ಪಾಕಕ್ರಾಂತಿ & ಇತರೆ ಕಥೆಗಳು
ಪೂರ್ಣಚಂದ್ರ ತೇಜಸ್ವಿ
ಇದು ತೇಜಸ್ವಿಯವರ ಕಥಾಸಂಕಲನ, ತೇಜಸ್ವಿ ಅವರ ತಮ್ಮ ಜೀವನದ ಅನುಭವಗಳೇ ಕಥೆಗಳ ರೂಪದಲ್ಲಿ ಹೇಳಿದ್ದಾರೆ. ತೇಜಸ್ವಿ ಅವರ ಖಾಸಗೀ ಬದುಕಿನ ಬಗ್ಗೆ ಓದುಗರಲ್ಲಿ ಉಂಟಾಗುವ ಕುತೂಹಲವನ್ನು ತಣಿಸುವ ಕೃತಿ ಪಾಕಕ್ರಾಂತಿ. ತೇಜಸ್ವಿ ಸೃಷ್ಟಿಸಿರುವ ಪಾಕ ಲೋಕದಲ್ಲಿ ನಮ್ಮನ್ನೂ ನಾವು ಕಂಡುಕೊಂಡರೆ ಅದೇ ಅಚ್ಚರಿ.
ಇದರಲ್ಲಿ ಒಟ್ಟು 12 ಕಥೆಗಳಿವೆ,ಇದರಲ್ಲಿ ಪಾಕಕ್ರಾಂತಿಯೇ ಮೇರು ಕಥೆ..
ಪಾಕಕ್ರಾಂತಿ:- ಅಡುಗೆ ಕಲೆ ಅರಿಯದವರು ಅದೊಂದು ಸುಲಭ ಕಾರ್ಯ ಎಂದು ಪರಿಗಣಿಸಲಾಗುತ್ತರೆ.ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತೇಜಸ್ವಿರವರೂ ಹಾಗೇ ಭಾವಿಸಿ ಪಡುವ ಸಂಕಷ್ಟಗಳನ್ನು ಹಾಗೂ ಅವರು ಅಡುಗೆ ವಿಧಾನದಲ್ಲಿ ತರಬಯಸುವ ಕ್ರಾಂತಿಕಾರಿ ಬದಲಾವಣೆಗಳೇ ಪಾಕಕ್ರಾಂತಿ..
ತೇಜಸ್ವಿ ಅವರ ವಿಜ್ಞಾನಿ ಮಿತ್ರ ಹಾಲಿಲ್ಲದೇ ಕಾಫಿ ಮಾಡಬಹುದು ಎಂಬ ಸಲಹೆ ಮೇರೆಗೆ ತೇಜಸ್ವಿ ಮೊದಲಬಾರಿಗೆ ಕಾಫಿ ಮಾಡುತ್ತಾರೆ,ಅದು ಕರ್ರಗೆ ನೀರಾದ ಟಾರಿನಂತೆ ಕಾಣುತ್ತಿರುತ್ತದೆ.ಅದರ ರುಚಿ ನೋಡಿ ಅವರ ಮಿತ್ರ ಓಡಿಹೋಗವ ಪರಿ ನೆನೆದು ಹೊಟ್ಟೆಹುಣ್ಣಗುವಂತೆ ನಗುವುದು ಖಚಿತ..
ತೇಜಸ್ವಿ ಕುಕ್ಕರ್‌ನಲ್ಲಿ ಅಡುಗೆಯ ಪ್ರಯೋಗ ಮಾಡಲು ಹೋಗಿ ಅದು ಬಾಂಬ್ ರೀತಿ ಸಿಡಿದದ್ದು,ಅದೇ ಸಮಯದಲ್ಲಿ ಅಲ್ಲಿದ್ದ ಪೋಲಿಸ್‌ರು ತೇಜಸ್ವಿಯವರನ್ನು ಉಗ್ರಗಾಮಿ ರೀತಿ ನೋಡಿದು ತುಂಬಾ ಹಾಸ್ಯಮಯವಾಗಿ ಬರೆದಿದ್ದಾರೆ. ಎಂತಾ ಗಂಭೀರ ಸಂದರ್ಭವನ್ನು ತಮ್ಮ ತಿಳಿ ಹಾಸ್ಯದ ಮುಖಾಂತರ ಓದುಗರಿಗೆ ಮುಟ್ಟಿಸುವಲ್ಲಿ ತೇಜಸ್ವಿ ಸಿದ್ಧಹಸ್ತರು.
ಕಳ್ಳನ ಕಥೆ:- ಮಕ್ಕಳಾದ ಸುಸ್ಮಿತ - ಈಶಾನ್ಯೆ ಕಳ್ಳನ ಬಗ್ಗೆ ಮಾತನಾಡಿಕೊಳ್ಳುವ ಸಣ್ಣಕಥೆ..
ಸುವರ್ಣ ಸ್ವಪ್ನ:- ಹತ್ತೂರಿನ ರಮೇಶನ ಸುವರ್ಣ ಸ್ವಪ್ನದ ಮಾಯಲೋಕದ ಕಲ್ಪನೆ ಬಗ್ಗೆ ಮಲೆನಾಡಿನಲ್ಲಿ ಸಾಮಾನ್ಯದಂತಿದ್ದ ಕಳ್ಳಸಾಗಣೆ ಬಗ್ಗೆ ಸುಂದರವಾಗಿ ಹೇಳಲಾಗಿದೆ..
ಪಿಶಾಚಿಗಳು:- ತಾರಾ ಮತ್ತು ಹೇಮಂತ ನಡುವಿನ ಬಾಂಧವ್ಯ ಹಾಗೂ ಮಲೆನಾಡಿನ ಸೌಂದರ್ಯ ವರ್ಣಿಸಲು ನೀಡುವ ಹೋಲಿಕೆಗಳು ಆಹಾ ಅದ್ಭುತ..
ಮಳೆಗಾಲದ ಚಿತ್ರ:- ಪಾಪಣ್ಣ & ಮುದ್ದಪ್ಪ ಮೂರ್ಖ ಸಹೋದರರು ಮಳೆಯನ್ನು ಶಪಿಸುವ ಪ್ರಸಂಗಗಳು,ಪಾಪಣ್ಣನ ಗದ್ದೆ;ಮುದ್ದಪ್ಪ ಮೀನುಗಾರಿಕೆ ಕಲೆಯ ವರ್ಣನೆ ಚೆನ್ನಾಗಿದೆ..
ಹೀಗೆ ಈ ಪುಸ್ತಕದಲ್ಲಿ ನಗು, ಸಂತೆ, ಮೃತ್ಯೋರ್ಮಾ, ವನ ವರಾಹಗಳು, ಮೂಡಿಗೆರೆ ಎಂಬ ಊರು, ದನಗಳು, ಸಿತಾರ್ ವಾದ್ಯದ ಕಥೆಗಳಿವೆ..
ಪ್ರತಿಯೊಂದು ಕತೆಯು ತೇಜಸ್ವಿಯವರ ಜೀವನದ ಭಾಗವಾಗಿ ಓದುಗನಿಗೆ ಬಹಳ ಹಿತ ಎನ್ನಿಸುತ್ತವೆ.ಕಾಡಿನ ಸೌಂದರ್ಯ,ಬೇಟೆಯ ಸನ್ನಿವೇಶಗಳು ನಿಮ್ಮನ್ನು ಮಲೆನಾಡ ಕಾಡಿನ ಕಡೆ ಕೈಬೀಸಿ ಕರೆಯುತ್ತವೆ...

No comments:
Post a Comment