ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Monday, October 5, 2020

ಅಣ್ಣನ ನೆನಪು

 ಪುಸ್ತಕ:- ಅಣ್ಣನ ನೆನಪು

ಲೇಖಕರು:- ಪೂರ್ಣಚಂದ್ರ ತೇಜಸ್ವಿ



ಪೂರ್ಣಚಂದ್ರ ತೇಜಸ್ವಿಯವರು ತಮ್ಮ ತಂದೆ ರಾಷ್ಟ್ರಕವಿ ಕುವೆಂಪುರವರನ್ನು ಕೇಂದ್ರವನ್ನಾಗಿಟ್ಟುಕೊಂಡು ರಚಿಸಿರುವ ಪುಸ್ತಕವೇ ಅಣ್ಣನ ನೆನಪು (1996)..

ತೇಜಸ್ವಿಯವರೇ ಹೇಳುವಂತೆ ಇದು ಆತ್ಮಚರಿತೆಯೋ,ಅಣ್ಣನ ನೆನಪೋ ಎನ್ನುವ ಗೊಂದಲ ಸೃಷ್ಟಿಸುತ್ತದೆ.. ತೇಜಸ್ವಿಯವರು ಕುವೆಂಪುರವರೊಂದಿಗಿರುವ ತಮ್ಮ ಜೀವನದ ಅನುಭವಗಳನ್ನು ಕಥನ ರೂಪದಲ್ಲಿ ಹೇಳುತ್ತಾರೆ. ಇದೊಂದು ರೀತಿಯಲ್ಲಿ ಅನುಭವ ಕಥನ; ಕುವೆಂಪುರವರ ಜೀವನಚರಿತ್ರೆ; ಹಾಗೂ ತೇಜಸ್ವಿಯವರ ಆತ್ಮಚರಿತೆಯೂ ಹೌದೆನ್ನಬಹುದು.‌



ಅಣ್ಣನ ನೆನಪು ಪುಸ್ತಕ 41 ಅಧ್ಯಾಯಗಳನ್ನು ಒಳಗೊಂಡಿದ್ದು,ತೇಜಸ್ವಿಯವರ ಜೀವನದ ಅನುಭವಗಳನ್ನು ಹೇಳುತ್ತ ಸಾಗುತ್ತದೆ...

ಪ್ರತಿ ಅಧ್ಯಾಯದಲ್ಲಿ ಹಾಸ್ಯದ ಹೊನಲು ತುಂಬಿರುವುದನ್ನು ಕಾಣುತ್ತೇವೆ.. ತಂದೆ-ಮಗನ ನಡುವಿನ ಅನ್ಯೂನತೆ ಹಾಗೂ ರಾಷ್ಟ್ರಕವಿ,ಜಗದ ಕವಿ, ರಸಋಷಿ ಎಂದೆಲ್ಲಾ ಭಾವಿಸಿ ದೇವತಾ ಮನುಷ್ಯನಂತೆ ಕಂಡ ಕುವೆಂಪುರವರು ಇಲ್ಲಿ ನಮಗೆ ನಮ್ಮೆಲ್ಲರಂತೆ ಸಾಮಾನ್ಯ ಮನುಷ್ಯನಾಗಿ,ಪ್ರೀತಿಯ ಅಪ್ಪನಾಗಿ,ಪ್ರಾಧ್ಯಾಪಕರಾಗಿ, ಉತ್ತಮ ಕುಲಪತಿಗಳಾಗಿ ಕಾಣಸಿಗುತ್ತಾರೆ..

ತೇಜಸ್ವಿಯವರ ಬಾಲ್ಯದ ತುಂಟಾಟಗಳು ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಕಂತ್ರಿ ನಾಯಿಯನ್ನು ಜಾತಿನಾಯಿಯನ್ನಾಗಿ ಮಾಡಲು ನೆಡೆಸುವ ಪ್ರಯತ್ನ ಹಾಗೂ ಪುಸ್ತಕದಲ್ಲಿ ತೇಜಸ್ವಿ ಹಾಗೂ ಕುವೆಂಪುರವರಷ್ಟೇ ಕೇಳಿ ಬರುವ ಮತ್ತೊಂದು ಹೆಸರು ಶಾಮಣ್ಣ(ಕಡಿದಾಳ್ ಶಾಮಣ್ಣ).. ತೇಜಸ್ವಿ ಗೆಳೆಯ ಶಾಮಣ್ಣನೊಂದಿಗೆ ಸಂಗೀತ ಅಭ್ಯಾಸ ನಡೆಸುವ ಸಂದರ್ಭಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ.. ದಂತವಾದ್ಯ,ಗುಡ್ ಬೈ ಶಹನಾಯ್, ಶಾಮಣ್ಣನ ಹುಚ್ಚು ಕುದುರೆ ಎಂಬ ಅಧ್ಯಯಗಳು ನಮ್ಮ ನೆನಪಿಯಲ್ಲಿ ಅಚ್ಚಳಿಯದೆ ಉಳಿಯುತ್ತವೆ..

ತೇಜಸ್ವಿಯವರ ಸಂಗೀತ ಅಭ್ಯಾಸ ಫೋಟೋಗ್ರಫಿ ಚಿತ್ರಕಲೆ ಇಂತಹ ಹಲವು ಹವ್ಯಾಸಗಳ ಬೆಳಕು ಚೆಲ್ಲುತ್ತದೆ..

ತೇಜಸ್ವಿಯವರ ಜೀವನ ಕುವೆಂಪುರವರ ಜೀವನವನ್ನು ಹೊರತುಪಡಿಸಿ ಬೇರೊಂದು ದೃಷ್ಟಿಯಲ್ಲಿ ನೋಡಿದಾಗ ಈ ಪುಸ್ತಕದಲ್ಲಿ ನಮಗೆ ಎಲಿಯಟ್,ನೆಹರು,ಲೋಹಿಯಾ, ಕನ್ನಡ ಚಳುವಳಿಗಳು, ಕನ್ನಡ ಏಕೀಕರಣ, 70ರ ದಶಕದಲ್ಲಿದ್ದ ಕಲಾವಿದ ಹಾಗೂ ಬರಹಗಾರರ ಒಕ್ಕೂಟ, ಬೂಸಾ ಪ್ರಕರಣ ಮುಂತಾದ ವ್ಯಕ್ತಿ-ವಿಚಾರಗಳನ್ನು ಕುರಿತು ಚರ್ಚಿಸುತ್ತದೆ.. ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಇದೊಂದು ಉತ್ತಮ ಆಕರ ಕೃತಿ.. ಕುವೆಂಪುರವರ ಮಂತ್ರಮಾಂಗಲ್ಯದ ಪರಿಕಲ್ಪನೆ.. ಮೊದಲ ಮಂತ್ರ ಮಾಂಗಲ್ಯ ಮದುವೆ ಆಗಿ‌ ತಮ್ಮ‌‌ಮಗ ಪೂಚಂತೆ ಅವರದೆ ಮೊದಲ್ಗೊಂಡಿದ್ದು ಬೆರಗು ಮೂಡಿಸುತ್ತದೆ.

ಪುಸ್ತಕದ ಪ್ರತಿ ಪುಟಗಳಲ್ಲೂ ಕುವೆಂಪುರವರ ಮತ್ತು ತೇಜಸ್ವಿಯವರ ನೆನಪುಗಳು ನಮ್ಮನ್ನು ಕಾಡುತ್ತವೆ..



No comments: