ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, September 20, 2019

ಪಾಕಕ್ರಾಂತಿ

ಪಾಕಕ್ರಾಂತಿ & ಇತರೆ ಕಥೆಗಳು
ಪೂರ್ಣಚಂದ್ರ ತೇಜಸ್ವಿ
ಇದು ತೇಜಸ್ವಿಯವರ ಕಥಾಸಂಕಲನ, ತೇಜಸ್ವಿ ಅವರ ತಮ್ಮ ಜೀವನದ ಅನುಭವಗಳೇ ಕಥೆಗಳ ರೂಪದಲ್ಲಿ ಹೇಳಿದ್ದಾರೆ. ತೇಜಸ್ವಿ ಅವರ ಖಾಸಗೀ ಬದುಕಿನ ಬಗ್ಗೆ ಓದುಗರಲ್ಲಿ ಉಂಟಾಗುವ ಕುತೂಹಲವನ್ನು ತಣಿಸುವ ಕೃತಿ ಪಾಕಕ್ರಾಂತಿ. ತೇಜಸ್ವಿ ಸೃಷ್ಟಿಸಿರುವ ಪಾಕ ಲೋಕದಲ್ಲಿ ನಮ್ಮನ್ನೂ ನಾವು ಕಂಡುಕೊಂಡರೆ ಅದೇ ಅಚ್ಚರಿ.
ಇದರಲ್ಲಿ ಒಟ್ಟು 12 ಕಥೆಗಳಿವೆ,ಇದರಲ್ಲಿ ಪಾಕಕ್ರಾಂತಿಯೇ ಮೇರು ಕಥೆ..

ಪಾಕಕ್ರಾಂತಿ:- ಅಡುಗೆ ಕಲೆ ಅರಿಯದವರು ಅದೊಂದು ಸುಲಭ ಕಾರ್ಯ ಎಂದು ಪರಿಗಣಿಸಲಾಗುತ್ತರೆ.ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತೇಜಸ್ವಿರವರೂ ಹಾಗೇ ಭಾವಿಸಿ ಪಡುವ ಸಂಕಷ್ಟಗಳನ್ನು ಹಾಗೂ ಅವರು ಅಡುಗೆ ವಿಧಾನದಲ್ಲಿ ತರಬಯಸುವ ಕ್ರಾಂತಿಕಾರಿ ಬದಲಾವಣೆಗಳೇ ಪಾಕಕ್ರಾಂತಿ..
ತೇಜಸ್ವಿ ಅವರ ವಿಜ್ಞಾನಿ ಮಿತ್ರ ಹಾಲಿಲ್ಲದೇ ಕಾಫಿ ಮಾಡಬಹುದು ಎಂಬ ಸಲಹೆ ಮೇರೆಗೆ ತೇಜಸ್ವಿ ಮೊದಲಬಾರಿಗೆ ಕಾಫಿ ಮಾಡುತ್ತಾರೆ,ಅದು ಕರ್ರಗೆ ನೀರಾದ ಟಾರಿನಂತೆ ಕಾಣುತ್ತಿರುತ್ತದೆ.ಅದರ ರುಚಿ ನೋಡಿ ಅವರ ಮಿತ್ರ ಓಡಿಹೋಗವ ಪರಿ ನೆನೆದು ಹೊಟ್ಟೆಹುಣ್ಣಗುವಂತೆ ನಗುವುದು ಖಚಿತ..
ತೇಜಸ್ವಿ ಕುಕ್ಕರ್‌ನಲ್ಲಿ ಅಡುಗೆಯ ಪ್ರಯೋಗ ಮಾಡಲು ಹೋಗಿ ಅದು ಬಾಂಬ್ ರೀತಿ ಸಿಡಿದದ್ದು,ಅದೇ ಸಮಯದಲ್ಲಿ ಅಲ್ಲಿದ್ದ ಪೋಲಿಸ್‌ರು ತೇಜಸ್ವಿಯವರನ್ನು ಉಗ್ರಗಾಮಿ ರೀತಿ ನೋಡಿದು ತುಂಬಾ  ಹಾಸ್ಯಮಯವಾಗಿ ಬರೆದಿದ್ದಾರೆ. ಎಂತಾ ಗಂಭೀರ ಸಂದರ್ಭವನ್ನು ತಮ್ಮ ತಿಳಿ ಹಾಸ್ಯದ ಮುಖಾಂತರ ಓದುಗರಿಗೆ ಮುಟ್ಟಿಸುವಲ್ಲಿ ತೇಜಸ್ವಿ ಸಿದ್ಧಹಸ್ತರು.

ಕಳ್ಳನ ಕಥೆ:- ಮಕ್ಕಳಾದ ಸುಸ್ಮಿತ - ಈಶಾನ್ಯೆ ಕಳ್ಳನ ಬಗ್ಗೆ ಮಾತನಾಡಿಕೊಳ್ಳುವ ಸಣ್ಣಕಥೆ..

ಸುವರ್ಣ ಸ್ವಪ್ನ:- ಹತ್ತೂರಿನ ರಮೇಶನ ಸುವರ್ಣ ಸ್ವಪ್ನದ ಮಾಯಲೋಕದ ಕಲ್ಪನೆ ಬಗ್ಗೆ ಮಲೆನಾಡಿನಲ್ಲಿ ಸಾಮಾನ್ಯದಂತಿದ್ದ ಕಳ್ಳಸಾಗಣೆ ಬಗ್ಗೆ ಸುಂದರವಾಗಿ ಹೇಳಲಾಗಿದೆ..

ಪಿಶಾಚಿಗಳು:- ತಾರಾ ಮತ್ತು ಹೇಮಂತ ನಡುವಿನ ಬಾಂಧವ್ಯ ಹಾಗೂ ಮಲೆನಾಡಿನ ಸೌಂದರ್ಯ ವರ್ಣಿಸಲು ನೀಡುವ ಹೋಲಿಕೆಗಳು ಆಹಾ ಅದ್ಭುತ..

ಮಳೆಗಾಲದ ಚಿತ್ರ:- ಪಾಪಣ್ಣ & ಮುದ್ದಪ್ಪ ಮೂರ್ಖ ಸಹೋದರರು ಮಳೆಯನ್ನು ಶಪಿಸುವ ಪ್ರಸಂಗಗಳು,ಪಾಪಣ್ಣನ ಗದ್ದೆ;ಮುದ್ದಪ್ಪ ಮೀನುಗಾರಿಕೆ ಕಲೆಯ ವರ್ಣನೆ ಚೆನ್ನಾಗಿದೆ..

ಹೀಗೆ ಈ ಪುಸ್ತಕದಲ್ಲಿ ನಗು, ಸಂತೆ, ಮೃತ್ಯೋರ್ಮಾ, ವನ ವರಾಹಗಳು, ಮೂಡಿಗೆರೆ ಎಂಬ ಊರು, ದನಗಳು, ಸಿತಾರ್ ವಾದ್ಯದ ಕಥೆಗಳಿವೆ..
ಪ್ರತಿಯೊಂದು ಕತೆಯು ತೇಜಸ್ವಿಯವರ ಜೀವನದ ಭಾಗವಾಗಿ ಓದುಗನಿಗೆ ಬಹಳ ಹಿತ ಎನ್ನಿಸುತ್ತವೆ.ಕಾಡಿನ ಸೌಂದರ್ಯ,ಬೇಟೆಯ ಸನ್ನಿವೇಶಗಳು ನಿಮ್ಮನ್ನು ಮಲೆನಾಡ ಕಾಡಿನ ಕಡೆ ಕೈಬೀಸಿ ಕರೆಯುತ್ತವೆ... 

Sunday, September 8, 2019

ಬಿಡಿಸಲಾಗದ ಪ್ರಶ್ನೆ

ಸಾರ್ಥಕ ಬದುಕೆಂದರೇನು?!
ಬದುಕು                 
ಬದುಕು ಎಂದರೇನು? 
ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ:

ಬುದ್ಧ ಹೇಳುತ್ತಾನೆ, "ಪ್ರೀತಿ ಮತ್ತು ಶಾಂತಿ". 
ದುರ್ಯೋಧನ ಹೇಳುತ್ತಾನೆ, "ಹಠ ಮತ್ತು ಛಲ". 
ಏಕಲವ್ಯ ಹೇಳುತ್ತಾನೆ, "ಗುರಿ".
ಯುಧಿಷ್ಠಿರ ಹೇಳುತ್ತಾನೆ, "ಧರ್ಮ".
ಶ್ರೀ ಕೃಷ್ಣ ಹೇಳುತ್ತಾನೆ, "ಸಮದರ್ಶಿತ್ವ".
ಭೀಷ್ಮ ಹೇಳುತ್ತಾನೆ, "ಪ್ರತಿಜ್ಞೆ".
ಒಬ್ಬ ಸಂತ ಹೇಳುತ್ತಾನೆ, " ಭಕ್ತಿ ".
ಒಬ್ಬ ಸನ್ಯಾಸಿ ಹೇಳುತ್ತಾನೆ, "ವೈರಾಗ್ಯ".                   
ಅಲೆಕ್ಸಾಂಡರ್ ಹೇಳುತ್ತಾನೆ, "ಯುದ್ಧ".
ಶ್ರೀಮಂತ ಹೇಳುತ್ತಾನೆ, "ಮೋಜು ಮತ್ತು ಮಸ್ತಿ".
ಮಧ್ಯಮ ವರ್ಗದವನು ಹೇಳುತ್ತಾನೆ, "ಉದ್ಯೋಗ".
 ಹಸಿದವನು ಹೇಳುತ್ತಾನೆ, "ತನ್ನ ಪಾಲಿನ ಅರ್ಧ ರೊಟ್ಟಿ".

ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ.

ಬದುಕೆನ್ನುವುದು  ಸುಂದರವಾದ ಅನುಭವ.  ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ  ಎಲ್ಲವೂ ಅಮೂಲ್ಯ.  ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು .  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.  ಹೀಗೆಯೇ  ನಮ್ಮ ಬದುಕು  ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.  ಈ ಕ್ಷಣವೇ ಪರಮ ಪವಿತ್ರ.  ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು.     ಸಂಘರ್ಷ, ಮನಸ್ತಾಪ, ಕೋಪ, ದ್ವೇಷ  ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.    ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.                               

ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ  ಬದುಕುವುದೇ  ಜೀವನ...
ಧನ್ಯವಾದಗಳು .

ತೇಜಸ್ವಿ ನುಡಿಗಳು

*** ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನುಡಿಗಳು ***

More than 250 quotes of Tejaswi.
#TejaswiBirthday2019 #ತೇಜಸ್ವಿ_ವಿಚಾರಗಳು

ಜೀವನದ ನುಡಿಗಳು

“ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.”
(The freedom to live as we wish is always a terrible fight since we will not get it easily)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವ”ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ”
(Our behavior would make our words meaningful)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ

“ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಬೇರೆಯವರನ್ನ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ?”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್

“ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷೀ ಎಂದರೆ ಹೋಮೋಸೆಪಿಯನ್”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ

“ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್

“ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ

“ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ, ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತಿವಿ, ಕಾಲ ಸರೀತಾ ಇದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ

“ಎಷ್ಟನ್ನು ನಾವು ಕಣ್ಣಿಗೆ ಕಂಡರೂ ನೋಡದೆ ಬಿಟ್ಟಿದ್ದೇವೋ ಏನೋ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೊ

“ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕುಂಬಾರನ ಸೂಕ್ಷ್ಮ ಕಸುಬುದಾರಿಕೆ, ಮೇದರವನ ಬುಟ್ಟಿ ಹೆಣೆಯುವ ಕಲೆಗಾರಿಕೆ ಮಾನ್ಯತೆ ಕಳೆದುಕೊಂಡು ಓದುಬರಹ, ಜ್ಞಾಪಕ ಶಕ್ತಿ, ಇಂಗ್ಲಿಷ್ ಮಾತುಗಳು ಪರೀಕ್ಷೆಗಳಲ್ಲಿ ಮೆರಿಟ್ಗಳಾದವು. ಮೇದರವನೂ, ಕುಂಬಾರನೂ, ಅಗಸನೂ ಮೆರಿಟ್ ಇಲ್ಲದವನಾಗಿ ಕೆಲಸ ಮತ್ತು ಅನ್ನ ಕಳೆದು ಕೊಂಡ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 164

“ನಾನು ಕಣ್ಣಿಗೆ ಕಂಡದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ನನಗೆ ಕಷ್ಟಪಟ್ಟು ಓದಿದ್ದು ಗೊತ್ತೇ ಇಲ್ಲ. ಬರೇ ಕ್ಲಾಸಿನಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಮಾತ್ರವೇ ಈವರೆಗೂ ನಾನು ತರಗತಿಗಳಲ್ಲಿ ಪಾಸಾಗಿರುವವನು. ಆದರೆ ನಮಗೆ ಅಂಥ ವಿದ್ಯಾಗುರುಗಳು ದೊರತಿದ್ದರೆಂಬುದು ಇಲ್ಲಿ ಬಹುಮುಖ್ಯ. ಅವರಲ್ಲಿ ಪೂಜ್ಯ ಜಿ ಎಸ್ ಶಿವರುದ್ರಪ್ಪನವರು ಒಬ್ಬರೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕತೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದೆಯಷ್ಟೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಿರಗೂರಿನ ಗಯ್ಯಾಳಿಗಳು

“ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿವಿಮರ್ಶೆಯ ವಿಮರ್ಶೆ, ಪುಟ ೧೩

“ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ಥಿತ್ವವೇ ಇರುವುದಿಲ್ಲ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಹೊಸಹೊಸ ಜೀವನಾನುಭವಗಳು ನಮ್ಮ ಅನುಭವ ವಿಶ್ವಕ್ಕೆ ಸೇರ್ಪಡೆಯಾದಾಗ ಕೇವಲ ಅದರ ಮೊತ್ತ ಹೆಚ್ಚಾಗುವುದಷ್ಟೇ ಅಲ್ಲ, ನಮ್ಮ ಅನುಭವ ವಿಶ್ವದಲ್ಲಿ ಗುಣಾತ್ಮಕ ಬದಲಾವಣೆಯನ್ನೂ ಉಂಟುಮಾಡುತ್ತದೆ, ಎಂದರೆ ಇಡೀ ಅನುಭವ ವಿಶ್ವದ ವ್ಯವಸ್ಥೆಯೇ ಹೊಸದಾಗಿ ಸಂಯೋಜನೆಗೊಳ್ಳುತ್ತದೆ, ಅಥವಾ ನಿರಂತರವಾಗಿ ಸಂಯೋಜನೆಗೊಳ್ಳುತ್ತಲೇ ಇರುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು? ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸ್ವರೂಪ

“ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ, ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರಿಸುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಹಾ ಪಲಾಯನ (ಮುನ್ನುಡಿ)

“‘ಮನುಷ್ಯ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ’ ಎನ್ನುವುದೇ ನಮಗೆ ಚರಿತ್ರೆ ಕಲಿಸುವ ಪಾಠ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

“ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸ ಇರುವುದರಿಂದಲೇ ನಮ್ಮ ಫೋಟೊಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್

“ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ವಿಶ್ವ

“ತಾನು ನಿಯಂತ್ರಿಸಲಾಗದ ಅಮೂರ್ತದ ಅಗಾಧತೆಯ ಎದುರು ಮನುಷ್ಯನ ಕ್ರಿಯೆಗಳು ಅರ್ಥಹೀನವಾಗಿಯೂ ಹಾಸ್ಯಾಸ್ಪದವಾಗಿಯೂ ಕಾಣುತ್ತವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನನ್ನ ಪಾಡಿಗೆ ನನ್ನನ್ನು ಬಿಟ್ಟರೆ ತಿಂಗಳುಗಟ್ಟಲೆ ಅಥವಾ ಜೀವನ ಪರ್ಯಂತ ಬೇಕಾದರೂ ಇದ್ದೇನು. ಆದರೆ ನೀನು ಇಲ್ಲೆ ಇರಬೇಕು. ಎಲ್ಲಿಯೂ ಹೋಗುವಂತೆಯೇ ಇಲ್ಲ ಎಂದು ಯಾರಾದರೂ ಅಂದರೆ ಅಲ್ಲಿಗೆ ಮುಗಿಯಿತು ನನ್ನ ಕಥೆ. ಅನಂತರ ಅಲ್ಲಿ ಕಳೆಯುವ ಪ್ರತಿಯೊಂದು ಕ್ಷಣವೂ ನನಗೆ ಭೀಕರವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ ೧೦೮

“ಬದುಕಿರುವವನಿಗೆ ಸಾವಿನಂತೆ, ಯಾವುದಕ್ಕೂ ನನಗೆ ಸದಾ ಹೊರ ದಾರಿಯೊಂದು ತೆರದಿರಲೇಬೇಕು. ಆಗಲೇ ನನಗೆ ಜೀವನ ಸುಂದರ, ಕುತೂಹಲಕರ. ಅದು ಮುಚ್ಚಿಕೊಂಡಿತೋ ತಕ್ಷಣ ಅದು ಸಾಕ್ಷಾತ್ ಸ್ವರ್ಗವಾದರೂ ನರಕವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ ೧೦೮

“ಮತ್ತೊಬ್ಬರು ಹೇಳಿದ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದಿದ್ದರೆ ನಾವು ನಮ್ಮ ಜೀವನದ ಎಷ್ಟೋ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದಿತ್ತು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೦೮

“ಎನನ್ನಾದರೂ ಅರ್ಥ ಮಾಡಿಕೊಳ್ಳಬೇಕೆಂದಿದ್ದರೆ ಅದನ್ನು ಕಲಿಯಲು ಪ್ರಯತ್ನಿಸುವುದು ಅದನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗ ಎಂದು ನನಗೆನ್ನಿಸುತ್ತದೆ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೧೧

“ಯಾರು ಏನೇ ಮಾಡಿದರೂ ಒಬ್ಬ ಪ್ರತಿಭಾವಂತ ಬರಹಗಾರನನ್ನು ಇಳಿಸಲಾಗಲೀ, ಅವನು ಪ್ರತಿಭಾವಂತನಲ್ಲದಿದ್ದರೆ ಮಠ ಕಟ್ಟಿ ಊರಗೋಲು ಕೊಟ್ಟು ಉಳಿಸಲಾಗಲೀ ಸಾಧ್ಯವೇ ಇಲ್ಲ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೨೫

“ಬಹುಶಃ ಮನುಷ್ಯ ಸುಖ, ಸಮೃದ್ಧಿ, ಸಂತೋಷಗಳ ನಡುವಿಗಿಂತ ಮೌನ, ಏಕಾಂತ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ!
ಅದರ ಮಹಾನ್ಮೌನದ ಏಕಾಂತದಲ್ಲಿ ಕುಳಿತು ಇಡೀ ಇಹದ ಅಂತಿಮ ಉದ್ದೇಶವನ್ನು ಚಿಂತಿಸಿ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸತ್ಯಾನ್ವೇಷಣೆ ಮಾಡಿದ್ದಾನೇನೋ!”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ದೇಶ ವಿದೇಶ-೧

“ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು, ಅಭಿಮಾನ ಮೂಡುವುದು ಮಹಾ ಯುದ್ಧದ ಮತ್ತು ಅನಂತರ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ, ಮತ್ತು ಓದಿದಾಗ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಅಲ್ಲಿಂದ ಹೇಗಾದರೂ ಮಾಡಿ ಗಡಿ ದಾಟಿ ಸ್ವಾತಂತ್ರ್ಯದ ಉಸಿರಾಡಲು ತವಕಿಸಿದವರ ಕತೆಗಳನ್ನು ಓದುವಾಗ, ಬಡತನ, ಅನಕ್ಷರತೆ ಇತ್ಯಾದಿ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ನಾವು ನಮ್ಮ ಸ್ವಾತಂತ್ರ್ಯವನ್ನೇ ಒತ್ತೆಯಿಡಲು ತಯ್ಯಾರಾಗುವುದು ಅಕ್ಷಮ್ಯ ಎಂದೆನಿಸುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ಮಹಾಯುದ್ಧ-೨

“ಯಾವುದನ್ನೂ ಉಚಿತವೆಂದು ಬಿಟ್ಟಿ ಮಾಡಬೇಡಿ. ಯಾರಿಂದಲೂ ಬಿಟ್ಟಿಯಾಗಿ ಯಾವುದನ್ನೂ ನಿರೀಕ್ಷಿಸಲೂ ಬೇಡಿ. ಇದರಿಂದ ಇಡೀ ನಮ್ಮ ಉದ್ದೇಶ ಅರ್ಥಹೀನವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345

“ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ನಾವು ಹಾಗೆ ನಟಿಸಲು ತೊಡಗಬಾರದು”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಮೊದಲೆಲ್ಲಾ ನಮ್ಮ ವರ್ತನೆಯನ್ನು ಹುಚ್ಚಾಟವೆಂದು ಪರಿಗಣಿಸಿ ನಗುತ್ತಿದ್ದವರು ಕೊನೆಗೆ ನಮ್ಮ ಬದುಕೇ ಹೀಗೆ ಎಂದು ತಿಳಿದನಂತರ ನಗುವುದನ್ನು ನಿಲ್ಲಿಸಿದರು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೯

“ಸಾಕ್ಷಾಧಾರ ಇಲ್ಲದ ಯಾವುದನ್ನೂ ನಾನು ನಂಬೋದಿಲ್ಲ. ದೇವರನ್ನು ನಂಬೋದು ಬಿಡೋದು ಎಲ್ಲಾ ನಿರಪಯುಕ್ತ ಚರ್ಚೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ

“ನಾನು ನಿನ್ನಂತಯೇ ಅನ್ನ ತಿನ್ನುವ ಸಾಮಾನ್ಯ ಸರಳ ಮನುಷ್ಯ. ನನ್ನ ದೈನಂದಿನ ಅನುಭವಗಳನ್ನು ಇತರರಿಗೆ ತಿಳಿಸುವ ಕಲೆಗಾರಿಕೆಯನ್ನು ಬರೆದು, ತಿದ್ದಿ, ಕಲಿತವನು. ಉತ್ತಮ ಬರಹಗಾರನಾಗಲೂ ಪ್ರತಿಭೆ ಸ್ವೂರ್ತಿ ಎಲ್ಲ ಬೇಕಾದರೂ ಎಲ್ಲಕ್ಕಿಂತ ಮುಖ್ಯವಾಗಿ ಶ್ರದ್ಧೆ, ಕಷ್ಟಪಟ್ಟು ಕೆಲಸ ಮಾಡುವ ತಾಳ್ಮೆ ಅತ್ಯಂತ ಮುಖ್ಯ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348

“ನನ್ನ ಕಥೆ ಕಾದಂಬರಿಗಳು ವಾಸ್ತವವಾಗಿ ನನ್ನ ಅನುಭವಗಳನ್ನೇನೂ ನಿಮಗೆ ಕೊಡುವುದಿಲ್ಲ. ನಿಮ್ಮೊಳಗೆ ಇದ್ದ ಆ ಅನುಭವಗಳನ್ನು ಉದ್ದೀಪನ ಮಾಡಿ ನಿಮಗೆ ತೋರಿಸಿಕೊಡುತ್ತವಷ್ಟೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348

“ಜೀವನವನ್ನು ನನ್ನಂತೆ ನೋಡುವ ದೃಷ್ಟಿ, ಶಕ್ತಿ, ನಿಮ್ಮಲ್ಲೇ ಇರುತ್ತದೆ. ಇಲ್ಲದಿದ್ದರೆ ನಿನಗೇಕೆ ಎಲ್ಲೋ ಕುಳಿತುಕೊಂಡು ಬರೆದ ನನ್ನ ಬರವಣಿಗೆ ಖುಷಿ ಕೊಡಬೇಕು? ನಿನ್ನಲ್ಲಿರುವ ಅನುಭವಗಳಿಗೆ ನೀನು ಸಹ ನನ್ನಂತೆಯೇ ಮಾತು ಕೊಡುವವನಾಗಬೇಕು. ಅದಕ್ಕೆ ಮಾತ್ರ ತುಂಬಾ ತಾಳ್ಮೆ ಶ್ರದ್ಧೆ ಬೇಕಾಗುತ್ತದೆ.
ನಿನ್ನ ಅನುಭವಗಳನ್ನು ನಿನ್ನ ಮಾತಿನಲ್ಲೇ ನೂರಾರು ಸಾರಿ ಬರೆದು, ತಿದ್ದಿ, ಇತರರಿಗೆ ತೋರಿಸಿ ಬರೆಯುವುದನ್ನು ಕಲಿಯಬೇಕಾಗುತ್ತದೆ. ನಾನು ಬರೆದುದನ್ನು ಓದಿದಾಗ ಆದಷ್ಟೆ ಸಂತೋಷ ಆಗ ನಿನಗಾಗುತ್ತದೆ. ಅದನ್ನ ಓದಿದ ಇತರರಿಗೂ ಸಂತೋಷವಾದಾಗ ನಿನಗೆ ಇನ್ನೂ ಖುಷಿಯಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348

“ಓದುಗರು ಯಾರಾದರೂ ಕೃತಿಗಳನ್ನು ಓದಿ ಚೆನ್ನಾಗಿದೆ ಎಂದು ಸಂತೋಷಪಟ್ಟರೆ ನನಗೆ ಧನ್ಯನಾದೆ ಎನ್ನಿಸುತ್ತದೆ. ಅಂಥ ಹಲವು ಕೃತಿಗಳನ್ನು ಬರೆಯಲು ಪ್ರೋತ್ಸಾಹ ದೊರೆಯುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345

“ಅವಾರ್ಡುಗಳಿಗೆ ಪ್ರಶಸ್ತಿಗಳಿಗೆ ನನ್ನ ದೃಷ್ಟಿಯಲ್ಲಿ ಅಂಥ ಏನೂ ಮಹತ್ವವಿಲ್ಲ. ಕ್ಯೂನಲ್ಲಿ ನಿಂತುಕೊಂಡ ಕತ್ತೆಗಳಿಗೂ ಒಂದಲ್ಲ ಒಂದು ದಿನ ಅವಾರ್ಡು ಕೊಡಲೇಬೇಕಾಗುತ್ತದೆ. ಒಬ್ಬ ಸೃಜನಶೀಲ ಲೇಖಕನ ಅಂತಿಮ ಪರೀಕ್ಷೆ ಓದುಗನ ಮನದಲ್ಲಿಯೇ ಹೊರತು ಬೇರೆಲ್ಲೂ ಅಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345

“ನಾನು ಎಲ್ಲರಿಗಿಂತ ಭಿನ್ನವಾಗಿ ಬರೆಯಬೇಕೆಂದು ಎಂದೂ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದವನಲ್ಲ. ಈ ಭಿನ್ನತೆಯ ಮೂಲ ಇರುವುದು ನನ್ನ ಬರೆವಣಿಗೆ ಕ್ರಮದಲ್ಲಾಗಲೀ ಭಾಷೆಯ ಬಳಕೆಯಲ್ಲಾಗಲೀ ಅಲ್ಲ. ಅದು ಮೂಲತಃ ನನ್ನ ವ್ಯಕ್ತಿತ್ವದಲ್ಲೂ ನನ್ನ ಬದುಕಿನ ಬಗೆಯಲ್ಲೂ ಇತ್ತು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ – 295

“ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೇ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೋಗುವುದೇ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಾಕಕ್ರಾಂತಿ, ಪುಟ 1

“ಈ ಶತಮಾನದ ಅದ್ಭುತಗಳಾಗಿ ಎವರೆಸ್ಟ್ ಹತ್ತಿದ್ದು, ಉಪಗ್ರಹ ಹಾರಿಸಿದ್ದು, ಚಂದ್ರನಲ್ಲಿ ಇಳಿದಿದ್ದು, ಕಂಪ್ಯೂಟರ್ ಚಿಪ್ ಗಳನ್ನು ತಯಾರಿಸಿದ್ದು ಕಣ್ಣು ಕೋರೈಸುವ ಸಾಧನೆಗಳಾದ್ದರಿಂದ ಜನಪ್ರಿಯತೆಯನ್ನೂ ಪ್ರಚಾರವನ್ನೂ ಪಡೆದುಕೊಳ್ಳುತ್ತವೆ. ಆದರೆ ಈ ಶತಮಾನದ ಸಾಧನೆ ಎಂದು ಯಾವುದಾದರು ಒಂದೇ ಒಂದು ಸಾಧನೆಯನ್ನು ಹೇಳು ಎಂದು ನನ್ನನ್ನು ಯಾರಾದರೂ ಕೇಳಿದರೆ ನಾನು ನಿಸ್ಸಂಶಯವಾಗಿ ‘ವಿಶ್ವ ಆರೋಗ್ಯ ಸಂಸ್ಥೆ ಸಿಡುಬನ್ನು ಈ ಭೂಮಂಡಲದಿಂದಲೇ ಉಚ್ಚಾಟಿಸಿದ್ದು’ ಎಂದು ನಾನು ಹೇಳುತ್ತೇನೆ. ಇದು ಇದ್ದಕ್ಕಿದಂತೆ ಧಢೀರೆಂದು ಯಾರೋ ಒಬ್ಬ ಸಹಸ್ರಾರು ಜನರ ಸಮ್ಮುಖದಲ್ಲಿ ಸಾಧಿಸಿ ಚಪ್ಪಾಳೆ ಗಿಟ್ಟಿಸಿದಂಥ ಸಾಧನೆಯಲ್ಲ ! ನೂರಾರು ದೇಶಗಳ ಸಹಸ್ರಾರು ಕಾರ್ಯಕರ್ತರು ಮಳೆ ಬಿಸಿಲೆನ್ನದೇ, ಕಗ್ಗಾಡು ಮರಳುಗಾಡೆನ್ನದೇ ಅನೇಕ ವರ್ಷಗಳ ಪರ್ಯಂತ ಕೆಲಸ ಮಾಡಿ ಸಾಧಿಸಿದ ಯಶಸ್ಸು. ನಾಗರೀಕತೆಗಳ ಹುಟ್ಟಿನಿಂದಲೂ ಸತತವಾಗಿ ಸಾವಿರಾರು ಜನಗಳನ್ನು ಬಲಿ ತೆಗೆದುಕೊಂಡ, ವಿರೂಪಗೊಳಿಸಿದ, ಕುರುಡರನ್ನಾಗಿ ಮಾಡಿದ ಈ ಮಹಾಮಾರಿಯಿಂದ ಮನುಕುಲವನ್ನೇ ವಿಮುಕ್ತಿಗೊಳಿಸಿದ್ದು ಈ ಶತಮಾನದ ಮನುಷ್ಯ ಸದ್ದುಗದ್ದಲವಿಲ್ಲದೆ ಸಾಧಿಸಿದ ಆತ್ಯಮೋಘ ಸಾಧನೆ. ಈ ಸಾಧನೆಯಿಂದ ಹಿಂದುಳಿದ ರಾಷ್ಟ್ರಗಳ ಕೋಟ್ಯಂತರ ದೀನರ ಬಡವರ ಆಹುತಿ ತಪ್ಪಿತು. ಇದಕ್ಕಿಂತ ಹೆಚ್ಚಾಗಿ ಇಡೀ ಮನುಕುಲಕ್ಕೆ ಇದರಿಂದ ಒದಗಿದ ಆತ್ಮವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಧಿಡೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ ನಾಳೆ ನಿಧಾನವಾಗಿಯಾದರೂ ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ – 299

“ನಾನು ಬರೆಯುವ ಪದಗಳ ಅರ್ಥವೇ ‘ಮನುಷ್ಯರೆಲ್ಲ ಒಂದೇ, ನನ್ನಂತೆಯೇ’ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ – 228

“ಏನನ್ನಾದರೂ ಅರ್ಥ ಮಾಡಿಕೊಳ್ಳಬೇಕೆಂದಿದ್ದರೆ ಅದನ್ನು ಕಲಿಯಲು ಪ್ರಯತ್ನಿಸುವುದು ಅದನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗ ಎಂದು ನನಗನ್ನಿಸುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ – 111

“ರೈಲು ಕಿಟಕಿಯಿಂದ ಹೊರಗೆ ತಲೆ ಹಾಕಿ ನೋಡಿದಾಗ ಸಾಧಾರಣವಾಗಿ ಕಾಣುವ ದೃಶ್ಯಾವಳಿಗಳು ಗಾಡಿಯೊಳಗೆ ಕಿಟಕಿಯಿಂದ ಕೊಂಚ ದೂರ ಕುಳಿತು ನೋಡಿದಾಗ ಪರದೆಯ ಮೇಲೆ ಮೂಡುವ ಸಿನೆಮಾ ಮಾದರಿಯಲ್ಲಿ ಕುತೂಹಲಕರವಾಗಿರುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ – 203

“ನಾನು ಬರೆಯುವ ಪದಗಳ ಅರ್ಥವೇ ‘ಮನುಷ್ಯರೇಲ್ಲ ಒಂದೇ, ನನ್ನಂತೆಯೇ’ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ – 228

“ನನ್ನ ವ್ಯಕ್ತಿತ್ವ ಇಷ್ಟೊಂದು ರಂಜಕವಾಗಿ colourful ಆಗಿರೋದೆ ನನ್ನ ಆತ್ಮಾಭಿಮಾನದ ಮುಖಾಂತರ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪತ್ರದಲ್ಲಿ, ಪುಟ – 137

“ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 343

“ನನ್ನ ಕೃತಿಗಳಿಂದ ಕೆಲವಾದರೂ ಜನರಿಗೆ ಪರಿಸರದ ಬಗ್ಗೆ ಆಸಕ್ತಿ ಬಂದರೆ ನನ್ನ ಬರವಣಿಗೆ ಸಾರ್ಥಕವೆಂದೇ ತಿಳಿದಿದ್ದೇನೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 396

“ಎಷ್ಟೋ ಸಾರಿ ದುಷ್ಟರು ಕಷ್ಟಕ್ಕೆ ಸಿಕ್ಕಿಕೊಂಡಾಗ, ಕಳ್ಳರು ಸಿಕ್ಕಿಬಿದ್ದಾಗ ಕೊನೆಗೂ ಸತ್ಯಕ್ಕೆ ನ್ಯಾಯಕ್ಕೆ ಜಯವಾಗುತ್ತದೆ ಎಂದು ಜನ ಅಂದುಕೊಳ್ಳುತ್ತಾರೆ. ಭೂಮಿಯಲ್ಲಿ ರಾಕ್ಷಸರ ಹಾವಳಿ ಅತಿಯಾದಾಗ ದೇವರು ಬಂದು ಅವರಿಗೆಲ್ಲಾ ತಕ್ಕ ಶಿಕ್ಷೆ ವಿಧಿಸುತ್ತಾನೆ ಎಂದು ದೈವ ಭಕ್ತರು ದೃಢವಾಗಿ ನಂಬಿದ್ದಾರೆ. ಆದರೆ ವಾಸ್ತವವನ್ನು ಗಮನಿಸಿದಾಗ ಸಾಧಾರಣವಾಗಿ ರಾಕ್ಷಸರಿಗೇನೋ ಶಿಕ್ಷೆಯಾಗಿರುತ್ತದೆ. ಆದರೆ ಅದು ದೇವರಿಂದಾಗಲಿ ನ್ಯಾಯ ಧರ್ಮಗಳಿಂದಾಗಲಿ ಆಗಿರದೆ ಅದಕ್ಕೆ ಇನ್ನೊಬ್ಬ ದೊಡ್ಡ ರಾಕ್ಷಸನೆ ಕಾರಣ ಎಂದು ಜನಗಳಿಗೆ ಬಹುಬೇಗ ಗೊತ್ತಾಗುತ್ತದೆ. ದುಷ್ಟರನ್ನು ದೊಡ್ಡ ದುಷ್ಟರೂ, ಖೇಡಿಗಳನ್ನು ದೊಡ್ಡ ಖೇಡಿಗಳೂ, ಪಾತಕಿಗಳನ್ನು ಇನ್ನೂ ದೊಡ್ಡ ಪಾತಕಿಗಳೂ, ಬಲಿಹಾಕುವುದನ್ನು ಧರ್ಮಪ್ರತಿಷ್ಠಾಪನೆ ಎಂದು ತಾತ್ಕಾಲಿಕವಾಗಿ ಜನ ತಿಳಿಯುತ್ತಾರೆ. ಆಮೇಲೆ ಅವರಿಗೆ ಭ್ರಮ ನಿರಸನವಾಗುತ್ತದೆ. ಆಗ ಕಳೆದು ಹೋದ ಕಾಲವೇ ಎಷ್ಟೋ ವಾಸಿ ಇತ್ತೆಂದು ಯೋಚಿಸುತ್ತಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ ೫೯

“ಮಾತನಾಡಬೇಕಾದಾಗಲೂ ಮಾತನಾಡದೆ ಸುಮ್ಮನಿದ್ದರೆ ಬಹಳ ಕೆಟ್ಟದ್ದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 555

ಪರಿಸರದ ನುಡಿಗಳು
“ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ

“ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರು”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

‎”ನನಗೂ ಕಾಡಿಗೂ ಇರುವ ಸಂಬಂಧ ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲಸಾಧ್ಯವಾದಷ್ಟು ನಿಗೂಢವಾದದ್ದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ‎

”ಸಮಾಜವಾದ ಮನುಷ್ಯರೆಲ್ಲರಲ್ಲೂ ಸಮಾನತೆಯನ್ನು ಬೋಧಿಸಿದ್ದರೆ ಇಕಾಲಜಿ ಇಡೀ ವಿಶ್ವದ ಸರ್ವಚರಾಚರ ವಸ್ತುಗಳೂ ಸಮಾನ, ಮುಖ್ಯ ಎಂದು ಸಾಕ್ಷ್ಯಾಧಾರಗಳ ಸಮೇತ ತೋರಿಸಿಕೊಡುತ್ತಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಹಕ್ಕಿಗಳು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾನು ಮನುಷ್ಯರ ಸಾಮಾಜಿಕ ಕಥಾವಸ್ತುವನ್ನು ತೆಗೆದುಕೊಂಡು ಬರೆದರೂ ಅಲ್ಲಿ ಹಕ್ಕಿಗಳು ನುಸುಳಿರುತ್ತವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಮುನ್ನುಡಿ

“ಕಾಡು ಕಾಳದಂಧೆಗಳ ತವರುಮನೆಯಾಗುತ್ತಿದೆ. ಕಾಡಿನಿಂದ ಉತ್ಪತ್ತಿಯಾಗುತ್ತಿರುವ ಕಾಳಧನ ನಮ್ಮ ದೇಶದ ಅತ್ಯುನ್ನತ ರಾಜಕೀಯವನ್ನು ಸಹ ನಿಯಂತ್ರಿಸುತ್ತಿದೆ. ಇಲ್ಲಿ ಕಟ್ಟುವ ಅಣೆಕಟ್ಟಗಳಾಗಲಿ, ಮುಳುಗಡೆಯಾಗುವ ಕಾಡುಗಳಾಗಲಿ, ಕಲ್ಲು, ಅದಿರುಗಳನ್ನು ತೆಗೆಯುವುದಾಗಲೀ ಜನಗಳಿಗಿಂತಲೂ ಹೆಚ್ಚಾಗಿ ರಾಜಕಾರಣಿಗಳಿಗೂ ರಾಜಕೀಯಕ್ಕೂ ಅಗತ್ಯವಾಗತೊಡಗಿದೆ. ಕಾಳವ್ಯವಹಾರಗಳ ವಿಷವೃತ್ತ ಈ ಮಟ್ಟ ತಲುಪಿದಮೇಲೆ ಕಾನೂನು ಮತ್ತು ನ್ಯಾಯಾಲಯಗಳು ಇದನ್ನು ಪ್ರತಿರೋಧಿಸಲಾರವು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್

“ಕಾಡುಗಳು ಇವತ್ತು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ. ಈ ಕಾಡುಗಳ ಒಂದೊಂದೇ ಮರ ಎರಡು ಮೂರು ಲಕ್ಷ ಬೆಲೆಬಾಳುತ್ತವೆ. ಕಲ್ಲು ಕಳ್ಳರಿಗೆ, ಮರಗಳ್ಳರಿಗೆ, ಗಂಧ ಚಕ್ಕೆ ಕಳ್ಳ ಸಾಗಾಣಿಕೆ ಮಾಡುವ ಖದೀಮರಿಗೆ ಕಣ್ಣು ಹರಿಸಿದಲ್ಲೆಲ್ಲಾ ಹಣ ರಾಶಿ ಬಿದ್ದಿರುವಂತೆ ಕಾಣುತ್ತದೆ. ದುಡ್ಡು ಈ ರೀತಿ ಕೋಡಿ ಬಿದ್ದುರುವಲೆಲ್ಲಾ ಏನೇನು ರೂಪುಗೊಳ್ಳುತ್ತದೆಯೋ ಅದೆಲ್ಲಾ ಸಹ್ಯಾದ್ರಿಯ ಕಾಡಿನೊಳಗೆ ಶುರುವಾಗಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್

“ನಮ್ಮ ಮನೆಯ ಬಳಿ ಈ ಹೂವಿನ ಹಕ್ಕಿಗಳು ಸದಾ ಗೂಡು ಕಟ್ಟುತ್ತಲೇ ಇರುತ್ತವೆ. ಒಂದು ಸಾರಿಯಂತೂ ಇವು ಹೇಗೆ ಗೂಡು ಕಟ್ಟುವುದನ್ನು ಪ್ರಾರಂಭಿಸುತ್ತವೆ ನೋಡೋಣವೆಂದೇ ಬೆಳಗಿನಿಂದ ಸಂಜೆವರೆಗೆ ನೋಡಿದ್ದೇನೆ. ಗಂಡು ಹೆಣ್ಣು ಹಕ್ಕಿಗಳೆರಡೂ ಸೇರಿ ಗೂಡು ಕಟ್ಟುತ್ತಿದ್ದವು.”
– ಮಿಂಚುಳ್ಳಿ ಪುಸ್ತಕದಿಂದ

“ಬಹುಶಃ ನಾವು ಒಂದು ಪರಿಸರದಲ್ಲಿ ಹೊಸದೇನನ್ನು ನಿರ್ಮಾಣ ಮಾಡಿದರೂ ಅದು ತನ್ನ ಸುತ್ತಮುತ್ತಿನೊಂದಿಗೆ ಸ್ವಾಭಾವಿಕವೆನ್ನುವಂತೆ ವೀಲೀನವಾಗದ ಹೊರತೂ ಅದು ಕಾಡಿನ ಹಕ್ಕಿಗಳನ್ನು ಆಕರ್ಷಿಸುವುದಿಲ್ಲೆಂದು ಕಾಣುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕ, ಪುಟ ೧೪

“ಪ್ರಪಂಚದ ಅಗಾಧ ಪಕ್ಷಿ ಸಂಕುಲವನ್ನು ಗಮನಿಸಿದಾಗ ನಾನು ಎಷ್ಟೇ ಹಕ್ಕಿಗಳನ್ನು ನೋಡಿದ್ದರೂ ಅದು ಸಾಸಿವೆ ಕಾಳಿಗೆ ಸಮನಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೆಜ್ಜೆ ಮೂಡದ ಹಾದಿ, ಮುನ್ನುಡಿಯಿಂದ

“ವಿಜ್ಞಾನವನ್ನು ಬೇರೆಯವರು ಪ್ರಶ್ನಿಸುವ ಅಗತ್ಯವೇ ಇಲ್ಲ! ಏಕೆ ಅಂತ ಹೇಳಿದರೆ, ಪ್ರತಿ ಹೆಜ್ಜೆಯಲ್ಲೂ ವಿಜ್ಞಾನ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಲೇ ವಿಕಾಸವಾಗುತ್ತಾ ಹೋಗುವಂಥದ್ದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಜಯಂತ್ ಕಾಯ್ಕಿಣಿ ಅವರಿಗೆ ನೀಡುವ ಸಂದರ್ಶನದಿಂದ

“ಯೋಚಿಸಿದಷ್ಟು ಪರಿಸರ ರಹಸ್ಯಮಯವಾಗುತ್ತದೆ. ಸಂಪೂರ್ಣವಾಗಿ ತಿಳಿಯುತ್ತೇನೆಂದು ಹೊರಡುವುದು ಮೂರ್ಖತನವೇ ಸರಿ. ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದನ್ನು ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶಪೂರ್ವಕ ಸೃಷ್ಟಿ ಎನ್ನುವುದೇ ಸುಳ್ಳು. ಉದ್ದೇಶಗಳೆಲ್ಲಾ ನಾವೇ ಆರೋಪಿಸಿಕೊಂಡಿರುವುದು. ಈ ಮಿಥ್ಯಾರೋಪವನ್ನು ನೀವು ಬಿಟ್ಟ ಮಾರನೆಯ ಕ್ಷಣವೇ ನಿಮಗೆ ಹೊಸದೊಂದು ವಿಶ್ವರೂಪ ದೃಗ್ಗೋಚರವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕುಟುರದ ಕೂಗು ಕೇಳಿದರೆ ಸಾಕು ನಮ್ಮ ತಂದೆಯವರು ಯಾವುದೇ ಕೆಲಸ ಮಾಡುತ್ತಿರಲಿ ಅದನ್ನು ನಿಲ್ಲಿಸಿ ಒಂದು ನಿಮಿಷ ಧ್ಯಾನಮಗ್ನರಂತೆ ಸುಮ್ಮನೇ ನಿಲ್ಲುತ್ತಿದ್ದರು. ನನಗೆ ಇವರು ಹಕ್ಕಿಯನ್ನು ಸಹ ನೋಡದೆ ಕೇವಲ ಕೂಗಿಗೆ ಏಕೆ ಹೀಗೆ ಸಂತೋಷ ಪಡುತ್ತಾರೆ ? ಎಂದು ಆಶ್ಚರ್ಯವಾಗುತ್ತಿತ್ತು. ಒಂದು ಸಾರಿ ಈ ಬಗ್ಗೆ ವಿವರಣೆ ಕೊಡುತ್ತಾ ಅವರು” ಕುಟುರದ ಕೂಗು ಹೇಗೆ ನನಗೆ ನನ್ನ ಚಿಕ್ಕಂದಿನ ಮಲೆನಾಡಿನ ಅನುಭವಗಳ ಅವಿಭಾಜ್ಯ ಅಂಗವಾಗಿದೆಯೆಂದರೆ ಆದರ ಕೂಗು ಕೇಳಿದರೆ ಸಾಕು ನನ್ನ ಇಡೀ ಚೇತನ ತಟಕ್ಕನೆ ಮಲೆನಾಡಿಗೆ ಸ್ಥಳಾಂತರ ಹೊಂದುತ್ತದೆ. ವಿಸ್ತಾರ ಗದ್ದೆ ಕೋಗು, ಸುತ್ತ ಕವಿದಿರುವ ದಟ್ಟ ಕಾಡು, ಮಾಲೆ ಮಾಲೆಯಾಗಿ ತಲೆಯೆತ್ತಿ ನಿಂತಿರುವ ಪರ್ವತ ಶ್ರೇಣಿಗಳು ಎಲ್ಲ ಬರಿಯ ಆದರ ಒಂದು ಕೂಗಿನಿಂದ ನನ್ನೆದುರು ಮೈವೆತ್ತು ನಿಲ್ಲುತ್ತದೆ. ಕುಟುರದ ಕೂಗು ನಿಮ್ಮೆಲ್ಲರಿಗೂ ಒಂದು ಹಕ್ಕಿಯ ಕೂಗಾದರೆ ನನಗೆ ಅದೊಂದು ಮಂತ್ರ” ಎಂದು ಹೇಳಿದರು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕ

“ನಾನು ಹಕ್ಕಿಗಳ ಬಗ್ಗೆ ಮಾತಾಡುವುದನ್ನು ಬರೆಯುವುದನ್ನು ನೋಡಿ ನನ್ನ ಮಿತ್ರರು ನಾನು ತುಂಬಾ ‘ಬರ್ಡ್ ವಾಚಿಂಗ್’ ಅಥವ ‘ಪಕ್ಷಿ ವೀಕ್ಷಣೆ ಮಾಡುತ್ತೇನೆಂದು ತಿಳಿದಿದ್ದಾರೆ. ಆದರೆ ವಾಸ್ತವವಾಗಿ ನಮ್ಮ ತೋಟದಲ್ಲಿ ಅದು ತಲೆಕೆಳಕಾಗಿ ಹಕ್ಕಿಗಳೇ ಮನುಷ್ಯ ವೀಕ್ಷಣೆ ಮಾಡುತ್ತಾ ನಮ್ಮ ಚಲನವಲನಗಳ ಗೂಢಚರ್ಯೆ ನಡೆಸುತ್ತಿವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕ, ಪುಟ ೧೫

“ಬುಕ್ ವರ್ಮ್ ತರ ಅಧ್ಯಯನ ಮಾಡಿದ ಪರಿಸರವಾದಿ ಅಲ್ಲ ನಾನು. My relationship with Environment is something totally different. ಸಂಪೂರ್ಣ ಬೇರೆ ರೀತಿ ಇರೋದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಉದಯ ಟಿವಿಗೆ ನೀಡಿದ ಸಂದರ್ಶನದಿಂದ

“ಹಳ್ಳಿಗರು ವೈಜ್ಞಾನಿಕವಾಗಿ ಹಕ್ಕಿಯ ನಡವಳಿಕೆಗಳನ್ನು ಅಭ್ಯಾಸ ಮಾಡಿ ಹಕ್ಕಿಗಳ ಬಳಗ, ಜಾತಿ ಇತ್ಯಾದಿಗಳ ಆಧಾರದಮೇಲೆ ಹೆಸರಿಡದಿದ್ದರೂ ಹಕ್ಕಿಯ ನಡವಳಿಕೆಯ ಯಾವುದೋ ಅಂಶವನ್ನು ಆಧರಿಸಿಯೋ, ಇಲ್ಲವೆ ಯಾವುದೋ ರೂಪ ಸಾದೃಶ್ಯದ ಮೇಲೋ ಹೆಸರಿಟ್ಟಿರುತ್ತಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೫

“ಕಾಡು ಮತ್ತು ಕಾಡುಪ್ರಾಣಿಗಳನ್ನು ಮನುಷ್ಯ ಸವಾಲಿನಂತೆ ಎದುರಿಸಬೇಕಾಗಿದ್ದ ಕಾಲ ಈ ತಲೆಮಾರುಗಳ ಪಾಲಿಗೆ ಕೇವಲ ದೆವ್ವ, ಭೂತ, ಪೌರಾಣಿಕ ಕತೆಗಳಂತೆ ಕಾಣುತ್ತವೆ .”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಬೆಳ್ಳಂದೂರಿನ ನರಭಕ್ಷಕ

“ಫ್ಲೈಯಿಂಗ್ ಸಾಸರ್ಸ್ ಈ ಶತಮಾನದ ಪರಮರಹಸ್ಯಗಳಾಗಿವೆ ಆಧುನಿಕ ಜಗತ್ತಿನ ಅತ್ಯುನ್ನತ ತಂತ್ರಜ್ಞಾನ ಮತ್ತು ವೈಜ್ಞಾನಿಕ ತಿಳುವಳಿಕೆಗು ಈ ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲ . ಆದರೆ ಇವುಗಳ ಅಸ್ತಿತ್ವ ನಿಜ ಎಂದು ತೀರ್ಮಾನಿಸಲು ಸಾಧ್ಯವಾಗುವಷ್ಠು ಸಂಶೋಧನೆ , ವಿಶ್ಲೇಷಣೆಗಳನ್ನು ವಿಜ್ಞಾನಿಗಳು,ಖಗೋಳ ಶಾಸ್ತ್ರಜ್ಞರೂ ನಡೆಸಲು ಸಾಧ್ಯವಾಗಿರುವುದೇ ಆಧುನಿಕ ಜಗತ್ತಿನ ಮಹತ್ ಸಾಧನೆ ಎನ್ನಬಹುದು .”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಫ್ಲೈಯಿಂಗ್ ಸಾಸರ್ಸ್ ಪುಸ್ತಕದಿಂದ

“ಪರಿಸರ ಮತ್ತು ಪ್ರಕೃತಿಯ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರೇ. ನಮಗೆ ಕುತೂಹಲ ಹುಟ್ಟಿಸಬೇಕೆಂದು ಉದ್ದೇಶವೇನೂ ಅವರಿಗೆ ಇದ್ದಂತೆ ಕಾಣಲಿಲ್ಲ. ಅದರಲ್ಲಿ ಅವರಿಗೆ ಇದ್ದ ಆಸಕ್ತಿಯ ಪರಿಣಾಮವಾಗಿಯೇ ನಮಗೂ ಆಸಕ್ತಿ ಉಂಟಾಯ್ತು.“
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ ಪುಸ್ತಕದಿಂದ

“ಮಕ್ಕಳಿಗೆ ಶುಷ್ಕ ವೈಜ್ಞಾನಿಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ, ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೀವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ,

“ಪಕ್ಷಿಗಳನ್ನು ಕೇವಲ ಪಕ್ಷಿವೀಕ್ಷಕನಾಗಿ ನಾನು ನೋಡಿರುವುದು ತುಂಬಾ ಕಡಿಮೆ. ಅವು ನಾನು ಬದುಕುತ್ತಿರುವ ಪರಿಸರದ ಅವಿಭಾಜ್ಯ ಅಂಗಗಳಾಗಿವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಮುನ್ನುಡಿಯಿಂದ

“ನಾನು ವಿಜ್ಞಾನ ಪದವೀಧರನಲ್ಲ, ವಿಜ್ಞಾನಿಯೂ ಅಲ್ಲ, ನಾನು ಉಚ್ಛ ಶಿಕ್ಷಣ ಪಡೆದದ್ದು ಸಾಹಿತ್ಯದಲ್ಲಿ. ಅದರೆ ಹಳ್ಳಿಗೆ ಬಂದ ಮೇಲೆ ಸುತ್ತಮುತ್ತಲ ಅನೇಕ ಕೌತುಕಮಯ ವಿದ್ಯಮಾನಗಳನ್ನು ನೋಡುತ್ತಾ ಅವುಗಳ ಬಗ್ಗೆ ತಿಳಿಯುತ್ತಾ ಬಂದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪೂರ್ಣಚಂದ್ರ ತೇಜಸ್ವಿ

“ಕಾಡಿನ ರಂಗಸ್ಥಳದಲ್ಲಿ ನಡೆಯುವುದೆಲ್ಲಾ ಸುಖಾಂತ್ಯವಾಗುವುದಿಲ್ಲ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕದಿಂದ

“ಸಲೀಂ ಆಲಿ ನಾಲ್ಕೇ ಸಾಲುಗಳಲ್ಲಿ ಒಂದು ಹಕ್ಕಿಯ ವೈಲಕ್ಷಣ್ಯವನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತಾರೆಂದರೆ ಅದನ್ನು ಓದಿದವನಿಗೆ ತಾನು ನೋಡಿದ್ದು ಇಂಥದ್ದೇ ಹಕ್ಕಿ ಎಂದು ಅನುಮಾನಕ್ಕೆಡೆಯಿಲ್ಲದಂತೆ ಗೊತ್ತಾಗುತ್ತದೆ.
ಒಂದು ಹಕ್ಕಿಯ ಯಾವ ವರ್ತನೆ ಅಥವಾ ಬಣ್ಣ ಅಥವಾ ಹಾರುವ ಭಂಗಿ ಅದನ್ನು ಮಿಕ್ಕೆಲ್ಲ ಹಕ್ಕಿಗಳಿಂದ ಪ್ರತ್ಯೇಕಿಸುತ್ತದೆ ಎಂದು ತಿಳಿಸುವುದರಲ್ಲಿ ಸಲೀಂ ಆಲಿ ಸಿದ್ಧಹಸ್ತರು. ಒಂದು ಹಕ್ಕಿಯನ್ನು ನೋಡಿಬಂದು ನೀವು ಆ ಹಕ್ಕಿ ಯಾವುದೆಂದು ಪತ್ತೆ ಮಾಡಲು ಸಲೀಂ ಆಲಿಯವರ ವಿವರಣೆ ಓದಿದರೆ ಅನೇಕ ದಶಕಗಳ ಮೊದಲೆ ಅದನ್ನು ಬರೆದ ಸಲೀಂ ಆಲಿ ನಿಮ್ಮೊಡನೆ ಇದ್ದೇ ಬರೆದರೆಲೇನೋ ಎಂದು ಅನುಮಾನ ಬರುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೨೨

“ಹಕ್ಕಿಗಳು ವಾತಾವರಣದ ವೈಪರೀತ್ಯಗಳಿಗೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತವೆಂದರೆ ಪರಿಸರದ ಆರೋಗ್ಯ ಅನಾರೋಗ್ಯಗಳಿಗೆ ಅವು ಅತ್ಯದ್ಭುತ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೮

“ಹಕ್ಕಿಗಳಿಗೆ ಗೂಡು ಕಟ್ಟುವ ವಾಸ್ತು ಶಿಲ್ಪ ಎಷ್ಟು ಆಳವಾಗಿ ಅವುಗಳ ಪ್ರವೃತ್ತಿಯೊಳಗೆ ಮಿಳಿತವಾಗಿರುತ್ತದೆಂದರೆ ಯಾವ ಸಂದರ್ಭದಲ್ಲೂ ಆಯಾ ಹಕ್ಕಿಗಳು ಅವು ಕಟ್ಟಬೇಕಾದ ರೀತಿಯಲ್ಲೇ ಗೂಡು ಕಟ್ಟುತ್ತವೆಯೇ ವಿನಹ ತಮ್ಮ ಗೂಡಿನ ವಿನ್ಯಾಸವನ್ನು ವಾತಾವರಣದ ಅನುಕೂಲಕ್ಕೆ ತಕ್ಕಂತೆ ಎಂದೂ ಬದಲಿಸುವುದೇ ಇಲ್ಲ ಅಥವಾ ಇನ್ನೊಂದು ಹಕ್ಕಿಯ ಮಾದರಿಯಲ್ಲಿ ಗೂಡು ರಚಿಸುವುದೂ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೬

“ನನ್ನ ಸುತ್ತಮುತ್ತ ನಡೆಯುವ ನೂರಾರು ಪರಿಸರದ ವಿದ್ಯಮಾನಗಳನ್ನು ಅದರಲ್ಲಿ ಪಾತ್ರಧಾರಿಯಾಗದೆ ಪ್ರೇಕ್ಷಕನಾಗಿ ದೂರ ನಿಂತು ನೋಡಬೇಕೆಂಬುದೆ ನನ್ನ ಉದ್ದೇಶ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಾಯೆಯ ಮುಖಗಳು, ಪುಟ 85

“ಹಕ್ಕಿಗಳು ವಾತಾವರಣದ ವೈಪರೀತ್ಯಗಳಿಗೆ ಹೇಗೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆಂದರೆ ಪರಿಸರದ ಆರೋಗ್ಯ ಅನಾರೋಗ್ಯಗಳಿಗೆ ಅವು ಅತ್ಯದ್ಭುತ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಹಲವು ವರ್ಷಗಳ ಹಿಂದೆ ಅಮೆರಿಕಾದ ಕೆಂಪು ತಲೆಯ ಗರುಡನ ಸಂತತಿ ಕ್ಷೀಣಿಸಿದಾಗ ಅದಕ್ಕೆ ಕಾರಣ ಹುಡುಕಹೋಗಿಯೇ ಅಮೇರಿಕಾದ ಪರಿಸರದಲ್ಲಿ ಸರ್ವಾಂತರ್ಯಾಮಿಯಾಗಿ ಅಪಾಯಕರ ಪ್ರಮಾಣದಲ್ಲಿ ಕ್ಲೋರಿನೇಟೆಡ್ ಹೈಡ್ರೋಕಾರ್ಬನ್ ಎಂಬ ಮೃತ್ಯುಕಾರಕ ವಿಷ ಸೇರಿಹೋಗಿರುವುದು ಪತ್ತೆಯಾಯ್ತು. ಮನುಷ್ಯರಿಗೆ ಗಂಡಾಂತರ ಒದಗುವ ಎಷ್ಟೋ ಮುಂಚೆಯೇ ಹಕ್ಕಿಗಳಿಂದ ಮುನ್ನೆಚ್ಚರಿಕೆ ದೊರೆತುದಕ್ಕೆ ಇದೊಂದು ಉದಾಹರಣೆಯಷ್ಟೆ. ಆದ್ದರಿಂದ ಇಂದು ಎಲ್ಲ ಮುಂದುವರಿದ ದೇಶಗಳಲ್ಲೂ ಹಕ್ಕಿಗಳ ವೀಕ್ಷಣೆ ಬರಿಯ ಮನರಂಜನೆಗಲ್ಲದೆ ಅನೇಕ ವೈಜ್ಞಾನಿಕ ಅಂಶಗಳ ಸಂಶೋಧನೆಗೂ ನಡೆಯುತ್ತಲೇ ಇರುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ,

“ಪತ್ರಿಕಾ ಹೇಳಿಕೆಗಳಿಂದ ಹೋರಾಟಗಳಿಂದ ನಮ್ಮ ಕಾಡುಗಳನ್ನೂ ನದಿಗಳನ್ನೂ ಉಳಿಸಲು ಸಾಧ್ಯವಿಲ್ಲವೆಂದು ನನಗೆ ಅನುಮಾನ ಬರುತ್ತಿದೆ. ಏಕೆಂದರೆ ನಮ್ಮೆಲ್ಲಾ ಹೋರಾಟಕ್ಕೆ ಪ್ರತಿಫಲ ಇಲ್ಲಿಯವರೆಗೆ ಬಂದಿರುವುದು ಕೇವಲ ಪುರಸ್ಕಾರ ಮತ್ತು ಹೊಗಳಿಕೆಯಷ್ಟೇ ಹೊರತು ಕಾಡುಗಳು ಮತ್ತಷ್ಟು ದುರ್ಗತಿಗೆ ಹೋಗಿವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ – 149

“ನನ್ನ ಎಲ್ಲ ಕೃತಿಗಳಲ್ಲೂ ಪರಿಸರದ ಬಗ್ಗೆ ಆತಂಕ, ಕಳವಳ, ಮುಂಬರುವ ತಲೆಮಾರುಗಳಿಗೆ ನಮ್ಮ ಪರಿಸರದ ಪ್ರಮುಖ ಅಂಶಗಳಾದ ಕಾಡು, ಪರ್ವತ, ನದಿ, ಪ್ರಾಣಿ, ಪಕ್ಷಿಗಳನ್ನು ಪರಿಚಯಿಸಿ ಉಳಿಸಿಕೊಡಬೇಕೆನ್ನುವ ತವಕ ಇರುವುದನ್ನು ನೋಡಬಹುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 338

“ಹೊಲಸೆದ್ದು ಕೊಚ್ಚೆಗುಂಡಿಯಾಗಿ ಹರಿಯುತ್ತಿರುವ ನದಿಗಳ ಗೋಳಿನ ಜುಳುಜುಳು ನಿನಾದ ಪಾರ್ಲಿಮೆಂಟಿನಲ್ಲಿ ಕುಳಿತಿರುವವರಿಗೆ ಕೇಳುತ್ತಲೇ ಇಲ್ಲ. ಚಳವಳಿ,ಹೋರಾಟ, ಕೋರ್ಟಿನಲ್ಲಿ ಯುದ್ಧ, ಯಾವುದೂ ನಮ್ಮ ಪ್ರೀತಿಯ ಕರ್ನಾಟಕವನ್ನು ಉಳಿಸುವಲ್ಲಿ ಸಫಲವಾಗಲಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ – 228

“ಹಕ್ಕಿಗಳಿಗೆ ಗೂಡು ಕಟ್ಟುವುದಾಗಲಿ ಅದರ ವಾಸ್ತುಶಿಲ್ಪವಾಗಲೀ ನಮ್ಮಂತೆ ಪ್ರಜ್ಞಾಪೂರ್ವಕ ಕೆಲಸವಲ್ಲ ಎನ್ನಿಸುತ್ತದೆ. ಮೊಟ್ಟೆ ಇಡುವ ಹಾಗೆ, ಮರಿ ಮಾಡುವ ಹಾಗೆ, ಉಸಿರಾಡುವ ಹಾಗೆ, ಊಟ ಮಾಡುವ ಹಾಗೆ, ಅದು ಅವುಗಳ ಅನುಷಂಗಿಕ ಪ್ರವೃತ್ತಿಯೇ ಇರಬಹುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೆಜ್ಜೆ ಮೂಡದ ಹಾದಿ, ಪುಟ – 111

“ಮನುಷ್ಯ ತನಗೆ ಉಪಯುಕ್ತವಲ್ಲದ್ದು ಭೂಮಿಗೆ ಅನಗತ್ಯವಾದುದು ಎಂದು ತಿಳಿದಿರುವುದರಿಂದ ಹುಳು ಹುಪ್ಪಟೆಗಳತ್ತ ಗಮನ ಕೊಡುವುದು ಕಡಿಮೆ,ಅಥವಾ ಅವುಗಳಿಂದ ಏನಾದರು ತೊಂದರೆಯಾದಾಗ ಅವುಗಳನ್ನು ನಾಶಮಾಡಲಷ್ಟೇ ಗಮನಿಸುತ್ತಾನೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನಡೆಯುವ ಕಡ್ಡಿ ಹಾರುವ ಎಲೆ (ಮುನ್ನುಡಿ)

“ನಮ್ಮ ಕಾಡುಕುರುಬರಿಗೆ ತೋಡರಿಗೆ ಜೇನುಕುರುಬರಿಗೆ ಗೊತ್ತಿರುವ ಇಕಾಲಜಿಯನ್ನು ಇವತ್ತು ಪಂಡಿತರು ಕ್ಲಿಷ್ಟಕರ ವಿಷಯ ಮಾಡಿ ಜನಸಾಮಾನ್ಯರು ದೂರವಾಗಿದ್ದಾರೆ. ಹಾಗಾಗಿಯೇ ಇದು ಕೇವಲ ರೇಡಿಯೋ ಟಿವಿಗಳ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ವಿಷಯವಾಗತೊಡಗಿದೆ. ಇಕಾಲಜಿ ಅಥವ ಪರಿಸರ ಸಂರಕ್ಷಣೆ ಕೇವಲ ಪಂಡಿತೋತ್ತಮರ ವಿಷಯ ಮಾತ್ರವಾದರೆ ಪರಿಸರ ವಿನಾಶ ಇದೇ ರೀತಿ ಸಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ – 1 (ಮುನ್ನುಡಿ)

“ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತೂ ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ – ೧, ಪುಟ – 61

“ಕಾಡುಗಳು ನಾಶವಾದರೆ ಮತ್ತೆ ಮನುಷ್ಯ ಇವುಗಳನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಸಮಶೀತೋಷ್ಣವಲಯದ ಸರಳ ಕಾಡುಗಳಂತಿಲ್ಲದೆ ಜೀವಜಾಲದ ಅತ್ಯಂತ ಸಂಕೀರ್ಣ ಸಮೀಕರಣಗಳಾಗಿರುವ ಈ ಕಾಡುಗಳನ್ನು ನಾವು ನೆಟ್ಟು ಬೆಳೆಸಿ ಪುನಃ ಸೃಷ್ಟಿ ಮಾಡುವುದು ಅಸಾಧ್ಯ.“
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೧, ಪುಟ 68

“ನಾಗರೀಕತೆಯೊಳಗೆ ಪ್ಲಾಸ್ಟಿಕ್ ಕಾಲಿಟ್ಟಾಗ ಈ ತೆಳ್ಳಗೆ ಪಾರದರ್ಶಕವಾಗಿ ಮಿಂಚುವ ಮೋಹಿನಿಯ ವಿಶ್ವರೂಪ ಯಾರಿಗೂ ಗೊತ್ತಿರಲಿಲ್ಲ. ಅನೇಕ ಹಳ್ಳಿ, ಮನೆತನ, ಬುಡಕಟ್ಟುಗಳ ನಿರ್ನಾಮಕ್ಕೆ ಇದು ಕಾರಣವಾದೀತೆಂದು ಯಾರೂ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಖಾಲಿ ಜಾಗಗಳ ಸಂದುಗೊಂದುಗಳೊಳಗೆಲ್ಲಾ ಹಬ್ಬಿ ಆಕ್ರಮಿಸುವ ಪಾರ್ಥೆನಿಯಂ, ಯುಪೆಟೋರಿಯಂ ಕಳೆಗಳಂತೆ ಪ್ಲಾಸ್ಟಿಕ್, ಪಾಲಿಯೂರಿಥೇನ್, ಪಾಲಿಎಥೀಲಿನ್, ಪಾಲಿಫೈಬರ್, ಪಾಲಿಮರ್, ಹೀಗೆ ನಾನಾ ಅವತಾರಗಳನ್ನೆತ್ತಿ ಮಾರುಕಟ್ಟೆಯ ಎಲ್ಲ ಕ್ಷೇತ್ರಗಳಿಗೆ, ಎಲ್ಲ ಅವಕಾಶಗಳಿಗೆ ಮುತ್ತಿಗೆ ಹಾಕಿತು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ – 10

“ಮನುಷ್ಯ ಮೂಲದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಯುವ ಶಕ್ತಿ ನಮಗಿದೆ. ಅದರತ್ತ ಗಮನ ಹರಿಸಬೇಕು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೨, ಪುಟ 59

“ಪ್ರಕೃತಿಯನ್ನು ಈ ಪರಿಯಾಗಿ ದುಡಿಸಿಕೊಳ್ಳುತ್ತಿದ್ದೀವಿ, ಎಲ್ಲಿಗೆ ಹೋಗುತ್ತೇವೋ ನಾವು”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 498

“ಇನ್ನು ಕೆಲವೇ ಕಾಲದಲ್ಲಿ ಚಿರತೆ, ಸಿಂಹ, ಹುಲಿಗಳು ಸಹ ಪ್ರಾಚೀನ ಮಹೋರಗಗಳಂತೆ ಪಳೆಯುಳಿಕೆಗಳಿಂದ ಪತ್ತೆ ಹಚ್ಚ ಬೇಕಾದ ಪ್ರಾಣಿಗಳಾಗಬಹುದು. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪೆದ್ದಚೆರುವಿನ ರಾಕ್ಷಸ, ಮುನ್ನುಡಿಯಿಂದ

“ಕಾಡುಗಳು ನಾಶವಾದರೆ ಮತ್ತೆ ಮನುಷ್ಯ ಇವುಗಳನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಸಮಶೀತೋಷ್ಣವಲಯದ ಸರಳ ಕಾಡುಗಳಂತಿಲ್ಲದೆ ಜೀವಜಾಲದ ಅತ್ಯಂತ ಸಂಕೀರ್ಣ ಸಮೀಕರಣಗಳಾಗಿರುವ ಈ ಕಾಡುಗಳನ್ನು ನಾವು ನೆಟ್ಟು ಬೆಳೆಸಿ ಪುನಃ ಸೃಷ್ಟಿ ಮಾಡುವುದು ಅಸಾಧ್ಯ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೧, ಪುಟ 68

ಕನ್ನಡ-ಭಾಷೆ-ಫೋಟೋಗ್ರಫಿ-ಸಾಹಿತ್ಯ ನುಡಿಗಳು
“ಕನ್ನಡ ಭಾಷೆ ಉಳಿಯೋದು ಕತೆ ಕಾದಂಬರಿಗಳಿಂದ ಅಲ್ಲ. ಅದು ಉಳಿಯೋದು ಜನರ ಬಳಕೆಯಿಂದ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ-೮೧೫

“ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಕನ್ನಡವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾಗದಿದ್ದರೆ ಕನ್ನಡ ಭಾಷೆ ಉಳಿಯುವುದೇ ಇಲ್ಲ.”
(Kannada language will not sustain anymore in Information Technology if we are not possible to grow Kannada)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಮಾತೃಭಾಷೆ ಎಷ್ಟೊಂದು ಆಪ್ತ ಮತ್ತು ಆತ್ಮೀಯ. ನಮ್ಮ ಆಲೋಚನೆಗೂ ಅಭಿವ್ಯಕ್ತಿಗೂ ಮಧ್ಯೆ ಕಂದರವೇ ಇರುವುದಿಲ್ಲ.”
(Mother tongue is so close and dear. There is no gap between our thinking and expression)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್

“ಅತಿ ಮಡಿವಂತಿಕೆಯಿಂದ ಭಾಷೆ ಬೆಳೆಯೋದಿಲ್ಲ. ಇಂಗ್ಲೀಷ್ ಭಾಷೆ ಯಾಕೆ ಪಾಪ್ಯುಲರ್ ಆಗ್ತಾ ಇದೆ ಅಂದ್ರೆ ಜಗತ್ತಿನ ಎಲ್ಲಾ ಭಾಷೆಯಿಂದ್ಲೂ ಅದು ಪದಗಳನ್ನ ತನ್ನೊಳಗೆ ಸೇರಿಸ್ಕೋತಾ ಇದೆ ಅದ್ಕೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ-೮೧೬

“ಯಾವ ವಿಚಾರವನ್ನೂ ಮಾತೃಭಾಷೆಯಲ್ಲಿ ಕಲಿತರೇ ಮಕ್ಕಳು ಸರಿಯಾಗಿ ಗ್ರಹಿಸುವುದು. ಭಾಷೆ ಕಲಿಯುವುದಕ್ಕೂ ಆ ಭಾಷಾಮಾಧ್ಯಮದಲ್ಲಿ ಇತರ ವಿಷಯಗಳನ್ನು ಕಲಿಯುವುದಕ್ಕೂ ವ್ಯತ್ಯಾಸವಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನ ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಶನ್ಗೆ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನು ಅರಿಯಬೇಕಾದ ಅನಿವಾರ್ಯತೆ ಸೃಷ್ಟಿಶೀಲ ಬರಹಗಾರನಿಗೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂದು ನನ್ನ ಭಾವನೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಒಂದು ಕಲಾಕೃತಿಯ ಸೌಂದರ್ಯಾನುಭವಕ್ಕೆ ನಿಜವಾಗಿಯೂ ಬುದ್ಧಿವಂತರ ವ್ಯಾಖ್ಯಾನದ ಅಗತ್ಯವಿರುವುದಾದರೆ ಅದು ಆ ಕಲಾಕೃತಿಯ ಪರಿಮಿತಿಗಳೇ ಹೊರತು ಓದುಗನ ದಡ್ಡತನ ಅಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ನಮ್ಮ ವಿದ್ಯಾಭ್ಯಾಸವೇ ನಮ್ಮ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿರುವುದನ್ನು ಉದಾರಣೆಯ ಬೆಳಕಿನಲ್ಲಿ ಯೋಚಿಸಿ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಒಬ್ಬ ಶ್ರೇಷ್ಠ ಬರಹಗಾರ ಮತ್ತು ಸಾಮಾನ್ಯ ಬರಹಗಾರನ ನಡುವೆ ಇರೋ ವ್ಯತ್ಯಾಸ ಇಷ್ಟೇ. ಶ್ರೇಷ್ಠ ಬರಹಗಾರ ತನ್ನ ವಿರುದ್ಧ ತಾನು ಯೋಚನೆ ಮಾಡೋ ಶಕ್ತಿ ಪಡೆದಿರಬೇಕು”
(The difference between a great writer and a ordinary writer is that The great writer should have the power to think against him)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಅವಾರ್ಡ್ ಫಿಲಂಗಳು ಮತ್ತು ಮಾರುಕಟ್ಟೆ ಫಿಲಂಗಳು ಅಂತ ಖಚಿತವಾದ ವಿಭಾಗವಾದ ಹಾಗೆ ಪ್ರಶಸ್ತಿಗಳ ಹಿಂದೆ ಹೋದ್ರೆ ಪ್ರಶಸ್ತಿಗಾಗಿ ಬರೆದಿರೋ ಸಾಹಿತ್ಯ ಅಂತ ಒಂದು ವಿಭಾಗ ಶುರು ಆಗತ್ತೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನಮ್ಮ ವಿದ್ಯಾಭ್ಯಾಸ ಕ್ರಮವೇ ಸಂಪೂರ್ಣ ತಪ್ಪಾಗಿದೆಯೆಂದು ನನಗನ್ನಿಸುತ್ತದೆ. ಬದುಕುತ್ತಾ ಬದುಕಿಗೆ ಅಗತ್ಯವಾದದ್ದನೆಲ್ಲಾ ತಿಳಿದುಕೊಳ್ಳುತ್ತಾ ಹೋಗುವ ಹೊಸಬಗೆಯ ವಿದ್ಯಾರ್ಜನೆಯ ಮಾರ್ಗಗಳನ್ನು ನಾವು ಅನ್ವೇಷಿಸಬೇಕು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕನ್ನಡದ ಬಗ್ಗೆಯ ನಮ್ಮ ಅಭಿಮಾನಕ್ಕೆ ಎರಡು ಮುಖ ಇದೆ. ಒಂದು ಭಾವನಾತ್ಮಕವಾದುದು. ಕನ್ನಡವನ್ನು ನಾವು ಕನ್ನಡ ತಾಯಿ, ಕನ್ನಡಮ್ಮ, ಭುವನೇಶ್ವರಿ ಎಂದೆನ್ನುತ್ತೇವೆ. ಭಾಷೆಯನ್ನು ನಮ್ಮ ಭಾವಸ್ಪಂದನಕ್ಕೆ, ಹಾಡಿಕೊಂಡು ಕುಣಿಯಲಿಕ್ಕೆ ಉಪಯೋಗಿಸುತ್ತೇವೆ. ಇನ್ನೊಂದು ನಮ್ಮ ಭಾಷೆಯಲ್ಲಿ ನಾವು ಆಲೋಚಿಸಲು, ತಿಳಿಸಲು, ವ್ಯವಹರಿಸಲು, ಜ್ಞಾನವನ್ನು ಶೇಖರಿಸಿ ಮುಂಬರುವ ಅನೇಕ ತಲೆಮಾರುಗಳಿಗೆ ಹಸ್ತಾಂತರಿಸಲು ಉಪಯೋಗಿಸುತ್ತೇವೆ. ಒಂದು ಬಗೆಯ ಉಪಯೋಗವನ್ನು ಭಾವೋಪಯೋಗವೆಂದು, ಇನ್ನೊಂದು ಬಗೆಯ ಉಪಯೋಗವನ್ನು ಲೋಕೋಪಯೋಗವೆಂದು ಕರೆಯುತ್ತೇವೆ. ಭಾಷೆಯ ಈ ಎರಡು ಬಗೆಯ ಉಪಯೋಗಗಳ ಸ್ಪಷ್ಟ ಅರಿವು ಇರದವನು ಭಾಷೆಯ ಬಗ್ಗೆ ಅಂಧಾಭಿಮಾನಿಯಾಗುತ್ತಾನೆ. ಒಂದು ಭಾಷೆಯ ಉಳಿವು ಅಳಿವುಗಳು ಇಂದು ನಿರ್ಧಾರವಾಗುವುದು ಅದು ಎಷ್ಟು ಲೋಕೋಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ ಎನ್ನುವುದರ ಮೇಲೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಯಾವ ಭಾಷೆಯಲ್ಲಿ ಸಮಕಾಲೀನ ಸಾಹಿತ್ಯ ಇಲ್ಲವೋ ಅಲ್ಲಿ ಆ ಭಾಷೆಯ ಪ್ರಾಚೀನ ಸಾಹಿತ್ಯ ನಿಧಾನವಾಗಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ,

“ಒಂದು ಕಲಾಕೃತಿಯ ಅಂತಃಸ್ಸತ್ವ ಇರುವುದು ಕಾದಂಬರಿ ಓದಿದಾಗ ಏನೆನ್ನಿಸುತ್ತದೆಯೋ ಅದರಲ್ಲಿ. ನಮ್ಮ ಜೀವನದಲ್ಲಿ ಅನುಭವಗಳ ಮೊತ್ತ ಹೆಚ್ಚುತ್ತಾಹೋದಂತೆ ಕಾದಂಬರಿ ಮೈಗೂಡಿಸಿಕೊಳ್ಳವ ಅರ್ಥಗಳ ಪ್ರಭಾವಳಿ ಮೊದಲ ಓದಿನಲ್ಲಿ ಅನ್ನಿಸಿದ್ದಕ್ಕೆ ಪೂರಕ ಎಂದಷ್ಟೆ ಹೇಳಬಹುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್

“ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಸಾಹಿತ್ಯದ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಜನ ನಮ್ಮ ಪುಸ್ತಕಗಳನ್ನು ಕೊಂಡು ಓದಿ ‘ಎಷ್ಟು ಚೆನ್ನಾಗಿ ಬರೆದಿದ್ದೀರಿ’ ಎಂದು ಹೇಳುವ ಮಾತುಗಳಿಗಿಂತ ದೊಡ್ಡ ಪ್ರಶಸ್ತಿ ಇಲ್ಲವೇ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾಧ್ಯಮದ ಎರಡು ಬಗೆಯ ಶಾಲೆಗಳನ್ನು ನಿರ್ವಹಿಸುವ ನಮ್ಮ ಸರ್ಕಾರದ ನೀತಿಯ ದೆಸೆಯಿಂದ ಹೆಚ್ಚು ಕಡಿಮೆ ದಕ್ಷಿಣಾಫ್ರಿಕಾದ ವರ್ಣಭೇದ ನೀತಿಯೊಂದು ನಮ್ಮ ವಿದ್ಯಾಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬಂದಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೨೮೧

“ನಾನು, ನನ್ನ ಮಕ್ಕಳು ಇಂಗ್ಲಿಷ್ನ ೫ನೇ ತರಗತಿಯಿಂದಾನೇ ಕಲಿತವರು. ನಮಗೆಲ್ಲೂ ಕಷ್ಟ ಅಥವಾ ಸಮಸ್ಯೆ ಆಗಿಲ್ಲ. ಶಿಸುವಿಹಾರದಿಂದ ಇಂಗ್ಲಿಷ್ ಬೇಕು ಅನ್ನೋದೆಲ್ಲ ನಾನ್ಸೆನ್ಸ್ ಆಗಿದೆ. ಅಷ್ಟೇ ಅಲ್ಲ, ಇದು ಗುಲಾಮಿ ಬುದ್ಧೀನೂ ಹೌದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೨೯೩

“ಇಷ್ಟೆಲ್ಲಾ ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ ಅನುಭವ, ಆಲೋಚನೆ, ವಿಚಾರ, ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೇ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಲನಿಯಮ್-೧ ಹುಡುಕಾಟ (ಮುನ್ನುಡಿ)

“ಭಾಷೆ ಎಂದಿಗೂ ಅರ್ಥಕೋಶದ ಅರ್ಥಕ್ಕೆ ಹೊಂದಿಕೊಂಡು ಸ್ಥಗಿತವಾಗಿ ನಿಲ್ಲುವುದಿಲ್ಲ. ನಮ್ಮ ಭಾಷೆಯಲ್ಲಿನ ಎಲ್ಲದರ ಅರ್ಥ ನಾವು ಅದಕ್ಕೆ ಸಂವಾದಿಯಾಗಿ ತೋರುವ ಕ್ರಿಯೆಯ ಮೇಲೆ ನಿಲ್ಲುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

“ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲಾ ಬೂಸ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ ನಮ್ಮ ಮುಂದಿರುವ ಆಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ. ಕನ್ನಡ ಭಾಷೆಯ ಏಳಿಗೆಗೂ ಅಪಾರ ಸಹಾಯವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಲೇಖಕರ ನುಡಿ

“ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಬೇಕೆನ್ನುವುದು ಕನ್ನಡಾಭಿಮಾನಕ್ಕಿಂತ ಹೆಚ್ಚಾಗಿ ಕ್ಷಿಪ್ರವಾಗಿ ಕಲಿಯಬೇಕೆನ್ನುವುದೇ ನನ್ನ ಗ್ರಹಿಕೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕುವೆಂಪುರವರು ಬರೆಯಲಾರಂಭಿಸಿದ ಕಾಲಕ್ಕೆ ಕನ್ನಡದಲ್ಲಿ ಕ್ರಾಂತಿಕಾರಕ ಬದಲಾವಣೆಯ ಗಾಳಿ ಬೀಸಲು ಶುರುವಾಗಿತ್ತು. ಕಾದಂಬರಿ, ಭಾವ ಗೀತೆ, ಸಣ್ಣಕಥೆಗಳು ಮೊದಲಾದ ಹೊಸಬಗೆಯ ಸಾಹಿತ್ಯ ಪ್ರಾಕಾರಗಳು ಮನುಷ್ಯನ ಅನುಭವ ಪ್ರಪಂಚದ ಅನೇಕ ನೂತನ ಆಯಾಮಗಳ ಸಾಕ್ಷಾತ್ಕಾರಕ್ಕೆ ಸಿದ್ದ ನೀಲ ನಕ್ಷೆಗಳಾಗಿ ದೊರೆತವು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ನಾನು ನನ್ನ ಜೀವನದ ಅನೇಕ ವರ್ಷಗಳನ್ನು ನದಿಗಳ ದಡದಲ್ಲಿ ಮೀನಿಗೆ ಗಾಳ ಹಾಕಿಕೊಂಡು ಚಿಂತಿಸುತ್ತಾ ಕಳೆದಿದ್ದೇನೆ. ಈ ಹವ್ಯಾಸದಿಂದಾಗಿ ನನಗೆ ಯಾವವ್ಯಾವುದೋ ಜಾತಿ ಜನರ ಪರಿಚಯ ಸಂಪರ್ಕ ಬಂತು .ಅದರೆ ನನಗೆ ಅಚ್ಚರಿಯೆಂದರೆ ಈ ಎಲ್ಲಾ ರೋಮಾಂಚಕ ಅನುಭವಗಳಿಗೆ ನನ್ನ ಸಾಹಿತ್ಯ ಕೃತಿಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆತಿಲ್ಲ ಎಂದೆನಿಸುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ಸಾಹಿತ್ಯಕ ಅಂತ ಬೇರೆ ವಿಭಾಗ ಯಾಕೆ ಮಾಡ್ತೀರಿ ? ಬರವಣಿಗೆ, ಚಿತ್ರಕಲೆ ಎಲ್ಲ ಒಂದೇ ಮೂಲದಿಂದ ಹುಟ್ಟೋದು. ಬಳಸುವ ಮಾಧ್ಯಮ ಪೆನ್ನು, ಬ್ರಶ್ ಅಂತ ಬೇರೆ ಇರಬಹುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ,ಪುಟ – 173

“ಕನ್ನಡದ ಬರಹಗಾರರ ಪರಿಸ್ಥಿತಿ ಇಂದಿಗೂ ಎಂಥ ಚಿಂತಾಜನಕವಾಗಿದೆ ಎಂದರೆ ಈಗ ಪತ್ರಿಕಾರಂಗದಲ್ಲಿರುವ ನಿಯತಕಾಲಿಕೆಗಳ ಬಾಗಿಲು ಮುಚ್ಚಿದರೆ ನಮ್ಮ ಅತ್ಯತ್ತಮ ಬರಹಗಾರರಿಗೂ ಕೂಡ ಜನರನ್ನು ತಲುಪುವ ದಾರಿಯೇ ಇಲ್ಲದಂಥಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ – 325

“ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಮಕ್ಕಳಷ್ಟೇ ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನೂ ಬರೆಯುವುದನ್ನೂ ಹೇಳಿಕೊಡಬೇಕೆಂಬುದೆ ನನ್ನ ಆಶಯ. ಈ ಕೆಲಸವನ್ನು ಈವರೆಗೂ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಯಾರೂ ಮಾಡುತ್ತಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 282

“ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಸುವುದರಿಂದ ಇಂಗ್ಲೀಷ್ ಚೆನ್ನಾಗಿ ಬರುತ್ತದೆ ಎಂಬ ಭ್ರಮೆಗೆ ಒಳಗಾಗಿ ನಮ್ಮ ಹಳ್ಳಿಯ ಜನರೆಲ್ಲಾ ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಂದ ಬಿಡಿಸಿ, ಕಾನ್ವೆಂಟುಗಳೆಂದು ಪ್ರಾರಂಭಿಸಿರುವ ಅನಧಿಕೃತ ಕುರಿದೊಡ್ಡಿಗಳಿಗೆ ದುಬಾರಿ ಡೊನೇಷನ್ ಕೊಟ್ಟು ಸೇರಿಸುತ್ತಿದ್ದಾರೆ. ಈ ವಲಸೆ ತಪ್ಪಿಸಿ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಬೇಕೆಂದಾದರೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಇಂಗ್ಲೀಷ್ ಚೆನ್ನಾಗಿ ಕಲಿಸುತ್ತಾರೆ ಎಂಬುದನ್ನು ತಂದೆ-ತಾಯಿಗಳಿಗೆ ಮನವರಿಕೆ ಮಾಡಿಕೊಡುವುದೊಂದೇ ಮಾರ್ಗ.”
(ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿಸುವುದರ ಬಗ್ಗೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ: 08-10-2006)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೮೩

“ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿಯನ್ನು ಹುಡುಕುತ್ತಾ, ಪುಟ ೧೦೯

“Photographer can not be a hero because he has to be behind the camera.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, Interview Video

“ನೀವು ಸಹ ಚಿತ್ರಗ್ರಾಹಕರಾಗದ ಹೊರತು ಚಿತ್ರಗಳನ್ನು ನೋಡಿ ಮೆಚ್ಚಬಹುದೇ ವಿನಃ ಅವುಗಳನ್ನು ತೆಗೆಯುವ ಕಷ್ಟ ಏನೆಂಬುದು ನಿಮಗೆ ಗೊತ್ತಾಗುವುದೇ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ, ಪುಟ 38

“ಒಳ್ಳೆಯ ಚಿತ್ರಗಳನ್ನು(ಫೋಟೊ) ತೆಗೆಯುವುದಕ್ಕೆ ಕೆಲವು ಕಾಲದ ಪರಿಶ್ರಮ ಮತ್ತು ತಾಳ್ಮೆ ಬೇಕು. ಇದು ಹೇಳಿಸಿಕೊಂಡು ಕಲಿಯುವ ವಿದ್ಯೆಯೆಂದು ನನಗೆ ಅನ್ನಿಸುವುದಿಲ್ಲ. ನೀವೇ ಪ್ರಯೋಗ ಮಾಡಿ ಮಾಡಿ ನಿಧಾನವಾಗಿ ಕಲಿಯುತ್ತೀರಿ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 343

“ಫೋಟೋಗ್ರಫಿ,ಸಂಗೀತ,ಪೇಂಟಿಂಗ್,ಇವನ್ನೆಲ್ಲಾ ಹಚ್ಚಿಕೊಂಡು ತೊಳಲಾಡಿದ್ದು ಹೇಗೆ ನನಗೆ ಉಪಯುಕ್ತವಾಯ್ತೋ ಸ್ಪಷ್ಟವಾಗಿ ಹೇಳಲಾರೆ. ಆದರೆ ಫೋಟೋಗ್ರಫಿ ನನ್ನ ಬರವಣಿಗೆಗೆ ಹಲವು ಅಸಾಧಾರಣ ಶಿಸ್ತು ಸಂಯಮಗಳನ್ನು ಕಲಿಸಿತೆಂದು ಅನ್ನಿಸುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು

ರೈತ-ಕೃಷಿ ನುಡಿಗಳು
“ರೈತರು ಎಷ್ಟೇ ಬಡವರಾದರು ಆತ್ಮ ಗೌರವ ಉಳ್ಳವರು”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್

“ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು

“ನಮ್ಮ ಸರ್ಕಾರ, ನಮ್ಮ ಯೋಜನಾ ತಜ್ಞರು, ವಿಜ್ಞಾನಿಗಳು ಎಲ್ಲರ ಧೊರಣೆಯೂ ಕೃಷಿಯನ್ನು ಕೇವಲ ಉತ್ಪಾದನ ವಿಧಾನವೆಂದೇ ಪರಿಗಣಿಸುತ್ತದೆ. ರೈತ ಅವರ ದೃಷ್ಟಿಯಲ್ಲಿ ಬೋನಿನಲ್ಲಿ ಬೆಳೆಯುವ ಬ್ರಾಯ್ಲರ್ ಕೋಳಿಯಂತೆ ಕೇವಲ ಉತ್ಪಾದಕ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು

“ಭಾರತೀಯ ಕೃಷಿರಂಗದಲ್ಲಿ ನೂರಕ್ಕೆ ತೊಂಭತ್ತಕ್ಕಿಂತ ಹೆಚ್ಚು ಜನ ಅನಕ್ಷರಸ್ಥರಿದ್ದಾರೆ ಅಂಥ ಕಡೆಗಳಲ್ಲಿ ಬ್ಯಾಂಕುಗಳು ತಮ್ಮ ವಿಧಿ ವಿಧಾನಗಳನ್ನು ಅತ್ಯಂತ ಸರಳಗೊಳಿಸಬೇಕಾದುದು ಅವಶ್ಯಕ. ಈ ತೆರನಾದ ಸಂಧರ್ಭಗಳಲ್ಲಿ ನಮ್ಮ ಬ್ಯಾಂಕುಗಳು ಇಂಗ್ಲೀಷಿನ ಫಾರ್ಮುಗಳನ್ನು ಅಚ್ಚು ಮಾಡಿಸಿ ಕೊಡುತ್ತಿವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು

“ಗ್ರಾಮಾಂತರ ಪ್ರದೇಶಗಳಿಗೆ ಕೃಷಿರಂಗಕ್ಕೆ ಯಾವ ರೀತಿಯಿಂದಲೂ ಅನರ್ಹರಾಗಿರುವ ಪೇಟೆಯ ಸುಶಿಕ್ಷಿತ ವರ್ಗದ ಬ್ಯಾಂಕಿಂಗ್ ಹಾಗೂ ಕಾಮರ್ಸ್ ಪದವೀಧರರುಗಳನ್ನು ಮ್ಯಾನೇಜರುಗಳನ್ನಾಗಿ ಮಾಡಿದರೆ ಬ್ಯಾಂಕು ಕೃಷಿರಂಗದಲ್ಲಿ ಪ್ರಾಧನ ಪಾತ್ರ ವಹಿಸದಂತೆ ಮಾಡುತ್ತಾರೆ. ಮುಂಗಾರಿ ಬೆಳೆ ಎಂದರೇನು? ಹಿಂಗಾರಿ ಬೆಳೆ ಎಂದರೇನು? ತಿಳಿಯದ ಅನೇಕ ಬೃಹಸ್ಪತಿಗಳು ಬ್ಯಾಂಕ್ ಮ್ಯಾನೇಜರುಗಳಾಗಿದ್ದಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು

“ರೈತನನ್ನು ಊರಿನ ಶ್ರೀಮಂತರಿಂದ, ಲೇವಾದೇವಿಯಿಂದ ತಪ್ಪಿಸಲಿಕ್ಕಾಗಿಯೇ ಬ್ಯಾಂಕುಗಳು ನಡೆಸುವ ಪ್ರಯತ್ನಕ್ಕೆ ಮತ್ತೆ ಶ್ರೀಮಂತರಿಂದಲೇ ಷ್ಯೂರಿಟಿ ಕೇಳುವುದು ಎಂಥ ಅಸಂಬದ್ಧ ಕಾರ್ಯಕ್ರಮವೆಂದು ತಿಳಿಯುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು

“ನಮ್ಮ ಸರ್ಕಾರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಲಾಭಕರ ಬೆಲೆ ನೀಡುವುದೊಂದನ್ನುಳಿದು ಮಿಕ್ಕಿದ್ದನ್ನೆಲ್ಲಾ ಮಾಡುತ್ತವೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅತಿ ಸೂಕ್ತ ಮಾರ್ಗವೆಂದರೆ ರೈತನಿಗೆ ಲಾಭಕರ ಬೆಲೆಯೇ ಹೊರತು ಮಿಕ್ಕುದೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ

“ರೈತನಿಗೆ ಹಸಿರು ಕ್ರಾಂತಿ ಮಾಡುವಂಥ ಬ್ಯಾಂಕಿನ ಸಹಾಯವು ಏಳು ಸಮುದ್ರಗಳಾಚೆ ಇರುವ ಏಳು ಸುತ್ತಿನ ಕೋಟೆಯೊಳಗೆ ಸರ್ಪ ಕಾವಲಿನಲ್ಲಿರುವ ಅಲಭ್ಯ ಗಂಟಾಗಿ ಹೋಗಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಒಂದು ದೇಶ ಆಧುನಿಕವಾಗುತ್ತಾ, ಕೈಗಾರಿಕೀಕರಣವಾಗುತ್ತಾ ಹೋದಂತೆ ಕೃಷಿಯನ್ನು ಒಂದು ಜೀವನ ಮಾರ್ಗವೆಂದು ಪರಿಗಣಿಸುವವರು ಅಥವಾ ವ್ಯಕ್ತಿಗಳಲ್ಲಿ ಆ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಭೂಮಿ ಕಾರ್ಖಾನೆಯ ಯಂತ್ರದಂತೆ ಉತ್ಪಾದಿಸುವ ಒಂದು ಸಲಕರಣೆಯಾಗುತ್ತದೆ. ಮನುಷ್ಯ ಅಲ್ಲಿ ಬದುಕಿ ಬಾಳಿ ತನ್ನ ಸಾರ್ಥಕ ಕಂಡುಕೊಳ್ಳುವುದು ಪರಿಸರವಾಗಿ ಅಪ್ರಮುಖವಾಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“‎ರೈತರನ್ನು ಈ ದೇಶದ ಕೇವಲ ಉತ್ಪಾದಕರೆಂದು ಮಾತ್ರ ಪರಿಗಣಿಸಿ ಬೆಲೆ ನಿಗದಿ ಮಾಡುತ್ತಾರೇ ಹೊರತು ಆತನೂ ಈ ದೇಶದ ಬಳಕೆದಾರ ಎಂಬ ಕಲ್ಪನೆ ದೆಹಲಿ ಸೆಕ್ರೆಟರಿಯೇಟಿನ ಪುರೋಹಿತರಿಗೆ ಹೊಳೆಯುವುದೇ ಇಲ್ಲ. ರೈತನೊಬ್ಬ ಟಿವಿ ಬಳಕೆದಾರನಾಗಬೇಕನ್ನುವುದಾಗಲಿ ಮಾರುತಿ ಕಾರಿನ ಗಿರಾಕಿ ಎನ್ನುವುದಾಗಲಿ ಈ ಪುರೋಹಿತರ ಊಹೆಗೂ ನಿಲುಕುವುದಿಲ್ಲ. ಆದ್ದರಿಂದಲೇ ಬೆಲೆ ನಿಗದಿ ಮಾಡುವಾಗ ರೈತ ಮುಂದಿನ ವರ್ಷವೂ ಬದುಕಿ ತಮಗೆ ಊಟ ಹಾಕುವುದಕ್ಕೆ ಎಷ್ಟು ಬೆಕೋ ಅಷ್ಟನ್ನು ಮಾತ್ರವೇ ಅವನಿಗೆ ನೀಡುತ್ತಾರೆ. ಇದರಿಂದಲೇ ನಮ್ಮ ನಾಡಿನ ಇಡೀ ರೈತಸಮುದಾಯ ಗದ್ದೆಯಲ್ಲಿ ನೇಗಿಲೆಳೆಯುವ ಎತ್ತಿನ ಸ್ಥಿತಿಗೆ ಹೋಗಿರುವುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ರಾಜಕೀಯ ನುಡಿಗಳು
“‎ಕನ್ನಡಿಗರ ಆಶೋತ್ತರಗಳನ್ನು ಬಲವಾಗಿ ಪ್ರತಿಪಾದಿಸುವ ಪಕ್ಷ ಮತ್ತು ರಾಜಕಾರಣಿಗಳು ಕನ್ನಡ ನಾಡಿನಲ್ಲಿ ಇಲ್ಲದಿದ್ದರೆ ನಾವು ನದಿ ನೀರಿನಂತೆಯೇ ನೆಲವನ್ನೂ ಕಳೆದುಕೊಳ್ಳುತ್ತವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೧೫೦

“ದೇಶ ಬದಲಾಗಬೇಕೆಂದು ನಾವೆಲ್ಲ ಬಹಿರಂಗದಲ್ಲಿ ಹೇಳುತ್ತೇವೆ. ನಮ್ಮ ಅಂತರಂಗಕ್ಕೂ ಬಹಿರಂಗಕ್ಕೂ ನಡುವಿನ ಕಂದರ ನಾವು ಗಮನಿಸಿರುವುದಿಲ್ಲ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

‎”ಸಾಮಾಜಿಕ ಜವಾಬ್ದಾರಿ, ದೇಶದ ಬಗ್ಗೆಯ ಕಳಕಳಿ ಬೇರೆಯವರಿಂದ ಅಪೇಕ್ಷಿಸುವಂಥದೇ ಅಲ್ಲ. ನಮ್ಮಲ್ಲೇ ಇರಬೇಕಾದುದು. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನಾವು ಎಷ್ಟು ಕೆಟ್ಟ ರಾಜಕಾರಣಿಗಳನ್ನೂ ಅಧಿಕಾರಶಾಹಿಯನ್ನೂ ನಿರ್ಮಾಣ ಮಾಡಿದ್ದೇವೆಂದರೆ ಅತಿವೃಷ್ಟಿ, ಅನಾವೃಷ್ಟಿ, ಬರ, ಭೂಕಂಪ, ಯುದ್ಧ ಮೊದಲಾದ ಯಾವುದೇ ವಿಪತ್ತು ಬಂದರೂ ಅದನ್ನು ಸ್ವಾರ್ಥಕ್ಕೆ ಉಪಯೋಗಿಸುತ್ತಾರೆ. ಮುಂದುವರೆದ ರಾಷ್ಟ್ರಗಳ ಕುತಂತ್ರಿ ನೀತಿಯಷ್ಟೇ ಇವರು ನಮಗೆ ಅಪಾಯಕಾರಿಗಳು. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ನಮ್ಮ ರಾಜಕಾರಣಿಗಳಲ್ಲಿ ಅನೇಕರು ಕೇಂದ್ರೀಕೃತ ಆಡಳಿತ ಪದ್ಧತಿಯ ರುಚಿ ಕಂಡಿದ್ದಾರೆ. ಹಳ್ಳಿಗಳ ಸಂಪತ್ತನ್ನೆಲ್ಲಾ ಸೂರೆ ಹೊಡೆದು ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಾ ಮಜಾ ಉಡಾಯಿಸುವುದೇ ರಾಜಕಾರಣ ಎಂದು ತಿಳಿದಿದ್ದಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಭಾರತದಲ್ಲಿ ಇರುವುದು ಪ್ರಜಾಪ್ರಭುತ್ವವಾದರೂ ಮಿತಿಮೀರಿದ ಕೇಂದ್ರೀಕರಣದ ದೆಸೆಯಿಂದ ಸರ್ಕಾರದ ಧೋರಣೆಗಳನ್ನು ರೀತಿ ನೀತಿಗಳನ್ನು ರೂಪಿಸುವವರು ಗ್ರಾಮಗಳ ಮತ್ತು ಕೃಷಿಕ್ಷೇತ್ರದ ವಾಸ್ತವಾಂಶಗಳನ್ನು ಗ್ರಹಿಸದಷ್ಟು ದೂರಾಗಿದ್ದಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾ ಸಾಹಸವಾಗುತ್ತಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಮತಧರ್ಮ ನಮ್ಮಲ್ಲಿ ಪ್ರಜ್ಞಾಪೂರ್ವಕ ವಲಯದಲ್ಲಿ ಮಾಡುವ ಹಾನಿಗಿಂತ ಭೀಕರವಾದುದು ಪ್ರಜ್ಞಾತೀತ ವಲಯದಲ್ಲಿ ಅದು ಮಾಡುವ ಹಾನಿ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ನಮ್ಮ ಆಡಳಿತ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ನಮ್ಮ ಗ್ರಾಮಗಳಿಂದಲೂ ರೈತರಿಂದಲೂ ದೂರವಾಗುತ್ತಾ ಪರೋಕ್ಷವಾಗುತ್ತಾ ಹೋಗುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ”
(The subject of modernization of India is that one stealing someone’s food)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಗ್ರಾಮೀಣ ಜನರಾದ ದಲಿತರನ್ನೂ ಶೂದ್ರರನ್ನೂ ಇಂಗ್ಲಿಷರು ಸಹ ನಾಚುವಂತೆ ಸರಕಾರ ಮತ್ತು ಅಧಿಕಾರಶಾಹಿ ಇಂದಿಗೂ ಇಂಗ್ಲಿಷಿನ ಸಹಾಯದಿಂದ ತುಳಿಯುತ್ತಿದೆ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೨೮೫

“ಪ್ರಾದೇಶಿಕ ಪಕ್ಷ ನಮ್ಮ ರಾಜಕೀಯ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಬರೇ ಕಾವೇರಿ ಒಂದೇ ಕಾರಣ ಅಲ್ಲ. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳು ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕುಸಿದು ಸಣ್ಣ ಸಣ್ಣ ರಾಷ್ಟ್ರಗಳಾಗಿ ಇಲ್ಲವೇ ಒಕ್ಕೂಟಗಳಾಗಿ ರೂಪುಗೊಳ್ಳುತ್ತಿವೆ. ಈಗಿನ ರೀತಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಾಕಲು ಹಿಂದುಳಿದ ದೇಶಗಳಿಗೆ ಸಾಧ್ಯವೇ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಈ ಅವಾಸ್ತವಿಕ ರಾಷ್ಟ್ರೀಯತೆಯ ದೆಸೆಯಿಂದಾಗಿ ಅಧಿಕಾರಶಾಹಿ ಭೀಕರವಾಗಿದೆ. ಭ್ರಷ್ಟಾಚಾರ ಯೋಜನಾಬದ್ಧ ಪ್ರಗತಿಯನ್ನು ಅರ್ಥಹಿನವನ್ನಾಗಿ ಮಾಡಿದೆ. ಕಾಳಧನ ಉದ್ದೇಶಪೂರ್ವಕ ಬಂಡವಾಳ ಹೂಡಿಕೆಯನ್ನೇ ಸ್ಥಗಿತಗೊಳಿಸಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕಾವೇರಿ ನೀರಿನ ಬಗ್ಗೆ ಕರ್ನಾಟಕದ ಹಿತಾಸಕ್ತಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವವರು ಶಾಸಕರ ರಾಜೀನಾಮೆಗೆ ಆಗ್ರಹ ಪಡಿಸುವುದಾಗಲಿ ಅವರು ಕೊಡುತ್ತೇನೆಂದು ಹೇಳುವುದಾಗಲಿ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಶಾಸಕರೆಲ್ಲ ರಾಜೀನಾಮೆ ಕೊಟ್ಟು ಮೊನ್ನೆ ಮಾಡಿದ ಹಾಗೆ ಎಲ್ಲ ಪಕ್ಷಗಳು ಬಂದ್ ಗೆ ಕರೆಕೊಟ್ಟು ದೊಂಬಿ ಎಬ್ಬಿಸಿದರೆ ಕರ್ನಾಟಕವನ್ನು ಗಲಭೆ ಪೀಡಿತ ಪ್ರದೇಶ ಎಂದು ಘೋಷಿಸಿ ಒಬ್ಬ ಖದೀಮ ರಾಜ್ಯಪಾಲನನ್ನು ನೇಮಿಸಿ ಚುನಾವಣೆಯೇ ನಡೆಸದೆ ಕೇಂದ್ರ ಕರ್ನಾಟಕವನ್ನು ವರ್ಷಗಳವರೆಗೆ ಆಳಬಹುದು. ದೊಂಬಿ ಗಲಭೆಗಳಿಂದ ಕರ್ನಾಟಕದಲ್ಲಿ ಇಂಥ ಪರಿಸ್ಥಿಯನ್ನು ರೂಪಿಸುತ್ತೇವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಆಂಧ್ರ, ತಮಿಳುನಾಡುಗಳಲ್ಲಿ ಬಲವಾದ ಪ್ರಾದೇಶಿಕ ಪಕ್ಷಗಳಿವೆ. ಆದ್ದರಿಂದ ಅವರ ಮಾತಿಗೆ ಕೇಂದ್ರ ಸರ್ಕಾರವಾಗಲೀ ನ್ಯಾಯಮಂಡಳಿಯಾಗಲಿ ಹೆಚ್ಚು ಬೆಲೆ ಕೊಡುತ್ತವೆ. ಕರ್ನಾಟಕ ಈವರೆಗೂ ಅಂಥ ರಾಜಕೀಯ ಪಕ್ಷವನ್ನಾಗಲಿ ರಾಜಕಾರಣಿಯನ್ನಾಗಲಿ ರೂಪಿಸಲಿಲ್ಲ. ಕೇಂದ್ರಕ್ಕೆ ನಜರು ಒಪ್ಪಿಸುವ ಸಾಮಂತರು ಮಾತ್ರ ಇಲ್ಲಿ ಬಂದಿದ್ದಾರೆ. ಕೇಂದ್ರ ಮಂತ್ರಿಗಳಿಗೆ ಭೇಟಿಗೆ ಅವಕಾಶ ಕೊಡದೆ ಜಯಲಲಿತ ಹಿಂದಕ್ಕೆ ಕಳಿಸಿದರು. ನಮ್ಮವರು ಕರ್ನಾಟಕ ಭವನದಲ್ಲಿ ವಾರಗಟ್ಟಲೆ ತಂಗಿದ್ದು ಭೇಟಿಗೆ ಕಾಯುತ್ತಾರೆ. ಆದ್ದರಿಂದ ಕರ್ನಾಟಕ ಸಹ ತನ್ನ ಪ್ರಾದೇಶಿಕ ಹಿತಾಸಕ್ತಿಯನ್ನು ಪ್ರಧಾನವಾಗಿ ಕಾಯುವ ಒಂದು ರಾಜಕೀಯ ಪಕ್ಷ ರೂಪಿಸಬೇಕು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಗಣಿಮಂತ್ರಿ ಗ್ರಾನೈಟ್ ತೆಗೆಯಲು ಪರವಾನಗಿ ಕೊಡುತ್ತಾನೆ. ಅರಣ್ಯಮಂತ್ರಿ ಅವನ ಮೇಲೆ ಕೇಸ್ ಹಾಕುತ್ತಾನೆ. ಮೀನುಮಂತ್ರಿ ಮೀನು ಕೆರೆಗೆ ಬಿಟ್ಟರೆ ಕಾಮಗಾರಿ ಮಂತ್ರಿ ಕೆರೆ ಒಡೆಸುತ್ತಾನೆ. ಬಾಯಲ್ಲಿ ಭಜನೆ ಮಾಡುವ ನಮ್ಮ ಅಖಂಡನೆಗೂ ನಮ್ಮ ವರ್ತನೆಗೂ ಸಂಬಂಧವಿದೆಯೇ?”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

“ಇಲ್ಲಿ ದೇಶದಾದ್ಯಂತ ಯಾತ್ರೆ ಹೋಗಿ ಅಖಂಡತೆಯ ಬಾವುಟ ಹಾರಿಸುವವರೂ, ಭಾರತಮಾತೆ ಎಂದು ಭಾವುಕವಾಗಿ ಮಾತನಾಡುವವರೂ ಭಾರತದ ಉಗ್ರವಾಸ್ತವವನ್ನು ನೋಡಲು ಹೆದರುವ ಪಲಾಯನವಾದಿಗಳಂತೆ ಕಾಣುತ್ತಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

“ಭ್ರಷ್ಟಾಚಾರ ಎಲ್ಲಿ ನಮ್ಮ ಅಭಿವೃದ್ಧಿಕಾರ್ಯಗಳ ಅಂತರ್ಗತ ಅಂಶವಾಗುತ್ತದೆಯೋ ಅಲ್ಲಿ ಯೋಜನೆ ಎನ್ನುವ ಹೆಸರು ಕೇವಲ ನಾಮ ಮಾತ್ರ. ಇದನ್ನು ಯೋಜನಾ ಬದ್ಧ ಪ್ರಗತಿ ಎಂದು ಕರೆದುಕೊಳ್ಳುವುದು ಆರ್ಥಿಕ ತಜ್ಞರು ಮಾಡಿಕೊಳ್ಳಬಹುದಾದ ಆತ್ಮವಂಚನೆಯಷ್ಟೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

“ಈ ಶತಮಾನದ ಬಹುಪಾಲನ್ನು ಕಾಡಿದ ರಾಜಕೀಯ ಮೂಲಭೂತವಾದದ ಯುಗವೇನೋ ಕೊನೆಯಾಗುತ್ತಿದೆ, ಆದರೆ ಅದರ ಜಾಗವನ್ನು ಧಾರ್ಮಿಕ ಮೂಲಭೂತವಾದ ಆಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಹಾ ಪಲಾಯನ (ಮುನ್ನುಡಿ)

“ರಾಜಕಾರಣಿಗಳು ಎಂದೆಂದೂ ಭಾರತವನ್ನು ಜಾತ್ಯಾತೀತ ಸಮಾಜ ಆಗದಹಾಗೆ ನೋಡಿಕೊಳ್ಳುತ್ತಾರೆ. ಏಕೆಂದರೆ ಇನ್ಯಾವ ಅರ್ಹತೆಗಳೂ ಇಲ್ಲದ ಅವರಿಗೆ ಜಾತಿ ಬಿಟ್ಟರೆ ಓಟಿಗೆ ಬೇರೆ ಗತಿಯೇ ಇಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ತಮ್ಮ ಧಾರ್ಮಿಕತೆಯನ್ನು ಹೆಂಗಸರನ್ನು ತುಳಿಯುವುದರ ಮೂಲಕ, ಇತರ ಧರ್ಮಗಳನ್ನು ದ್ವೇಷಿಸುವುದರ ಮೂಲಕ ಉಳಿಸಿಕೊಳ್ಳಲು ಎಲ್ಲರೂ ಯತ್ನಿಸುತ್ತಿದ್ದಾರೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

“ಅವನತಿಯಿಂದಲೇ ತಮ್ಮ ವೈಯಕ್ತಿಕ ಉನ್ನತಿಯನ್ನು ಸಾಧಿಸುವ ಅಗಾಧವಾದ ಒಂದು ವರ್ಗವೇ ನಮ್ಮಲ್ಲಿ ಇಂದು ತಯ್ಯಾರಾಗಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೪೨೫

“ನಿಧಾನವಾಗಿ ವಿಕೇಂದ್ರೀಕರಣ ಮಾತೃ ಭಾಷೆ ಮುಂತಾದವನ್ನು ಪ್ರತಿಬಂಧಿಸುತ್ತ ಕೆಲಸಕ್ಕೆ ಬಾರದ ಬೊಫೊರ್ಸ್, ರಾಮ ಮಂದಿರ ಮುಂತಾದವುಗಳು ಮಾತ್ರ ಚುನಾವಣೆಯ ಸಂದರ್ಭದಲ್ಲಿ ಪ್ರಸ್ತಾಪಿಸಲು ಅರ್ಹವಾದ ವಿಷಯಗಳಾದರೆ ಭಾರತದ ಜೀವಂತ ಸಮಸ್ಯೆಗಳಿಂದ ಚುನಾವಣೆ ಪ್ರತ್ಯೇಕವಾಗಿಯೇ ಉಳಿಯುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

“ಅನೇಕ ರಾಜಕೀಯ ಪಕ್ಷಗಳು ವೋಟಿಗಾಗಿ ಸಂಸತ್ತಿನಲ್ಲೇ ಒಂದು ನಡವಳಿಕೆ, ಸಂಸತ್ತಿನ ಹೊರಗೆ ಒಂದು ನಡವಳಿಕೆ ರೂಢಿಸಿಕೊಳ್ಳುತ್ತಿರುವುದಂತೂ ಖಂಡನೀಯ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 164

“ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೆ ತರಬೇಕು ಅದರೆ ಅದನ್ನು ಯಾರಿಗೆ ಆಗಲಿ ಕಡ್ಡಾಯ ಮಾಡುವುದು ಬೇಡ. ಆಯ್ಕೆಯ ಪ್ರಶ್ನೆ ಜನರಿಗೆ ಬಿಡಿ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ,ಪುಟ – 173

“ಇವತ್ತು ಭಾರತಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಏನಾದರೂ ಹೆಸರು ಬಂದಿದ್ದರೆ ಅದನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರ ತಂದುಕೊಟ್ಟಿದೆ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ – 174

“ಕೆಲವು ಕ್ಷೇತ್ರಗಳಲ್ಲಿ ನಮಗೆ ಏಕರೂಪತೆ ಬೇಕು. ಒಂದೊಂದು ಜಾತಿಯವರಿಗೆ ಒಂದೊಂದು ನೀತಿ ಸಂಹಿತೆ ಇದೆ ಈ ದೇಶದಲ್ಲಿ. ಈ ಸನಾತನ ಧರ್ಮ, ಕುರಾನ್ ಮುಂತಾಗಿ ನಾವು ರೋಸಿಹೋಗಿದ್ದೇವೆ. ಎಲ್ಲರಿಗೂ ಒಂದೇ ರೀತಿಯ ಕಾನೂನು ತರೋದರಲ್ಲಿ ತಪ್ಪೇನಿದೆ?”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 173

“ನಮ್ಮನ್ನು ಕೇವಲ ಭಾರತೀಯರಾಗಲು ಬಿಡಿ, ಮೊದಲು ಏಕರೂಪದ ಕಾಯ್ದೆ ತನ್ನಿ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 173

“ಆಡುವುದು ಸುಲಭ. ಅದರೆ ಆಡಿದಂತೆ ಮಾಡುವುದು ಕಷ್ಟ. ಅದಕ್ಕೆ ಅಧಿಕಾರದಲ್ಲಿ ಇಲ್ಲದ ಸೌಲಭ್ಯ ಉಪಯೋಗಿಸಿಕೊಂಡು ಮನಬಂದಂತೆ ಮಾತಾಡಬಾರದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ,ಪುಟ – 185

“ಸರ್ಕಾರಿ ಉದ್ಯಮಗಳು ಖಾಸಗಿಯವರಿಗೆ ಹಸ್ತಾಂತರವಾದರೆ ಅಧಿಕಾರಶಾಹಿ ತಮ್ಮ ಢಕಾಯ್ತಿಗೆ ಚಂಬಲ್ ಕಣಿವೆಗೆ ಹೋಗಬೇಕಾಗುತ್ತದೆ. ಆದ್ದರಿಂದ ಇವರು ಖಾಸಗಿಕರಣವನ್ನು ವಿರೋಧಿಸಬೇಕಾದುದು ನ್ಯಾಯ ಮತ್ತು ಸಹಜ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಇವತ್ತು ನಮ್ಮ ದೇಶದಲ್ಲಿ ಒಂದು ಜಾತ್ಯತೀತ ಸಂವಿಧಾನವಿದೆ. ಆ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು. ಅದರಲ್ಲಿನ ಜಾತ್ಯಾತೀತ ತತ್ವಗಳನ್ನು ನಾವು ಅವಲಂಬಿಸಿದರೆ, ಅದು ಜಾತಿ ವಿನಾಶಕ್ಕೆ ಮತ್ತು ಕೋಮುದಳ್ಳುರಿಗೆ ಉತ್ತಮ ಪರಿಹಾರವಾಗುತ್ತದೆ. ಈ ಆಧುನಿಕ ಕಾಲದಲ್ಲಿ ಯಾರಿಗೆ ಬೇಕು ಅಂಧಾಕಾರದ ಧರ್ಮ?”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೫೨೧

“ಬಸವಣ್ಣನವರ ಚಳವಳಿ ಜಾತ್ಯತೀತ ಚಳವಳಿಯಾಗಿತ್ತು, ಏಕೆಂದರೆ ಬ್ರಾಹ್ಮಣ ಧರ್ಮದ ಪ್ರಕಾರ ಹುಟ್ಟಿನಿಂದಲೇ ಜಾತಿ ನಿರ್ಧಾರವಾಗುತ್ತದಲ್ಲದೇ, ಮತಾಂತರಕ್ಕೆ ಅವಕಾಶವಿಲ್ಲದಿದ್ದರಿಂದ ಯಾವನಿಗೂ ಹುಟ್ಟಿದ ಜಾತಿಯಿಂದ, ಆ ಜಾತಿ ವ್ಯವಸ್ಥೆಯಿಂದ ಬಿಡುಗಡೆಯೇ ಇರಲಿಲ್ಲ. ಆದರೆ ಬಸವಣ್ಣ ಮತಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಅದು ಜಾತ್ಯತೀತ ಚಳವಳಿಯಾಗಿತ್ತು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೫೨೧

“ನನಗನ್ನಿಸುವುದು ಬಸವಣ್ಣ ಮತಾಂತರಕ್ಕೆ ಅವಕಾಶ ಮಾಡಿದ್ದರಿಂದ ಆ ಮೂಲಕ ಎಲ್ಲರೂ ಸಮನಾದ್ದರಿಂದ, ಹುಟ್ಟಿನಿಂದ ಜಾತಿ ಎಂಬ ಬ್ರಾಹ್ಮಣ ಧರ್ಮದ ಜಾತಿ ಪದ್ಧತಿಯಿಂದ ಬಿಡುಗಡೆ ಕೊಟ್ಟಿದ್ದರಿಂದ, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ್ದರಿಂದ, ನನ್ನ ಪ್ರಕಾರ ಆಧ್ಯಾತ್ಮಿಕವಾಗಿ ಲಿಂಗಾಯತರು ಹಿಂದೂಗಳಲ್ಲ ಹಾಗೆ ನೋಡಿದರೆ, ಬೌದ್ಧ ಧರ್ಮ ಮತ್ತು ವೀರಶೈವ ಲಿಂಗಾಯತ ಎರಡೂ ಜಾತ್ಯತೀತ ಮಾತ್ರವಲ್ಲ ಎರಡು ಅಹಿಂದೂ ಧರ್ಮಗಳು ಆಗಿವೆ. ಹೊರನೋಟಕ್ಕೆ ವೀರಶೈವ ಹಿಂದೂ ಧರ್ಮದಂತೆ ಕಾಣುತ್ತದೆ ಆದರೆ ಆಳದಲ್ಲಿ ಅದು ಹಿಂದೂಧರ್ಮವಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೫೨೨

“ಗುಂಪುಗಾರಿಕೆ, ಮನಸ್ತಾಪ, ಜಾತಿಜನಗಳು, ದುರಾಸೆ ಇವುಗಳನ್ನೇ ನಮ್ಮ ರಾಜಕಾರಣ ತನ್ನ ಪ್ರಧಾನ ಚೈತನ್ಯಶಕ್ತಿಯನ್ನಾಗಿ ಉಪಯೋಗಿಸುತ್ತಿದೆ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 193

“ಯಾವತ್ತಾದ್ರು, ಈ ಕಳ್ಳ ಜಗದ್ಗುರುಗಳು , ಮುಲ್ಲಾಗಳು ನಮಗೆ ಇನ್ಸ್ಪಾಯರ್ ಮಾಡೋದಿಕ್ಕೆ ಸಾಧ್ಯನಾ !. ಹಿಂದುತ್ವವಾದಿಗಳು – ಜಿಹಾದಿಗಳು ಇವರೆಲ್ಲಾ ಒಂದೇ ರಾಕ್ಷಸನ ವಿವಿಧ ಮುಖಗಳು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ನಂ-552

“ಸಾಯೋದಿಕ್ಕೆ ಬೆನ್ನಿಗೆ ಬಾಂಬು ಕಟ್ಟಿಕೊಂಡು ಓಡಾಡೊ ಮುಠ್ಠಾಳರಿಗೆ ಹೇಗೆ ಬುದ್ಧಿ ಹೇಳೊದಿಕ್ಕೆ ಸಾಧ್ಯ ಆಗುತ್ತೆ ಅನ್ನೋದನ್ನ ಯೋಚನೆ ಮಾಡಿ. ನೂರು ರೂಪಾಯಿಗೊ ಇನ್ನೂರು ರೂಪಾಯಿಗೊ ಕೆಲಸ ಮಾಡೋದಿಕ್ಕೆ ಹೋಗೊರಿಗೆ ‘ ಬ್ಯಾಡ ಬಾರಯ್ಯ ಮುನ್ನೂರ ರೂಪಾಯಿ ಕೋಡ್ತೀನಿ’ ಅಂತ ಹೇಳಬಹುದು. ” ಸ್ವರ್ಗದಲ್ಲಿ ಹದಿನಾಲ್ಕು ಜನರೇಷನ್ನಿಗೂ ಸದ್ಗತಿ ಸಿಗುತ್ತಂತೆ ; ಅದಕ್ಕೆ ಬಾಂಬು ಇಡೋದಿಕ್ಕೆ ಹೋಗ್ತಿವಿ” ಅಂತ ಹೇಳೊರಿಗೆ ಹೇಗೆ ಬುದ್ಧಿ ಹೇಳ್ತಿರಾ ಹೇಳಿ. “
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ನಂ-553

“ಚುನಾವಣೆ ಒಂದು ಮಾಯಾಲೋಕ. ಜಾತಿ, ಗೆಳೆತನ,ಬಾಂಧವ್ಯ, ಹಣ, ಯಾವಯಾವುದೋ ಆಮಿಷಗಳಿಗೆ ಸಿಕ್ಕು ನಾವು ಒಂದು ಕ್ಷಣ ನಮ್ಮ ಜೀವನದ ಧ್ಯೇಯವನ್ನೂ ನಮ್ಮ ಪ್ರೀತಿಯ ಕರ್ನಾಟಕವನ್ನೂ ಮರೆಯುತ್ತಿದ್ದೇವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 228

“ಪುಂಡುಪೋಕರಿಗಳನ್ನು ಚುನಾಯಿಸಿ ಕಳಿಸಿದರೆ, ಆದರ ಪರಿಣಾಮವನ್ನು ಪ್ರಜೆಗಳು ಅನುಭವಿಸಲೇಬೇಕು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 196

“ದುಷ್ಟರಾಗದೆ, ನೀಚರಾಗದೆ, ಭ್ರಷ್ಟರಾಗದೆ ಉಳಿಯುವುದೇ ಒಂದು ದುರ್ದಮ್ಯವಾದ ಸಾಹಸವಾಗಬೇಕಾದ ಪರಿಸ್ಥಿತಿ ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿಯೇ ನಿರ್ಮಾಣವಾಗಿದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 215

“ಅಧಿಕಾರ ಸ್ಥಾನಗಳೆಲ್ಲಾ ಅವೀವೆಕಿಗಳ, ಭ್ರಷ್ಟರ, ಕೊಲೆಗಡುಕರ ಕೈಗೆ ನಿರಂತರವಾಗಿ ಹೋಗುತ್ತಿದ್ದರೆ ನಮ್ಮ ಮಾತು, ಚಿಂತನೆ, ಕಲಾಸೃಷ್ಟಿ, ಪ್ರಶಸ್ತಿಗಳು, ಸನ್ಮಾನಗಳು ಎಲ್ಲ ದಿನದಿಂದ ದಿನಕ್ಕೆ ಅಸಂಗತವಾಗುತ್ತಾ ಹೋಗುತ್ತವೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 220

“ನಾವು ಕೇವಲ ಅಭಿವೃದ್ಧಿ ಮತ್ತು ಅಧಿಕಾರಗಳಿಗಾಗಿ ಮಾತ್ರ ಹುಟ್ಟಿ ಬದುಕುತ್ತಿರುವವರಲ್ಲ, ನಮ್ಮ ಆತ್ಮಗೌರವ ಎಲ್ಲಕ್ಕಿಂತ ಮುಖ್ಯವಾದುದ್ದಲ್ಲವೇ….?”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ- 214

“ಚುನಾವಣೆಯ ರಂಗಸ್ಥಳದಲ್ಲಿ ಕೊನೆಗೂ ನಮಗೆ ಅಯ್ಕೆ ಸೌಲಭ್ಯ ಇರುವುದು ಇದ್ದುದರಲ್ಲಿ ಅತ್ಯಂತ ಕಡಿಮೆ ಖೇಡಿ ಯಾರೆಂದು ನೋಡಿ ಆಯಲು ಅಲ್ಲವೇ…?”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ – 245

ಕುವೆಂಪು ಕುರಿತ ನುಡಿಗಳು
ತೇಜಸ್ವಿಯವರು ಅವರ ತಂದೆ ಬಗ್ಗೆ ಹೇಳಿರುವ ಮಾತುಗಳು
“ವಿಪರೀತ ದಾಕ್ಷಿಣ್ಯ ಮತ್ತು ಸಂಕೋಚಗಳ ಅಣ್ಣ ಕರ್ನಾಟಕ ಮತ್ತು ಕನ್ನಡದ ವಿಷಯ ಬಂದಾಗ ಮಾತ್ರ ಯಾವುದೇ ಮುಲಾಜನ್ನೂ ತೋರಿಸಿದ್ದು ನನಗೆ ಕಂಡಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೬೫

“ನನಗೆ ತಿಳಿದಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದವರು. ಬದಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಠರಂತೆ ಅವಡುಗಚ್ಚಿ ಜೀವಿಸುತ್ತಿದ್ದುದ್ದನ್ನು ನಾನಂತೂ ಕಂಡಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಅಣ್ಣನ ನೆನಪು, ಪುಟ ೩೩

“ಅಣ್ಣನಿಗೆ ವಯಸ್ಸಿನ ಪರಿಮಿತಿ ಇಲ್ಲದಿದ್ದರೆ ಮಹಾಕವಿ ರಾಷ್ಟ್ರಕವಿ ಪದವಿಗಳನ್ನೆಲ್ಲಾ ಕಸದಬುಟ್ಟಿಗೆ ಎಸೆದು ನಮ್ಮ ಜೊತೆ ಗಾಳ ಹಿಡಿದು ಹೊರಡುತ್ತಿದ್ದರೆಂದು ಅನ್ನಿಸುತ್ತದೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಅಣ್ಣನ ನೆನಪು, ಪುಟ ೬೦

“ಅಕ್ಷರ ಕಲಿಯುವದಕ್ಕಿಂತ ಮೊದಲೇ ಚಿತ್ರ ಬರೆಯಲು ಶುರು ಮಾಡಿದವನು. “ಇ” ಅಕ್ಷರವನ್ನು ಸುಲಭವಾಗಿ ಮಾರ್ಪಡಿಸಿ ಇಲಿಯನ್ನೂ,’ಬ’ ಅಕ್ಷರವನ್ನು ಮಾರ್ಪಡಿಸಿ ಸುಲಭವಾಗಿ ಬಾತನ್ನು ಬರೆಯಬಹುದೆಂದು ನಮ್ಮ ತಂದೆಯವರು ತೋರಿಸಿಕೊಟ್ಟ ದಿನದಿಂದಲೇ ಬಹುಶಃ ಚಿತ್ರ ಬರೆಯುವುದಕ್ಕೆ ಆಸಕ್ತಿ ಶುರುವಾಯ್ತೆಂದು ಹೇಳಬಹುದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಹೊಸ ವಿಚಾರಗಳು ಪುಸ್ತಕದಲ್ಲಿನ ಸಂದರ್ಶನದಿಂದ

“ಆಗಿನ ಗೊಂದಲ ದ್ವೇಷಾಸೂಯೆಗಳ ವಾತಾವರಣದಲ್ಲೂ ದೃಢವಾಗಿ ಸಾಹಿತ್ಯ ನಿಷ್ಠೆಯಿಂದ ತಾವು ನಂಬಿದ ಮೌಲ್ಯಗಳ ಆಧಾರದ ಮೇಲೆ ಗಟ್ಟಿಯಾಗಿ ನಿಂತು ಸ್ಪಷ್ಟವಾಗಿ ಮಾತಾಡುತ್ತಿದ್ದವರೆಂದರೆ ಅಣ್ಣ ಒಬ್ಬರೇ”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಅಣ್ಣನ ನೆನಪು’ ಪುಸ್ತಕದಿಂದ

“ಕುವೆಂಪುರವರ ಸಾಮಾಜಿಕ ಕಳಕಳಿ, ಸುಧಾರಣ ದೃಷ್ಟಿ, ವಿಚಾರಶೀಲತೆ ಮೊದಲಾದ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಮರೆತು ಅವರನ್ನು ಕೇವಲ ಕವಿ ಹಾಗೂ ಕಲಾವಿದ ಎನ್ನುವ ನೆಲೆಯಲ್ಲೇ ನಾವು ಗುರುತಿಸುತ್ತಾ ಹೋದರೆ ಅವರ ಅತಃಸ್ಸತ್ವವನ್ನು ನಾವು ತಪ್ಪಾಗಿ ಪ್ರತಿನಿಧಿಸಿದಂತೆ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

“ಕವಿಶೈಲದಲ್ಲಿ ಅಣ್ಣನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಎಲ್ಲಾ ಚಿತೆಯಮೇಲೆ ಒಂದೊಂದು ಗಂಧದ ಚಕ್ಕೆಯನ್ನಿಡುತ್ತಿದ್ದರು. ನನಗೂ ಹೇಳಿದರು. ನನಗೆ ಇದೊಂದು ಶಾಸ್ತ್ರ ಎಂದು ಗೊತ್ತಿರಲಿಲ್ಲ. ಅಂತಿಮ ಗೌರವ ಈ ರೀತಿ ಸಮರ್ಪಿಸುತ್ತಿದ್ದಾರೆ ಎಂದು ಹೋದೆ. ಚಕ್ಕೆ ತೆಗೆದು ಇಡುತ್ತಾ ಇರಬೇಕಾದರೆ ಹಿಂದಿನಿಂದ ಯಾರೋ “ಅಯ್ಯಯ್ಯೋ ಬಲಗೈಲಿ ಇಡಬಾರದು, ಎಡಗೈಲಿ ಇಡಬೇಕು” ಎಂದರು. ಹಿಂದುರಿಗಿ ನೋಡಿದೆ! ನನ್ನ ಮಿತ್ರರಾದ ಡಿ.ಬಿ.ಚಂದ್ರೆಗೌಡರೇ ನಿಂತಿದ್ದಾರೆ! ನನಗೆ ಅಣ್ಣನ ಇಡೀ ಜೀವನದ ಬೋಧನೆ, ಅವಿರತ ಹೋರಾಟ, ಕೊಟ್ಟ ಕೊನೆಯ ಅವರ ಸಂದೇಶ ಎಲ್ಲ ಮನಃಪಲಟದಲ್ಲಿ ಒಂದು ಕ್ಷಣ ಸುಳಿದುಹೊಯ್ತು. ಒಕ್ಕಲಿಗರ, ಶೂದ್ರರ, ದೌರ್ಬಲ್ಯಗಳನ್ನು ನೆನೆದು ದುಃಖವಾಯ್ತು. ಇದು ಮಾತಿಗೆ ಸಮಯವಲ್ಲವೆಂದು ಚೆನ್ನಾಗಿ ಗೊತ್ತಿದ್ದೂ “ಚಂದ್ರೆಗೌಡರೆ, ಕುವೆಂಪು ಇಡೀ ಜೀವಮಾನ ಹೇಳಿದ್ದೆಲ್ಲಾ ನಿರರ್ಥಕ, ನಾನೀಗ ಎಡಗೈಯಲ್ಲಿ ಇಟ್ಟರೆ! ಏನು ಮಾಡಲಿ ಹೇಳಿ!” ಎಂದೆ. ಚಂದ್ರೆಗೌಡರಿಗೆ ನನ್ನ ಪ್ರಶ್ನೆಯ ಅರ್ಥ ತಾಗಿರಬೇಕು. “ನಿಮ್ಮ ಇಷ್ಟ, ಸ್ಸಾರಿ!!” ಎಂದರು. ನಾನು ಎಡಗೈಲಿ ಇಡಲಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೬೧

Saturday, September 7, 2019

ನಿಜವಾದ ದುರ್ಯೋಧನ ಯಾರು?!

ಸುಯೋಧನ & ತಾಯಿ ಗಾಂಧರಿ

ಸುಯೋಧನ (ದುರ್ಯೋಧನ)

ನೀರೊಳಗಿರ್ದಮ್_ಬೆಮರ್ಥಮ್_ಉರಗಪತಾಕ!!!!

ಆ ದಿನ ಕನ್ನಡ ಮೇಷ್ಟ್ರು ಈ ಸಾಲು ಹೇಳ್ದಾಗ ಕಣ್ಣಲ್ಲಿ ನೀರಿತ್ತು. ಮಹಾಭಾರತದಲ್ಲಿ ಅಧಿಕೃತವಾಗಿ ಒಳ್ಳೆಯ ವ್ಯಕ್ತಿತ್ವಗಳು ಎಂದು ತೋರಿಸಿದ್ದು ಪಾಂಡವರನ್ನು , ಎಲ್ಲೋ ಒಂದು ಕಡೆ ಕತೆಯನ್ನ ಮುಂದುವರಿಸಿದಾಗ ನನಗೆ ಇಷ್ಟ ಆಗಿದ್ದು ಸುಯೋಧನ ಮತ್ತು ಕರ್ಣ.ಹಾಗಾಗಿ, ಎಲ್ಲೋ ಒಂದು ಕಡೆ ಕವಿ, ಸುಯೋಧನ ಭೀಮನಿಗೆ ಹೆದರಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ಎಂದಾಗ ಹೃಧಯ ಅದನ್ನು ಒಪ್ಪೊಲ್ಲ. ಅಧಿಕೃತವಾಗಿ ಭೀಮಾರ್ಜುನರನ್ನು ನಾಯಕರನ್ನಾಗಿ ವರ್ಣಿಸಿದಾಗಲೂ ನಮ್ಮಲ್ಲಿ ನಾಯಕರಾಗಿ ಉಳಿಯೋದು ಕರ್ಣ ಮತ್ತು ಸುಯೋಧನ.ಸುಯೋಧನ ವಜ್ರಕಾಯ ತನ್ನತಾಯಿಯಲ್ಲಿ ಆಶೀರ್ವಾದ ಪಡೆಯುವಾಗ ಬೆತ್ತಲೆಯಾಗಿ ತಾಯಿಯಲ್ಲಿ ಹೋಗುತ್ತಾನೆ ಇತ್ತ ತಾಯಿ ತನ್ನ ಮಗನನ್ನ ವಜ್ರಕಾಯನಾಗಲಿ ಎಂದು ಹರಿಸುತ್ತಾಳೆ. ಮುಂದಿನ ಯೋಜನೆಯ ಅರಿವಿದ್ದ ಕೃಷ್ಣ ಸುಯೋಧನಿಗೆ ಮಾನವನ್ನಾದ್ರೂ ಮುಚ್ಚಿಕೊಂಡು ತಾಯಿಯ ಬಳಿ ಹೋಗು ಎಂದು ಪ್ರೇರೇಪಿಸುತ್ತಾನೆ. ಸಂಚು ಅರಿಯದ ಮುಗ್ಧ ಸುಯೋಧನ ಬಾಳೆಯಲ್ಲಿ ತನ್ನ ಮಾನವನ್ನು ಮುಚ್ಚಿಕೊಂಡು ತಾಯಿಯ ಬಳಿ ಹೋಗುತ್ತಾನೆ. ಇದರಿಂದಾಗಿ ಸುಯೋಧನ ಅರ್ಧ ವಜ್ರಕಾಯ. ತೊಡೆಯ ಬಳಿ ಅವನು ವಜ್ರಕಾಯನಲ್ಲ. ಮುಂದೆ ಯುದ್ಧರಂಗದಲ್ಲಿ ಗದಾಯುದ್ಧದಲ್ಲಿ ಭೀಮ ಸೋತು ನಿಂತಾಗ, ಇದೆ ಕೃಷ್ಣ ತನ್ನ ತೊಡೆಯನ್ನೂ ತಟ್ಟುವುದರ ಮೂಲಕ ಭೀಮನನ್ನು ಸುಯೋಧನನ ತೊಡೆ ಮುರುಯುವಂತೆ ನಿರ್ದೇಶಿಶುತ್ತಾನೆ. ಆದರೆ ಗದಾಯುಧ್ಧದಲ್ಲಿ ತೊಡೆಗೆ ಹೊಡೆಯುವಂತಿಲ್ಲ ನಮ್ಮ ನಾಯಕ ಅನಿಸಿಕೊಂಡವ ಯುಧ್ದದ ನಿಯಮವನ್ನು ಉಲ್ಲೇಖಿಸಿ ಕುತಂತ್ರದಿಂದ ಸುಯೋಧನನು ತನ್ನ ಸಾವನ್ನು ನೋಡುವಂತೆ ಮಾಡುತ್ತಾನೆ. ಬೆಟ್ಟದಂತ ಜೀವ, ವೀರ ಜೀವ ತನಗಾದ ಮೋಸದ ಅರಿವಿಲ್ಲದೆ ಮಣ್ಣನ್ನು ಮುಟ್ಟತ್ತೆ....

ಮಹಾ ಪಲಾಯನ - ಪೂರ್ಣಚಂದ್ರತೇಜಸ್ವಿ


*ಮಹಾ ಪಲಾಯನ* ಇದು ಸ್ಲಾವೋಮಿರ್ ರಾವಿಸ್‌ರವರ *ದಿ ಲಾಂಗ್ ವಾಕ್* ಪುಸ್ತಕದ ಅನುವಾದ..
ಸ್ಲಾವೋಮಿರ್ ಸೈಬೀರಿಯಾದಲ್ಲಿರುವ ರಷ್ಯನ್‌ರ ಜೈಲಿನಿಂದ ಪಾರಾಗಿ ಬಂದ ರೋಚಕ ಕಾದಂಬರಿಯಾಗಿದೆ.. ಸ್ಲಾವೋಮಿರ್ ಸ್ವಾತಂತ್ರ್ಯವನ್ನು ಅರಸಿ ಕ್ರಮಿಸಿದ ದೂರ ನಾವು ಊಹಿಸಲು ಕಷ್ಟ... ಸೈಬೀರಿಯಾ,ಗೋಬಿ ಮರುಭೂಮಿ,ಟಿಬೆಟ್, ಹಿಮಾಲಯ ಹೀಗೆ ಅವರು ಸಾವಿರಾರು ಮೈಲಿ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಭಾರತ ತಲುಪುವ ರೀತಿ ಭಾರತೀಯರಲ್ಲಿ ನಮ್ಮ ನಾಡಿನ ಬಗ್ಗೆ ಧನ್ಯತೆ ಮೂಡಿಸುತ್ತದೆ..
ನಾವು ಸಾಗುತ್ತಿರುವ ದಾರಿ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಅರಿವಿಲ್ಲ..
ಆಧುನಿಕತೆಯತ್ತ ಸಾಗುವ ಭರಾಟೆಯಲ್ಲಿ ಮಾನವೀಯ ಮೌಲ್ಯಗಳನ್ನು ಬಿಟ್ಟು ಎಂತಹ ಹೊಲಸು ಯುಗದತ್ತ ಹೆಜ್ಜೆ ಹಾಕುತ್ತಾ ಸಾಗುತ್ತಿರುವುದು ವಿಷಾದಕರ..
ಮನುಷ್ಯ ಆಧುನಿಕತೆಯತ್ತ ಮುನ್ನುಗುವ ಭರದಲ್ಲಿ ನಮ್ಮ ನೈತಿಕ,ಮಾನವೀಯ ಮೌಲ್ಯವನ್ನು  ಬದಿಗೊತ್ತಿ ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯ ಮನುಷ್ಯನನ್ನು ಕೊಲ್ಲುವುದಕ್ಕೂ ಹೇಸುವುದಿಲ್ಲ;ಇದೆನಾ ನಾಗರಿಕತೆಯ ಸಂಸ್ಕೃತಿ?!
ಇಂತಹ *ಹೇಯ ಸಂಸ್ಕೃತಿಯ ನಾಗರಿಕನಾಗಿ ಬಾಳುವುದಕ್ಕಿಂತ ಮಾನವೀಯತೆ ಇರುವ ಅನಾಗರಿಕ ಎನ್ನಿಸಿಕೊಳ್ಳವುದೇ ಲೇಸು*..ಕಾಡುಮೇಡಿನಲ್ಲಿ ವಾಸಿಸುವ ಬುಡಕಟ್ಟು ಜನ ಬಡವರಾದರೂ ಅನಾಗರೀಕರೆನ್ನಿಸಿಕೊಂಡರೂ ಪ್ರೀತಿ,ವಿಶ್ವಾಸ,ಸ್ನೇಹ ಇತ್ಯಾದಿಗಳಲ್ಲಿ ನಾಗರಿಕ ಪ್ರಪಂಚಕ್ಕಿಂತ ಸಾವಿರಾರು ಪಾಲು ಮೇಲು..
ನಾವು ಮರಳಿ ದಿಗಂತದಿಂದ ದಿಗಂತಕ್ಕೆ ಕಾಲೆಳೆಯುತ್ತಾ ಹಿಂದಿರುಗುವುದಲ್ಲೇ ನಮ್ಮ ಉಳಿವು ಇದೆ.
ಸೈಬೀರಿಯನ್ ಜೈಲಿನ ಪಲಾಯನದಿಂದ ಪಯಣ ಪಾಶ್ಚಾತ್ಯ & ಪೌರಾತ್ಯ ರಾಷ್ಟ್ರಗಳಲ್ಲಿರುವ ಮಾನವೀಯತೆ ಅಂತರವನ್ನು ತಿಳಿಸುತ್ತದೆ.. ಅಂದು ಜಗತ್ತಿಗೆ ಉದಾತ್ತ ಮೌಲ್ಯಗಳನ್ನು ನೀಡಿದ ನಮ್ಮ ದೇಶದ ಇಂದಿನ ಮನಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ..
ಒಟ್ಟಿನಲ್ಲಿ *ಹಿಡಿದ ಗುರಿಯನ್ನು ಸಾಧಿಸುವ ಸ್ಲಾವೋಮಿರ್‌ನಲ್ಲಿನ ಅದಮ್ಯ ಚೇತನ ನಮ್ಮೆಲ್ಲರಿಗೂ ಸ್ಪೂರ್ತಿ ಆಗಲಿ*🙏🏻🙏🏻
ಪುಸ್ತಕ ಒಮ್ಮೆ ಓದಿ..

Monday, September 2, 2019

ತೇಜಸ್ವಿ ನೆನಪು

ತೇಜಸ್ವಿ ನೆನಪು -೨

#ತೇಜಸ್ವಿಇಲ್ಲದಜಗತ್ತಿನಲ್ಲಿನಾನೂಇರಲಾರೆ

ಸಂತೆಯೊಳಗೆ ಸಿಕ್ಕ ಸಂತ ಕಾಡಲ್ಲಿ ಕಣ್ಮರೆಯಾದ:

 ನಾನೀಗ ಒಂದು ಸಿನಿಮಾ ಮಾಡ್ತಿದ್ದೀನಿ. ಅದರಲ್ಲಿ ನಾಯಕ ಒಂದು ಬಿಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ.ಅವನನ್ನು ಬಿಟ್ಟು ನಂಬಿದ್ದವರೆಲ್ಲಾ ದೂರ ಸರಿಯುತ್ತಾರೆ.ಅವನನ್ನು ತಪ್ಪು ತಿಳಿದುಕೊಳ್ತಾರೆ.ಆಗ ಅವನು ಸ್ವಗತದಲ್ಲಿ ಹೇಳಿಕೊಳ್ತಾನೆ: “ಜಗತ್ತಿನ ಹಿಂದೆ ಸಾವಿರಾರು ಜನ ಹೋಗೋದು ದೊಡ್ಡ ಸಂಗತಿಯಲ್ಲ ಒಬ್ಬ ವ್ಯಕ್ತಿಯ ಹಿಂದೆ ಜಗತ್ತು ಹೋಗೋದು ದೊಡ್ಡ ಸಂಗತಿ.ಅಂಥ ಇತಿಹಾಸ ಸೃಷ್ಠಸೋದ್ರಲ್ಲಿ ನನಗೆ ನಂಬಿಕೆ” ಈ ಮಾತನ್ನು ಹೇಳಿಕೊಳ್ತಾ ಗಟ್ಟಿಯಾಗಲು ಪ್ರಯತ್ನಿಸುತ್ತಾನೆ.ಇಂತಾ ಬಿಕ್ಕಟ್ಟು ಎಲ್ಲಾ ಮನುಷ್ಯರ ಲೌಕಿಕ ಬದುಕಿನಲ್ಲಿ ಎದುರಾಗ್ತಿರತ್ತೆ.ಆಗ ಮನುಷ್ಯರು ಬಹಳಷ್ಟು ಜನ, ಜಗತ್ತು ಹೋದ ಕಡೆಗೆ ಜೈಕಾರ ಹಾಕಿ,ಲಾಭ ಪಡೆದು ,ಸ್ವಸ್ಥರಾಗಿ ಮುಗುಳ್ನಗುತ್ತಾ ಆತ್ಮ ವಂಚಕರಾಗಿ ಇದ್ದುಬಿಡುತ್ತಾರೆ.

         ಒಂದು ಕಾಕತಾಳೀಯ ಏನೆಂದರೆ ಮೇಲಿನ ಸಂಭಾಷಣೆಯನ್ನು ಒಂದು ಸ್ಟುಡಿಯೋದಲ್ಲಿ ದ್ವನಿಮುದ್ರಿಸುತ್ತಾ ಪ್ರಿಮಿಕ್ಸ್ ಮಾಡ್ತಿದ್ದೆ. ಗೆಳೆಯ ರವೀ ಕರೆ ಮಾಡಿ ಖಿನ್ನ ದನಿಯಲ್ಲಿ “#ತೇಜಸ್ವಿಹೋಗ್ಬಿಟ್ರು” ಎಂದ. ಕಣ್ಣು ಪಸೆಯಾಯಿತು.ಈ ದುಷ್ಟ ಫೋನ್ ಮಾಡೋದೇ ಯಾರಾದ್ರು ಸತ್ತಸುದ್ದಿ ಹೇಳೋಕೆ. ನಾನು ಅವನಿಗೆ ಫೋನ್ ಮಾಡೋದು ಯಾರಾದ್ರೂ ಸತ್ತ ಸುದ್ದಿ ಹೇಳೋಕೆ ಅನ್ನೊ ಹಂಗಾಗಿದೆ.ಸಿಜಿಕೆ ತೀರಿಕೊಂಡಾಗ ನಾನು ಮೊದಲು ಕರೆಮಾಡಿದ್ದು ಅವನಿಗೇ. ರವೀ ಫೋನು ಬಂದರೆ ಕಂಗಾಲಾಗುವಂತೆ ಆಗತ್ತೆ. ಸಿಜಿಕೆ,ಲಂಕೇಶ್ ತೀರಿಕೊಂಡಾಗ ಹೇಗೆ ಮನಸ್ಸು ಮಿಲಿಮಿಲಿಗುಟ್ಟಿತ್ತೋ ಈಗ್ಲೂ ಹಾಗೇ ಆಯ್ತು. ತೆರೆಯ ಮೇಲೆ ರಿವೈಂಡ್ ಮಾಡಿದ್ರೆ ಆಗತಾನೆ ಮುದ್ರಿಸಿದ್ದ ಮಾತು ಪ್ರತಿದ್ವನಿಸಿತು.
 #ಜಗತ್ತಿನ ಹಿಂದೆ ಸಾವಿರಾರು ಜನ ಹೋಗೋದು ದೊಡ್ಡ ಸಂಗತಿಯಲ್ಲ. ಒಬ್ಬ ವ್ಯಕ್ತಿಯ ಹಿಂದೆ ಜಗತ್ತು ಹೋಗೋದು ದೊಡ್ಡ ಸಂಗತಿ”

     ನಾವೆಲ್ಲಾ ನಡೆದದ್ದು ತೆಜಸ್ವಿ ಅಂಥವರ ಹಿಂದೆ.
     ತೇಜಸ್ವಿ ಹಾಗೆ ಇದ್ದದ್ದು.

    ಅಪ್ಪ,ಅಪ್ಪ ಕುಲಪತಿಯಾಗಿದ್ದ ಯೂನಿವರ್ಸಿಟಿ,ಅಲ್ಲಿನ ಲಾಬಿ ಬಿಟ್ಟು ನಗರದ ಆತ್ಮವಂಚನೆಗೆ ಬೆನ್ನುಮಾಡಿ ಕಾಡಿನ ಕಡೆ ನಡೆದುಬಿಟ್ಟರು.ಕಾಡಿಗೆ ಹೋಗುವವರು ಋಷಿಗಳು .ಕಾಡಲ್ಲಿ ನಿಂತರು.ಧ್ಯಾನಿಸಿದರು.ಬರೆದರು.ಅಕಾಡೆಮಿ ಪರಿಷತ್ತುಗಳ ಬಾಗಿಲಲಿ ನಿಂತು ಹಲ್ಲುಗಿಂಜಲಿಲ್ಲ.ಮುಖಕ್ಕೆ ಹೊಡೆದಂತೆ ಮಾತನಾಡುತಿದ್ದರು.
    ಅಮೆರಿಕಾ #ಅಕ್ಕಸಮ್ಮೇಳನಕ್ಕೆ ಭಾರತದಿಂದ ಬಸ್ ಮಾಡಿಕೊಂಡು ಹೋಗುತ್ತಾರಲ್ಲ- ಹೋಗಲು ಮೂರು ವರ್ಷಮುನ್ನ ತಾಲೀಮು ನಡೆಸುತ್ತಾರಲ್ಲ-ಸರ್ಕಾರದ ಹಣ ನುಂಗುತ್ತಾರಲ್ಲ- ಈ ತೇಜಸ್ವಿ ಎಂತ ನಿಷ್ಟುರವಾದಿಯಾದ್ರೂ ಅಂದ್ರೆ ಅಕ್ಕನ ವ್ಯವಸ್ಥಾಪಕರಿಗೆ “ನಾನೆಲ್ಲೂ ಬರೋಲ್ಲ. ನನ್ನವಿಮಾನದ ಟಿಕೇಟಿನ ಹಣವನ್ನು ಯಾವುದಾದ್ರು ಕನ್ನಡದ ಉಪಯುಕ್ತ ಕೆಲಸಗಳಿಗೆ ಖರ್ಚುಮಾಡಿ.ಇಂಡಿಯಾಕ್ಕೆ ಬಂದಾಗ ನಮ್ ತೋಟಕ್ಕೆ ಬಂದು ಅಲ್ಲಿ ಎನ್ ಮಾಡ್ತಿದ್ದೀರ ಅಂತ ಹೇಳಿವ್ರಂತೆ. ನನ್ನನ್ನ ಮಾತ್ರ ಕರೀಬೇಡಿ” ಅಂತ ಖಡಾಖಂಡಿತವಾಗಿ ಹೇಳ್ತಿದ್ರು.ಅನೇಕ ಲೇಖಕರು ಸರ್ಕಾರ ಅಥ್ವಾ ಸಂಘಟನೆಗಳ ಹಣದಲ್ಲಿ,ಜುಬ್ಬಾ ಇಸ್ತ್ರೀ ಮಾಡ್ಕೊಂಡು ಗುಲಾಬಿ ಇರಿಸ್ಕೊಂಡು ರೆಡಿಯಾಗ್ತಿದ್ದಾಗ ತೇಜಸ್ವಿ ಹೀಗಿದ್ರು.

     ನಮ್ಮ ಓರಗೆಯ ಲೇಖಕರಿಗೆ ತೇಜಸ್ವಿ ಮಾನಸ ಗುರು.ಲಂಕೇಶ್,ಅನಂತಮೂರ್ತಿ, ಅಡಿಗ, ತೇಜಸ್ವಿ- ಎಲ್ರೂ ನಮ್ಮಗ್ರಹಿಕೆಯನ್ನು ರೂಪಿಸಿದೋರು.ಯೋಚಿಸೋದನ್ನ ಕಲಿಸಿದೋರು.ಜೀವನವನ್ನ ನೋಡೋದು ಹೇಗೆ ಅಂತ ತಿಳಿಸಿದೋರು. ಈ ನಾಲ್ವರಲ್ಲಿ ತೇಜಸ್ವಿ ತುಂಬಾ ವಿಶೇಷ ವ್ಯಕ್ತಿ.ಮಾಯಾಲೋಕ ಒಂದನ್ನು ಬಿಟ್ಟರೆ ಅವರೆಲ್ಲ ಪುಸ್ತಕವನ್ನು ನಾನು ಓದಿದ್ದೀನಿ. ಅವರ ಪುಸ್ತಕಗಳು ಪಠ್ಯವಾದ್ರೆ ನಾವು ಮೇಷ್ಟರುಗಳು ಅದೆಷ್ಟು ಸಂಭ್ರಮದಿಂದ ತರಗತಿ ಕೋಣೆಗೆ ನುಗ್ತಿದ್ವು ! ತಮಾಷೆಗೆ ಗಾಢವಾದ ಚಿಂತನೆಗಳನ್ನೂ ತೇಜಸ್ವಿ ಸೃಷ್ಟಿಸ್ತಿದ್ರು.ಕರ್ವಾಲೋನ ಬಾಯಿಪಾಠ ಆಗೋವಷ್ಟು ಓದಿದ್ದೀನಿ.ಆ ಮಂದಣ್ಣ ಕರಿಯಪ್ಪ,ಪ್ಯಾರ,ಕಿವಿ,ಎಂಗ್ಟ,ಪ್ರಭಾಕರ- ಅವು ಯಾವಾಗ್ಲೂ ಕಾಡೋ ಪಾತ್ರಗಳು .

  #ಕಾಲದಅನಂತತೆಯಲ್ಲಿ ಯಾವ ಯಾವ ಮನ್ವಂತರಗಳಾಚೆಗೆ ಒಯ್ಯಬೇಕಾದ ಸಂದೇಶಗಳಿವೆಯೋ? ತೇಜಸ್ವಿ ಎಂಬ ಮಾಂತ್ರಿಕ ಯಾವ ಸಂದೇಶ ಹೊತ್ತು ಒಯ್ದಿದ್ದಾರೋ? ಕಾಲವೆ ಕೊನೆಗೊಂಡಂತಿರೋ ಕೋಡುಗಲ್ಲಿನ ಮುಂದೆ ವಿಶಾಲ ಶೂನ್ಯದ ಎದುರು ನಿಂತಿದ್ದಾರೋ? ಅಥವಾ ಕೋಟಿ ಕೋಟಿ ಜ್ಯೋತಿರ್ವರ್ಷಗಳವರೆಗೆ ಹಬ್ಬಿದ ಅನಂತ ಶೂನ್ಯದತ್ತ ಕುಪ್ಪಳಿಸಿ,ಚಿಮ್ಮಿ ತೇಲಿ ತೇಲಿ ಸುಯ್ಯನೆ ಹಾರಿ ಹೋದರೋ ? ಹೇಳೋದು ಕಷ್ಟ.

 ಮೊದಲ ಬಾರಿ ತೇಜಸ್ವಿಯವರನ್ನುಖುದ್ದು ನೊಡಿದ್ದು ನಮ್ಮೂರ ಸಂತೆಯಲ್ಲಿ.ದನಿನ ಯಾಪಾರ,ಬೆಣ್ಣೆ ಯಾಪಾರ ಮಸ್ತು ನಡೆಯೋದನ್ನ ಅವಲೋಕಿಸುತ್ತಾ ನಿಂತಿದ್ರು.ಅವಲೋಕನ ಅನ್ನುವುದು ಒಂದು ಪ್ರತಿಭೆ.ಸಮಾಜಮುಖಿಯಾದೋನು,ಕಲೆಗಾರನಾದೋನು ಮಾತ್ರ ಹೆಚ್ಚು ಮಾತನಾಡದೆ ನೋಡ್ತಿರ್ತಾನೆ. ಲಂಕೇಶ್ ಪತ್ರಿಕೆಯ ಕಚೇರಿಯಲ್ಲಿ ಅವರನ್ನ ಆಗಾಗ ನೋಡ್ತಿದ್ದೆ.ಒಂದೆರೆಡು ಸಲ ಡ್ಯಾಕುಮೆಂಟರಿ ಮಾಡುವಾಗ ಅವರ ತೋಟಕ್ಕೆ ಹೋಗಿದ್ದೆ.ಅವರನ್ನ ಮಾತನಾಡ್ಸೋಕೆ ಏನೋ ಹಿಂಜರಿಕೆ. ಅವರ ಬಳಿ ವಿಷಾದ ಬಹಳ ಇತ್ತು.ತಮಾಷೆ ಬಹಳ ಇತ್ತು. ನದಿಗಳನ್ನು ಕಡ್ಸೋರ ಗಂಟಲಿಗೆ ಆ ವಿಷಮಯವಾದ ನದೀ ನೀರನ್ನು ಕೆಡವಿಕೊಂಡು ಕುಡಿಸ್ಬೇಕ್ರಿ ಅನ್ತಿದ್ರು. ಒಂದು ಕಡೆ ಅವರು ಹೇಳಿದ್ದು ನೆನಪಾಗ್ತಿದೆ.” ಭಾರತದಲ್ಲಿ ರಿಲೀಜಿಯಸ್ ಆಗುವ ಕವಿ ಜನತಾ ದ್ರೋಹಿಯಾಗುತ್ತಾನೆ. ಏಕೆಂದರೆ ಭಾರತದ ಬಹುತೇಕ ಧರ್ಮಗಳೆಲ್ಲ ಮಾನವೀಯತೆಗೆ ವಿರೋಧಗಳಾಗಿವೆ.” ಬದುಕು ನಶ್ವರವೆಂದು ನಿರಾಕರಿಸುವ ಧರ್ಮಗಳನ್ನು ಜೀವನಪ್ರೀತಿ ಉಳ್ಳ ಯಾವನೇ ಲೇಖಕ ನಿರಾಕರಿಸುವುದು ಉಚಿತವಾದದ್ದೆ.

   ನನಗೆ ತಿಳಿದಂತೆ ಅವರು ಒಂದೇ ಒಂದು ಪ್ರಶಸ್ತಿ ಸಮಾರಂಭಕ್ಕೆ ಬಂದು ಪ್ರಶಸ್ತಿನೂ ಸ್ವೀಕರಿಸಿದ್ರು. ಅದೇ ವೇದಿಕೆಯಲ್ಲಿ ನನ್ನದೊಂದು ಚಿತ್ರಕ್ಕೂ ಪ್ರಶಸ್ತಿ ಬಂದಿತ್ತು. ತೇಜಸ್ವಿ ಖಂಡಿತಾ ಬರೋದಿಲ್ಲ ಅಂದ್ಕೊಂಡೇ ನಾನು ಹೋಗಿದ್ದೆ. ಆದರೆ ತೇಜಸ್ವಿ ಸಕಾಲಕ್ಕೆ ಬಂದ್ರು. ನೀವು ಬರಲ್ಲ ಅನ್ಕಂಡಿದ್ದೆ ಅಂದೆ ನಾನು. “ಇಂತಾ ಕಡೆ ಬರಬೇಕು ಅನ್ನಿಸ್ತು. ಇದು ಅಲ್ಪ ಸಂಖ್ಯಾತರ ಶೈಕ್ಷಣಿಕ ಸಂಸ್ಥೆ.ಜಾತ್ಯಾತೀತವಾಗಿ ನಡೆಸ್ತಿದ್ದಾರೆ. ಪ್ರಶಸ್ತಿಗಿಂತ ಮುಖ್ಯವಾಗಿ ನಾವೆಲ್ಲ ಬರೋದ್ರಿಂದ ಅವರ ಜಾತ್ಯಾತೀತ ನಿಲುವುಗಳಿಗೆ ಬೆಂಬಲಿಸಿದ ಹಾಗೆ ಆಗುತ್ತೆ.ಇಲ್ಲಿ ರಾಜಕಾರಣ,ಸರ್ಕಾರದ ಹಣ ಇಲ್ಲ. ಅದಕ್ಕಾಗಿ ಬಂದೆ” ಎಂದರು ತೇಜಸ್ವಿ. ಅದು ‘ಸಂದೇಶ’ ಪ್ರಶಸ್ತಿ.ಮಂಗಳೂರಿನ ಕ್ರೈಸ್ತ ಸಂಸ್ಥೆ ಸಂದೇಶ ವಿದ್ಯಾಲಯ ಬಹಳ ವರ್ಷಗಳಿಂದ ಕೊಡಮಾಡುತ್ತಿರೊ ಪ್ರಶಸ್ತಿ.

      ಅವರು ವಿಜ್ಞಾನವನ್ನು ಫ್ರಿಕ್ಷನ್ ಆಗಿಸಿ ರಸವತ್ತಾಗಿ ಹೇಳುತಿದ್ದುದು ಸೋಜಿಗ. #ಕರ್ವಾಲೊ ಇದಕ್ಕೆ ಸೂಕ್ತ ಉದಾಹರಣೆ.
 
ನಾನು ವಿಜ್ಞಾನದ ಪಧವೀದರನು ಅಲ್ಲ.ವಿಜ್ಞಾನಿಯೂ ಅಲ್ಲ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಲ ಕೌತುಕಮಯ ವಿದ್ಯಮಾನಗಳನ್ನು ನೋಡುತ್ತಾ, ಪಶುಪಕ್ಷಿ ಕ್ರಿಮಿಕೀಟಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಷ್ಟೆ ನಾನು ಅವುಗಳ ಬಗ್ಗೆ ಅಭ್ಯಾಸ ಮಾಡಿದೊನು” ಎನ್ನುತ್ತಾರೆ. ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು ಪುಸ್ತಕದ ಮುನ್ನುಡಿಯಲ್ಲಿ. ತೇಜಸ್ವಿ ಬರೆಯದಿದ್ದರೆ ಕನ್ನಡ ಸಾಹಿತ್ಯ ವಿಜ್ಞಾನದ ಗೈರುಹಾಜರಿಯಿಂದು ಮುಕ್ಕಾಗುತಿತ್ತು! ಕಾಡಿನ ಮೌನದಲ್ಲಿ ಧ್ಯಾನಕ್ಕೆ ಕೂತ ತೇಜಸ್ವಿ ಮಿಸ್ಸಿಂಗ್ ಲಿಂಕ್ ನ ಮುನ್ನುಡಿಯಲ್ಲಿ ಏನನ್ನುತ್ತಾರೆ ಗೊತ್ತೆ?

      ಕನ್ನಡದಲ್ಲಿ ಏನೂ ಇಲ್ಲ.ಇರುವುದೆಲ್ಲಾ ಬೂಸಾ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ ನಮ್ಮ ಅಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ.
 ***************************************************
 ಅವರ ಸಾವಿಗೆ ಹೋಗಲೇಬೇಕು – ಕಡೆಯಾದಾಗಿ ಅವರ ಮುಖ ನೋಡಬೇಕು ಅನಿಸಿತು.ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಶರವೇಗದಲ್ಲಿ ಕಾರು ಓಡಿಸುತ್ತಾ ಮೂಡಿಗೆರೆ ತಲುಪಿ ಅವರ ತೋಟಕ್ಕಿಳಿದಾಗ ತೇಜಸ್ವಿ ಆಗಲೇ ವ್ಯಾನ್ ಏರಿದ್ದರು. ಅದರ ಬಾಗಿಲು ಬಂದ್ ಆಗಿತ್ತು.ವಿನಂತಿಸಿಕೊಂಡ ಮೇಲೆ ಬಾಗಿಲು ತೆರೆದರು. ಗಾಜಿನ ಪೆಟ್ಟಿಗೆಯಲ್ಲಿ ತೇಜಸ್ವಿ ಮಲಗಿದ್ದರು – ಹೊಸ ಕಾದಂಬರಿಯ ಹೊಳಹಿನಲ್ಲಿದ್ದವರಂತೆ ಅವರು ಕುಪ್ಪಳ್ಳಿಗೆ ಹೊರಟಿದ್ರು.

 “ಬೇಗ ಇಳಿಯಿರಿ.ಲೇಟ್ ಅಗುತ್ತೆ. ನೀವು ವ್ಯಾನಿನಲ್ಲಿರುವ ಪೋಲೀಸರ ಅನುಮತಿ ಕೊಡುವುದಿಲ್ಲ’ ಎಂದು ಅದಾರೋ ಒತ್ತಾಯಿಸಿದರು. “ಸುಮ್ನಿರಯ್ಯ ಅವ್ರೇನೋ ನನ್ನ ಮುಖ ನೋಡೊಕೆ ಬಂದಿದರೆ- ದೂರದಿಂದ. ನೋಡ್ಕಳ್ಳಿ ಬಿಡಯ್ಯ,ಎಲ್ಲಿಗೋಗ್ಬೇಕು ....... ಹೋಗಿ ಏನ್ ಮಾಡ್ಬೆಕು ?” ಎಂದು ತೆಜಸ್ವಿ ನಕ್ಕಿ ಹೇಳಿದಂತಾಯ್ತು. ನಮಸ್ಕರಿಸಿ ಕೆಳಗಿಳಿದೆ. ಮುಖ ನೋಡುವುದು ನಮಸ್ಕರಿಸುವುದು ರಿಚುಯಲ್ ಗಲಿರಬಹುದು. ಆದರೆ ನನ್ನ ಯೋಚನೆಗಳನ್ನು ಹದಗೊಳಿಸಿದ್ದ,ಬದುಕನ್ನು ಪ್ರಕೃತಿ ಶ್ರದ್ದೆಯ ಮೂಲಕ ಪ್ರೀತಿಸಲು ಕಲಿಸಿದ್ದ ಮಾನಸಗುರುವಿಗೆ ಮುಖ ನೋಡದಿದ್ದರೆ ಕೊರಗಬೇಕಾಗುತಿತ್ತು.

    ತೇಜಸ್ವಿ ಇಲ್ಲದ ಜಗತ್ತಿನಲ್ಲಿ ನಾನೂ ಇರಲಾರೆ – ಎಂಬ ಮಾತಾಡಿದ್ದಾರೆ ಅನಂತಮೂರ್ತಿ.


      #ನಿಜತೇಜಸ್ವಿಇಲ್ಲದಜಗತ್ತಿನಲ್ಲಿಯಾರೂಇರಲಾರರುಏನೂಇರಲಾರದು.

- ನಾಗತಿಹಳ್ಳಿ ಚಂದ್ರಶೇಖರ