೇಸುವಿಗೆ  ಮುದದಿ ವಂದಿಸಿ
ಕ್ಷಿತಿಜದೆತ್ತರಕೆ
ಹಾರಿಸುವ ಹಂಬಲಕೆ  ಮಸಾಲೆಯ ಘಾಟು ಮರೆತು
ರಕ್ತ ರುಧಿರಕೆ, ಕೈ ಹಾಕಿದವನ
ಎದೆಗೆ ಬಿದ್ದ ಲಪು ಲಪುವಿನ ಏಟಿಗೆ ,ಬಿದಿರಿನ ಚೂಪಿಗೆ,
ಜತನದಿ ಕಾಪಿಟ್ಟ ಧರ್ಮ ,ಅಕ್ಷರ,ಕಾಮಗಳ
ತೊರೆದು,
ದ್ವೀಪ ತೀರದಿ ವಿಲವಿಲನೆ ಗತ ಪ್ರಾಣನಾದವನ ಹೆಸರು,
ಅದೇ ಫರ್ಡಿನೆಂಡ್ ಮೆಗಲನ್. ನಿನಗೀತರ ಸಾವು
ತರವೆ!!.

ಮರುಕಳಿಸಿತು ಮತ್ತದೇ ಅಲೆಕ್ಸಾಂಡರನ ಕಥೆ
ಜಗವ ಗೆಲ್ಲದ ದಾರುಣ ವ್ಯಥೆ.
ಅಬಿಸೀನಿಯಾದ ಹರಳಿನ ಉಡಿಯಲ್ಲಿ ನಿಸ್ಸಂಕೋಚ
ಮೈಚಾಚಿ,ಉಸಿರೆಳೆದು ಕೈ ಎತ್ತಿದವನ,
ಇತಿಹಾಸ ಚರಿತೆ,
ಮತ್ತೆ ಪುನರುತ್ಥಾನವಿಲ್ಲಿ ಮೆಗಲಾನಿನ ಮನದಲ್ಲಿ,
ಜಗವ ಸುತ್ತುವ ಛಲಕೆ
ಧುಮುಕಿಟ್ಟವನ
ಅದೇ ಕಥೆ ಅದೇ ವ್ಯಥೆ, ಮುಗಿಯದ
ಮಾನುಷ ರಕ್ತ ಹಿಂಸೆ
ಶೋಕ ಗೀತೆ.

ಮತ್ತೆ ಸುಳಿದ ಮತ್ತೊಬ್ಬ ಫಿಲಿಪ್ ನಂತವನ ಮಗ,
ಅವನು ಮೋಹಿಸಿದ್ದು,
ಉಸಿರು ಕಟ್ಟಿಸುವ ಪರಿಮಳಕೋ,ಇಲ್ಲ ನೀಲಿಯುಕ್ಕುವ
ಸಾಗರವ ಹತ್ತಿಕ್ಕಿ
ಯೇಸುವ ಬೆಳೆಸುವ ಹಂಬಲಕೋ,
ಬಾನಂಚಿನಲಿ ಮಿನುಗುವ ಗ್ಯಾಲಕ್ಸಿಯಲಿ ,ಮೆಗಲನ್
ಎಂದು ಸೀಲು ಹೊಡೆದು ತಬ್ಬಿಬ್ಬಾದ ಚರಿತ್ರೆ,
ಮತ್ತೆ ಮೆಗಲಾನರ ಹುಡುಕಿ ಅರಸಿ,ಕುಣಿಕೆ ಹಿಡಿದು
ಅವರ ಉತ್ತರಕ್ಕಾಗಿ ಕಾಯುತ್ತಿದೆ.

ಕವಿ ಮಿತ್ರ  (ಹೆಮ್ಮನಹಳ್ಳಿ, ಗಿರೀಶ್ ಗಾಣದಾಳ್.).

ಚಿತ್ರ ಕೃಪೆ ;ಗೂಗಲ್.

Friday, July 26, 2019

ಆ ಹುಡುಗಿ


ಕಾಲೇಜ್ ಜೀವನದ ಕೆಲವು ಮಧುರ ಕ್ಷಣಗಳನ್ನು ಹಂಚಿಕೊಳ್ಳವ ಬಯಕೆಯಿಂದ ಇದನ್ನು ಬರೆಯುತ್ತಿದ್ದೆನೆ.
ನಾನು ಪ್ರೀತಿ ಪ್ರೇಮ ಈ ವಿಚಾರದಲ್ಲಿ ಉಪೇಂದ್ರನ ಶಿಷ್ಯ ಅಂದುಕೊಳ್ಳಿ ಏಕೆಂದರೆ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತನೇ ಭಾವಿಸಿಕೊಂಡು ನನ್ನದೇ ಆದ ಪ್ರಪಂಚದಲ್ಲಿ ಜೀವಿಸುತ್ತಿದ್ದೆ,
ಒಮ್ಮೆ ಮಳೆಗಾಲದ ದಿನಗಳಲ್ಲಿ ಜಡಿಮಳೆ ಜಿನುಗುತ್ತಿತ್ತು ಅಂತಹ ದಿನಗಳಲ್ಲಿ ಕಾಲೇಜಿಗೆ ಹೋಗುವುದಕ್ಕೆ ಬಹಳ ಕಷ್ಟವಾಗುತ್ತಿತ್ತು.ಬಸ್ಟ್ಯಾಂಡ್‌ನಿಂದ ಕಾಲೇಜು ಸುಮಾರು 2km ದೂರವಿತ್ತು.ಮಳೆಯಲ್ಲಿ ನೆನೆಯುತ್ತಾ ಕಾಲೇಜು ತಲುಪಿದೆ,ಕಾಲೇಜಿನ ಗೇಟ್ ಬಳಿಯೇ ಇದ್ದ ಲೈಬ್ರರಿ ಹತ್ತಿರ ನಿಂತಿದ್ದೆ.ಆ ಜಡಿಮಳೆಯಲ್ಲಿಯೇ ಅವಳು ಓಡೋಡಿ ಬರುತ್ತಿದ್ದಳು ಅದು ಸೀರೆಯಲ್ಲಿ!.
ಅವಳು ನನ್ನ ಜೊತೆಯಲ್ಲಿಯೇ ಓದುವವಳೇ ಆಗಿದ್ದರೂ ಆವತ್ತೆಕೊ ಸ್ವರ್ಗದಿಂದ ಧರೆಗಿಳಿದ ಅಪ್ಸರೆ ತರ ಕಾಣತ್ತಿದ್ದಳು;ಮಳೆ ಪ್ರಭಾವವೆನೋ👰..
ಆವತ್ತಿನ ಮಳೆಗೆ ಕಾಲೇಜ್‌ನ ಗೇಟ್ ಹತ್ತಿರ ಕೆಸರು ಗದ್ದೆಯ ರೀತಿಯಾಗಿತ್ತು ಇವಳ ಒಂದು ಕೈಯಲ್ಲಿ ಬ್ಯಾಗ್ ಇನ್ನೊಂದು ಕೈಯಲ್ಲಿ ಕಪ್ಪು ಸೀರೆಯನ್ನು ಸ್ವಲ್ಪ ಮೇಲೆ ಹಿಡ್ಕೊಂಡು ಕೆಸರಾಗದಂತೆ ಬರುತ್ತಿದ್ದಳು, ಅವಳ ಬಿಳಿ ಕಾಲಲ್ಲಿ ತೆಳುವಾದ ಕಾಲಗೆಜ್ಜೆಗಳು ಬಟ್ಟಲು ಕಣ್ಣುಗಳು ಅದೆನೋ ಸೆಳೆತ ಇತ್ತು ನಾನು ಅವಳ ಕಣ್ಣೋಟಕ್ಕೆ ಮನಸೋತೆ..
ಸದಾ ಏನಾನೋ ಹುಡುಕುವ ರೀತಿಯಲ್ಲಿತ್ತು ಅವಳ ಕಣ್ಣೋಟ ಆ ಮುಗ್ಧ ಮುಖ ನನಗೆ ಇನ್ನೂ ತುಂಬಾ ಕಾಡುತ್ತಿದ್ದೆ.. ಲೈಬ್ರರಿ ಹತ್ತಿರ ಬರಬಹುದು ಅಂತ ನೋಡ್ತಿದ್ದೆ ಆದರೆ ಅವಳು ನನ್ನ ನೋಡಿ ಹಾಗೇ ಕ್ಲಾಸ್ ರೂಮ್ ಕಡೆ ಓಡಿದಳು..ಅಂದಿನಿಂದ ದಿನಾ ಅವಳನ್ನು ನೋಡುವುದೇ ಒಂದು ಹವ್ಯಾಸವಾಗಿತ್ತು,
ಕಾಲೇಜು ಮುಗಿದರೂ ಒಮ್ಮೆಯೂ ಅವಳ ಜೊತೆ ಮಾತನಾಡಲು ಆಗಲಿಲ್ಲ..
ಆ ಹುಡುಗಿಯನ್ನು ನೆನೆಸಿಕೊಂಡರೆ ಈಗಲೂ ಮುಖದಲ್ಲಿ ಅದೆನೋ ಮಂದಹಾಸ..😊