ನೆನಪಿನ ಪುಟಗಳು..
ಬರೆಯಲು ನಾನೇನು ಕವಿಯಲ್ಲ,
ಇನ್ನೊಬ್ಬರ ಮೆಚ್ಚಿಸುವ ಹುಚ್ಚಿಲ್ಲ,
ಬರೆದವನು ನಾನೆಂಬ ಅಹಂಮಿಲ್ಲ,
ಅಲ್ಲಿಷ್ಟು ಇಲ್ಲಿಷ್ಟು ಓದಿದ ಕೇಳಿದ ನೋಡಿದ ಕದ್ದ,
ಕೆಲ ಸಂಗತಿಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನವಷ್ಟೆ.
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ. (THE FREEDOM TO LIVE AS WE WISH IS ALWAYS A TERRIBLE FIGHT SINCE WE WILL NOT GET IT EASILY) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವ
ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ (OUR BEHAVIOR WOULD MAKE OUR WORDS MEANINGFUL) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ
ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್
ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷೀ ಎಂದರೆ ಹೋಮೋಸೆಪಿಯನ್ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ
ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್
ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ
ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ, ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತಿವಿ, ಕಾಲ ಸರೀತಾ ಇದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ
ಎಷ್ಟನ್ನು ನಾವು ಕಣ್ಣಿಗೆ ಕಂಡರೂ ನೋಡದೆ ಬಿಟ್ಟಿದ್ದೇವೋ ಏನೋ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೊ
ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕುಂಬಾರನ ಸೂಕ್ಷ್ಮ ಕಸುಬುದಾರಿಕೆ, ಮೇದರವನ ಬುಟ್ಟಿ ಹೆಣೆಯುವ ಕಲೆಗಾರಿಕೆ ಮಾನ್ಯತೆ ಕಳೆದುಕೊಂಡು ಓದುಬರಹ, ಜ್ಞಾಪಕ ಶಕ್ತಿ, ಇಂಗ್ಲಿಷ್ ಮಾತುಗಳು ಪರೀಕ್ಷೆಗಳಲ್ಲಿ ಮೆರಿಟ್ಗಳಾದವು. ಮೇದರವನೂ, ಕುಂಬಾರನೂ, ಅಗಸನೂ ಮೆರಿಟ್ ಇಲ್ಲದವನಾಗಿ ಕೆಲಸ ಮತ್ತು ಅನ್ನ ಕಳೆದು ಕೊಂಡ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 164
ನಾನು ಕಣ್ಣಿಗೆ ಕಂಡದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ನನಗೆ ಕಷ್ಟಪಟ್ಟು ಓದಿದ್ದು ಗೊತ್ತೇ ಇಲ್ಲ. ಬರೇ ಕ್ಲಾಸಿನಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಮಾತ್ರವೇ ಈವರೆಗೂ ನಾನು ತರಗತಿಗಳಲ್ಲಿ ಪಾಸಾಗಿರುವವನು. ಆದರೆ ನಮಗೆ ಅಂಥ ವಿದ್ಯಾಗುರುಗಳು ದೊರತಿದ್ದರೆಂಬುದು ಇಲ್ಲಿ ಬಹುಮುಖ್ಯ. ಅವರಲ್ಲಿ ಪೂಜ್ಯ ಜಿ ಎಸ್ ಶಿವರುದ್ರಪ್ಪನವರು ಒಬ್ಬರೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕತೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದೆಯಷ್ಟೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಿರಗೂರಿನ ಗಯ್ಯಾಳಿಗಳು
ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿವಿಮರ್ಶೆಯ ವಿಮರ್ಶೆ, ಪುಟ ೧೩
ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ಥಿತ್ವವೇ ಇರುವುದಿಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಹೊಸಹೊಸ ಜೀವನಾನುಭವಗಳು ನಮ್ಮ ಅನುಭವ ವಿಶ್ವಕ್ಕೆ ಸೇರ್ಪಡೆಯಾದಾಗ ಕೇವಲ ಅದರ ಮೊತ್ತ ಹೆಚ್ಚಾಗುವುದಷ್ಟೇ ಅಲ್ಲ, ನಮ್ಮ ಅನುಭವ ವಿಶ್ವದಲ್ಲಿ ಗುಣಾತ್ಮಕ ಬದಲಾವಣೆಯನ್ನೂ ಉಂಟುಮಾಡುತ್ತದೆ, ಎಂದರೆ ಇಡೀ ಅನುಭವ ವಿಶ್ವದ ವ್ಯವಸ್ಥೆಯೇ ಹೊಸದಾಗಿ ಸಂಯೋಜನೆಗೊಳ್ಳುತ್ತದೆ, ಅಥವಾ ನಿರಂತರವಾಗಿ ಸಂಯೋಜನೆಗೊಳ್ಳುತ್ತಲೇ ಇರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು? ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ! – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸ್ವರೂಪ
ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ, ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಹಾ ಪಲಾಯನ (ಮುನ್ನುಡಿ)
‘ಮನುಷ್ಯ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ’ ಎನ್ನುವುದೇ ನಮಗೆ ಚರಿತ್ರೆ ಕಲಿಸುವ ಪಾಠ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸ ಇರುವುದರಿಂದಲೇ ನಮ್ಮ ಫೋಟೊಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್
ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ವಿಶ್ವ
ತಾನು ನಿಯಂತ್ರಿಸಲಾಗದ ಅಮೂರ್ತದ ಅಗಾಧತೆಯ ಎದುರು ಮನುಷ್ಯನ ಕ್ರಿಯೆಗಳು ಅರ್ಥಹೀನವಾಗಿಯೂ ಹಾಸ್ಯಾಸ್ಪದವಾಗಿಯೂ ಕಾಣುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನನ್ನ ಪಾಡಿಗೆ ನನ್ನನ್ನು ಬಿಟ್ಟರೆ ತಿಂಗಳುಗಟ್ಟಲೆ ಅಥವಾ ಜೀವನ ಪರ್ಯಂತ ಬೇಕಾದರೂ ಇದ್ದೇನು. ಆದರೆ ನೀನು ಇಲ್ಲೆ ಇರಬೇಕು. ಎಲ್ಲಿಯೂ ಹೋಗುವಂತೆಯೇ ಇಲ್ಲ ಎಂದು ಯಾರಾದರೂ ಅಂದರೆ ಅಲ್ಲಿಗೆ ಮುಗಿಯಿತು ನನ್ನ ಕಥೆ. ಅನಂತರ ಅಲ್ಲಿ ಕಳೆಯುವ ಪ್ರತಿಯೊಂದು ಕ್ಷಣವೂ ನನಗೆ ಭೀಕರವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ ೧೦೮
ಬದುಕಿರುವವನಿಗೆ ಸಾವಿನಂತೆ, ಯಾವುದಕ್ಕೂ ನನಗೆ ಸದಾ ಹೊರ ದಾರಿಯೊಂದು ತೆರದಿರಲೇಬೇಕು. ಆಗಲೇ ನನಗೆ ಜೀವನ ಸುಂದರ, ಕುತೂಹಲಕರ. ಅದು ಮುಚ್ಚಿಕೊಂಡಿತೋ ತಕ್ಷಣ ಅದು ಸಾಕ್ಷಾತ್ ಸ್ವರ್ಗವಾದರೂ ನರಕವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ ೧೦೮
ಮತ್ತೊಬ್ಬರು ಹೇಳಿದ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದಿದ್ದರೆ ನಾವು ನಮ್ಮ ಜೀವನದ ಎಷ್ಟೋ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದಿತ್ತು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೦೮
ಎನನ್ನಾದರೂ ಅರ್ಥ ಮಾಡಿಕೊಳ್ಳಬೇಕೆಂದಿದ್ದರೆ ಅದನ್ನು ಕಲಿಯಲು ಪ್ರಯತ್ನಿಸುವುದು ಅದನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗ ಎಂದು ನನಗೆನ್ನಿಸುತ್ತದೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೧೧
ಯಾರು ಏನೇ ಮಾಡಿದರೂ ಒಬ್ಬ ಪ್ರತಿಭಾವಂತ ಬರಹಗಾರನನ್ನು ಇಳಿಸಲಾಗಲೀ, ಅವನು ಪ್ರತಿಭಾವಂತನಲ್ಲದಿದ್ದರೆ ಮಠ ಕಟ್ಟಿ ಊರಗೋಲು ಕೊಟ್ಟು ಉಳಿಸಲಾಗಲೀ ಸಾಧ್ಯವೇ ಇಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೨೫
ಬಹುಶಃ ಮನುಷ್ಯ ಸುಖ, ಸಮೃದ್ಧಿ, ಸಂತೋಷಗಳ ನಡುವಿಗಿಂತ ಮೌನ, ಏಕಾಂತ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ! ಅದರ ಮಹಾನ್ಮೌನದ ಏಕಾಂತದಲ್ಲಿ ಕುಳಿತು ಇಡೀ ಇಹದ ಅಂತಿಮ ಉದ್ದೇಶವನ್ನು ಚಿಂತಿಸಿ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸತ್ಯಾನ್ವೇಷಣೆ ಮಾಡಿದ್ದಾನೇನೋ! – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ದೇಶ ವಿದೇಶ-೧
ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು, ಅಭಿಮಾನ ಮೂಡುವುದು ಮಹಾ ಯುದ್ಧದ ಮತ್ತು ಅನಂತರ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ, ಮತ್ತು ಓದಿದಾಗ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಅಲ್ಲಿಂದ ಹೇಗಾದರೂ ಮಾಡಿ ಗಡಿ ದಾಟಿ ಸ್ವಾತಂತ್ರ್ಯದ ಉಸಿರಾಡಲು ತವಕಿಸಿದವರ ಕತೆಗಳನ್ನು ಓದುವಾಗ, ಬಡತನ, ಅನಕ್ಷರತೆ ಇತ್ಯಾದಿ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ನಾವು ನಮ್ಮ ಸ್ವಾತಂತ್ರ್ಯವನ್ನೇ ಒತ್ತೆಯಿಡಲು ತಯ್ಯಾರಾಗುವುದು ಅಕ್ಷಮ್ಯ ಎಂದೆನಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ಮಹಾಯುದ್ಧ-೨
ಯಾವುದನ್ನೂ ಉಚಿತವೆಂದು ಬಿಟ್ಟಿ ಮಾಡಬೇಡಿ. ಯಾರಿಂದಲೂ ಬಿಟ್ಟಿಯಾಗಿ ಯಾವುದನ್ನೂ ನಿರೀಕ್ಷಿಸಲೂ ಬೇಡಿ. ಇದರಿಂದ ಇಡೀ ನಮ್ಮ ಉದ್ದೇಶ ಅರ್ಥಹೀನವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345
ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ನಾವು ಹಾಗೆ ನಟಿಸಲು ತೊಡಗಬಾರದು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮೊದಲೆಲ್ಲಾ ನಮ್ಮ ವರ್ತನೆಯನ್ನು ಹುಚ್ಚಾಟವೆಂದು ಪರಿಗಣಿಸಿ ನಗುತ್ತಿದ್ದವರು ಕೊನೆಗೆ ನಮ್ಮ ಬದುಕೇ ಹೀಗೆ ಎಂದು ತಿಳಿದನಂತರ ನಗುವುದನ್ನು ನಿಲ್ಲಿಸಿದರು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೯
ಸಾಕ್ಷಾಧಾರ ಇಲ್ಲದ ಯಾವುದನ್ನೂ ನಾನು ನಂಬೋದಿಲ್ಲ. ದೇವರನ್ನು ನಂಬೋದು ಬಿಡೋದು ಎಲ್ಲಾ ನಿರಪಯುಕ್ತ ಚರ್ಚೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ
ನಾನು ನಿನ್ನಂತಯೇ ಅನ್ನ ತಿನ್ನುವ ಸಾಮಾನ್ಯ ಸರಳ ಮನುಷ್ಯ. ನನ್ನ ದೈನಂದಿನ ಅನುಭವಗಳನ್ನು ಇತರರಿಗೆ ತಿಳಿಸುವ ಕಲೆಗಾರಿಕೆಯನ್ನು ಬರೆದು, ತಿದ್ದಿ, ಕಲಿತವನು. ಉತ್ತಮ ಬರಹಗಾರನಾಗಲೂ ಪ್ರತಿಭೆ ಸ್ವೂರ್ತಿ ಎಲ್ಲ ಬೇಕಾದರೂ ಎಲ್ಲಕ್ಕಿಂತ ಮುಖ್ಯವಾಗಿ ಶ್ರದ್ಧೆ, ಕಷ್ಟಪಟ್ಟು ಕೆಲಸ ಮಾಡುವ ತಾಳ್ಮೆ ಅತ್ಯಂತ ಮುಖ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348
ನನ್ನ ಕಥೆ ಕಾದಂಬರಿಗಳು ವಾಸ್ತವವಾಗಿ ನನ್ನ ಅನುಭವಗಳನ್ನೇನೂ ನಿಮಗೆ ಕೊಡುವುದಿಲ್ಲ. ನಿಮ್ಮೊಳಗೆ ಇದ್ದ ಆ ಅನುಭವಗಳನ್ನು ಉದ್ದೀಪನ ಮಾಡಿ ನಿಮಗೆ ತೋರಿಸಿಕೊಡುತ್ತವಷ್ಟೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348
ಜೀವನವನ್ನು ನನ್ನಂತೆ ನೋಡುವ ದೃಷ್ಟಿ, ಶಕ್ತಿ, ನಿಮ್ಮಲ್ಲೇ ಇರುತ್ತದೆ. ಇಲ್ಲದಿದ್ದರೆ ನಿನಗೇಕೆ ಎಲ್ಲೋ ಕುಳಿತುಕೊಂಡು ಬರೆದ ನನ್ನ ಬರವಣಿಗೆ ಖುಷಿ ಕೊಡಬೇಕು? ನಿನ್ನಲ್ಲಿರುವ ಅನುಭವಗಳಿಗೆ ನೀನು ಸಹ ನನ್ನಂತೆಯೇ ಮಾತು ಕೊಡುವವನಾಗಬೇಕು. ಅದಕ್ಕೆ ಮಾತ್ರ ತುಂಬಾ ತಾಳ್ಮೆ ಶ್ರದ್ಧೆ ಬೇಕಾಗುತ್ತದೆ. ನಿನ್ನ ಅನುಭವಗಳನ್ನು ನಿನ್ನ ಮಾತಿನಲ್ಲೇ ನೂರಾರು ಸಾರಿ ಬರೆದು, ತಿದ್ದಿ, ಇತರರಿಗೆ ತೋರಿಸಿ ಬರೆಯುವುದನ್ನು ಕಲಿಯಬೇಕಾಗುತ್ತದೆ. ನಾನು ಬರೆದುದನ್ನು ಓದಿದಾಗ ಆದಷ್ಟೆ ಸಂತೋಷ ಆಗ ನಿನಗಾಗುತ್ತದೆ. ಅದನ್ನ ಓದಿದ ಇತರರಿಗೂ ಸಂತೋಷವಾದಾಗ ನಿನಗೆ ಇನ್ನೂ ಖುಷಿಯಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348
ಓದುಗರು ಯಾರಾದರೂ ಕೃತಿಗಳನ್ನು ಓದಿ ಚೆನ್ನಾಗಿದೆ ಎಂದು ಸಂತೋಷಪಟ್ಟರೆ ನನಗೆ ಧನ್ಯನಾದೆ ಎನ್ನಿಸುತ್ತದೆ. ಅಂಥ ಹಲವು ಕೃತಿಗಳನ್ನು ಬರೆಯಲು ಪ್ರೋತ್ಸಾಹ ದೊರೆಯುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345
ಅವಾರ್ಡುಗಳಿಗೆ ಪ್ರಶಸ್ತಿಗಳಿಗೆ ನನ್ನ ದೃಷ್ಟಿಯಲ್ಲಿ ಅಂಥ ಏನೂ ಮಹತ್ವವಿಲ್ಲ. ಕ್ಯೂನಲ್ಲಿ ನಿಂತುಕೊಂಡ ಕತ್ತೆಗಳಿಗೂ ಒಂದಲ್ಲ ಒಂದು ದಿನ ಅವಾರ್ಡು ಕೊಡಲೇಬೇಕಾಗುತ್ತದೆ. ಒಬ್ಬ ಸೃಜನಶೀಲ ಲೇಖಕನ ಅಂತಿಮ ಪರೀಕ್ಷೆ ಓದುಗನ ಮನದಲ್ಲಿಯೇ ಹೊರತು ಬೇರೆಲ್ಲೂ ಅಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345
ನಾನು ಎಲ್ಲರಿಗಿಂತ ಭಿನ್ನವಾಗಿ ಬರೆಯಬೇಕೆಂದು ಎಂದೂ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದವನಲ್ಲ. ಈ ಭಿನ್ನತೆಯ ಮೂಲ ಇರುವುದು ನನ್ನ ಬರೆವಣಿಗೆ ಕ್ರಮದಲ್ಲಾಗಲೀ ಭಾಷೆಯ ಬಳಕೆಯಲ್ಲಾಗಲೀ ಅಲ್ಲ. ಅದು ಮೂಲತಃ ನನ್ನ ವ್ಯಕ್ತಿತ್ವದಲ್ಲೂ ನನ್ನ ಬದುಕಿನ ಬಗೆಯಲ್ಲೂ ಇತ್ತು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 295
ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೇ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೋಗುವುದೇ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಾಕಕ್ರಾಂತಿ, ಪುಟ 1
ಈ ಶತಮಾನದ ಅದ್ಭುತಗಳಾಗಿ ಎವರೆಸ್ಟ್ ಹತ್ತಿದ್ದು, ಉಪಗ್ರಹ ಹಾರಿಸಿದ್ದು, ಚಂದ್ರನಲ್ಲಿ ಇಳಿದಿದ್ದು, ಕಂಪ್ಯೂಟರ್ ಚಿಪ್ ಗಳನ್ನು ತಯಾರಿಸಿದ್ದು ಕಣ್ಣು ಕೋರೈಸುವ ಸಾಧನೆಗಳಾದ್ದರಿಂದ ಜನಪ್ರಿಯತೆಯನ್ನೂ ಪ್ರಚಾರವನ್ನೂ ಪಡೆದುಕೊಳ್ಳುತ್ತವೆ. ಆದರೆ ಈ ಶತಮಾನದ ಸಾಧನೆ ಎಂದು ಯಾವುದಾದರು ಒಂದೇ ಒಂದು ಸಾಧನೆಯನ್ನು ಹೇಳು ಎಂದು ನನ್ನನ್ನು ಯಾರಾದರೂ ಕೇಳಿದರೆ ನಾನು ನಿಸ್ಸಂಶಯವಾಗಿ ‘ವಿಶ್ವ ಆರೋಗ್ಯ ಸಂಸ್ಥೆ ಸಿಡುಬನ್ನು ಈ ಭೂಮಂಡಲದಿಂದಲೇ ಉಚ್ಚಾಟಿಸಿದ್ದು’ ಎಂದು ನಾನು ಹೇಳುತ್ತೇನೆ. ಇದು ಇದ್ದಕ್ಕಿದಂತೆ ಧಢೀರೆಂದು ಯಾರೋ ಒಬ್ಬ ಸಹಸ್ರಾರು ಜನರ ಸಮ್ಮುಖದಲ್ಲಿ ಸಾಧಿಸಿ ಚಪ್ಪಾಳೆ ಗಿಟ್ಟಿಸಿದಂಥ ಸಾಧನೆಯಲ್ಲ ! ನೂರಾರು ದೇಶಗಳ ಸಹಸ್ರಾರು ಕಾರ್ಯಕರ್ತರು ಮಳೆ ಬಿಸಿಲೆನ್ನದೇ, ಕಗ್ಗಾಡು ಮರಳುಗಾಡೆನ್ನದೇ ಅನೇಕ ವರ್ಷಗಳ ಪರ್ಯಂತ ಕೆಲಸ ಮಾಡಿ ಸಾಧಿಸಿದ ಯಶಸ್ಸು. ನಾಗರೀಕತೆಗಳ ಹುಟ್ಟಿನಿಂದಲೂ ಸತತವಾಗಿ ಸಾವಿರಾರು ಜನಗಳನ್ನು ಬಲಿ ತೆಗೆದುಕೊಂಡ, ವಿರೂಪಗೊಳಿಸಿದ, ಕುರುಡರನ್ನಾಗಿ ಮಾಡಿದ ಈ ಮಹಾಮಾರಿಯಿಂದ ಮನುಕುಲವನ್ನೇ ವಿಮುಕ್ತಿಗೊಳಿಸಿದ್ದು ಈ ಶತಮಾನದ ಮನುಷ್ಯ ಸದ್ದುಗದ್ದಲವಿಲ್ಲದೆ ಸಾಧಿಸಿದ ಆತ್ಯಮೋಘ ಸಾಧನೆ. ಈ ಸಾಧನೆಯಿಂದ ಹಿಂದುಳಿದ ರಾಷ್ಟ್ರಗಳ ಕೋಟ್ಯಂತರ ದೀನರ ಬಡವರ ಆಹುತಿ ತಪ್ಪಿತು. ಇದಕ್ಕಿಂತ ಹೆಚ್ಚಾಗಿ ಇಡೀ ಮನುಕುಲಕ್ಕೆ ಇದರಿಂದ ಒದಗಿದ ಆತ್ಮವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಧಿಡೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ ನಾಳೆ ನಿಧಾನವಾಗಿಯಾದರೂ ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 299
ನಾನು ಬರೆಯುವ ಪದಗಳ ಅರ್ಥವೇ ‘ಮನುಷ್ಯರೆಲ್ಲ ಒಂದೇ, ನನ್ನಂತೆಯೇ’ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ 228
ರೈಲು ಕಿಟಕಿಯಿಂದ ಹೊರಗೆ ತಲೆ ಹಾಕಿ ನೋಡಿದಾಗ ಸಾಧಾರಣವಾಗಿ ಕಾಣುವ ದೃಶ್ಯಾವಳಿಗಳು ಗಾಡಿಯೊಳಗೆ ಕಿಟಕಿಯಿಂದ ಕೊಂಚ ದೂರ ಕುಳಿತು ನೋಡಿದಾಗ ಪರದೆಯ ಮೇಲೆ ಮೂಡುವ ಸಿನೆಮಾ ಮಾದರಿಯಲ್ಲಿ ಕುತೂಹಲಕರವಾಗಿರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ 203
ನಾನು ಬರೆಯುವ ಪದಗಳ ಅರ್ಥವೇ ‘ಮನುಷ್ಯರೇಲ್ಲ ಒಂದೇ, ನನ್ನಂತೆಯೇ’ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ 228
ನನ್ನ ವ್ಯಕ್ತಿತ್ವ ಇಷ್ಟೊಂದು ರಂಜಕವಾಗಿ COLOURFUL ಆಗಿರೋದೆ ನನ್ನ ಆತ್ಮಾಭಿಮಾನದ ಮುಖಾಂತರ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪತ್ರದಲ್ಲಿ, ಪುಟ 137
ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 343
ನನ್ನ ಕೃತಿಗಳಿಂದ ಕೆಲವಾದರೂ ಜನರಿಗೆ ಪರಿಸರದ ಬಗ್ಗೆ ಆಸಕ್ತಿ ಬಂದರೆ ನನ್ನ ಬರವಣಿಗೆ ಸಾರ್ಥಕವೆಂದೇ ತಿಳಿದಿದ್ದೇನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 396
ಎಷ್ಟೋ ಸಾರಿ ದುಷ್ಟರು ಕಷ್ಟಕ್ಕೆ ಸಿಕ್ಕಿಕೊಂಡಾಗ, ಕಳ್ಳರು ಸಿಕ್ಕಿಬಿದ್ದಾಗ ಕೊನೆಗೂ ಸತ್ಯಕ್ಕೆ ನ್ಯಾಯಕ್ಕೆ ಜಯವಾಗುತ್ತದೆ ಎಂದು ಜನ ಅಂದುಕೊಳ್ಳುತ್ತಾರೆ. ಭೂಮಿಯಲ್ಲಿ ರಾಕ್ಷಸರ ಹಾವಳಿ ಅತಿಯಾದಾಗ ದೇವರು ಬಂದು ಅವರಿಗೆಲ್ಲಾ ತಕ್ಕ ಶಿಕ್ಷೆ ವಿಧಿಸುತ್ತಾನೆ ಎಂದು ದೈವ ಭಕ್ತರು ದೃಢವಾಗಿ ನಂಬಿದ್ದಾರೆ. ಆದರೆ ವಾಸ್ತವವನ್ನು ಗಮನಿಸಿದಾಗ ಸಾಧಾರಣವಾಗಿ ರಾಕ್ಷಸರಿಗೇನೋ ಶಿಕ್ಷೆಯಾಗಿರುತ್ತದೆ. ಆದರೆ ಅದು ದೇವರಿಂದಾಗಲಿ ನ್ಯಾಯ ಧರ್ಮಗಳಿಂದಾಗಲಿ ಆಗಿರದೆ ಅದಕ್ಕೆ ಇನ್ನೊಬ್ಬ ದೊಡ್ಡ ರಾಕ್ಷಸನೆ ಕಾರಣ ಎಂದು ಜನಗಳಿಗೆ ಬಹುಬೇಗ ಗೊತ್ತಾಗುತ್ತದೆ. ದುಷ್ಟರನ್ನು ದೊಡ್ಡ ದುಷ್ಟರೂ, ಖೇಡಿಗಳನ್ನು ದೊಡ್ಡ ಖೇಡಿಗಳೂ, ಪಾತಕಿಗಳನ್ನು ಇನ್ನೂ ದೊಡ್ಡ ಪಾತಕಿಗಳೂ, ಬಲಿಹಾಕುವುದನ್ನು ಧರ್ಮಪ್ರತಿಷ್ಠಾಪನೆ ಎಂದು ತಾತ್ಕಾಲಿಕವಾಗಿ ಜನ ತಿಳಿಯುತ್ತಾರೆ. ಆಮೇಲೆ ಅವರಿಗೆ ಭ್ರಮ ನಿರಸನವಾಗುತ್ತದೆ. ಆಗ ಕಳೆದು ಹೋದ ಕಾಲವೇ ಎಷ್ಟೋ ವಾಸಿ ಇತ್ತೆಂದು ಯೋಚಿಸುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ ೫೯
ಮಾತನಾಡಬೇಕಾದಾಗಲೂ ಮಾತನಾಡದೆ ಸುಮ್ಮನಿದ್ದರೆ ಬಹಳ ಕೆಟ್ಟದ್ದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 555
ನೀವು ನಿಮ್ಮ ಬಗ್ಗೆ ಒಂದು ದೃಢ ನಿರ್ಧಾರ ತಗೊಳ್ಳಬೇಕು. ಕಾಲವೇ ತೀರ್ಮಾನಿಸುತ್ತದೆಂದು ಕೂರಬೇಡಿರಿ. ಕಾಲ ಎಲ್ಲವನ್ನೂ ಇನ್ನಷ್ಟು ಜಟಿಲ ಮಾಡುತ್ತದೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1990 (ತೇಜಸ್ವಿ ಪತ್ರಗಳು, ಪುಟ 257)
ಹೊರಗಿನ ಪ್ರಕೃತಿ ತೀರ ಕ್ರೂರವಾದಾಗ ನಮ್ಮೊಳಗಿನ ಪ್ರಕೃತಿ ನಮ್ಮ ಸಂವೇದನಾ ಶಕ್ತಿಯನ್ನೆ ಮೊಂಡು ಮಾಡಿಬಿಡುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಾಡು ಮತ್ತು ಕ್ರೌರ್ಯ
ವರ್ಗ ತಾರತಮ್ಯದಲ್ಲಿ ಒಬ್ಬ ಕಷ್ಟಪಟ್ಟು ದುಡಿದು ಶ್ರೀಮಂತನಾಗಿ ಮೇಲ್ವರ್ಗಕ್ಕೇ ಏರಬಹುದು, ಇಲ್ಲವೇ ದುಂದು ಮಾಡಿ ನಷ್ಟ ಕಟ್ಟಿಕೊಂಡು ಕೆಳವರ್ಗಕ್ಕೆ ಇಳಿಯಲು ಬಹುದು.ಆದರೆ ವರ್ಣ ತಾರತಮ್ಯದಲ್ಲಿ ಒಬ್ಬ ಹುಟ್ಟಿದಂದಿನಿಂದ ಸಾಯುವವರೆಗೆ ಯಾವ ವರ್ಣದಲ್ಲಿ ಹುಟ್ಟಿದನೋ ಅಲ್ಲೇ ಇರಬೇಕಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಈ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಅನೇಕ ವಿಜ್ಞಾನಿಗಳನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಅವುಗಳಲ್ಲಿ ನೂರಕ್ಕೆ ನೂರರಷ್ಟು ವಿಜ್ಞಾನಿಗಳು ಗ್ರಾಮೀಣ ಕುಟುಂಬಗಳಿಂದಲೇ ಬಂದವರು. ಆದರೆ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಅವರು ಎಷ್ಟೊಂದು ಮಾರ್ಪಟ್ಟಿರುತ್ತಾರೆಂದರೆ, ಅವರ ಲೇಖನಗಳು ಭಾರತದ ಗ್ರಾಮೀಣ ಜನತೆಯನ್ನು ಉದ್ದೇಶಿಸಿರುವುದೇ ಇಲ್ಲ. ಈ ವಿರೋಧಾಭಾಸಗಳಿಗೆ ಕಾರಣವಾದರೂ ಏನು..? ನಮ್ಮ ವಿದ್ಯಾಭ್ಯಾಸ. ಅಲ್ಲಿ ಕಲಿಸುವ ವಿಚಾರಗಳು ಮತ್ತು ಆಧುನಿಕ ವಿದ್ಯಾಭ್ಯಾಸ ಶಿಸ್ತು ನಮ್ಮ ವಿಜ್ಞಾನಿಗಳನ್ನು ಕೃಷಿಕ ಸಮಾಜದೊಡನೆ ಸಂವಾದ ಸಾಧ್ಯವಿಲ್ಲದಷ್ಟು ಪರಕೀಯ ಗೊಳಿಸುತ್ತಿದೆಯೆ..? ಪದವೀಧರರಾಗುತ್ತಿದ್ದಂತೆಯೇ ತಮ್ಮ ಪಿತ್ರಾರ್ಜಿತ ಜಮೀನಿಗೆ ವಿದಾಯ ಹೇಳಿ ಹೇಗಾದರೂ ಮಾಡಿ ಸರ್ಕಾರಿ ನೌಕರಿಯೊಂದನ್ನು ಗಿಟ್ಟಿಸಿ ಜೀವನಯಾಪನೆ ಮಾಡಲು ನಮ್ಮ ಯುವ ಸಮುದಾಯ ಹಂಬಲಿಸುತ್ತದಲ್ಲ ! ತಾವು ತಿರಸ್ಕರಿಸಿದ ಜೀವನ ಕ್ರಮವನ್ನು ತಾವು ಅನುಷ್ಠಾನಕ್ಕೆ ತಂದುಕೊಳ್ಳದ ಆದರ್ಶಗಳನ್ನು ಬೇರೆಯವರಿಗೆ ಹೇಗೆ ಇವರು ಬೋಧಿಸುತ್ತಾರೆ ? ಬೇರೆಯವರು ಹೇಗೆ ಇವರ ಪ್ರವಚನಗಳನ್ನು ನಂಬುತ್ತಾರೆ ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 429
ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಪುಟ 90
ಜ್ಞಾನ ಅಜ್ಞಾನ ಎರಡೂ ಅವಳಿಗಳು. ಆದರೆ ಅನ್ವೇಷಣೆ, ತಿಳಿಯುತ್ತಾ ಹೋಗುವುದು ಸಹ ಮನಸ್ಸಿನ ಅನುಷಂಗಿಕ ಗುಣ. ಮನಸ್ಸು ಅರಿವಿನ ಹಾದಿಯಲ್ಲಿ ಮುಂದೊತ್ತುತ್ತಲೇಹೋಗುತ್ತದೆ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೋಮಾಂಚನಕ್ಕಾದರು ಮನಸ್ಸು ಮುಂದುವರಿಯುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜೀವನ ಸಂಗ್ರಾಮ, ಮುನ್ನುಡಿ
ನಾವೆಲ್ಲ ಕೈಗೆ ವಾಚ್ ಕಟ್ಟಿಕೊಳ್ಳುತ್ತೇವೆ. ದಿನವೂ ಏಳುತ್ತಿದ್ದಂತೆಯೇ ಗಂಟೆ ನೋಡಿಕೊಳ್ಳುತ್ತಾ ನಮ್ಮ ದಿನವನ್ನು ಆರಂಭಿಸುತ್ತೇವೆ. ಹಣ ಸಂಪಾದಿಸಬಹುದು, ಆಸ್ತಿ ಸಂಪಾದಿಸಬಹುದು ಆದರೆ ಕಳೆದುಹೋಗುತ್ತಾ ಇರುವ ಕಾಲವನ್ನು ಮಾತ್ರ ಎಂದೆಂದೂ ಸಂಪಾದಿಸಲು ಸಾಧ್ಯವಿಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇಶ ವಿದೇಶ 1 , ಪುಟ 42
ವಾಸ್ತವವನ್ನೇ ಆದರ್ಶಿಕರಿಸುವವನು ಅವಕಾಶವಾದಿಯಾಗುತ್ತಾನೆ. ವಾಸ್ತವವನ್ನೇ ತಿರಸ್ಕರಿಸಿ ಆದರ್ಶಗಳಿಗೆ ಜೋತುಬೀಳುವವನು ಉಗ್ರಗಾಮಿಯಾಗುತ್ತಾನೆ. ಆದರ್ಶಗಳನ್ನು ವಾಸ್ತವಿಕರಿಸುವ ಮಾರ್ಗದಲ್ಲಿ ವಾಸ್ತವದ ಅಪರಿಪೂರ್ಣತೆಯನ್ನು ಸಹಿಸಲೂ ಕಲಿಯುವವನು ಲಿಬರಲ್ ಆಗುತ್ತಾನೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1988, ಪುಟ 217
ನಮ್ಮ ವರ್ತನೆ, ನಮ್ಮ ವ್ಯಕ್ತಿತ್ವ, ನಮ್ಮ ಪದಗಳಿಗೆ ಅರ್ಥ ಕೊಡುತ್ತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೯೬
ನೀವು ನಿಮ್ಮ ಬಗ್ಗೆ ಒಂದು ದೃಢ ನಿರ್ಧಾರ ತಗೊಳ್ಳಬೇಕು. ಕಾಲವೇ ತೀರ್ಮಾನಿಸುತ್ತದೆಂದು ಕೂರಬೇಡಿರಿ. ಕಾಲ ಎಲ್ಲವನ್ನೂ ಇನ್ನಷ್ಟು ಜಟಿಲ ಮಾಡುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1990 (ತೇಜಸ್ವಿ ಪತ್ರಗಳು, ಪುಟ 257)
ಹೊರಗಿನ ಪ್ರಕೃತಿ ತೀರ ಕ್ರೂರವಾದಾಗ ನಮ್ಮೊಳಗಿನ ಪ್ರಕೃತಿ ನಮ್ಮ ಸಂವೇದನಾ ಶಕ್ತಿಯನ್ನೆ ಮೊಂಡು ಮಾಡಿಬಿಡುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಾಡು ಮತ್ತು ಕ್ರೌರ್ಯ
ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಪುಟ 90
ಒಬ್ಬ ಕಲಾವಿದನ ಮೇಲೆ, ಇನ್ನೊಬ್ಬ ದೊಡ್ಡ ಕಲಾವಿದನ ಪ್ರಭಾವಗಳು ಆಗೋದನ್ನ ಗುರುತಿಸುವುದು ಬಹಳ ಕಷ್ಟ. ಯಾಕೆ ಅಂತಾ ಹೇಳಿದರೆ, ಅವರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರಿರುತ್ತಾರೆ ಹೊರತು, ನಿಮ್ಮ ಕೃತಿಗಳ ಮೇಲಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 560
ಸೂರ್ಯ ಮುಳುಗದ ಸಾಮ್ರಾಜ್ಯಗಳೂ, ಚಕ್ರಾಧಿಪತ್ಯಗಳೂ ನಿಧಾನವಾಗಿ ಚರಿತ್ರೆಯ ಪುಟಗಳಲ್ಲಿ ಆಸ್ತಂಗತವಾಗುತ್ತವೆ? ತಲೆ ಎತ್ತಿದ್ದು ಮತ್ತೇ ಧರೆಗುರುಳಲೇ ಬೇಕೆಂಬ ಜಡ ನಿಯಮವೋ? ಅಥವಾ ಕಾರ್ಯಕಾರಣ ಸಂಬಂಧಗಳ ಕ್ರಿಯಾವಳಿಯೋ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ 9
ಒಬ್ಬ ಕಲಾವಿದನ ಮೇಲೆ, ಇನ್ನೊಬ್ಬ ದೊಡ್ಡ ಕಲಾವಿದನ ಪ್ರಭಾವಗಳು ಆಗೋದನ್ನ ಗುರುತಿಸುವುದು ಬಹಳ ಕಷ್ಟ. ಯಾಕೆ ಅಂತಾ ಹೇಳಿದರೆ, ಅವರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರಿರುತ್ತಾರೆ ಹೊರತು, ನಿಮ್ಮ ಕೃತಿಗಳ ಮೇಲಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 560
ನನ್ನ ತಲೆಯಲ್ಲಿ ಆಗುತ್ತಿರುವ ಪ್ರಳಯವನ್ನು ನಾನಿನ್ನೂ ಶೇಕಡ ಹತ್ತರಷ್ಟು ಕೂಡ ಹೇಳಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 736
ಚರಿತ್ರೆಯನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲೇ ದಾರಿ ತಪ್ಪಿದ್ದೆವೋ ಏನೋ! ಕನಸು ಕಾಣುವುದು, ಪ್ರಯತ್ನಿಸುವುದು ತಪ್ಪಲ್ಲ. ಆದರೆ ಚರಿತ್ರೆ ಕನಸುಗಳನ್ನೆಲ್ಲ ನನಸಾಗಲು ಬಿಡುವುದಿಲ್ಲವೆಂಬ ಅರಿವು ನಮಗಿರುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 107
ಕೆಲವರು ಕಾಲ ಕಳೆಯೋದು ಹ್ಯಾಗೆ ಅಂತ ಲಾಟರಿ ಹೊಡೀತಾ ಇರ್ತಾರೆ. ನನಗೆ ಎಲ್ಲವೂ ಒಂದು ದಿನದಲ್ಲಿ ಮುಗಿದು ಹೋಗಿದೆ ಅನ್ನಿಸ್ತಿದೆ. ನಾನು ಅಂದುಕೊಂಡಿದ್ದನ್ನೆಲ್ಲಾ ಮಾಡಿ ಮುಗಿಸೋಕೆ ಇನ್ನೂ ಐವತ್ತು ವರ್ಷ ಆಯಸ್ಸುಬೇಕು ಕಣ್ರೀ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 538, DECEMBER 22, 2001, ಕನ್ನಡ ಪ್ರಭ
ನಾನು ಸಿತಾರ್, ಕುಂಚ, ಪೆನ್ನು, ಕ್ಯಾಮೆರಾ ಎಲ್ಲವನ್ನೂ ಹಿಡಿಯುತ್ತೇನೆ. ಅವೆಲ್ಲವೂ ಒಂದರ ಅಭಿವ್ಯಕ್ತಿ. ಅವುಗಳ ನಡುವೆ ಯಾವುದೇ ವ್ಯತ್ಯಾಸ ಕಾಣದು. ಅದು ಬೇರೆಯವರಿಗೆ ಬಹುಮುಖ ಪ್ರತಿಭೆಯಂತೆ ಕಾಣುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 515
I HAVE LEARNT, ಆಶಾವಾದ, ನಿರಾಶಾವಾದದ ಆಚೆಗೆ ಹೋಗಿ ಮನುಷ್ಯನ ಕೈಲಿ ಕೆಲ್ಸ ಮಾಡೋದು ಸಾಧ್ಯ ಅದನ್ನ ನಾನು ಅರ್ಥ ಮಾಡಿಕೊಂಡಿದ್ದೀನಿ. ಆಶಾವಾದಿಯಾಗೊ ಅಗತ್ಯವೂ ಇಲ್ಲ. ನಾನು ನಿರಾಶಾವಾದಿನೂ ಅಲ್ಲ. ಆಶಾವಾದಿನೂ ಅಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ 502
ನಾನು ಒಂದು ಯಾವಪಾಸಕನೂ ಅಲ್ಲ ಏನೂ ಅಲ್ಲ ಮಾರಾಯ, ಬಂದು ಬಂದಿದ್ದನ್ನೆಲ್ಲ INTEREST ಕಂಡಿದ್ದನ್ನೆಲ್ಲಾ ತಿಳ್ಕೊಳ್ತಾ, PARTICIPATE ಮಾಡ್ತಾ ಹೋಗ್ತಾ ಬಂದಿರೋನೇ ಹೊರತು, ಕೂತುಕೊಂಡು ಪಾಂಡಿತ್ಯ ಪಡೀಬೇಕು ಅನ್ನೋದು ಸುತಾರಾಂ ನನಗೆ ಇಷ್ಟ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, 507
ನನ್ನ ತಲೆಯಲ್ಲಿ ಆಗುತ್ತಿರುವ ಪ್ರಳಯವನ್ನು ನಾನಿನ್ನೂ ಶೇಕಡ ಹತ್ತರಷ್ಟು ಕೂಡ ಹೇಳಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 736
ನಾವೆಲ್ಲ ಕೈಗೆ ವಾಚ್ ಕಟ್ಟಿಕೊಳ್ಳುತ್ತೇವೆ. ದಿನವೂ ಏಳುತ್ತಿದ್ದಂತೆಯೇ ಗಂಟೆ ನೋಡಿಕೊಳ್ಳುತ್ತಾ ನಮ್ಮ ದಿನವನ್ನು ಆರಂಭಿಸುತ್ತೇವೆ. ಹಣ ಸಂಪಾದಿಸಬಹುದು, ಆಸ್ತಿ ಸಂಪಾದಿಸಬಹುದು ಆದರೆ ಕಳೆದುಹೋಗುತ್ತಾ ಇರುವ ಕಾಲವನ್ನು ಮಾತ್ರ ಎಂದೆಂದೂ ಸಂಪಾದಿಸಲು ಸಾಧ್ಯವಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇಶ ವಿದೇಶ 1 , ಪುಟ 42
ನಾನು ನನ್ನತನದ ಅಭಿವ್ಯಕ್ತಿಗಾಗಿ ಯಾವುದೇ ವಿಶಿಷ್ಟ ನಿರೂಪಣಾ ತಂತ್ರವನ್ನಾಗಲಿ, ಶೈಲಿಯನ್ನಾಗಲಿ ರೂಪಿಸಿದ್ದೆ ಎಂದು ತಿಳಿಯಬೇಡಿ. ನನ್ನ ಅನುಭವಗಳನ್ನು ಯಾವ ತಂತ್ರಗಾರಿಕೆಯೂ ಇಲ್ಲದೆ ಸ್ಪಷ್ಟವಾಗಿ, ನೇರವಾಗಿ ನನ್ನೆಲ್ಲ ಅಭಿಜಾತ ವಿನೋದ, ಹಾಸ್ಯ ಕುತೂಹಲ, ಲವಲವಿಕೆಯೊಂದಿಗೆ ಓದುಗರಿಗೆ ತಿಳಿಸುವುದಷ್ಟೇ ನಾನು ಮಾಡಿದ್ದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 298
ನಮ್ಮ ತಂದೆಯವರಿಗಾಗಲಿ, ಶಿವರಾಮ ಕಾರಂತರಿಗಾಗ್ಲಿ ಪ್ರಶಸ್ತಿ ಬಂದಾಗ ಅದು ಪ್ರಶಸ್ತಿಗೆ ಪ್ರಶಸ್ತಿ. ಯಾಕಂದ್ರೆ ಅಷ್ಟು ದೊಡ್ಡ ವ್ಯಕ್ತಿತ್ವಗಳಿಗೆ ಮರ್ಯಾದೆ ಕೊಟ್ಟಾಗ ಮರ್ಯಾದೆ ಕೊಟ್ಟವರಿಗೆ ಮರ್ಯಾದೆ ಬರುತ್ತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ಜ್ಞಾನ ಅಜ್ಞಾನ ಎರಡೂ ಅವಳಿಗಳು. ಆದರೆ ಅನ್ವೇಷಣೆ, ತಿಳಿಯುತ್ತಾ ಹೋಗುವುದು ಸಹ ಮನಸ್ಸಿನ ಅನುಷಂಗಿಕ ಗುಣ. ಮನಸ್ಸು ಅರಿವಿನ ಹಾದಿಯಲ್ಲಿ ಮುಂದೊತ್ತುತ್ತಲೇಹೋಗುತ್ತದೆ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೋಮಾಂಚನಕ್ಕಾದರು ಮನಸ್ಸು ಮುಂದುವರಿಯುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜೀವನ ಸಂಗ್ರಾಮ, ಮುನ್ನುಡಿ
ವರ್ಗ ತಾರತಮ್ಯದಲ್ಲಿ ಒಬ್ಬ ಕಷ್ಟಪಟ್ಟು ದುಡಿದು ಶ್ರೀಮಂತನಾಗಿ ಮೇಲ್ವರ್ಗಕ್ಕೇ ಏರಬಹುದು,ಇಲ್ಲವೇ ದುಂದು ಮಾಡಿ ನಷ್ಟ ಕಟ್ಟಿಕೊಂಡು ಕೆಳವರ್ಗಕ್ಕೆ ಇಳಿಯಲು ಬಹುದು.ಆದರೆ ವರ್ಣ ತಾರತಮ್ಯದಲ್ಲಿ ಒಬ್ಬ ಹುಟ್ಟಿದಂದಿನಿಂದ ಸಾಯುವವರೆಗೆ ಯಾವ ವರ್ಣದಲ್ಲಿ ಹುಟ್ಟಿದನೋ ಅಲ್ಲೇ ಇರಬೇಕಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮುಂದೇನಾಗಬಹುದು ಎಂಬುದಕ್ಕೆ ಹಿಂದೇನಾಗಿತ್ತು ಎಂದು ತಿಳಿಯುವುದು ಬಹುಮುಖ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ-೨, ಪುಟ ೭೮
ಅಪ್ಪಅಮ್ಮಂದಿರಿಗೆಲ್ಲ ತಿಳಿಸಿ ಬಂಧು ಭಾಂಧವರನ್ನೆಲ್ಲಾ ಸಂತೋಷ ಸಾಗರದಲ್ಲಿ ಮುಳುಗಿಸಿ ಮದುವೆಯಾಗಬೇಕು ಇತ್ಯಾದಿ ಭ್ರಮೆಯಿಂದ ನಾನು ಈಗ ಪಾರಾಗಿದ್ದೇನೆ. ನನ್ನ ಮದುವೆ ನನ್ನದೇ ಹೊರತು ಇನ್ಯಾರದ್ದೂ ಅಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿಯಲ್ಲಿನ ಒಂದು ಪತ್ರ, ಪುಟ 54
ಮಕ್ಕಳು, ಸ್ಕೂಲ್, ಕ್ಲಾಸ್ ದೊಡ್ಡ ಪ್ರಪಂಚ ಅಂತಾ ತಿಳ್ಕಂಡವೆ. ಅದರಾಚೆಗಿನ ವಿಶಾಲ ಜಗತ್ತಿನ ಬಗ್ಗೆ ಇವತ್ತಿನ ಮಕ್ಕಳಿಗೆ ಅರಿವೇ ಬರಲ್ಲ ಅನ್ನೋದು ನೋವಿನ ವಿಚಾರ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 293, 2005
ಪರಿಸರ ಅನ್ನೋದು ಏನು? ಮನುಷ್ಯನ ಸಮಾಜ ಅನ್ನೋದು ಮತ್ತು ಮನುಷ್ಯನ ಆತ್ಮ ಅನ್ನೋದು ಈ ಮೂರು ಹಾಳಾದರು ಒಟ್ಟಿಗೆ ಹಾಳಾಗೋದು; ಉದ್ಧಾರ ಆದರೂ ಒಟ್ಟಿಗೆ ಉದ್ಧಾರ ಆಗೋದು! – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 605
ಚರಿತ್ರೆಯನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲೇ ದಾರಿ ತಪ್ಪಿದ್ದೆವೋ ಏನೋ! ಕನಸು ಕಾಣುವುದು, ಪ್ರಯತ್ನಿಸುವುದು ತಪ್ಪಲ್ಲ. ಆದರೆ ಚರಿತ್ರೆ ಕನಸುಗಳನ್ನೆಲ್ಲ ನನಸಾಗಲು ಬಿಡುವುದಿಲ್ಲವೆಂಬ ಅರಿವು ನಮಗಿರುವುದಿಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 107
ಮನುಷ್ಯ ಪ್ರಜ್ಞೆಯ ಮಹಾ ದುರಂತವೆಂದರೆ ವರ್ತಮಾನದ ಕ್ರಿಯೆ ಚರಿತ್ರೆಯಾದ ಮೇಲೇ ನಮಗೆ ನಮ್ಮ ಕ್ರಿಯೆವಳಿಗಳು ಚಾರಿತ್ರಿಕ ಸನ್ನಿವೇಶದಲ್ಲಿ ಸಂಗತವಾಗಿತ್ತೋ ಅಂಗವಾಗಿತ್ತೋ ಅರಿವಾಗುವುದು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 107
ಬೆಳಿಗ್ಗೆ ಎದ್ದು ಮಕ್ಕಳಿಗೆ ಅಷ್ಟಷ್ಟು ದಪ್ಪದ ಪುಸ್ತಕಗಳನ್ನೆಲ್ಲ ಬೆನ್ನು ಮೇಲೆ ಹೊರಿಸಿಬಿಟ್ಟು, ಒಂದೋ ಎರಡೋ ಲಕ್ಷ ಫೀಸ್ ಕೊಟ್ಟು ಕಳ್ಸೋದು, ಯಾರ್ಯಾರು ಎಷ್ಟೆಷ್ಟು ಹೆಚ್ಚಿಗೆ ಹೋಮ್ ವರ್ಕ್ ಕೊಟ್ಟು ಪ್ರಾಣ ತಿಂತರೋ, ಅಂತಂತ ಸ್ಕೂಲುಗಳೇ ಬೆಸ್ಟು ಅಂತ ತಾಯಂದಿರೆಲ್ಲ ಅಲ್ಲಿಗೆ ಕರ್ಕೊಂಡು ಹೋಗಿ ಬಿಟ್ಟು ಅವರನ್ನು ಕಾಯ್ತ ಕೂತ್ಕೊಳ್ಳೋದು. ನಿಮ್ಮ ಕರ್ಮ ಯಾವತ್ತಾದ್ರೂ ಇದರಿಂದ ಬಚಾವಾಗೋದಿಕ್ಕೆ ಸಾಧ್ಯನಾ! ಅಲ್ರೀ ಜೀವನದಿಂದ ಕಲಿಯೋದು ವಿಪರೀತ ಇದೆ ಅನ್ನೋದನ್ನೇ ಮರೆತು ಬಿಟ್ಟು ನೀವು, ಹೇಗೆ ಉದ್ಧಾರ ಆಗ್ತಾರಾ ಹೇಳಿ ? ಜೀವನ ಎಷ್ಟು ಕಾಂಪ್ಲಿಕೇಟೆಡ್ ಅಂಡ್ ಕಾಂಪ್ಲೆಕ್ಸ್ ಆಗಿದೆ ಅಂದರೆ, ಎಲ್ಲವನ್ನೂ ಟೆಕ್ಸ್ಟ್ಯಿಂದ ಟಿವಿಯಿಂದ ಕಲಿಸೋದಕ್ಕೆ ಸಾಧ್ಯ ಇಲ್ಲ. ಜೀವನ ಕಣ್ಣುಬಿಟ್ಟು ನೋಡಿ ಸ್ವಂತ ಅನುಭವಿಸುತ್ತ ಕಲಿಯೋದು 90 ಪರ್ಸೆಂಟ್ ಆದರೆ ಶಾಲೆಯಲ್ಲಿ ಟೆಕ್ಸ್ಟ್ ಬುಕ್ನಿಂದ ಕಲಿಯೋದು 10 ಪರ್ಸೆಂಟ್ ಮಾತ್ರ! – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 599
ಅಪ್ಪನ ಆಸ್ತಿಯ ಮೇಲೆ ಹೊಟ್ಟೆ ಹೊರೆಯುವ ಪರತಂತ್ರ ಜೀವಿಗೆ ಆತ್ಮವೇ ಇರುವುದಿಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 4
ಕೆಟ್ಟಮೇಲೆ ಬುದ್ಧಿ ಬಂತು ಅನ್ನೋ ಗಾದೆಯಿದೆಯಲ್ಲ ತಪ್ಪು. ಕೆಡ್ತಾ ಕೆಡ್ತಾ ಬುದ್ಧೀನೂ ಕೆಡ್ತಾ ರೋಗ ಜೋರಾಗ್ತಾ ಹೋಗುತ್ತೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 54
ಸಾವಿನ ಭಯ ಹೋಗೋವರೆಗೂ ನೀವು ನಿಜವಾದ ಮನುಷ್ಯರಾಗೋಲ್ಲ ತಿಳ್ಕೊಳಿ. – ಕೆ.ಪಿ ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 129
ಗಂಭೀರವಾಗಿ ಬದುಕಿ, ಗಂಭೀರವಾಗಿ ಸಾಯೋಣ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 129
ನ್ಯಾಯವಾಗಿ ವಿಚಾರವಾದಿಗೆ ದೆವ್ವ ಇಲ್ಲ, ದೇವರು ಇಲ್ಲ ಅಂತ ತೀರ್ಮಾನ ಕೊಡೋ ಹಕ್ಕೇ ಇಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 156
ಕಣ್ಮುಂದೆ ನಡೆಯೋದನ್ನ ಯಾವನು ಸರಿಯಾಗಿ ನೋಡೋದು ಕಲಿತುಕೊಳ್ಳುವುದಿಲ್ಲವೋ, ಅವನಿಗೆ ಹಿಂದೇನಾಯ್ತುಂತಾನೂ ಗೊತ್ತಾಗೋದಿಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 205
ಮದುವೆ ಎಂದೂ ಮಹತ್ತರ ಘಟನೆಯಲ್ಲ. ಅನಂತರದ ಬದುಕು ಮುಖ್ಯವಾದುದು. ಸ್ವಾತಂತ್ಯ್ರವನ್ನು ಗಳಿಸಿಕೊಂಡ ದಾರಿ ಮುಖ್ಯವಾದುದು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 131
LOVE ಅಂದರೆ ಏನು ಗೊತ್ತ, ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು. ದೈಹಿಕವಾಗಿ ಮಾನಸಿಕವಾಗಿ. ನೀವು ತಿಳಿದಿರೋ ಅಂಥ ಸುಲಭದ್ದಲ್ಲ. – ಕೆ. ಪಿ ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 32
LOVE IS SUCH A SIMPLE REALITY TO ME THAT I LOVE YOU SO MUCH. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 56
ನಾನು ಪ್ರೇಮಿಸಿದವಳನ್ನೇ ನಾನು ಮದುವೆಯಾಗುತ್ತೇನೆ ಜಾತಿ ಪಂಥಗಳನ್ನೆಲ್ಲಾ ತೊರೆದು ಎನ್ನುವುದು ಒಂದು ಚೇತನದ ವ್ಯಕ್ತಿ ನಿಷ್ಠೆಯ ಮೊದಲ ಕುರುಹು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ ಪುಟ 86
ನನ್ನ ಕಾಲಮೇಲೆ ನಾನು ನಿಲ್ಲದೆ ಮದುವೆಯಾದರೆ ಗುಲಾಮೀಯತೆಗೆ ನನ್ನನ್ನು ಜೊತೆಗೆ ಇನ್ನೊಬ್ಬರನ್ನು ಗುರಿ ಮಾಡಿದಂತೆ. ಮಕ್ಕಳಾದರೆ ಗುಲಾಮರಿಗೆ ಜನ್ಮವಿತ್ತಂತೆ… – ಕೆ. ಪಿ. ಪೂರ್ಣಚಂದ್ರ ತೇಜಸ್ವಿ,, ನನ್ನ ತೇಜಸ್ವಿ, ಪುಟ 131
I WANT TO EXIST AS A HUSBAND TO A WIFE AND NOTHING ELSE. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ ಪುಟ 54
ಪರಿಸರದ ನುಡಿಗಳು
ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ
ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನನಗೂ ಕಾಡಿಗೂ ಇರುವ ಸಂಬಂಧ ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲಸಾಧ್ಯವಾದಷ್ಟು ನಿಗೂಢವಾದದ್ದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಸಮಾಜವಾದ ಮನುಷ್ಯರೆಲ್ಲರಲ್ಲೂ ಸಮಾನತೆಯನ್ನು ಬೋಧಿಸಿದ್ದರೆ ಇಕಾಲಜಿ ಇಡೀ ವಿಶ್ವದ ಸರ್ವಚರಾಚರ ವಸ್ತುಗಳೂ ಸಮಾನ, ಮುಖ್ಯ ಎಂದು ಸಾಕ್ಷ್ಯಾಧಾರಗಳ ಸಮೇತ ತೋರಿಸಿಕೊಡುತ್ತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಹಕ್ಕಿಗಳು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾನು ಮನುಷ್ಯರ ಸಾಮಾಜಿಕ ಕಥಾವಸ್ತುವನ್ನು ತೆಗೆದುಕೊಂಡು ಬರೆದರೂ ಅಲ್ಲಿ ಹಕ್ಕಿಗಳು ನುಸುಳಿರುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಮುನ್ನುಡಿ
ಕಾಡು ಕಾಳದಂಧೆಗಳ ತವರುಮನೆಯಾಗುತ್ತಿದೆ. ಕಾಡಿನಿಂದ ಉತ್ಪತ್ತಿಯಾಗುತ್ತಿರುವ ಕಾಳಧನ ನಮ್ಮ ದೇಶದ ಅತ್ಯುನ್ನತ ರಾಜಕೀಯವನ್ನು ಸಹ ನಿಯಂತ್ರಿಸುತ್ತಿದೆ. ಇಲ್ಲಿ ಕಟ್ಟುವ ಅಣೆಕಟ್ಟಗಳಾಗಲಿ, ಮುಳುಗಡೆಯಾಗುವ ಕಾಡುಗಳಾಗಲಿ, ಕಲ್ಲು, ಅದಿರುಗಳನ್ನು ತೆಗೆಯುವುದಾಗಲೀ ಜನಗಳಿಗಿಂತಲೂ ಹೆಚ್ಚಾಗಿ ರಾಜಕಾರಣಿಗಳಿಗೂ ರಾಜಕೀಯಕ್ಕೂ ಅಗತ್ಯವಾಗತೊಡಗಿದೆ. ಕಾಳವ್ಯವಹಾರಗಳ ವಿಷವೃತ್ತ ಈ ಮಟ್ಟ ತಲುಪಿದಮೇಲೆ ಕಾನೂನು ಮತ್ತು ನ್ಯಾಯಾಲಯಗಳು ಇದನ್ನು ಪ್ರತಿರೋಧಿಸಲಾರವು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್
ಕಾಡುಗಳು ಇವತ್ತು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ. ಈ ಕಾಡುಗಳ ಒಂದೊಂದೇ ಮರ ಎರಡು ಮೂರು ಲಕ್ಷ ಬೆಲೆಬಾಳುತ್ತವೆ. ಕಲ್ಲು ಕಳ್ಳರಿಗೆ, ಮರಗಳ್ಳರಿಗೆ, ಗಂಧ ಚಕ್ಕೆ ಕಳ್ಳ ಸಾಗಾಣಿಕೆ ಮಾಡುವ ಖದೀಮರಿಗೆ ಕಣ್ಣು ಹರಿಸಿದಲ್ಲೆಲ್ಲಾ ಹಣ ರಾಶಿ ಬಿದ್ದಿರುವಂತೆ ಕಾಣುತ್ತದೆ. ದುಡ್ಡು ಈ ರೀತಿ ಕೋಡಿ ಬಿದ್ದುರುವಲೆಲ್ಲಾ ಏನೇನು ರೂಪುಗೊಳ್ಳುತ್ತದೆಯೋ ಅದೆಲ್ಲಾ ಸಹ್ಯಾದ್ರಿಯ ಕಾಡಿನೊಳಗೆ ಶುರುವಾಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್
ನಮ್ಮ ಮನೆಯ ಬಳಿ ಈ ಹೂವಿನ ಹಕ್ಕಿಗಳು ಸದಾ ಗೂಡು ಕಟ್ಟುತ್ತಲೇ ಇರುತ್ತವೆ. ಒಂದು ಸಾರಿಯಂತೂ ಇವು ಹೇಗೆ ಗೂಡು ಕಟ್ಟುವುದನ್ನು ಪ್ರಾರಂಭಿಸುತ್ತವೆ ನೋಡೋಣವೆಂದೇ ಬೆಳಗಿನಿಂದ ಸಂಜೆವರೆಗೆ ನೋಡಿದ್ದೇನೆ. ಗಂಡು ಹೆಣ್ಣು ಹಕ್ಕಿಗಳೆರಡೂ ಸೇರಿ ಗೂಡು ಕಟ್ಟುತ್ತಿದ್ದವು. – ಮಿಂಚುಳ್ಳಿ ಪುಸ್ತಕದಿಂದ
ಬಹುಶಃ ನಾವು ಒಂದು ಪರಿಸರದಲ್ಲಿ ಹೊಸದೇನನ್ನು ನಿರ್ಮಾಣ ಮಾಡಿದರೂ ಅದು ತನ್ನ ಸುತ್ತಮುತ್ತಿನೊಂದಿಗೆ ಸ್ವಾಭಾವಿಕವೆನ್ನುವಂತೆ ವೀಲೀನವಾಗದ ಹೊರತೂ ಅದು ಕಾಡಿನ ಹಕ್ಕಿಗಳನ್ನು ಆಕರ್ಷಿಸುವುದಿಲ್ಲೆಂದು ಕಾಣುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕ, ಪುಟ ೧೪
ಪ್ರಪಂಚದ ಅಗಾಧ ಪಕ್ಷಿ ಸಂಕುಲವನ್ನು ಗಮನಿಸಿದಾಗ ನಾನು ಎಷ್ಟೇ ಹಕ್ಕಿಗಳನ್ನು ನೋಡಿದ್ದರೂ ಅದು ಸಾಸಿವೆ ಕಾಳಿಗೆ ಸಮನಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೆಜ್ಜೆ ಮೂಡದ ಹಾದಿ, ಮುನ್ನುಡಿಯಿಂದ
ವಿಜ್ಞಾನವನ್ನು ಬೇರೆಯವರು ಪ್ರಶ್ನಿಸುವ ಅಗತ್ಯವೇ ಇಲ್ಲ! ಏಕೆ ಅಂತ ಹೇಳಿದರೆ, ಪ್ರತಿ ಹೆಜ್ಜೆಯಲ್ಲೂ ವಿಜ್ಞಾನ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಲೇ ವಿಕಾಸವಾಗುತ್ತಾ ಹೋಗುವಂಥದ್ದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಜಯಂತ್ ಕಾಯ್ಕಿಣಿ ಅವರಿಗೆ ನೀಡುವ ಸಂದರ್ಶನದಿಂದ
ಯೋಚಿಸಿದಷ್ಟು ಪರಿಸರ ರಹಸ್ಯಮಯವಾಗುತ್ತದೆ. ಸಂಪೂರ್ಣವಾಗಿ ತಿಳಿಯುತ್ತೇನೆಂದು ಹೊರಡುವುದು ಮೂರ್ಖತನವೇ ಸರಿ. ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದನ್ನು ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶಪೂರ್ವಕ ಸೃಷ್ಟಿ ಎನ್ನುವುದೇ ಸುಳ್ಳು. ಉದ್ದೇಶಗಳೆಲ್ಲಾ ನಾವೇ ಆರೋಪಿಸಿಕೊಂಡಿರುವುದು. ಈ ಮಿಥ್ಯಾರೋಪವನ್ನು ನೀವು ಬಿಟ್ಟ ಮಾರನೆಯ ಕ್ಷಣವೇ ನಿಮಗೆ ಹೊಸದೊಂದು ವಿಶ್ವರೂಪ ದೃಗ್ಗೋಚರವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕುಟುರದ ಕೂಗು ಕೇಳಿದರೆ ಸಾಕು ನಮ್ಮ ತಂದೆಯವರು ಯಾವುದೇ ಕೆಲಸ ಮಾಡುತ್ತಿರಲಿ ಅದನ್ನು ನಿಲ್ಲಿಸಿ ಒಂದು ನಿಮಿಷ ಧ್ಯಾನಮಗ್ನರಂತೆ ಸುಮ್ಮನೇ ನಿಲ್ಲುತ್ತಿದ್ದರು. ನನಗೆ ಇವರು ಹಕ್ಕಿಯನ್ನು ಸಹ ನೋಡದೆ ಕೇವಲ ಕೂಗಿಗೆ ಏಕೆ ಹೀಗೆ ಸಂತೋಷ ಪಡುತ್ತಾರೆ ? ಎಂದು ಆಶ್ಚರ್ಯವಾಗುತ್ತಿತ್ತು. ಒಂದು ಸಾರಿ ಈ ಬಗ್ಗೆ ವಿವರಣೆ ಕೊಡುತ್ತಾ ಅವರು ಕುಟುರದ ಕೂಗು ಹೇಗೆ ನನಗೆ ನನ್ನ ಚಿಕ್ಕಂದಿನ ಮಲೆನಾಡಿನ ಅನುಭವಗಳ ಅವಿಭಾಜ್ಯ ಅಂಗವಾಗಿದೆಯೆಂದರೆ ಆದರ ಕೂಗು ಕೇಳಿದರೆ ಸಾಕು ನನ್ನ ಇಡೀ ಚೇತನ ತಟಕ್ಕನೆ ಮಲೆನಾಡಿಗೆ ಸ್ಥಳಾಂತರ ಹೊಂದುತ್ತದೆ. ವಿಸ್ತಾರ ಗದ್ದೆ ಕೋಗು, ಸುತ್ತ ಕವಿದಿರುವ ದಟ್ಟ ಕಾಡು, ಮಾಲೆ ಮಾಲೆಯಾಗಿ ತಲೆಯೆತ್ತಿ ನಿಂತಿರುವ ಪರ್ವತ ಶ್ರೇಣಿಗಳು ಎಲ್ಲ ಬರಿಯ ಆದರ ಒಂದು ಕೂಗಿನಿಂದ ನನ್ನೆದುರು ಮೈವೆತ್ತು ನಿಲ್ಲುತ್ತದೆ. ಕುಟುರದ ಕೂಗು ನಿಮ್ಮೆಲ್ಲರಿಗೂ ಒಂದು ಹಕ್ಕಿಯ ಕೂಗಾದರೆ ನನಗೆ ಅದೊಂದು ಮಂತ್ರ ಎಂದು ಹೇಳಿದರು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕ
ನಾನು ಹಕ್ಕಿಗಳ ಬಗ್ಗೆ ಮಾತಾಡುವುದನ್ನು ಬರೆಯುವುದನ್ನು ನೋಡಿ ನನ್ನ ಮಿತ್ರರು ನಾನು ತುಂಬಾ ‘ಬರ್ಡ್ ವಾಚಿಂಗ್’ ಅಥವ ‘ಪಕ್ಷಿ ವೀಕ್ಷಣೆ ಮಾಡುತ್ತೇನೆಂದು ತಿಳಿದಿದ್ದಾರೆ. ಆದರೆ ವಾಸ್ತವವಾಗಿ ನಮ್ಮ ತೋಟದಲ್ಲಿ ಅದು ತಲೆಕೆಳಕಾಗಿ ಹಕ್ಕಿಗಳೇ ಮನುಷ್ಯ ವೀಕ್ಷಣೆ ಮಾಡುತ್ತಾ ನಮ್ಮ ಚಲನವಲನಗಳ ಗೂಢಚರ್ಯೆ ನಡೆಸುತ್ತಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕ, ಪುಟ ೧೫
ಬುಕ್ ವರ್ಮ್ ತರ ಅಧ್ಯಯನ ಮಾಡಿದ ಪರಿಸರವಾದಿ ಅಲ್ಲ ನಾನು. MY RELATIONSHIP WITH ENVIRONMENT IS SOMETHING TOTALLY DIFFERENT. ಸಂಪೂರ್ಣ ಬೇರೆ ರೀತಿ ಇರೋದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಉದಯ ಟಿವಿಗೆ ನೀಡಿದ ಸಂದರ್ಶನದಿಂದ
ಹಳ್ಳಿಗರು ವೈಜ್ಞಾನಿಕವಾಗಿ ಹಕ್ಕಿಯ ನಡವಳಿಕೆಗಳನ್ನು ಅಭ್ಯಾಸ ಮಾಡಿ ಹಕ್ಕಿಗಳ ಬಳಗ, ಜಾತಿ ಇತ್ಯಾದಿಗಳ ಆಧಾರದಮೇಲೆ ಹೆಸರಿಡದಿದ್ದರೂ ಹಕ್ಕಿಯ ನಡವಳಿಕೆಯ ಯಾವುದೋ ಅಂಶವನ್ನು ಆಧರಿಸಿಯೋ, ಇಲ್ಲವೆ ಯಾವುದೋ ರೂಪ ಸಾದೃಶ್ಯದ ಮೇಲೋ ಹೆಸರಿಟ್ಟಿರುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೫
ಕಾಡು ಮತ್ತು ಕಾಡುಪ್ರಾಣಿಗಳನ್ನು ಮನುಷ್ಯ ಸವಾಲಿನಂತೆ ಎದುರಿಸಬೇಕಾಗಿದ್ದ ಕಾಲ ಈ ತಲೆಮಾರುಗಳ ಪಾಲಿಗೆ ಕೇವಲ ದೆವ್ವ, ಭೂತ, ಪೌರಾಣಿಕ ಕತೆಗಳಂತೆ ಕಾಣುತ್ತವೆ . – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಬೆಳ್ಳಂದೂರಿನ ನರಭಕ್ಷಕ
ಫ್ಲೈಯಿಂಗ್ ಸಾಸರ್ಸ್ ಈ ಶತಮಾನದ ಪರಮರಹಸ್ಯಗಳಾಗಿವೆ ಆಧುನಿಕ ಜಗತ್ತಿನ ಅತ್ಯುನ್ನತ ತಂತ್ರಜ್ಞಾನ ಮತ್ತು ವೈಜ್ಞಾನಿಕ ತಿಳುವಳಿಕೆಗು ಈ ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲ . ಆದರೆ ಇವುಗಳ ಅಸ್ತಿತ್ವ ನಿಜ ಎಂದು ತೀರ್ಮಾನಿಸಲು ಸಾಧ್ಯವಾಗುವಷ್ಠು ಸಂಶೋಧನೆ , ವಿಶ್ಲೇಷಣೆಗಳನ್ನು ವಿಜ್ಞಾನಿಗಳು,ಖಗೋಳ ಶಾಸ್ತ್ರಜ್ಞರೂ ನಡೆಸಲು ಸಾಧ್ಯವಾಗಿರುವುದೇ ಆಧುನಿಕ ಜಗತ್ತಿನ ಮಹತ್ ಸಾಧನೆ ಎನ್ನಬಹುದು . – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಫ್ಲೈಯಿಂಗ್ ಸಾಸರ್ಸ್ ಪುಸ್ತಕದಿಂದ
ಪರಿಸರ ಮತ್ತು ಪ್ರಕೃತಿಯ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರೇ. ನಮಗೆ ಕುತೂಹಲ ಹುಟ್ಟಿಸಬೇಕೆಂದು ಉದ್ದೇಶವೇನೂ ಅವರಿಗೆ ಇದ್ದಂತೆ ಕಾಣಲಿಲ್ಲ. ಅದರಲ್ಲಿ ಅವರಿಗೆ ಇದ್ದ ಆಸಕ್ತಿಯ ಪರಿಣಾಮವಾಗಿಯೇ ನಮಗೂ ಆಸಕ್ತಿ ಉಂಟಾಯ್ತು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ ಪುಸ್ತಕದಿಂದ
ಮಕ್ಕಳಿಗೆ ಶುಷ್ಕ ವೈಜ್ಞಾನಿಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ, ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೀವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ,
ಪಕ್ಷಿಗಳನ್ನು ಕೇವಲ ಪಕ್ಷಿವೀಕ್ಷಕನಾಗಿ ನಾನು ನೋಡಿರುವುದು ತುಂಬಾ ಕಡಿಮೆ. ಅವು ನಾನು ಬದುಕುತ್ತಿರುವ ಪರಿಸರದ ಅವಿಭಾಜ್ಯ ಅಂಗಗಳಾಗಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಮುನ್ನುಡಿಯಿಂದ
ನಾನು ವಿಜ್ಞಾನ ಪದವೀಧರನಲ್ಲ, ವಿಜ್ಞಾನಿಯೂ ಅಲ್ಲ, ನಾನು ಉಚ್ಛ ಶಿಕ್ಷಣ ಪಡೆದದ್ದು ಸಾಹಿತ್ಯದಲ್ಲಿ. ಅದರೆ ಹಳ್ಳಿಗೆ ಬಂದ ಮೇಲೆ ಸುತ್ತಮುತ್ತಲ ಅನೇಕ ಕೌತುಕಮಯ ವಿದ್ಯಮಾನಗಳನ್ನು ನೋಡುತ್ತಾ ಅವುಗಳ ಬಗ್ಗೆ ತಿಳಿಯುತ್ತಾ ಬಂದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪೂರ್ಣಚಂದ್ರ ತೇಜಸ್ವಿ
ಕಾಡಿನ ರಂಗಸ್ಥಳದಲ್ಲಿ ನಡೆಯುವುದೆಲ್ಲಾ ಸುಖಾಂತ್ಯವಾಗುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ ಪುಸ್ತಕದಿಂದ
ಸಲೀಂ ಆಲಿ ನಾಲ್ಕೇ ಸಾಲುಗಳಲ್ಲಿ ಒಂದು ಹಕ್ಕಿಯ ವೈಲಕ್ಷಣ್ಯವನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತಾರೆಂದರೆ ಅದನ್ನು ಓದಿದವನಿಗೆ ತಾನು ನೋಡಿದ್ದು ಇಂಥದ್ದೇ ಹಕ್ಕಿ ಎಂದು ಅನುಮಾನಕ್ಕೆಡೆಯಿಲ್ಲದಂತೆ ಗೊತ್ತಾಗುತ್ತದೆ. ಒಂದು ಹಕ್ಕಿಯ ಯಾವ ವರ್ತನೆ ಅಥವಾ ಬಣ್ಣ ಅಥವಾ ಹಾರುವ ಭಂಗಿ ಅದನ್ನು ಮಿಕ್ಕೆಲ್ಲ ಹಕ್ಕಿಗಳಿಂದ ಪ್ರತ್ಯೇಕಿಸುತ್ತದೆ ಎಂದು ತಿಳಿಸುವುದರಲ್ಲಿ ಸಲೀಂ ಆಲಿ ಸಿದ್ಧಹಸ್ತರು. ಒಂದು ಹಕ್ಕಿಯನ್ನು ನೋಡಿಬಂದು ನೀವು ಆ ಹಕ್ಕಿ ಯಾವುದೆಂದು ಪತ್ತೆ ಮಾಡಲು ಸಲೀಂ ಆಲಿಯವರ ವಿವರಣೆ ಓದಿದರೆ ಅನೇಕ ದಶಕಗಳ ಮೊದಲೆ ಅದನ್ನು ಬರೆದ ಸಲೀಂ ಆಲಿ ನಿಮ್ಮೊಡನೆ ಇದ್ದೇ ಬರೆದರೆಲೇನೋ ಎಂದು ಅನುಮಾನ ಬರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೨೨
ಹಕ್ಕಿಗಳು ವಾತಾವರಣದ ವೈಪರೀತ್ಯಗಳಿಗೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತವೆಂದರೆ ಪರಿಸರದ ಆರೋಗ್ಯ ಅನಾರೋಗ್ಯಗಳಿಗೆ ಅವು ಅತ್ಯದ್ಭುತ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೮
ಹಕ್ಕಿಗಳಿಗೆ ಗೂಡು ಕಟ್ಟುವ ವಾಸ್ತು ಶಿಲ್ಪ ಎಷ್ಟು ಆಳವಾಗಿ ಅವುಗಳ ಪ್ರವೃತ್ತಿಯೊಳಗೆ ಮಿಳಿತವಾಗಿರುತ್ತದೆಂದರೆ ಯಾವ ಸಂದರ್ಭದಲ್ಲೂ ಆಯಾ ಹಕ್ಕಿಗಳು ಅವು ಕಟ್ಟಬೇಕಾದ ರೀತಿಯಲ್ಲೇ ಗೂಡು ಕಟ್ಟುತ್ತವೆಯೇ ವಿನಹ ತಮ್ಮ ಗೂಡಿನ ವಿನ್ಯಾಸವನ್ನು ವಾತಾವರಣದ ಅನುಕೂಲಕ್ಕೆ ತಕ್ಕಂತೆ ಎಂದೂ ಬದಲಿಸುವುದೇ ಇಲ್ಲ ಅಥವಾ ಇನ್ನೊಂದು ಹಕ್ಕಿಯ ಮಾದರಿಯಲ್ಲಿ ಗೂಡು ರಚಿಸುವುದೂ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೬
ನನ್ನ ಸುತ್ತಮುತ್ತ ನಡೆಯುವ ನೂರಾರು ಪರಿಸರದ ವಿದ್ಯಮಾನಗಳನ್ನು ಅದರಲ್ಲಿ ಪಾತ್ರಧಾರಿಯಾಗದೆ ಪ್ರೇಕ್ಷಕನಾಗಿ ದೂರ ನಿಂತು ನೋಡಬೇಕೆಂಬುದೆ ನನ್ನ ಉದ್ದೇಶ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಾಯೆಯ ಮುಖಗಳು, ಪುಟ 85
ಹಕ್ಕಿಗಳು ವಾತಾವರಣದ ವೈಪರೀತ್ಯಗಳಿಗೆ ಹೇಗೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆಂದರೆ ಪರಿಸರದ ಆರೋಗ್ಯ ಅನಾರೋಗ್ಯಗಳಿಗೆ ಅವು ಅತ್ಯದ್ಭುತ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಹಲವು ವರ್ಷಗಳ ಹಿಂದೆ ಅಮೆರಿಕಾದ ಕೆಂಪು ತಲೆಯ ಗರುಡನ ಸಂತತಿ ಕ್ಷೀಣಿಸಿದಾಗ ಅದಕ್ಕೆ ಕಾರಣ ಹುಡುಕಹೋಗಿಯೇ ಅಮೇರಿಕಾದ ಪರಿಸರದಲ್ಲಿ ಸರ್ವಾಂತರ್ಯಾಮಿಯಾಗಿ ಅಪಾಯಕರ ಪ್ರಮಾಣದಲ್ಲಿ ಕ್ಲೋರಿನೇಟೆಡ್ ಹೈಡ್ರೋಕಾರ್ಬನ್ ಎಂಬ ಮೃತ್ಯುಕಾರಕ ವಿಷ ಸೇರಿಹೋಗಿರುವುದು ಪತ್ತೆಯಾಯ್ತು. ಮನುಷ್ಯರಿಗೆ ಗಂಡಾಂತರ ಒದಗುವ ಎಷ್ಟೋ ಮುಂಚೆಯೇ ಹಕ್ಕಿಗಳಿಂದ ಮುನ್ನೆಚ್ಚರಿಕೆ ದೊರೆತುದಕ್ಕೆ ಇದೊಂದು ಉದಾಹರಣೆಯಷ್ಟೆ. ಆದ್ದರಿಂದ ಇಂದು ಎಲ್ಲ ಮುಂದುವರಿದ ದೇಶಗಳಲ್ಲೂ ಹಕ್ಕಿಗಳ ವೀಕ್ಷಣೆ ಬರಿಯ ಮನರಂಜನೆಗಲ್ಲದೆ ಅನೇಕ ವೈಜ್ಞಾನಿಕ ಅಂಶಗಳ ಸಂಶೋಧನೆಗೂ ನಡೆಯುತ್ತಲೇ ಇರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ,
ಪತ್ರಿಕಾ ಹೇಳಿಕೆಗಳಿಂದ ಹೋರಾಟಗಳಿಂದ ನಮ್ಮ ಕಾಡುಗಳನ್ನೂ ನದಿಗಳನ್ನೂ ಉಳಿಸಲು ಸಾಧ್ಯವಿಲ್ಲವೆಂದು ನನಗೆ ಅನುಮಾನ ಬರುತ್ತಿದೆ. ಏಕೆಂದರೆ ನಮ್ಮೆಲ್ಲಾ ಹೋರಾಟಕ್ಕೆ ಪ್ರತಿಫಲ ಇಲ್ಲಿಯವರೆಗೆ ಬಂದಿರುವುದು ಕೇವಲ ಪುರಸ್ಕಾರ ಮತ್ತು ಹೊಗಳಿಕೆಯಷ್ಟೇ ಹೊರತು ಕಾಡುಗಳು ಮತ್ತಷ್ಟು ದುರ್ಗತಿಗೆ ಹೋಗಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 149
ನನ್ನ ಎಲ್ಲ ಕೃತಿಗಳಲ್ಲೂ ಪರಿಸರದ ಬಗ್ಗೆ ಆತಂಕ, ಕಳವಳ, ಮುಂಬರುವ ತಲೆಮಾರುಗಳಿಗೆ ನಮ್ಮ ಪರಿಸರದ ಪ್ರಮುಖ ಅಂಶಗಳಾದ ಕಾಡು, ಪರ್ವತ, ನದಿ, ಪ್ರಾಣಿ, ಪಕ್ಷಿಗಳನ್ನು ಪರಿಚಯಿಸಿ ಉಳಿಸಿಕೊಡಬೇಕೆನ್ನುವ ತವಕ ಇರುವುದನ್ನು ನೋಡಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 338
ಹೊಲಸೆದ್ದು ಕೊಚ್ಚೆಗುಂಡಿಯಾಗಿ ಹರಿಯುತ್ತಿರುವ ನದಿಗಳ ಗೋಳಿನ ಜುಳುಜುಳು ನಿನಾದ ಪಾರ್ಲಿಮೆಂಟಿನಲ್ಲಿ ಕುಳಿತಿರುವವರಿಗೆ ಕೇಳುತ್ತಲೇ ಇಲ್ಲ. ಚಳವಳಿ,ಹೋರಾಟ, ಕೋರ್ಟಿನಲ್ಲಿ ಯುದ್ಧ, ಯಾವುದೂ ನಮ್ಮ ಪ್ರೀತಿಯ ಕರ್ನಾಟಕವನ್ನು ಉಳಿಸುವಲ್ಲಿ ಸಫಲವಾಗಲಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 228
ಹಕ್ಕಿಗಳಿಗೆ ಗೂಡು ಕಟ್ಟುವುದಾಗಲಿ ಅದರ ವಾಸ್ತುಶಿಲ್ಪವಾಗಲೀ ನಮ್ಮಂತೆ ಪ್ರಜ್ಞಾಪೂರ್ವಕ ಕೆಲಸವಲ್ಲ ಎನ್ನಿಸುತ್ತದೆ. ಮೊಟ್ಟೆ ಇಡುವ ಹಾಗೆ, ಮರಿ ಮಾಡುವ ಹಾಗೆ, ಉಸಿರಾಡುವ ಹಾಗೆ, ಊಟ ಮಾಡುವ ಹಾಗೆ, ಅದು ಅವುಗಳ ಅನುಷಂಗಿಕ ಪ್ರವೃತ್ತಿಯೇ ಇರಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೆಜ್ಜೆ ಮೂಡದ ಹಾದಿ, ಪುಟ 111
ಮನುಷ್ಯ ತನಗೆ ಉಪಯುಕ್ತವಲ್ಲದ್ದು ಭೂಮಿಗೆ ಅನಗತ್ಯವಾದುದು ಎಂದು ತಿಳಿದಿರುವುದರಿಂದ ಹುಳು ಹುಪ್ಪಟೆಗಳತ್ತ ಗಮನ ಕೊಡುವುದು ಕಡಿಮೆ,ಅಥವಾ ಅವುಗಳಿಂದ ಏನಾದರು ತೊಂದರೆಯಾದಾಗ ಅವುಗಳನ್ನು ನಾಶಮಾಡಲಷ್ಟೇ ಗಮನಿಸುತ್ತಾನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನಡೆಯುವ ಕಡ್ಡಿ ಹಾರುವ ಎಲೆ (ಮುನ್ನುಡಿ)
ನಮ್ಮ ಕಾಡುಕುರುಬರಿಗೆ ತೋಡರಿಗೆ ಜೇನುಕುರುಬರಿಗೆ ಗೊತ್ತಿರುವ ಇಕಾಲಜಿಯನ್ನು ಇವತ್ತು ಪಂಡಿತರು ಕ್ಲಿಷ್ಟಕರ ವಿಷಯ ಮಾಡಿ ಜನಸಾಮಾನ್ಯರು ದೂರವಾಗಿದ್ದಾರೆ. ಹಾಗಾಗಿಯೇ ಇದು ಕೇವಲ ರೇಡಿಯೋ ಟಿವಿಗಳ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ವಿಷಯವಾಗತೊಡಗಿದೆ. ಇಕಾಲಜಿ ಅಥವ ಪರಿಸರ ಸಂರಕ್ಷಣೆ ಕೇವಲ ಪಂಡಿತೋತ್ತಮರ ವಿಷಯ ಮಾತ್ರವಾದರೆ ಪರಿಸರ ವಿನಾಶ ಇದೇ ರೀತಿ ಸಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ 1 (ಮುನ್ನುಡಿ)
ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತೂ ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೧, ಪುಟ 61
ಕಾಡುಗಳು ನಾಶವಾದರೆ ಮತ್ತೆ ಮನುಷ್ಯ ಇವುಗಳನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಸಮಶೀತೋಷ್ಣವಲಯದ ಸರಳ ಕಾಡುಗಳಂತಿಲ್ಲದೆ ಜೀವಜಾಲದ ಅತ್ಯಂತ ಸಂಕೀರ್ಣ ಸಮೀಕರಣಗಳಾಗಿರುವ ಈ ಕಾಡುಗಳನ್ನು ನಾವು ನೆಟ್ಟು ಬೆಳೆಸಿ ಪುನಃ ಸೃಷ್ಟಿ ಮಾಡುವುದು ಅಸಾಧ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೧, ಪುಟ 68
ನಾಗರೀಕತೆಯೊಳಗೆ ಪ್ಲಾಸ್ಟಿಕ್ ಕಾಲಿಟ್ಟಾಗ ಈ ತೆಳ್ಳಗೆ ಪಾರದರ್ಶಕವಾಗಿ ಮಿಂಚುವ ಮೋಹಿನಿಯ ವಿಶ್ವರೂಪ ಯಾರಿಗೂ ಗೊತ್ತಿರಲಿಲ್ಲ. ಅನೇಕ ಹಳ್ಳಿ, ಮನೆತನ, ಬುಡಕಟ್ಟುಗಳ ನಿರ್ನಾಮಕ್ಕೆ ಇದು ಕಾರಣವಾದೀತೆಂದು ಯಾರೂ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಖಾಲಿ ಜಾಗಗಳ ಸಂದುಗೊಂದುಗಳೊಳಗೆಲ್ಲಾ ಹಬ್ಬಿ ಆಕ್ರಮಿಸುವ ಪಾರ್ಥೆನಿಯಂ, ಯುಪೆಟೋರಿಯಂ ಕಳೆಗಳಂತೆ ಪ್ಲಾಸ್ಟಿಕ್, ಪಾಲಿಯೂರಿಥೇನ್, ಪಾಲಿಎಥೀಲಿನ್, ಪಾಲಿಫೈಬರ್, ಪಾಲಿಮರ್, ಹೀಗೆ ನಾನಾ ಅವತಾರಗಳನ್ನೆತ್ತಿ ಮಾರುಕಟ್ಟೆಯ ಎಲ್ಲ ಕ್ಷೇತ್ರಗಳಿಗೆ, ಎಲ್ಲ ಅವಕಾಶಗಳಿಗೆ ಮುತ್ತಿಗೆ ಹಾಕಿತು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ 10
ಮನುಷ್ಯ ಮೂಲದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಯುವ ಶಕ್ತಿ ನಮಗಿದೆ. ಅದರತ್ತ ಗಮನ ಹರಿಸಬೇಕು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೨, ಪುಟ 59
ಪ್ರಕೃತಿಯನ್ನು ಈ ಪರಿಯಾಗಿ ದುಡಿಸಿಕೊಳ್ಳುತ್ತಿದ್ದೀವಿ, ಎಲ್ಲಿಗೆ ಹೋಗುತ್ತೇವೋ ನಾವು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 498
ಇನ್ನು ಕೆಲವೇ ಕಾಲದಲ್ಲಿ ಚಿರತೆ, ಸಿಂಹ, ಹುಲಿಗಳು ಸಹ ಪ್ರಾಚೀನ ಮಹೋರಗಗಳಂತೆ ಪಳೆಯುಳಿಕೆಗಳಿಂದ ಪತ್ತೆ ಹಚ್ಚ ಬೇಕಾದ ಪ್ರಾಣಿಗಳಾಗಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪೆದ್ದಚೆರುವಿನ ರಾಕ್ಷಸ, ಮುನ್ನುಡಿಯಿಂದ
ಕಾಡುಗಳು ನಾಶವಾದರೆ ಮತ್ತೆ ಮನುಷ್ಯ ಇವುಗಳನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಸಮಶೀತೋಷ್ಣವಲಯದ ಸರಳ ಕಾಡುಗಳಂತಿಲ್ಲದೆ ಜೀವಜಾಲದ ಅತ್ಯಂತ ಸಂಕೀರ್ಣ ಸಮೀಕರಣಗಳಾಗಿರುವ ಈ ಕಾಡುಗಳನ್ನು ನಾವು ನೆಟ್ಟು ಬೆಳೆಸಿ ಪುನಃ ಸೃಷ್ಟಿ ಮಾಡುವುದು ಅಸಾಧ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ೧, ಪುಟ 68
ಮೃಗ ಪಕ್ಷಿಗಳು, ಕಾಡು, ನದಿ, ಪರ್ವತಗಳು, ಗಾಳಿ ಇವುಗಳೆಲ್ಲದರ ಅವನತಿ ತನ್ನ ನಾಶದ ಮುನ್ನುಡಿ ಎನ್ನುವ ಕಠೋರ ಸತ್ಯ ಕಾಲ ಮಿಂಚುವ ಮೊದಲೇ ಮನುಷ್ಯನಿಗೆ ಅರಿವಾಗುವ ಹಾಗೆ ಕಾಣುತ್ತಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೯
ಜೀವನ ಮಟ್ಟವನ್ನು ನಿರಂತರವಾಗಿ ಏರಿಸಬೇಕೆನ್ನುವ ದುರಾಸೆಯಲ್ಲಿ ಪ್ರಕೃತಿದತ್ತವಾದ ಸಂಪನ್ಮೂಲಗಳನ್ನೆಲ್ಲಾ ಮನುಷ್ಯ ಯದ್ವಾತದ್ವಾ ಲೂಟಿ ಮಾಡುತ್ತಿದ್ದಾನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೯
ಯಾಂತ್ರಿಕ ಬದುಕು ಮನುಷ್ಯನನ್ನು ತನ್ನ ಪರಿಸರದಿಂದ ಹಾಗೂ ಕೌಟುಂಬಿಕ ಮಾನವೀಯ ವಾತಾವರಣದಿಂದ ಪ್ರತ್ಯೇಕಿಸುತ್ತಾ ತಾನೊಂದು ವಿಶ್ವಸಮಾಜದ ಅಂಶ ಎನ್ನುವ ತಿಳುವಳಿಕೆ ಮರೆಯಾಗುತ್ತಾ ಇದೆ. ಸಜೀವ ಜಗತ್ತಿನ ಸರ್ವ ಚರಾಚರ ವಸ್ತುಗಳೊಂದಿಗೇ ತಾನು ಬದುಕಬೇಕೆಂಬ ಅರಿವು ಮಾಯವಾಗುತ್ತಿದೆ. ಇದರಿಂದಾಗಿ ಆಧುನಿಕ ನಾಗರಿಕತೆಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೯
ಪಕ್ಷಿವೀಕ್ಷಣೆ ಮತ್ತು ಅವುಗಳ ಕುಲಗೋತ್ರಗಳನ್ನು ತಿಳಿಯುವಲ್ಲಿ ಸಲೀಂ ಆಲಿ ಅವರ ಪುಸ್ತಕಗಳನ್ನು ನೋಡಿದಾಗೆಲ್ಲ ನನಗೆ ಅಚ್ಚರಿಯಾಗುತ್ತದೆ. ಆ ಮಟ್ಟದ ಪಕ್ಷಿಶಾಸ್ತ್ರಜ್ಞನೊಬ್ಬನನ್ನು ಭಾರತ ಮತ್ತೆ ರೂಪಿಸುತ್ತದೆಯೋ ಇಲ್ಲವೋ ನನಗೆ ಅನುಮಾನ. ಒಂದೊಂದು ಹಕ್ಕಿಯ ಬಗ್ಗೆ ಆತ ವಿವರಿಸುವಾಗಲೂ ಆ ಹಕ್ಕಿಯನ್ನು ನೀವು ನೋಡಿದಾಗ ಸಲೀಂ ಅಲಿ ನಿಮ್ಮ ಜೊತೆ ಇದ್ದರೇನೋ ಎಂದು ನಿಮಗೆ ಅನುಮಾನವಾಗುತ್ತದೆ. ಅಷ್ಟು ಸ್ಪಷ್ಟವಾಗಿ ಆ ಹಕ್ಕಿಯ ವಿಶಿಷ್ಟತೆಯನ್ನು ನಿಮಗೆ ತಿಳಿಸುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1992, ಪುಟ 657
ಪಕ್ಷಿಗಳನ್ನು ಅವುಗಳ ವೈವಿಧ್ಯಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೇಗೆಂದು ತಿಳಿಯದಿದ್ದರೆ ಅವುಗಳ ಅಗಾಧ ವೈವಿಧ್ಯ ನಮಗೆ ಅರಿವಾಗುವುದು ಕಷ್ಟ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1992, ಪುಟ 656
ಸಲೀಂ ಆಲಿ ಭಾರತ ಇನ್ನೆಂದೂ ರೂಪಿಸಲಾರದಂಥ ಮಹೋನ್ನತ ಪಕ್ಷಿಶಾಸ್ತ್ರಜ್ಞ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1992, ಪುಟ 657
ಇವತ್ತು ಚೀತ್ಕರಿಸಿ ಉರುಳುತ್ತಿರುವ ಮರಗಳಿಗೆ ಬಿನ್ನಹಕ್ಕೆ ಬಾಯಿಲ್ಲ. ಹೊಲಸೆದ್ದು ಕೊಚ್ಚೆಗುಂಡಿಯಾಗಿ ಹರಿಯುತ್ತಿರುವ ನದಿಗಳ ಗೋಳಿನ ಜುಳುಜುಳು ನಿನಾದ ಪಾರ್ಲಿಮೆಂಟಿನಲ್ಲಿ ಕುಳಿತಿರುವವರಿಗೆ ಕೇಳುತ್ತಲೇ ಇಲ್ಲ. ಚಳವಳಿ, ಹೋರಾಟ, ಕೋರ್ಟಿನಲ್ಲಿ ಯುದ್ಧ, ಯಾವುದೂ ನಮ್ಮ ಪ್ರೀತಿಯ ಕರ್ನಾಟಕವನ್ನು ಉಳಿಸುವಲ್ಲಿ ಸಫಲವಾಗಲಿಲ್ಲ. ನನ್ನ ಕಣ್ಣೆದುರೇ ಹತ್ತು ವರ್ಷದ ಅವಧಿಯಲ್ಲಿ ಕರ್ನಾಟಕ ಸ್ಮಶಾನದತ್ತ ಸಾಗುವುದನ್ನು ವಿಷಾದದಿಂದ ಕಂಡಿದ್ದೇನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1989, ಪುಟ 228
ಕಾಡು ಮೃಗಗಳನ್ನು ಜೂಗಳಲ್ಲೂ, ಪುಸ್ತಕದ ಚಿತ್ರಗಳಲ್ಲೂ ಹೆಚ್ಚಾಗಿ ನೋಡಿದ್ದ ನನಗೆ ಮೊದಲ ಸಾರಿಗೆ ಅವು ಕಾಡಿನ ನಿಶ್ಚಲ ಮೌನದಲ್ಲಿ ಕಾಲ ಬಳಿಯ ಪೊದೆಗಳಿಂದಲೇ ಧಿಗ್ಗನೆ ಮಿಂಚಿ ಮಾಯವಾದಾಗ ಆದ ಅನುಭವ ಅಸಾಧಾರಣವಾದುದು. ಅವುಗಳ ಈ ಗೌಪ್ಯತೆಯೇ ನಮಗೆ ಅವುಗಳ ಬಗ್ಗೆ ಅಸಾಧಾರಣ ಕುತೂಹಲ ಹುಟ್ಟಿಸುತ್ತದೆ ! – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ, ಪುಟ 2
ಕಾಡುಗಳನ್ನು ನಾಶ ಮಾಡಿದಾಗ ಅಲ್ಲಿರುವ ಪ್ರಾಣಿ, ಪಕ್ಷಿಗಳನ್ನೂ, ಅವುಗಳ ಪರಿಸರವನ್ನೂ ಧ್ವಂಸ ಮಾಡಿದಾಗ ರಹಸ್ಯ,ಗೌಪ್ಯ, ಅದ್ಭುತಗಳ ನಿರಂತರ ನಿಧಿಯೊಂದನ್ನು ನಮ್ಮ ಕಿರಿಯ ಜನಾಂಗ ಕಳೆದುಕೊಂಡಂತಾಗಿ ಮನಸ್ಸು ಖಿನ್ನವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಾವು ಹಕ್ಕಿಗಳ ಪರಿಸರವನ್ನು ನಾಶಮಾಡಿ. ಅವುಗಳು ಬದುಕುವ ಹಕ್ಕನ್ನು ಕಸಿದುಕೊಂಡರೆ,ಅವಕ್ಕೆ ನಮ್ಮಂತೆ ಮಾತಾಡಲು ಬರುವುದಿಲ್ಲ. ಅವು ತಮಗಾಗುಗುತ್ತಿರುವ ಅನ್ಯಾಯದ ವಿರುದ್ಧ ಕೋರ್ಟಿಗೆ ಹೋಗಲಾರವು. ಅವಕ್ಕೆ ಓಟಿನ ಹಕ್ಕೂ ಇಲ್ಲ. ಅವು ನಮ್ಮತ್ತ ನಿಸ್ಸಹಾಯಕ ಮುಗ್ಧ ನೋಟ ಬೀರಿ ನಿರ್ಗಮಿಸುತ್ತವೆ. ಕೆಲವೊಮ್ಮೆ ಶಾಶ್ವತವಾಗಿ. ಅವುಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿಯಷ್ಟೆ. ಏಕೆಂದರೆ ಅವು ಬದುಕಲಾರದ ಪರಿಸರದಲ್ಲಿ ನಾವೂ ಬದುಕಲಾಗುವುದಿಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಡುಗಳ ಅನಿರ್ಬಂಧಿತ ಶೋಷಣೆಯಿಂದ ಮರ ಮುಂತಾದ ಕಚ್ಚಾ ಸಾಮಗ್ರಿಗಳು ಅಲಭ್ಯವಾಗಿ ಮತ್ತು ಮರಮುಟ್ಟುಗಳ ಬದಲಿಯಾಗಿ ಪ್ಲಾಸ್ಟಿಕ್ ಮತ್ತು ಫೈಬರ್ ಗ್ಲಾಸ್ ವಸ್ತುಗಳು ರೂಪುಗೊಳ್ಳುತ್ತಿರುವ ಆಚಾರಿಗಳು ಸಹ ಮರ ಕೆಲಸಕ್ಕೆ ವಿದಾಯ ಹೇಳಿ ಚಿನ್ನ ಬೆಳ್ಳಿ ಕೆಲಸಗಳತ್ತ ವಲಸೆ ಹೋಗತೊಡಗಿದ್ದಾರೆ ಕೊಟ್ಟ ಕೊನೆಗೆ ಹಳ್ಳಿಗಳಲ್ಲಿ ಉಳಿದಿರುವ ರೈತ ಒಬ್ಬನೇ ಈಗ ನಮ್ಮ ಮುಂದಿರುವ ಜ್ವಲಂತ ಪ್ರಶ್ನೆ ಈ ರೈತನಾದರೂ ಎಷ್ಟುಕಾಲ ಒಂದು ವರ್ಗವಾಗಿ ಉಳಿದಿರುತ್ತಾನೆ? ಹೊಟ್ಟೆಗೆ ಅನ್ನ ಬೇಕಾಗಿರುವ ವರೆಗೂ ರೈತ ವರ್ಗ ಇದ್ದೇ ಇರುತ್ತದೆ ಎಂದು ನಾವು ವಾದಿಸಬಹುದು. ಹಾಗೆ ಹೇಳುವವರು ಒಂದು ಕಾಲದಲ್ಲಿ ಅಡುಗೆಗೆ ಮಡಿಕೆ ಬೇಕಾಗುವ ವರೆಗೂ ಕುಂಬಾರರಿಗೆ ಚ್ಯುತಿ ಇಲ್ಲ ಎಂದು ಜನ ನಂಬಿದ್ದ ಎನ್ನುವುದನ್ನು ಮರೆಯಬಾರದು ನಾನು ಮೊದಲೇ ತಿಳಿಸಿದಂತೆ ವಿದ್ಯಾಭ್ಯಾಸವೇ ನಮ್ಮ ಹಳ್ಳಿಯ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿರುವ ಉದಾಹರಣೆಗಳ ಬೆಳಕಿನಲ್ಲಿ ಯೋಚಿಸಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ, ೪೩೧
ಪರಿಸರ ಸಂರಕ್ಷಣೆಯ ಬಗ್ಗೆ ಈಗ ಮಾತನಾಡುವುದು, ದೂರದರ್ಶನಕ್ಕೆ ಫಿಲಂ ತಯಾರಿಸುವುದು, ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡು ಸಮಾವೇಶಗಳಲ್ಲಿ ಭಾಗವಹಿಸುವುದೂ ದಂಧೆಯಾಗಿ ಫ್ಯಾಷನ್ ಆಗಿರುವುದರಿಂದ ಜನ ಈಗ ನಮ್ಮ ವಾಗ್ವೈಖರಿಗೆ ಗದ್ಯ ಶೈಲಿಗೂ ಮೆಚ್ಚಿ ತಲೆದೂಗುವುದನ್ನೊಂದು ಬಿಟ್ಟರೆ ಈ ಕುರಿತು ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಶೀಲರಾಗಿವುದಿಲ್ಲ. ಹೆಚ್ಚು ಕಡಿಮೆ ಕರ್ನಾಟಕದ ಎಲ್ಲ ನದಿಗಳು ನೀರು ಮಾರಣಾಂತಿಕ ಪರಿಸ್ಥಿತಿಯನ್ನು ಎದುರಿಸುತ್ತಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 654
ಪಕ್ಷಿಗಳನ್ನು ಅವುಗಳ ವೈವಿಧ್ಯಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೇಗೆಂದು ತಿಳಿಯದಿದ್ದರೆ ಅವುಗಳ ಅಗಾಧ ವೈವಿಧ್ಯ ನಮಗೆ ಅರಿವಾಗುವುದು ಕಷ್ಟ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 656
ಒಂದು ಕಾಲದಲ್ಲಿ ಮನುಷ್ಯನಿಗೆ ಎದೆ ನಡುಗಿಸುವ ಸವಾಲುಗಳಾಗಿದ್ದ ಹುಲಿ ಸಿಂಹಗಳಿಗೆ ಇಂದು ನಾವು ರಕ್ಷಣೆ ಕೊಟ್ಟು ಸಾಕಬೇಕಾದ ದುಃಸ್ಥಿತಿ ಒದಗಿದಂತೆಯೇ ನಮ್ಮ ಹಿಮಾಲಯ, ಅಮೆಜಾನ್, ಧ್ರುವ ವಲಯ, ಮಹಾಸಾಗರಗಳು ದುಸ್ಥಿತಿಗೆ ಒಳಗಾದರೆ ಅದು ಮುಂಬರಲಿರುವ ನಮ್ಮ ದುಸ್ಥಿತಿಯ ಮುನ್ನುಡಿಯಷ್ಟೇ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇಶ ವಿದೇಶ 3, ಮುನ್ನುಡಿ
ಈಗ ನದಿಗಳನ್ನೆಲ್ಲ ಚರಂಡಿ ಮಾಡುತ್ತಿದ್ದಾರೆ. ನದಿಗೆ ಯಾವನಾದರೂ ಈ ಕೊಚ್ಚೆ ನೀರು ಬಿಟ್ಟರೆ ಆ ನದಿಯ ನೀರು ಕುಡಿಯುವಷ್ಟೂ ಜನ ಬಂದು, ‘ನೀನು ಬಿಡ್ತಾ ಇರುವ ನೀರು ಕುಡೀಬೇಕು ಎಂದು PRESCRIBE ಮಾಡ್ತಾ ಇದ್ದೀಯಾ ಅಲ್ವೇನಪ್ಪಾ, ನಮ್ಮೆದುರು ನೀನು ಒಂದೊಂದು ಲೀಟರ್ ಕುಡಿ’ ಅಂತ ಅವನನ್ನು ಕೇಳುವ ಹಕ್ಕು ಜನಕ್ಕೆ ಇದೆ ಅನ್ನುವ ಒಂದು ಕಾನೂನು ಮಾಡಲಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 735 (ಲಂಕೇಶ್ 60, ಭಾಷಣ)
ವಿನಾಶದ ಅಂಚಿನಲ್ಲಿರುವ ಅನೇಕ ಜೀವ ಸಂಕುಲಗಳನ್ನು ಉಳಿಸಲು ನಾವೆಲ್ಲ ಯತ್ನಿಸುತ್ತಿದ್ದರೂ, ಎಲ್ಲ ಜೀವ ಸಂಕುಲಗಳಿಗೂ ಒಂದು ಆಯಸ್ಸು, ನಿಶ್ಚಿತ ಕಾಲಾವಧಿ ಪ್ರಕೃತಿ ನಿಗದಿ ಮಾಡಿದೆಯೇ ? ಹಾಗಿದ್ದರೆ ನಾವು ಇನ್ನೆಷ್ಟು ಕಾಲ ? ನಮ್ಮ ಬುದ್ಧಿಶಕ್ತಿ ತಿಳಿವಳಿಕೆಗಳು ನಮಗೆ ಸಹಾಯ ಮಾಡುವುದಿಲ್ಲವೆ ? ಇದಕ್ಕೆ ನನ್ನ ಬಳಿಯಂತೂ ಸದ್ಯಕ್ಕೆ ಉತ್ತರವಿಲ್ಲ! – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇಶ ವಿದೇಶ 4, ಮುನ್ನುಡಿ
ಮಾರ್ಕ್ಸ್ ಮನುಷ್ಯರಲ್ಲಿ ಸಮಾನತೆ ಹೇಳಿದರೆ, ಇಕಾಲಜಿ ಈ ಪ್ರಪಂಚದ ಚರಾಚರ ಸರ್ವ ಜೀವಿಗಳಲ್ಲೂ ನೀನು ಒಬ್ಬ ಒಂದು ಕೀಟಕ್ಕೂ ಒಂದು ಮೀನಿಗೂ ಮನುಷ್ಯನಿಗೂ ಒಂದೇ ಸ್ಥಾನ ಎಲ್ಲವೂ ಒಂದೇ ಸಮಾನ ಅಂತ ಹೇಳುತ್ತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 571
ಯಾವುದೇ ಪರಿಸರ ವಿರೋಧಿ ಕಾರ್ಯಕ್ರಮವನ್ನು ವಿರೋಧಿಸಿ ಬೇಕಾದರೆ ನಾವು ಅದಕ್ಕೆ ಬದಲಿಯಾದ ಇನ್ನೊಂದು ಯೋಜನೆಯನ್ನು ಸರ್ಕಾರದ ಮುಂದೆ ಇಡಬೇಕು. ಹೀಗೆ ಮಾಡ್ರಿ ನೀವು. ಹಾಗೆ ಮಾಡಬೇಡ್ರಿ ಅಂತ ಹೇಳಬೇಕು. ಅವಾಗ ಅದು ಜವಾಬ್ದಾರಿಯಿಂದ ಕೂಡಿದ ಪರಿಸರವಾದ ಆಗುತ್ತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 595
ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ 597
ನಾನು ಕಣ್ಣೆದುರಿಗಿನ ಪಶು, ಪಕ್ಷಿ, ಪ್ರಾಣಿಗಳ ಬಗ್ಗೆ ಬರೀತಿದ್ದ ಹಾಗೆ ಇವನು ಪರಿಸರ ಬರಹಗಾರ ಅಂತ ಹೇಳಿ ನಾಮಕರಣ ಮಾಡಿದರೆ ಅದು ಒಳ್ಳೆಯದಲ್ಲ. ಬೈಫರ್ಕೇಟ್ ಮಾಡಿದ ಹಾಗೆ ಆಗುತ್ತೆ. ಮನುಷ್ಯ ಇರಬೇಕಾದ್ದೇ ಹೀಗೆ. ಅವೆಲ್ಲ ನಮ್ಮ ಜೀವನದ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು ಅವು. ಆದ್ದರಿಂದ ಬರಹಗಾರ ಇರಬೇಕಾದ್ದೇ ಹೀಗೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 598
ಇಕಾಲಜಿ ನಾವೆಲ್ಲ ಒಂದು ಭೂಗೋಲದ ಜೀವಿಗಳು, ದೇಶ ದೇಶಗಳ ಸರಹದ್ದು ಅಪ್ರಸ್ತುತ. ಭೂಮಿ ಹಾಳಾದರೆ ಒಬ್ಬರು ಹಾಳಾಗಿ ಒಬ್ಬರು ಉಳಿಯುವುದಿಲ್ಲ ಎಂದು ನಿದರ್ಶನಪೂರ್ವಕವಾಗಿ ಹೇಳುತ್ತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 34
ನಮ್ಮ ನಾಗರೀಕತೆಗೆ ಎರಡನೇ ಮಹಾಯುದ್ಧದ ಕೊಡುಗೆ ಈ ಕ್ರಿಮಿನಾಶಕಗಳು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೨೫
ಒಂದು ವಿಷ ಒಂದು ಜೀವ ಸಮುದಾಯವನ್ನು ಮಾತ್ರ ಕೊಂದು ಇನ್ನೊಂದನ್ನು ಬಿಡುತ್ತದೆ ಎಂದು ಹೇಳುವ ಸಿದಾಂತವೇ ತಪ್ಪು. ಈ ಜಗತ್ತಿನ ಪಶು ಪಕ್ಷಿ ಪ್ರಾಣಿ ತರು ಲತೆಗಳೆಲ್ಲ ಒಂದೇ ಜೀವ ಮೂಲದಿಂದ ವಿಕಾಸವಾಗಿ ಬಂದುವು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೨೯
ಪೇಟೆ ನಿಮ್ಮಲ್ಲಿ ಉತ್ಪಾದನೆ ಮಾಡತಕ್ಕಂಥ ಕುತೂಹಲಕ್ಕೆ ಒಂದು ಕೊನೆ ಇದೆ. ಪ್ರಕೃತಿ, ಕಾಡು, ಹೊಳೆ, ಪರ್ವತ, ಬೆಟ್ಟಗುಡ್ಡಗಳು ನಿಮ್ಮಲ್ಲಿ ಉತ್ಪತ್ತಿ ಮಾಡುವ ಕುತೂಹಲಕ್ಕೆ ಒಂದು ಕೊನೆ ಅನ್ನೋದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 531
ಕೃಷಿ ಮತ್ತು ಕೈಗಾರಿಕೆಗಳ ಹೆಸರಿನಲ್ಲಿ ಮಾನವ ಪರಿಸರಕ್ಕೆ ಬೆರೆಸುವ ವಿಷಗಳು ಆಯಾ ದೇಶದ ಎಲ್ಲೆ ಕಟ್ಟುಗಳೊಳಗೇ ಕುಳಿತಿರುವುದಿಲ್ಲ. ಅವು ಹಳ್ಳಿ ರಾಜ್ಯ ದೇಶಗಳ ಸರಹದ್ದುಗಳಲ್ಲವನ್ನೂ ಮೀರಿ ವಿಶ್ವವ್ಯಾಪಿಯಾದ ಪರಿಣಾಮಗಳನ್ನು ಬೀರುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೫೪
ಆಧುನಿಕ ಕೈಗಾರೀಕರಣದಿಂದ ಈಗಾಗಲೇ ಆಗಿರುವ ಹಾನಿಗೆ ಹೋಲಿಸಿದರೆ ನಾವು ಈವರೆಗೆ ಪರಿಸರ ಸಂರಕ್ಷಣೆಗೆ ಮಾಡಿರುವ ಪ್ರಯತ್ನ ತೀರಾ ಅಲ್ಪವೆಂದೇ ಹೇಳಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ-೧, ಪುಟ ೧೦೦
ಹಿಂದುಳಿದ ದೇಶಗಳ ಬೇಜವಾಬ್ದಾರಿತನ ಹಾಗೂ ಮುಂದುವರಿದ ದೇಶಗಳ ಧ್ವಂದ್ವ ನೀತಿಗಳ ಮಧ್ಯೆ ಪರಿಸರ ಒಂದು ಒತ್ತೆಯಾಳು ಅಷ್ಟೇ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ-೨, ಪುಟ ೯೩
ನನಗಂತೂ ಕಾಡುಪ್ರಾಣಿಗಳ ಹೆದರಿಕೆ ಕೊಂಚವೂ ಇರಲಿಲ್ಲ. ಅಲ್ಲದೆ ಹೆದರುವುದರಿಂದ ಪ್ರಯೋಜನವೂ ಇರಲಿಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನೆರೆಹೊರೆಯ ಗೆಳೆಯರು, ಪುಟ 55
ಕಾಡಿನ ವಿದ್ಯಮಾನಗಳು ನಿಮಗೆ ತಿಳಿಯಬೇಕಾದರೆ ಸ್ಥಬ್ದವಾಗಿ ಕಲ್ಲಿನೊಡನೆ ಕಲ್ಲಾಗಿ ಕುಳಿತುಕೊಳ್ಳುವುದನ್ನು ಕಲಿಯಬೇಕು. ನಮ್ಮ ಸಾನಿಧ್ಯದಿಂದ ಗಾಬರಿಯಾಗಿ ಅಂತರ್ಧಾನವಾಗಿದ್ದ ಚಟುವಟಿಕೆಗಳೆಲ್ಲಾ ನಿಧಾನವಾಗಿ ಪ್ರಾರಂಭವಾಗುತ್ತವೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನೆರೆಹೊರೆಯ ಗೆಳೆಯರು, ಪುಟ 51
ಪಕ್ಷಿ ವೀಕ್ಷಣೆ ಮತ್ತು ಅವುಗಳ ಕುಲಗೋತ್ರಗಳನ್ನು ತಿಳಿಯುವಲ್ಲಿ ಸಲೀಂ ಅಲಿ ಅವರ ಪುಸ್ತಕಗಳನ್ನು ನೋಡಿದಾಗೆಲ್ಲ ನನಗೆ ಅಚ್ಚರಿಯಾಗುತ್ತದೆ. ಆ ಮಟ್ಟದ ಪಕ್ಷಿಶಾಸ್ತ್ರಜ್ಞನೊಬ್ಬನನ್ನು ಭಾರತ ಮತ್ತೆ ರೂಪಿಸುತ್ತಿದೆಯೇ ಇಲ್ಲವೋ ನನಗೆ ಅನುಮಾನ. ಒಂದೊಂದು ಹಕ್ಕಿಯ ಬಗ್ಗೆ ಆತ ವಿವರಿಸುವಾಗಲೂ ಹಕ್ಕಿಯನ್ನು ನೀವು ನೋಡಿದಾಗ ಸಲೀಂ ಅಲಿ ನಿಮ್ಮ ಜೊತೆ ಇದ್ದರೇನೋ ಎಂದು ನಿಮಗೆ ಅನುಮಾನವಾಗುತ್ತದೆ. ಅಷ್ಟು ಸ್ಪಷ್ಟವಾಗಿ ಹಕ್ಕಿಯ ವಿಶಿಷ್ಟತೆಯನ್ನು ನಿಮಗೆ ತಿಳಿಸುತ್ತಾರೆ. ಆ ಮಟ್ಟದಲ್ಲಿ ಒಂದೊಂದು ಜಾತಿಯ ಹಕ್ಕಿಗಳ ವಿಶಿಷ್ಟತೆಯನ್ನು ತಿಳಿಯಲು ಆ ಹಕ್ಕಿಗಳನ್ನು ಒಂದೆರಡು ಬಾರಿ ಅಭ್ಯಾಸ ಮಾಡಿದರೆ ಸಾಧ್ಯವೇ ಆಗುವುದಿಲ್ಲ. ಒಂದು ಜೀವಮಾನ ಪರ್ಯಂತ ಅಭ್ಯಾಸದಿಂದ ಮಾತ್ರ ಸಾಧ್ಯ. ಏಕೆಂದರೆ ಒಮ್ಮೆ ನೋಡಿದ ಗೊತ್ತಾಗುವ ವೈಲಕ್ಷಣ್ಯಗಳನ್ನು ಆ ಒಂದು ಹಕ್ಕಿಯ ಆ ಪರಿಸರದ ವೈಲಕ್ಷಣ್ಯಗಳೊಂದಿಗೆ ಬೆರೆತಿರುತ್ತದೆ. ಇಡೀ ಪಕ್ಷಿಜಾತಿಗೇ ಸಂಬಂಧಿಸಿದ ಸಾರ್ವತ್ರಿಕ ವೈಲಕ್ಷಣ್ಯಗಳನ್ನು ಮಾತ್ರ ಪತ್ತೆ ಹಚ್ಚಿ, ಎಲ್ಲಿ ಯಾರು, ಯಾವಾಗ ನೋಡಿದರೂ ಚಕ್ಕನೆ ಗೊತ್ತು ಹಿಡಿಯಬಹುದಾದ ಚಹರೆಯನ್ನಾಗಿ ಮಾರ್ಪಡಿಸಲು ಆ ಹಕ್ಕಿಯನ್ನು ಒಂದು ಸಾವಿರ ಸಾರಿಯಾದರೂ ವಿವಿಧ ಸನ್ನಿವೇಶಗಳಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದವರಿಗೆ ಮಾತ್ರ ಸಾಧ್ಯ. ಇದಕ್ಕಾಗಿ ಸಲೀಂ ಅಲಿ ಎಂಥ ಏಕಾಗ್ರತೆಯೇ ತಪಸ್ಸು ಮಾಡಿರಬಹುದೆಂದು ಯೋಚಿಸಿದರೆ ದಿಗ್ಭ್ರಮೆಯಾಗುತ್ತದೆ. ನನ್ನ ಮಾತಿನ ಸತ್ಯ ಸಹ ನೀವು ಸುಳಿಯಲ್ಲಿ ಅವರ ಪುಸ್ತಕಗಳನ್ನು ಸಹಾಯದಿಂದ ಪಕ್ಷಿ ವೀಕ್ಷಣೆ ನಡೆಸಿದರೆ ಮಾತ್ರ ಗೊತ್ತಾಗುತ್ತದೆ ವಿನಃ ಇಲ್ಲದಿದ್ದರೆ ಇಲ್ಲ. ಸಲೀಂ ಅಲಿ ಭಾರತ ಇನ್ನೆಂದೂ ರೂಪಿಸಲಾದ ಮಹೋನ್ನತ ಪಕ್ಷಿಶಾಸ್ತ್ರಜ್ಞ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 658
ಇಕಾಲಜಿ ನಾವೆಲ್ಲ ಒಂದು ಭೂಗೋಲದ ಜೀವಿಗಳು, ದೇಶ ದೇಶಗಳ ಸರಹದ್ದು ಅಪ್ರಸ್ತುತ. ಭೂಮಿ ಹಾಳಾದರೆ ಒಬ್ಬರು ಹಾಳಾಗಿ ಒಬ್ಬರು ಉಳಿಯುವುದಿಲ್ಲ ಎಂದು ನಿದರ್ಶನಪೂರ್ವಕವಾಗಿ ಹೇಳುತ್ತಿದೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 34
ಗುಬ್ಬಚ್ಚಿ ಚಿಲಿಪಿಲಿ ಯಾಕೆ ಹೋಯ್ತು ಹೇಳಿ ನೋಡೋಣ ? ಮೊದಲು ನಮ್ಮಮ್ಮ ಭತ್ತ ಕೇರ್ತಾ ಇರಬೇಕಾದರೆ, ಹಿಂಡಾಗಿ ಬಂದು ಕೂತಿರುತ್ತಿದ್ವು, ಮೈಸೂರಲ್ಲಿ. ಗುಬ್ಬಚ್ಚಿಗಳು ಮನುಷ್ಯನೊಂದಿಗೆ ಎಷ್ಟು ಅಡಾಪ್ಟ್ ಆಗಿದ್ದಾವೆ ಅಂತ ಹೇಳಿದರೆ ದೇ ಕಾಂಟ್ ಸರ್ವೈವ್ ಇನ್ ದಿ ವೈಲ್ಡ್ ಎನ್ವಿರಾನ್ಮೆಂಟ್. ನಮ್ಮಲ್ಲಿ, ಪೇಟೆಗಳಲ್ಲಿ ಆರ್ಕಿಟೆಕ್ಟಲ್ ಚೇಂಜಸ್ ಹೆಂಚಿನ ಮನೆಗಳು ಹೋದ ಮೇಲೆ ಅವಕ್ಕೆ ಗೂಡು ಕಟ್ಟೋಕೆ ಜಾಗ ಇಲ್ಲ! ಇಲ್ಲಿ ಜಾಗ ಕೊಡದಿದ್ದರೆ ಪರವಾಗಿಲ್ಲ ಅಂತ ಹೇಳಿದರೆ ಅವಕ್ಕೆ ಕಾಡಲ್ಲಿ ಗೂಡು ಕಟ್ಟೋಕೆ ಬರೋದಿಲ್ಲ. ಹಿಂದೆ ನೀವು ನೋಡರಲ್ಲ ಬಿಡಿ. ನೀವು ತುಂಬಾ ಈಚಿನೋರು ಗುಬ್ಬಚ್ಚಿಗಳು ಗೂಡು ಕಟ್ಟಲಿ ಅಂತಾನೆ ಮನೆಗಳಲ್ಲಿ ಸೂರಿನಡಿಯಲ್ಲಿ ಅಲ್ಲಿ ಇಲ್ಲಿ ಜಾಗ ಬಿಡೋರು. ಗುಬ್ಬಚ್ಚಿಗಳಿಂದ ಏನು ಉಪಯೋಗ ಆಗುತ್ತೆ ಅಂದರೆ ಅವು ಆ ಸೂರಿನ ಸಂದಿಯಲ್ಲಿ ಇನ್ಸ್ಪೆಕ್ಟ್ ಮಾಡಿ ಒಂದೇ ಒಂದು ಕೀಟಗಳು ಇಲ್ಲದ ಹಾಗೆ ಕ್ಲೀನ್ ಮಾಡ್ತಿದ್ದವು. ಅದಕ್ಕೋಸ್ಕರ ಗುಬ್ಬಚ್ಚಿಗಳು ಬಂದು ಗೂಡು ಕಟ್ಟಿಕೊಳ್ಳಲಿ ಅಂತ ಸೂರಿನಡಿಯಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಿ ಬಿಟ್ಟಿರೋರು. ಈವಾಗ ಕಾಂಕ್ರೀಟ್ ರೂಫಿಂಗ್ ಬಂದ್ಬಿಟ್ಟು, ಅಲ್ಲೂ ಗೂಡು ಕಟ್ಟೋಕೆ ಅವಕ್ಕೆ ಜಾಗ ಇಲ್ಲ. ಈವಾಗ ಅಲ್ಲಿ ಇಲ್ಲಿ ರೈಸ್ ಮಿಲ್, ದಿನಸಿ ಅಂಗಡಿ ಹತ್ತಿರ ಎಲ್ಲಾ ಇರ್ತಾವೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 574
ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ 597
ಇಕೋ ಸಿಸ್ಟಮ್ನಲ್ಲಿ ಮನುಷ್ಯ ಒಬ್ಬ ಅಷ್ಟೇನೇನೆ. ಇವನು ಪರಿಸರ ನಾಶ ಮಾಡೋ ಹಂತದಲ್ಲಿ ತನ್ನ ಆತ್ಮವನ್ನೂ ನಾಶ ಮಾಡ್ಕೊಂಡಿರ್ತಾನೆ; ಸಮಾಜವನ್ನೂ ನಾಶ ಮಾಡ್ಕೊಂಡಿರ್ತಾನೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 605
ರೈತ-ಕೃಷಿ ನುಡಿಗಳು
ರೈತರು ಎಷ್ಟೇ ಬಡವರಾದರು ಆತ್ಮ ಗೌರವ ಉಳ್ಳವರು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್
ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು
ನಮ್ಮ ಸರ್ಕಾರ, ನಮ್ಮ ಯೋಜನಾ ತಜ್ಞರು, ವಿಜ್ಞಾನಿಗಳು ಎಲ್ಲರ ಧೊರಣೆಯೂ ಕೃಷಿಯನ್ನು ಕೇವಲ ಉತ್ಪಾದನ ವಿಧಾನವೆಂದೇ ಪರಿಗಣಿಸುತ್ತದೆ. ರೈತ ಅವರ ದೃಷ್ಟಿಯಲ್ಲಿ ಬೋನಿನಲ್ಲಿ ಬೆಳೆಯುವ ಬ್ರಾಯ್ಲರ್ ಕೋಳಿಯಂತೆ ಕೇವಲ ಉತ್ಪಾದಕ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು
ಭಾರತೀಯ ಕೃಷಿರಂಗದಲ್ಲಿ ನೂರಕ್ಕೆ ತೊಂಭತ್ತಕ್ಕಿಂತ ಹೆಚ್ಚು ಜನ ಅನಕ್ಷರಸ್ಥರಿದ್ದಾರೆ ಅಂಥ ಕಡೆಗಳಲ್ಲಿ ಬ್ಯಾಂಕುಗಳು ತಮ್ಮ ವಿಧಿ ವಿಧಾನಗಳನ್ನು ಅತ್ಯಂತ ಸರಳಗೊಳಿಸಬೇಕಾದುದು ಅವಶ್ಯಕ. ಈ ತೆರನಾದ ಸಂಧರ್ಭಗಳಲ್ಲಿ ನಮ್ಮ ಬ್ಯಾಂಕುಗಳು ಇಂಗ್ಲೀಷಿನ ಫಾರ್ಮುಗಳನ್ನು ಅಚ್ಚು ಮಾಡಿಸಿ ಕೊಡುತ್ತಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು
ಗ್ರಾಮಾಂತರ ಪ್ರದೇಶಗಳಿಗೆ ಕೃಷಿರಂಗಕ್ಕೆ ಯಾವ ರೀತಿಯಿಂದಲೂ ಅನರ್ಹರಾಗಿರುವ ಪೇಟೆಯ ಸುಶಿಕ್ಷಿತ ವರ್ಗದ ಬ್ಯಾಂಕಿಂಗ್ ಹಾಗೂ ಕಾಮರ್ಸ್ ಪದವೀಧರರುಗಳನ್ನು ಮ್ಯಾನೇಜರುಗಳನ್ನಾಗಿ ಮಾಡಿದರೆ ಬ್ಯಾಂಕು ಕೃಷಿರಂಗದಲ್ಲಿ ಪ್ರಾಧನ ಪಾತ್ರ ವಹಿಸದಂತೆ ಮಾಡುತ್ತಾರೆ. ಮುಂಗಾರಿ ಬೆಳೆ ಎಂದರೇನು? ಹಿಂಗಾರಿ ಬೆಳೆ ಎಂದರೇನು? ತಿಳಿಯದ ಅನೇಕ ಬೃಹಸ್ಪತಿಗಳು ಬ್ಯಾಂಕ್ ಮ್ಯಾನೇಜರುಗಳಾಗಿದ್ದಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು
ರೈತನನ್ನು ಊರಿನ ಶ್ರೀಮಂತರಿಂದ, ಲೇವಾದೇವಿಯಿಂದ ತಪ್ಪಿಸಲಿಕ್ಕಾಗಿಯೇ ಬ್ಯಾಂಕುಗಳು ನಡೆಸುವ ಪ್ರಯತ್ನಕ್ಕೆ ಮತ್ತೆ ಶ್ರೀಮಂತರಿಂದಲೇ ಷ್ಯೂರಿಟಿ ಕೇಳುವುದು ಎಂಥ ಅಸಂಬದ್ಧ ಕಾರ್ಯಕ್ರಮವೆಂದು ತಿಳಿಯುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು
ನಮ್ಮ ಸರ್ಕಾರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಲಾಭಕರ ಬೆಲೆ ನೀಡುವುದೊಂದನ್ನುಳಿದು ಮಿಕ್ಕಿದ್ದನ್ನೆಲ್ಲಾ ಮಾಡುತ್ತವೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅತಿ ಸೂಕ್ತ ಮಾರ್ಗವೆಂದರೆ ರೈತನಿಗೆ ಲಾಭಕರ ಬೆಲೆಯೇ ಹೊರತು ಮಿಕ್ಕುದೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ
ರೈತನಿಗೆ ಹಸಿರು ಕ್ರಾಂತಿ ಮಾಡುವಂಥ ಬ್ಯಾಂಕಿನ ಸಹಾಯವು ಏಳು ಸಮುದ್ರಗಳಾಚೆ ಇರುವ ಏಳು ಸುತ್ತಿನ ಕೋಟೆಯೊಳಗೆ ಸರ್ಪ ಕಾವಲಿನಲ್ಲಿರುವ ಅಲಭ್ಯ ಗಂಟಾಗಿ ಹೋಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಒಂದು ದೇಶ ಆಧುನಿಕವಾಗುತ್ತಾ, ಕೈಗಾರಿಕೀಕರಣವಾಗುತ್ತಾ ಹೋದಂತೆ ಕೃಷಿಯನ್ನು ಒಂದು ಜೀವನ ಮಾರ್ಗವೆಂದು ಪರಿಗಣಿಸುವವರು ಅಥವಾ ವ್ಯಕ್ತಿಗಳಲ್ಲಿ ಆ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಭೂಮಿ ಕಾರ್ಖಾನೆಯ ಯಂತ್ರದಂತೆ ಉತ್ಪಾದಿಸುವ ಒಂದು ಸಲಕರಣೆಯಾಗುತ್ತದೆ. ಮನುಷ್ಯ ಅಲ್ಲಿ ಬದುಕಿ ಬಾಳಿ ತನ್ನ ಸಾರ್ಥಕ ಕಂಡುಕೊಳ್ಳುವುದು ಪರಿಸರವಾಗಿ ಅಪ್ರಮುಖವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ರೈತರನ್ನು ಈ ದೇಶದ ಕೇವಲ ಉತ್ಪಾದಕರೆಂದು ಮಾತ್ರ ಪರಿಗಣಿಸಿ ಬೆಲೆ ನಿಗದಿ ಮಾಡುತ್ತಾರೇ ಹೊರತು ಆತನೂ ಈ ದೇಶದ ಬಳಕೆದಾರ ಎಂಬ ಕಲ್ಪನೆ ದೆಹಲಿ ಸೆಕ್ರೆಟರಿಯೇಟಿನ ಪುರೋಹಿತರಿಗೆ ಹೊಳೆಯುವುದೇ ಇಲ್ಲ. ರೈತನೊಬ್ಬ ಟಿವಿ ಬಳಕೆದಾರನಾಗಬೇಕನ್ನುವುದಾಗಲಿ ಮಾರುತಿ ಕಾರಿನ ಗಿರಾಕಿ ಎನ್ನುವುದಾಗಲಿ ಈ ಪುರೋಹಿತರ ಊಹೆಗೂ ನಿಲುಕುವುದಿಲ್ಲ. ಆದ್ದರಿಂದಲೇ ಬೆಲೆ ನಿಗದಿ ಮಾಡುವಾಗ ರೈತ ಮುಂದಿನ ವರ್ಷವೂ ಬದುಕಿ ತಮಗೆ ಊಟ ಹಾಕುವುದಕ್ಕೆ ಎಷ್ಟು ಬೆಕೋ ಅಷ್ಟನ್ನು ಮಾತ್ರವೇ ಅವನಿಗೆ ನೀಡುತ್ತಾರೆ. ಇದರಿಂದಲೇ ನಮ್ಮ ನಾಡಿನ ಇಡೀ ರೈತಸಮುದಾಯ ಗದ್ದೆಯಲ್ಲಿ ನೇಗಿಲೆಳೆಯುವ ಎತ್ತಿನ ಸ್ಥಿತಿಗೆ ಹೋಗಿರುವುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಡುಗಳ ಅನಿರ್ಬಂಧಿತ ಶೋಷಣೆಯಿಂದ ಮರ ಮುಂತಾದ ಕಚ್ಚಾ ಸಾಮಗ್ರಿಗಳು ಅಲಭ್ಯವಾಗಿ ಮತ್ತು ಮರಮುಟ್ಟುಗಳ ಬದಲಿಯಾಗಿ ಪ್ಲಾಸ್ಟಿಕ್ ಮತ್ತು ಫೈಬರ್ ಗ್ಲಾಸ್ ವಸ್ತುಗಳು ರೂಪುಗೊಳ್ಳುತ್ತಿರುವ ಆಚಾರಿಗಳು ಸಹ ಮರ ಕೆಲಸಕ್ಕೆ ವಿದಾಯ ಹೇಳಿ ಚಿನ್ನ ಬೆಳ್ಳಿ ಕೆಲಸಗಳತ್ತ ವಲಸೆ ಹೋಗತೊಡಗಿದ್ದಾರೆ ಕೊಟ್ಟ ಕೊನೆಗೆ ಹಳ್ಳಿಗಳಲ್ಲಿ ಉಳಿದಿರುವ ರೈತ ಒಬ್ಬನೇ ಈಗ ನಮ್ಮ ಮುಂದಿರುವ ಜ್ವಲಂತ ಪ್ರಶ್ನೆ ಈ ರೈತನಾದರೂ ಎಷ್ಟುಕಾಲ ಒಂದು ವರ್ಗವಾಗಿ ಉಳಿದಿರುತ್ತಾನೆ? ಹೊಟ್ಟೆಗೆ ಅನ್ನ ಬೇಕಾಗಿರುವ ವರೆಗೂ ರೈತ ವರ್ಗ ಇದ್ದೇ ಇರುತ್ತದೆ ಎಂದು ನಾವು ವಾದಿಸಬಹುದು. ಹಾಗೆ ಹೇಳುವವರು ಒಂದು ಕಾಲದಲ್ಲಿ ಅಡುಗೆಗೆ ಮಡಿಕೆ ಬೇಕಾಗುವ ವರೆಗೂ ಕುಂಬಾರರಿಗೆ ಚ್ಯುತಿ ಇಲ್ಲ ಎಂದು ಜನ ನಂಬಿದ್ದ ಎನ್ನುವುದನ್ನು ಮರೆಯಬಾರದು ನಾನು ಮೊದಲೇ ತಿಳಿಸಿದಂತೆ ವಿದ್ಯಾಭ್ಯಾಸವೇ ನಮ್ಮ ಹಳ್ಳಿಯ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿರುವ ಉದಾಹರಣೆಗಳ ಬೆಳಕಿನಲ್ಲಿ ಯೋಚಿಸಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ, ೪೩೧
ಸುಳ್ಳು ಮಾಹಿತಿಗಳಿಂದ, ಪೊಳ್ಳು ಆಶಾವಾದಗಳಿಂದ ಆಗಲೇ ಸಾಕಷ್ಟು ಜರ್ಝರಿತವಾಗಿರುವ ರೈತ ಸಮುದಾಯವನ್ನು ಮತ್ತಷ್ಟು ಮರೀಚಿಕೆಗಳು ಬೆನ್ನು ಹತ್ತುವಂತೆ ಪ್ರಚೋದಿಸುವುದು ತಪ್ಪು. ಕೃಷಿ ಕ್ಷೇತ್ರ ಇಂದು ಭಯಂಕರ ವಿರೋಧಾಭಾಸಗಳ ಗೊಂದಲಗಳ ಅಲ್ಲೋಲ ಕಲ್ಲೋಲಗಳಲ್ಲಿ ಸಿಕ್ಕಿಕೊಂಡಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ, ಮುನ್ನುಡಿ
ಸ್ವಾತಂತ್ರ್ಯಾನಂತರ ನಾವು ಅಳವಡಿಸಿಕೊಂಡ ತಂತ್ರಜ್ಞಾನ ನಮ್ಮ ದೇಶದಲ್ಲಿ ವಿಕಾಸವಾಗಿದ್ದಲ್ಲ. ಅವುಗಳನ್ನು ನಾವು ಕೈಗಾರೀಕೃತ ದೇಶಗಳಿಂದ ಆಮದು ಮಾಡಿಕೊಂಡವು. ಅಲುಮಿನಿಯಂ ಪಾತ್ರೆಗಳಾಗಲೀ, ಪ್ಲಾಸ್ಟಿಕ್ ಬುಟ್ಟಿಗಳಾಗಲೀ ನಮ್ಮ ದೇಶದ ಕುಂಬಾರರ ಮೇದರ ಅಗತ್ಯಗಳಿಗಾಗಿ ಯಂತ್ರಗಳನ್ನು ರೂಪಿಸುತ್ತಾ ವಿಕಾಸವಾದ ತಂತ್ರಜ್ಞಾನ ಅಲ್ಲ. ಇದನ್ನು ಮಾಡಿಕೊಂಡವರು ಪೇಟೆಯ ಬಂಡವಾಳಗಾರರು. ಇವು ತಲೆಯೆತ್ತುತ್ತಿದ್ದಂತೆಯೇ ಗ್ರಾಮೀಣ ಸಮಾಜದ ಅವಿಭಾಜ್ಯ ಅಂಗವಾಗಿದ್ದ ಕುಂಬಾರ ಹಿಂದುಳಿದವನಾದ. ಪ್ಲಾಸ್ಟಿಕ್ ಉದ್ಯಮ ಬರುತ್ತಿದ್ದಂತೆಯೇ ಮೇದರ ಬುಟ್ಟಿಗಳಿಗೆ ಗಿರಾಕಿ ಇಲ್ಲವಾಯ್ತು. ಹೀಗೆ ಅಗಸ, ಗಾಣಿಗ, ಗೊಲ್ಲರ ಪರಿಸ್ಥಿತಿಯೂ. ಭಾರತದ ಆಧುನಿಕರಣದ ಕಥೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕಥೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ 1991, ಪುಟ 2
ಹಳ್ಳಿಗಳಲ್ಲಿ ಒಬ್ಬರಾದಮೇಲೊಬ್ಬರಂತೆ ಎಲ್ಲಾ ಜಾತಿಗಳು ಕುಲಕಸುಬುಗಳನ್ನು ಕಳೆದುಕೊಂಡ ಮೇಲೆ ಈಗ ಉಳಿದಿರುವವನು ಮರಗೆಲಸದ ಆಚಾರಿ ಮತ್ತು ರೈತ ಮಾತ್ರ. ಆದರೆ ಈಚೆಗೆ ಕಾಡುಗಳು ನಾಶವಾಗುತ್ತಿರುವುದರಿಂದ ಉಂಟಾಗಿರುವ ಮರದ ಅಭಾವ, ಮತ್ತು ಮರಕ್ಕೆ ಬದಲಿಯಾಗಿ ರೂಪುಗೊಳ್ಳುತ್ತಿರುವ ಫೈಬರ್ ಗ್ಲಾಸ್ ವಸ್ತುಗಳಿಂದಾಗಿ ಆಚಾರಿ ಸಹ ಮರಗೆಲಸ ಬಿಟ್ಟು ಚಿನ್ನಬೆಳ್ಳಿಗಳತ್ತ ವಲಸೆ ಹೋಗುತ್ತಿರುವುದನ್ನು ನೋಡಬಹುದು. ಈಗಿರುವ ಪ್ರಶ್ನೆ ರೈತನಾದರೂ ಒಂದು ವರ್ಗವಾಗಿ ಎಷ್ಟು ಕಾಲ ಹಳ್ಳಿಗಳಲ್ಲಿ ಉಳಿದಿರುತ್ತಾನೆ? ಎನ್ನುವುದು. ಹೊಟ್ಟೆಗೆ ಅನ್ನ ಬೇಕಾಗುವವರೆಗೂ ರೈತವರ್ಗ ಇದ್ದೇ ಇರುತ್ತದೆ ಎಂದು ಹಲವರು ಹೇಳುತ್ತಾರೆ. ಹಾಗೆ ಹೇಳುವವರು ಅಡಿಕೆಗೆ ಮಡಿಕೆ ಬೇಕಾಗುವವರೆಗೂ ಕುಂಬಾರನಿಗೆ ಚ್ಯುತಿಯಿಲ್ಲ ಎಂದು ಜನ ನಂಬಿದ್ದರೆನ್ನುವುದನ್ನು ಮರೆಯಬಾರದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ 1991, ಪುಟ೩
ಈ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಅನೇಕ ವಿಜ್ಞಾನಿಗಳನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಅವುಗಳಲ್ಲಿ ನೂರಕ್ಕೆ ನೂರರಷ್ಟು ವಿಜ್ಞಾನಿಗಳು ಗ್ರಾಮೀಣ ಕುಟುಂಬಗಳಿಂದಲೇ ಬಂದವರು. ಆದರೆ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಅವರು ಎಷ್ಟೊಂದು ಮಾರ್ಪಟ್ಟಿರುತ್ತಾರೆಂದರೆ, ಅವರ ಲೇಖನಗಳು ಭಾರತದ ಗ್ರಾಮೀಣ ಜನತೆಯನ್ನು ಉದ್ದೇಶಿಸಿರುವುದೇ ಇಲ್ಲ. ಈ ವಿರೋಧಾಭಾಸಗಳಿಗೆ ಕಾರಣವಾದರೂ ಏನು..? ನಮ್ಮ ವಿದ್ಯಾಭ್ಯಾಸ. ಅಲ್ಲಿ ಕಲಿಸುವ ವಿಚಾರಗಳು ಮತ್ತು ಆಧುನಿಕ ವಿದ್ಯಾಭ್ಯಾಸ ಶಿಸ್ತು ನಮ್ಮ ವಿಜ್ಞಾನಿಗಳನ್ನು ಕೃಷಿಕ ಸಮಾಜದೊಡನೆ ಸಂವಾದ ಸಾಧ್ಯವಿಲ್ಲದಷ್ಟು ಪರಕೀಯ ಗೊಳಿಸುತ್ತಿದೆಯೆ..? ಪದವೀಧರ ರಾಗುತ್ತಿದ್ದಂತೆಯೇ ತಮ್ಮ ಪಿತ್ರಾರ್ಜಿತ ಜಮೀನಿಗೆ ವಿದಾಯ ಹೇಳಿ ಹೇಗಾದರೂ ಮಾಡಿ ಸರ್ಕಾರಿ ನೌಕರಿಯೊಂದನ್ನು ಗಿಟ್ಟಿಸಿ ಜೀವನಯಾಪನೆ ಮಾಡಲು ನಮ್ಮ ಯುವ ಸಮುದಾಯ ಹಂಬಲಿಸುತ್ತದಲ್ಲ ! ತಾವು ತಿರಸ್ಕರಿಸಿದ ಜೀವನ ಕ್ರಮವನ್ನು ತಾವು ಅನುಷ್ಠಾನಕ್ಕೆ ತಂದುಕೊಳ್ಳದ ಆದರ್ಶಗಳನ್ನು ಬೇರೆಯವರಿಗೆ ಹೇಗೆ ಇವರು ಬೋಧಿಸುತ್ತಾರೆ ? ಬೇರೆಯವರು ಹೇಗೆ ಇವರ ಪ್ರವಚನಗಳನ್ನು ನಂಬುತ್ತಾರೆ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 429
ಭಾರತೀಯ ಪರಿಸ್ಥಿತಿಗೆ ಸಂಬಂಧವೇ ಅಲ್ಲದ ವಿದ್ಯಾಭ್ಯಾಸ ಕ್ರಮದಲ್ಲಿ ನಾವು ಕೃಷಿ ವಿಜ್ಞಾನಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಏಕೆಂದರೆ ಅನೇಕ ವಿಜ್ಞಾನಿಗಳು ಕೃಷಿಕರ ಮತ್ತು ಗ್ರಾಮೀಣ ಕುಟುಂಬಗಳಿಂದಲೇ ಬಂದವರೂ ಸಹ ತಾವು ತರಬೇತಿ ಕ್ರಮದಲ್ಲೇ ತಮ್ಮ ಹಿನ್ನೆಲೆ ಮತ್ತು ಪರಿಸರಗಳಿಂದ ಪ್ರತ್ಯೇಕಿಸಲ್ಪಡುತ್ತಿದ್ದಾರೆ. ಪರಕೀಯ ತಂತ್ರಜ್ಞಾನವನ್ನು ಭಾರತೀಯ ಪರಿಸ್ಥಿತಿಯ ಮೇಲೆ ಹೇರುವ ಅರ್ಥಹೀನ ಪ್ರಯತ್ನದಲ್ಲೇ ಇವರೂ ತೊಡಗುತ್ತಾರೆ. ಬಹುಪಾಲು ಪಧವೀಧರರು ತಾವು ಕಲಿತದ್ದನ್ನು ತಮ್ಮ ಕೃಷಿಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಒರೆಹಚ್ಚುವ ಬಗ್ಗೆ ಯೋಚಿಸುವುದೂ ಇಲ್ಲ. ಇವರ ಬಹುಪಾಲು ಆದರ್ಶಗಳು ಪಾಶ್ಚಿಮಾತ್ಯ ದೇಶಗಳಿಗೆ ಪಾಸ್ಪೋರ್ಟ್ ವೀಸಗಳನ್ನ ಪಡೆಯುವುದರ ಕಡೆಗೇ ಇರುತ್ತವೆ. ಅದು ಕಷ್ಟವಾದಗ ಸರ್ಕಾರಿ ಕೆಲಸ ಪಡೆಯುವುದಕ್ಕಾದರೂ ಹಂಬಲಿಸುತ್ತಾರೆ. ಎಂದರೆ ಇದರರ್ಥ ಕೃಷಿ ತರಬೇತಿ ನಮ್ಮ ಗ್ರಾಮೀಣ ಯುವಕರನ್ನ ಗ್ರಾಮೀಣ ಕೃಷಿಯಿಂದಲೇ ವಿಮುಖರನ್ನಾಗಿ ಮಾಡುತ್ತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 673,
ನಮ್ಮ ವಿದ್ಯಾಭ್ಯಾಸದ ಶಿಸ್ತು, ಅಲ್ಲಿ ಅವರು ಕಲಿಸುವ ವಿಚಾರಗಳು ನಮ್ಮ ವಿಜ್ಞಾನಿಗಳನ್ನು ರೈತ ಸಮಾಜದೊಂದಿಗೆ ಸಂವಾದ ಸಾಧ್ಯವಿಲ್ಲದಷ್ಟು ಪರಕೀಯಗೊಳಿಸುತ್ತಿದೆಯೆ? ಪದವೀಧರರಾಗುತ್ತಿದ್ದಂತೆಯೇ ತಮ್ಮ ಪಿತಾರ್ಜಿತ ಜಮೀನಿಗೆ ವಿದಾಯ ಹೇಳಿ ಹೇಗಾದರೂ ಮಾಡಿ ಸರ್ಕಾರೀ ನೌಕರಿಯೊಂದನ್ನು ಗಿಟ್ಟಿಸಿ ಜೀವನಯಾಪನೆ ಮಾಡಲು ನಮ್ಮ ಯುವ ಸಮುದಾಯ ಹಂಬಲಿಸುತ್ತದಲ್ಲ! ತಮಗೇ ಇಷ್ಟವಿಲ್ಲದೆ ತಿರಸ್ಕರಿಸಿದ ಜೀವನ ಕ್ರಮವನ್ನು, ತಾವು ಅನುಷ್ಠಾನಕ್ಕೆ ತಂದುಕೊಳ್ಳದ ಆದರ್ಶಗಳನ್ನು ರೈತರಿಗೆ ಹೇಗೆ ಇವರು ಬೋಧಿಸುತ್ತಾರೆ ಮತ್ತು ಅವರು ಹೇಗೆ ಇವರ ಪ್ರವಚನಗಳನ್ನು ನಂಬುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೧
ನಮ್ಮ ರಾಜ್ಯದಲ್ಲಿ ರೈತಪರ ಚಳವಳಿಗಳು ಅನೇಕವು ನಡೆದಿವೆ. ಅವುಗಳಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಚಳವಳಿ ಅತ್ಯಂತ ಪ್ರಮುಖವಾದುದು. ಆದರೆ ಈ ಯಾವ ಚಳವಳಿಗಳೂ ರೈತನನ್ನು ಪ್ರಮುಖ ರಾಜಕೀಯ ಶಕ್ತಿಯನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ 3
ಸರ್ಕಾರಗಳಿಗೂ, ಉದ್ಯಮಿಗಳಿಗೂ ರೈತನ ಲಾಭವಾಗಲೀ ನೆಮ್ಮದಿಯಾಗಲಿ ಮುಖ್ಯವಲ್ಲ. ತಮ್ಮ ಲಾಭ ಮತ್ತು ರಾಜಕಾರಣಕ್ಕೆ ಹಣ ಇವೇ ಮುಖ್ಯ. ಇವರಿಗೆ ಹಾಳಾಗುತ್ತಿರುವ ಕೃಷಿ ಭೂಮಿಯ ಬಗ್ಗೆಯಾಗಲೀ, ನಾಶವಾಗುತ್ತಿರುವ ಪರಿಸರದ ಬಗ್ಗೆಯಾಗಲೀ ಅಥವಾ ಜನರಿಗೆ ಬರುತ್ತಿರುವ ಗುಣಪಡಿಸಲಾರದ ರೋಗಗಳ ಬಗ್ಗೆಯಾಗಲೀ ಹೇಳಿ ಮನವೊಲಿಸುವುದು ಅಸಾಧ್ಯವಾದ ಕೆಲಸ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೨೨
ನಮ್ಮ ಕೈಗಾರಿಕೆಯಿಂದಲೇ ನಮ್ಮ ಜನಗಳಿಗೆ ಉದ್ಯೋಗ ಕಲ್ಪಿಸಲು ಭಾರತಕ್ಕೆ ಎಂದಿಗೂ ಸಾಧ್ಯವಾಗುವುದಿಲ್ಲ. ಅಷ್ಟಲ್ಲದೆ, ಇನ್ನು ಮುಂಬರುವ ಸ್ವಯಂಚಾಲಿತ ತಂತ್ರಜ್ಞಾನದಿಂದಂತೂ ಕೈಗಾರಿಕೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸೋಲತೊಡಗುತ್ತದೆ . ಆದ್ದರಿಂದ ಕೃಷಿಯೇ ಭಾರತದಲ್ಲಿ ಮುಂದೆಯೂ ಪ್ರಧಾನ ಪಾತ್ರವಹಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೨೩
ಒಂದು ಕೃಷಿ ಉತ್ಪನ್ನಕ್ಕೆ ಒಳ್ಳೆ ಬೆಲೆ ದೊರೆಯ ತೊಡಗಿತೆಂದರೆ ಸರ್ಕಾರದ ಸಬ್ಸಿಡಿ, ಧನ ಸಹಾಯ ಯಾವುದಕ್ಕೂ ಕಾಯದೆ ರೈತರು ಅದನ್ನು ಬೆಳೆದು ತಂದು ಸಂತೆಗಳಲ್ಲಿ ಮಾರುಕಟ್ಟೆಗಳಲ್ಲಿ ಸುರಿದು ರಾಶಿ ಹಾಕುವುದನ್ನು ನಾವು ನೋಡಿದ್ದೇವೆ. ಎಂದರೆ ಒಳ್ಳೆಯ ಲಾಭಕರ ಬೆಲೆಯಿಂದ ಸಿಗುವ ಪ್ರೋತ್ಸಾಹ ಸರ್ಕಾರದ ಸಾಲ ಸಬ್ಸಿಡಿ ಇವು ಯಾವುದರಿಂದಲೂ ಸಿಗುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೪೯
ಈ ಕ್ರಿಮಿನಾಶಕಗಳು ರಾಸಾಯನಿಕಗಳು ಇವೆಲ್ಲ ಆಧುನಿಕ ನಾಗರೀಕತೆಯ ಕೊಡುಗೆಗಳಷ್ಟೆ. ಭಾರತದಲ್ಲಿ ಒಂದು ಕಾಲದಲ್ಲಿ ಈ ಸಮಸ್ಯೆಗಳು ಯಾವುವೂ ಇರಲಿಲ್ಲ. ರಾಸಾಯನಿಕಗಳ ನೆರವೇ ಇಲ್ಲದೆ ನಾವು ಆಹಾರ ಬೆಳೆಯುತ್ತಿರಲಿಲ್ಲವೆ? ಹಾಗಿದ್ದರೆ ನಾವು ನಮ್ಮ ಸಾಂಪ್ರದಾಯಕ ಕೃಷಿ ವಿಧಾನಗಳಿಗೇ ಏಕೆ ಹಿಂದಿರುಗಬಾರದು? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೫೪
ಕೇವಲ ಬಡ್ಡಿ ಕೊಡುವಂತಿದ್ದರೆ ಸಾಕು ಎಷ್ಟು ಬೇಕಾದರೂ ಸಾಲ ತಗೋ ಎನ್ನುವುದು ಅಪಾಯಕಾರಿ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 33
ನಾಡು-ನುಡಿ-ಸಾಹಿತ್ಯದ ನುಡಿಗಳು
ಕನ್ನಡ ಭಾಷೆ ಉಳಿಯೋದು ಕತೆ ಕಾದಂಬರಿಗಳಿಂದ ಅಲ್ಲ. ಅದು ಉಳಿಯೋದು ಜನರ ಬಳಕೆಯಿಂದ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ-೮೧೫
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಕನ್ನಡವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾಗದಿದ್ದರೆ ಕನ್ನಡ ಭಾಷೆ ಉಳಿಯುವುದೇ ಇಲ್ಲ. (KANNADA LANGUAGE WILL NOT SUSTAIN ANYMORE IN INFORMATION TECHNOLOGY IF WE ARE NOT POSSIBLE TO GROW KANNADA) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮಾತೃಭಾಷೆ ಎಷ್ಟೊಂದು ಆಪ್ತ ಮತ್ತು ಆತ್ಮೀಯ. ನಮ್ಮ ಆಲೋಚನೆಗೂ ಅಭಿವ್ಯಕ್ತಿಗೂ ಮಧ್ಯೆ ಕಂದರವೇ ಇರುವುದಿಲ್ಲ. (MOTHER TONGUE IS SO CLOSE AND DEAR. THERE IS NO GAP BETWEEN OUR THINKING AND EXPRESSION) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್
ಅತಿ ಮಡಿವಂತಿಕೆಯಿಂದ ಭಾಷೆ ಬೆಳೆಯೋದಿಲ್ಲ. ಇಂಗ್ಲೀಷ್ ಭಾಷೆ ಯಾಕೆ ಪಾಪ್ಯುಲರ್ ಆಗ್ತಾ ಇದೆ ಅಂದ್ರೆ ಜಗತ್ತಿನ ಎಲ್ಲಾ ಭಾಷೆಯಿಂದ್ಲೂ ಅದು ಪದಗಳನ್ನ ತನ್ನೊಳಗೆ ಸೇರಿಸ್ಕೋತಾ ಇದೆ ಅದ್ಕೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ-೮೧೬
ಯಾವ ವಿಚಾರವನ್ನೂ ಮಾತೃಭಾಷೆಯಲ್ಲಿ ಕಲಿತರೇ ಮಕ್ಕಳು ಸರಿಯಾಗಿ ಗ್ರಹಿಸುವುದು. ಭಾಷೆ ಕಲಿಯುವುದಕ್ಕೂ ಆ ಭಾಷಾಮಾಧ್ಯಮದಲ್ಲಿ ಇತರ ವಿಷಯಗಳನ್ನು ಕಲಿಯುವುದಕ್ಕೂ ವ್ಯತ್ಯಾಸವಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನ ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಶನ್ಗೆ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನು ಅರಿಯಬೇಕಾದ ಅನಿವಾರ್ಯತೆ ಸೃಷ್ಟಿಶೀಲ ಬರಹಗಾರನಿಗೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂದು ನನ್ನ ಭಾವನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಒಂದು ಕಲಾಕೃತಿಯ ಸೌಂದರ್ಯಾನುಭವಕ್ಕೆ ನಿಜವಾಗಿಯೂ ಬುದ್ಧಿವಂತರ ವ್ಯಾಖ್ಯಾನದ ಅಗತ್ಯವಿರುವುದಾದರೆ ಅದು ಆ ಕಲಾಕೃತಿಯ ಪರಿಮಿತಿಗಳೇ ಹೊರತು ಓದುಗನ ದಡ್ಡತನ ಅಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ನಮ್ಮ ವಿದ್ಯಾಭ್ಯಾಸವೇ ನಮ್ಮ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿರುವುದನ್ನು ಉದಾರಣೆಯ ಬೆಳಕಿನಲ್ಲಿ ಯೋಚಿಸಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಒಬ್ಬ ಶ್ರೇಷ್ಠ ಬರಹಗಾರ ಮತ್ತು ಸಾಮಾನ್ಯ ಬರಹಗಾರನ ನಡುವೆ ಇರೋ ವ್ಯತ್ಯಾಸ ಇಷ್ಟೇ. ಶ್ರೇಷ್ಠ ಬರಹಗಾರ ತನ್ನ ವಿರುದ್ಧ ತಾನು ಯೋಚನೆ ಮಾಡೋ ಶಕ್ತಿ ಪಡೆದಿರಬೇಕು (THE DIFFERENCE BETWEEN A GREAT WRITER AND A ORDINARY WRITER IS THAT THE GREAT WRITER SHOULD HAVE THE POWER TO THINK AGAINST HIM) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಅವಾರ್ಡ್ ಫಿಲಂಗಳು ಮತ್ತು ಮಾರುಕಟ್ಟೆ ಫಿಲಂಗಳು ಅಂತ ಖಚಿತವಾದ ವಿಭಾಗವಾದ ಹಾಗೆ ಪ್ರಶಸ್ತಿಗಳ ಹಿಂದೆ ಹೋದ್ರೆ ಪ್ರಶಸ್ತಿಗಾಗಿ ಬರೆದಿರೋ ಸಾಹಿತ್ಯ ಅಂತ ಒಂದು ವಿಭಾಗ ಶುರು ಆಗತ್ತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಮ್ಮ ವಿದ್ಯಾಭ್ಯಾಸ ಕ್ರಮವೇ ಸಂಪೂರ್ಣ ತಪ್ಪಾಗಿದೆಯೆಂದು ನನಗನ್ನಿಸುತ್ತದೆ. ಬದುಕುತ್ತಾ ಬದುಕಿಗೆ ಅಗತ್ಯವಾದದ್ದನೆಲ್ಲಾ ತಿಳಿದುಕೊಳ್ಳುತ್ತಾ ಹೋಗುವ ಹೊಸಬಗೆಯ ವಿದ್ಯಾರ್ಜನೆಯ ಮಾರ್ಗಗಳನ್ನು ನಾವು ಅನ್ವೇಷಿಸಬೇಕು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕನ್ನಡದ ಬಗ್ಗೆಯ ನಮ್ಮ ಅಭಿಮಾನಕ್ಕೆ ಎರಡು ಮುಖ ಇದೆ. ಒಂದು ಭಾವನಾತ್ಮಕವಾದುದು. ಕನ್ನಡವನ್ನು ನಾವು ಕನ್ನಡ ತಾಯಿ, ಕನ್ನಡಮ್ಮ, ಭುವನೇಶ್ವರಿ ಎಂದೆನ್ನುತ್ತೇವೆ. ಭಾಷೆಯನ್ನು ನಮ್ಮ ಭಾವಸ್ಪಂದನಕ್ಕೆ, ಹಾಡಿಕೊಂಡು ಕುಣಿಯಲಿಕ್ಕೆ ಉಪಯೋಗಿಸುತ್ತೇವೆ. ಇನ್ನೊಂದು ನಮ್ಮ ಭಾಷೆಯಲ್ಲಿ ನಾವು ಆಲೋಚಿಸಲು, ತಿಳಿಸಲು, ವ್ಯವಹರಿಸಲು, ಜ್ಞಾನವನ್ನು ಶೇಖರಿಸಿ ಮುಂಬರುವ ಅನೇಕ ತಲೆಮಾರುಗಳಿಗೆ ಹಸ್ತಾಂತರಿಸಲು ಉಪಯೋಗಿಸುತ್ತೇವೆ. ಒಂದು ಬಗೆಯ ಉಪಯೋಗವನ್ನು ಭಾವೋಪಯೋಗವೆಂದು, ಇನ್ನೊಂದು ಬಗೆಯ ಉಪಯೋಗವನ್ನು ಲೋಕೋಪಯೋಗವೆಂದು ಕರೆಯುತ್ತೇವೆ. ಭಾಷೆಯ ಈ ಎರಡು ಬಗೆಯ ಉಪಯೋಗಗಳ ಸ್ಪಷ್ಟ ಅರಿವು ಇರದವನು ಭಾಷೆಯ ಬಗ್ಗೆ ಅಂಧಾಭಿಮಾನಿಯಾಗುತ್ತಾನೆ. ಒಂದು ಭಾಷೆಯ ಉಳಿವು ಅಳಿವುಗಳು ಇಂದು ನಿರ್ಧಾರವಾಗುವುದು ಅದು ಎಷ್ಟು ಲೋಕೋಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ ಎನ್ನುವುದರ ಮೇಲೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಯಾವ ಭಾಷೆಯಲ್ಲಿ ಸಮಕಾಲೀನ ಸಾಹಿತ್ಯ ಇಲ್ಲವೋ ಅಲ್ಲಿ ಆ ಭಾಷೆಯ ಪ್ರಾಚೀನ ಸಾಹಿತ್ಯ ನಿಧಾನವಾಗಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ,
ಒಂದು ಕಲಾಕೃತಿಯ ಅಂತಃಸ್ಸತ್ವ ಇರುವುದು ಕಾದಂಬರಿ ಓದಿದಾಗ ಏನೆನ್ನಿಸುತ್ತದೆಯೋ ಅದರಲ್ಲಿ. ನಮ್ಮ ಜೀವನದಲ್ಲಿ ಅನುಭವಗಳ ಮೊತ್ತ ಹೆಚ್ಚುತ್ತಾಹೋದಂತೆ ಕಾದಂಬರಿ ಮೈಗೂಡಿಸಿಕೊಳ್ಳವ ಅರ್ಥಗಳ ಪ್ರಭಾವಳಿ ಮೊದಲ ಓದಿನಲ್ಲಿ ಅನ್ನಿಸಿದ್ದಕ್ಕೆ ಪೂರಕ ಎಂದಷ್ಟೆ ಹೇಳಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್
ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಸಾಹಿತ್ಯದ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಜನ ನಮ್ಮ ಪುಸ್ತಕಗಳನ್ನು ಕೊಂಡು ಓದಿ ‘ಎಷ್ಟು ಚೆನ್ನಾಗಿ ಬರೆದಿದ್ದೀರಿ’ ಎಂದು ಹೇಳುವ ಮಾತುಗಳಿಗಿಂತ ದೊಡ್ಡ ಪ್ರಶಸ್ತಿ ಇಲ್ಲವೇ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾಧ್ಯಮದ ಎರಡು ಬಗೆಯ ಶಾಲೆಗಳನ್ನು ನಿರ್ವಹಿಸುವ ನಮ್ಮ ಸರ್ಕಾರದ ನೀತಿಯ ದೆಸೆಯಿಂದ ಹೆಚ್ಚು ಕಡಿಮೆ ದಕ್ಷಿಣಾಫ್ರಿಕಾದ ವರ್ಣಭೇದ ನೀತಿಯೊಂದು ನಮ್ಮ ವಿದ್ಯಾಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬಂದಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೨೮೧
ನಾನು, ನನ್ನ ಮಕ್ಕಳು ಇಂಗ್ಲಿಷ್ನ ೫ನೇ ತರಗತಿಯಿಂದಾನೇ ಕಲಿತವರು. ನಮಗೆಲ್ಲೂ ಕಷ್ಟ ಅಥವಾ ಸಮಸ್ಯೆ ಆಗಿಲ್ಲ. ಶಿಸುವಿಹಾರದಿಂದ ಇಂಗ್ಲಿಷ್ ಬೇಕು ಅನ್ನೋದೆಲ್ಲ ನಾನ್ಸೆನ್ಸ್ ಆಗಿದೆ. ಅಷ್ಟೇ ಅಲ್ಲ, ಇದು ಗುಲಾಮಿ ಬುದ್ಧೀನೂ ಹೌದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೨೯೩
ಇಷ್ಟೆಲ್ಲಾ ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ ಅನುಭವ, ಆಲೋಚನೆ, ವಿಚಾರ, ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೇ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಲನಿಯಮ್-೧ ಹುಡುಕಾಟ (ಮುನ್ನುಡಿ)
ಭಾಷೆ ಎಂದಿಗೂ ಅರ್ಥಕೋಶದ ಅರ್ಥಕ್ಕೆ ಹೊಂದಿಕೊಂಡು ಸ್ಥಗಿತವಾಗಿ ನಿಲ್ಲುವುದಿಲ್ಲ. ನಮ್ಮ ಭಾಷೆಯಲ್ಲಿನ ಎಲ್ಲದರ ಅರ್ಥ ನಾವು ಅದಕ್ಕೆ ಸಂವಾದಿಯಾಗಿ ತೋರುವ ಕ್ರಿಯೆಯ ಮೇಲೆ ನಿಲ್ಲುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲಾ ಬೂಸ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ ನಮ್ಮ ಮುಂದಿರುವ ಆಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ. ಕನ್ನಡ ಭಾಷೆಯ ಏಳಿಗೆಗೂ ಅಪಾರ ಸಹಾಯವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಲೇಖಕರ ನುಡಿ
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಬೇಕೆನ್ನುವುದು ಕನ್ನಡಾಭಿಮಾನಕ್ಕಿಂತ ಹೆಚ್ಚಾಗಿ ಕ್ಷಿಪ್ರವಾಗಿ ಕಲಿಯಬೇಕೆನ್ನುವುದೇ ನನ್ನ ಗ್ರಹಿಕೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕುವೆಂಪುರವರು ಬರೆಯಲಾರಂಭಿಸಿದ ಕಾಲಕ್ಕೆ ಕನ್ನಡದಲ್ಲಿ ಕ್ರಾಂತಿಕಾರಕ ಬದಲಾವಣೆಯ ಗಾಳಿ ಬೀಸಲು ಶುರುವಾಗಿತ್ತು. ಕಾದಂಬರಿ, ಭಾವ ಗೀತೆ, ಸಣ್ಣಕಥೆಗಳು ಮೊದಲಾದ ಹೊಸಬಗೆಯ ಸಾಹಿತ್ಯ ಪ್ರಾಕಾರಗಳು ಮನುಷ್ಯನ ಅನುಭವ ಪ್ರಪಂಚದ ಅನೇಕ ನೂತನ ಆಯಾಮಗಳ ಸಾಕ್ಷಾತ್ಕಾರಕ್ಕೆ ಸಿದ್ದ ನೀಲ ನಕ್ಷೆಗಳಾಗಿ ದೊರೆತವು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ನಾನು ನನ್ನ ಜೀವನದ ಅನೇಕ ವರ್ಷಗಳನ್ನು ನದಿಗಳ ದಡದಲ್ಲಿ ಮೀನಿಗೆ ಗಾಳ ಹಾಕಿಕೊಂಡು ಚಿಂತಿಸುತ್ತಾ ಕಳೆದಿದ್ದೇನೆ. ಈ ಹವ್ಯಾಸದಿಂದಾಗಿ ನನಗೆ ಯಾವವ್ಯಾವುದೋ ಜಾತಿ ಜನರ ಪರಿಚಯ ಸಂಪರ್ಕ ಬಂತು .ಅದರೆ ನನಗೆ ಅಚ್ಚರಿಯೆಂದರೆ ಈ ಎಲ್ಲಾ ರೋಮಾಂಚಕ ಅನುಭವಗಳಿಗೆ ನನ್ನ ಸಾಹಿತ್ಯ ಕೃತಿಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆತಿಲ್ಲ ಎಂದೆನಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ಸಾಹಿತ್ಯಕ ಅಂತ ಬೇರೆ ವಿಭಾಗ ಯಾಕೆ ಮಾಡ್ತೀರಿ ? ಬರವಣಿಗೆ, ಚಿತ್ರಕಲೆ ಎಲ್ಲ ಒಂದೇ ಮೂಲದಿಂದ ಹುಟ್ಟೋದು. ಬಳಸುವ ಮಾಧ್ಯಮ ಪೆನ್ನು, ಬ್ರಶ್ ಅಂತ ಬೇರೆ ಇರಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ,ಪುಟ 173
ಕನ್ನಡದ ಬರಹಗಾರರ ಪರಿಸ್ಥಿತಿ ಇಂದಿಗೂ ಎಂಥ ಚಿಂತಾಜನಕವಾಗಿದೆ ಎಂದರೆ ಈಗ ಪತ್ರಿಕಾರಂಗದಲ್ಲಿರುವ ನಿಯತಕಾಲಿಕೆಗಳ ಬಾಗಿಲು ಮುಚ್ಚಿದರೆ ನಮ್ಮ ಅತ್ಯತ್ತಮ ಬರಹಗಾರರಿಗೂ ಕೂಡ ಜನರನ್ನು ತಲುಪುವ ದಾರಿಯೇ ಇಲ್ಲದಂಥಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 325
ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಮಕ್ಕಳಷ್ಟೇ ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನೂ ಬರೆಯುವುದನ್ನೂ ಹೇಳಿಕೊಡಬೇಕೆಂಬುದೆ ನನ್ನ ಆಶಯ. ಈ ಕೆಲಸವನ್ನು ಈವರೆಗೂ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಯಾರೂ ಮಾಡುತ್ತಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 282
ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಸುವುದರಿಂದ ಇಂಗ್ಲೀಷ್ ಚೆನ್ನಾಗಿ ಬರುತ್ತದೆ ಎಂಬ ಭ್ರಮೆಗೆ ಒಳಗಾಗಿ ನಮ್ಮ ಹಳ್ಳಿಯ ಜನರೆಲ್ಲಾ ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಂದ ಬಿಡಿಸಿ, ಕಾನ್ವೆಂಟುಗಳೆಂದು ಪ್ರಾರಂಭಿಸಿರುವ ಅನಧಿಕೃತ ಕುರಿದೊಡ್ಡಿಗಳಿಗೆ ದುಬಾರಿ ಡೊನೇಷನ್ ಕೊಟ್ಟು ಸೇರಿಸುತ್ತಿದ್ದಾರೆ. ಈ ವಲಸೆ ತಪ್ಪಿಸಿ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಬೇಕೆಂದಾದರೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಇಂಗ್ಲೀಷ್ ಚೆನ್ನಾಗಿ ಕಲಿಸುತ್ತಾರೆ ಎಂಬುದನ್ನು ತಂದೆ-ತಾಯಿಗಳಿಗೆ ಮನವರಿಕೆ ಮಾಡಿಕೊಡುವುದೊಂದೇ ಮಾರ್ಗ. (ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿಸುವುದರ ಬಗ್ಗೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ: 08-10-2006) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೮೩
ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿಯನ್ನು ಹುಡುಕುತ್ತಾ, ಪುಟ ೧೦೯
ನನಗೆ ಈಗಲೂ ಇಂಗ್ಲೀಷಿನಲ್ಲಿ ಓದುವುದು ಮಾತನಾಡುವುದು ಎಲ್ಲ ಸುಲಭಸಾಧ್ಯವಿದ್ದರೂ ಅದೊಂದು ಕನ್ನಡದ ವಿಸ್ತರಣೆಯಂತಾದಾಗ ಮಾತ್ರ ಸಾಧ್ಯವೇ ಹೊರತು ಇಂಗ್ಲೀಷ್ ಭಾಷೆ ಎಂದು ಪ್ರತ್ಯೇಕವಾಗಿ ಪರಿಗಣಿಸಿದ ಕೂಡಲೇ ಸಾಧ್ಯವಾಗುವುದೇ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೮೬, ವರ್ಷ ೧೯೯೬
ಸಾಕ್ಷರತೆ, ಅಕ್ಷರ ಕಲಿತ ಕನ್ನಡಿಗರಿಗೆ ಜಗತ್ತಿನ ಜ್ಞಾನ ಭಂಡಾರಕ್ಕೆ ತೆರೆದ ಬಾಗಿಲಾಗಬೇಕು. ಎಂದರೆ ಜಗತ್ತಿನ ಜ್ಞಾನ ದಿಗಂತಗಳ ಇತ್ತೀಚಿನ ವಿಸ್ತರಣೆ ಸಹ ಓದಲು ಕನ್ನಡದಲ್ಲಿ ದೊರೆಯುವಂತಾಗಬೇಕು. ಹೀಗಾಗದೆ ಹೋದರೆ ಅನಕ್ಷರತೆಗೂ ಸಾಕ್ಷರತೆಗೂ ವ್ಯತ್ಯಾಸವೇ ಇರುವುದಿಲ್ಲ. ಸಾಕ್ಷರತೆಯ ಉಪಯೋಗ ಮಾಡದ ಜನ ಸಮುದಾಯ ಬಹುಬೇಗ ಮತ್ತೇ ಅನಕ್ಷರತೆಗೇ ಮರಳುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಮುನ್ನುಡಿ
ನಮ್ಮ ತಂದೆಯವರಿಗಾಗಲಿ, ಶಿವರಾಮ ಕಾರಂತರಿಗಾಗ್ಲಿ ಪ್ರಶಸ್ತಿ ಬಂದಾಗ ಅದು ಪ್ರಶಸ್ತಿಗೆ ಪ್ರಶಸ್ತಿ. ಯಾಕಂದ್ರೆ ಅಷ್ಟು ದೊಡ್ಡ ವ್ಯಕ್ತಿತ್ವಗಳಿಗೆ ಮರ್ಯಾದೆ ಕೊಟ್ಟಾಗ ಮರ್ಯಾದೆ ಕೊಟ್ಟವರಿಗೆ ಮರ್ಯಾದೆ ಬರುತ್ತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ಅವಾರ್ಡ್ಗಳಿಗೋಸ್ಕರ ಚಿತ್ರ ಮಾಡೋದು ನಿಲ್ಸಿ, ಯು ಮಸ್ಟ್ ವಿನ್ ಇನ್ ಬಾಕ್ಸ್ ಆಫೀಸ್. ಸುಮ್ಮನೇ ಆರ್ಟ್ ಫಿಲಂ ಮಾಡಿ, ಡಬ್ಬ ಸೇರಿಸಿ, ನಂತರ ಟಿವಿಗೆ ಕೊಡೋದು ಯಾಕೆ? ಕನಿಷ್ಟ ನೂರು ದಿನ ಓಡುವಂಥ ಸಿನಿಮಾ ಮಾಡಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 512, 2001, ಉದಯವಾಣಿ
ಅಡಳಿತ, ಆರ್ಥಿಕ, ವಹಿವಾಟು ಇತ್ಯಾದಿಗಳ ಜನಬಳಕೆಯನ್ನು ತಪ್ಪಿಸಿಬಿಟ್ಟರೆ ಸಾಕು, ಕನ್ನಡವನ್ನು ಕೊಲ್ಲುವುದಕ್ಕೆ ಬೇರೆ ಸಮರ್ಥ ವಿಧಾನ ಬೇಕಿಲ್ಲ. ಕನ್ನಡದಲ್ಲಿ ಎಂಥಾ ಸಾಹಿತಿಗಳಿದ್ದರೂ, ಕನ್ನಡಕ್ಕೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರೂ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಿದರೂ, ಜನ ಬಳಸುವುದನ್ನು ನಿಲ್ಲಿಸುತ್ತಿದಂತೆಯೇ ಆ ಭಾಷೆಯ ಅವಸಾನ ಶುರುವಾಗುತ್ತದೆ. ಇದಕ್ಕೆ ಸಂಸ್ಕೃತವೆ ಜ್ವಲಂತ ಉದಾಹರಣೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1/11/2005, ಹೊಸ ವಿಚಾರಗಳು, ಪುಟ 308
ನಾನು ನನ್ನತನದ ಅಭಿವ್ಯಕ್ತಿಗಾಗಿ ಯಾವುದೇ ವಿಶಿಷ್ಟ ನಿರೂಪಣಾ ತಂತ್ರವನ್ನಾಗಲಿ, ಶೈಲಿಯನ್ನಾಗಲಿ ರೂಪಿಸಿದ್ದೆ ಎಂದು ತಿಳಿಯಬೇಡಿ. ನನ್ನ ಅನುಭವಗಳನ್ನು ಯಾವ ತಂತ್ರಗಾರಿಕೆಯೂ ಇಲ್ಲದೆ ಸ್ಪಷ್ಟವಾಗಿ, ನೇರವಾಗಿ ನನ್ನೆಲ್ಲ ಅಭಿಜಾತ ವಿನೋದ, ಹಾಸ್ಯ ಕುತೂಹಲ, ಲವಲವಿಕೆಯೊಂದಿಗೆ ಓದುಗರಿಗೆ ತಿಳಿಸುವುದಷ್ಟೇ ನಾನು ಮಾಡಿದ್ದು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 298
ನಿಮ್ಮ ಪ್ರಶಂಸೆಯು ನಿಮ್ಮ ಪ್ರೀತಿ ವಿಶ್ವಾಸಗಳನ್ನು ಬಿಂಬಿಸುತ್ತದೆಯೇ ವಿನಃ ನಾನು ಕಡಿದಿರುವುದು ಅಷ್ಟರೊಳಗೆ ಇದೆ. ಸ್ವಲ್ಪವೇ ಕೆಲಸ ಮಾಡಿದರೂ ಆದರ ಹತ್ತುಪಟ್ಟು ಮೆಚ್ಚುಗೆ ಸೂಚಿಸುವುದು ಕನ್ನಡ ಜನತೆಯ ವಿಶಾಲ ಹೃದಯಕ್ಕೆ ಸಾಕ್ಷಿಯಷ್ಟೇ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 310
ಮೊದಲು ಏಳನೇ ತರಗತಿಯವರೆಗೆ ಮಾತೃ ಭಾಷೆಯನ್ನು ಕಡ್ಡಾಯ ಪಡಿಸಬೇಕು. ಆಗ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಿದರೆ, ಅದು ಕನ್ನಡದ ಮೇಲೆ ವಾಮನನ ಹೆಜ್ಜೆಯಾಗಿ ಬೆಳೆಯುತ್ತದೆ ಎಂಬ ಆತಂಕ ಇರುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 289, 6 ಜುಲೈ 2005, ಪ್ರಜಾವಾಣಿ
ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಮಕ್ಕಳಷ್ಟೇ ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಬರೆಯುವುದನ್ನು ಹೇಳಿ ಕೊಡಬೇಕೆಂಬುದು ನನ್ನ ಆಶಯ ಈ ಕೆಲಸವನ್ನು ಈವರೆಗೂ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಯಾರು ಮಾಡುತ್ತಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ 281, 23 ಜೂನ್ 1985 ಲಂಕೇಶ್ ಪತ್ರಿಕೆ
ಮಕ್ಕಳು, ಸ್ಕೂಲ್, ಕ್ಲಾಸ್ ದೊಡ್ಡ ಪ್ರಪಂಚ ಅಂತಾ ತಿಳ್ಕಂಡವೆ. ಅದರಾಚೆಗಿನ ವಿಶಾಲ ಜಗತ್ತಿನ ಬಗ್ಗೆ ಇವತ್ತಿನ ಮಕ್ಕಳಿಗೆ ಅರಿವೇ ಬರಲ್ಲ ಅನ್ನೋದು ನೋವಿನ ವಿಚಾರ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 293, 27 ಜೂನ್ 2005
ಕನ್ನಡಿಗರು ನನ್ನ ಕೃತಿಗಳಿಗೂ ನನಗೂ ನನ್ನ ಯೋಗ್ಯತೆಗೆ ಮೀರಿದ ಮನ್ನಣೆ ಕೊಟ್ಟು ನನ್ನನ್ನು ಅವರ ಋಣಭಾರದಲ್ಲಿ ಮುಳುಗಿಸಿದ್ದಾರೆಂದೇ ನನಗೆ ಅನ್ನಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೨೦೦೩, ಪುಟ೩೦೦
ನನ್ನ ಕೃತಿಗಳಲ್ಲಿ ಬರಹಗಾರ ಪಾತ್ರವಾಗಿ ಬರುವುದೇ ಕಡಿಮೆ. ಅಕಸ್ಮಾತ್ ಬಂದರೂ ಘಟನಾವಳಿಗಳ ನಿರೂಪಕನಾಗಿ ಇಲ್ಲವೇ ವ್ಯಾಖ್ಯಾನಕಾರನಾಗಿ ಬರುತ್ತಾನೆಯೇ ಹೊರತು ಕೃತಿಯ ನಾಯಕನಾಗಿ ವಿಜೃಂಭಿಸುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೨೦೦೩, ಪುಟ೨೯೭
ಒಂದು ಭಾಷೆಯನ್ನು ಜನ ಎಲ್ಲಿಯವರೆಗೆ ಬಳಸುತ್ತಾರೋ ಅಲ್ಲಿಯವರಿಗೆ ಮಾತ್ರ ಅದು ಬದುಕಿರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೮೨
ಕನ್ನಡಾಭಿಮಾನಕ್ಕೆ ಒಂದು ಮಿತಿ ಇದೆ. ಹೊಟ್ಟೆಪಾಡಿಗೆ ಕಲ್ಲು ಹಾಕಿಕೊಂಡು, ಹೆಂಡರು ಮಕ್ಕಳ ಬಾಯಿಗೆ ಮಣ್ಣು ಹಾಕಿ ಕನ್ನಡಾಭಿಮಾನ ಪ್ರದರ್ಶಿಸಲು ಯಾರೂ ತಯಾರಿರುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೭೭
ಯಾವುದೇ ಭಾಷೆ ಬೆಳೆಯುವುದೂ ಅದರಲ್ಲಿ ಉತ್ತಮ ಸಾಹಿತ್ಯ ನಿರ್ಮಿತಿ ಸಾಧ್ಯವಾಗುವುದು ಸಮ್ಮೇಳನಗಳಿಂದ ಅಲ್ಲ. ಜನ ಅದನ್ನು ಬಳಸುವುದರಿಂದ ಮಾತ್ರ. ಯಾವ ಭಾಷೆಯನ್ನು ನಾವು ಜೀವನದಲ್ಲಿ ಉಪಯೋಗಿಸಿದೆವು, ಅದರ ಏಳಿಗೆಗಾಗಿ ಯಾವ ರೀತಿ ಹೋರಾಡಿದೆವು ಎಂಬುದು ಬಹಳ ಮುಖ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೬೮
ಬೆಳಿಗ್ಗೆ ಎದ್ದು ಮಕ್ಕಳಿಗೆ ಅಷ್ಟಷ್ಟು ದಪ್ಪದ ಪುಸ್ತಕಗಳನ್ನೆಲ್ಲ ಬೆನ್ನು ಮೇಲೆ ಹೊರಿಸಿಬಿಟ್ಟು, ಒಂದೋ ಎರಡೋ ಲಕ್ಷ ಫೀಸ್ ಕೊಟ್ಟು ಕಳ್ಸೋದು, ಯಾರು ಯಾರು ಎಷ್ಟೆಷ್ಟು ಹೆಚ್ಚಿಗೆ ಹೋಮ್ ವರ್ಕ್ ಕೊಟ್ಟು ಪ್ರಾಣ ತಿಂತರೋ, ಅಂತಂತ ಸ್ಕೂಲುಗಳೇ ಬೆಸ್ಟು ಅಂತ ತಾಯಂದಿರೆಲ್ಲ ಅಲ್ಲಿಗೆ ಕರ್ಕೊಂಡು ಹೋಗಿ ಬಿಟ್ಟು ಅವರನ್ನು ಕಾಯ್ತ ಕೂತ್ಕೊಳ್ಳೋದು. ನಿಮ್ಮ ಕರ್ಮ ಯಾವತ್ತಾದ್ರೂ ಇದರಿಂದ ಬಚಾವಾಗೋದಿಕ್ಕೆ ಸಾಧ್ಯನಾ! ಅಲ್ರೀ ಜೀವನದಿಂದ ಕಲಿಯೋದು ವಿಪರೀತ ಇದೆ ಅನ್ನೋದನ್ನೇ ಮರೆತು ಬಿಟ್ಟು ನೀವು, ಹೇಗೆ ಉದ್ಧಾರ ಆಗ್ತೀರಾ ಹೇಳಿ ? ಜೀವನ ಎಷ್ಟು ಕಾಂಪ್ಲಿಕೇಟೆಡ್ ಅಂಡ್ ಕಾಂಪ್ಲೆಕ್ಸ್ ಆಗಿದೆ ಅಂದರೆ, ಎಲ್ಲವನ್ನೂ ಟೆಕ್ಸ್ಟ್ಯಿಂದ ಟಿವಿಯಿಂದ ಕಲಿಸೋದಕ್ಕೆ ಸಾಧ್ಯ ಇಲ್ಲ. ಜೀವನ ಕಣ್ಣುಬಿಟ್ಟು ನೋಡಿ ಸ್ವಂತ ಅನುಭವಿಸುತ್ತ ಕಲಿಯೋದು 90 ಪರ್ಸೆಂಟ್ ಆದರೆ ಶಾಲೆಯಲ್ಲಿ ಟೆಕ್ಸ್ಟ್ ಬುಕ್ನಿಂದ ಕಲಿಯೋದು 10 ಪರ್ಸೆಂಟ್ ಮಾತ್ರ! – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 599
ಸಾಕ್ಷರತೆ, ಅಕ್ಷರ ಕಲಿತ ಕನ್ನಡಿಗರಿಗೆ ಜಗತ್ತಿನ ಜ್ಞಾನ ಭಂಡಾರಕ್ಕೆ ತೆರೆದ ಬಾಗಿಲಾಗಬೇಕು. ಎಂದರೆ ಜಗತ್ತಿನ ಜ್ಞಾನ ದಿಗಂತಗಳ ಇತ್ತೀಚಿನ ವಿಸ್ತರಣೆ ಸಹ ಓದಲು ಕನ್ನಡದಲ್ಲಿ ದೊರೆಯುವಂತಾಗಬೇಕು. ಹೀಗಾಗದೆ ಹೋದರೆ ಅನಕ್ಷರತೆಗೂ ಸಾಕ್ಷರತೆಗೂ ವ್ಯತ್ಯಾಸವೇ ಇರುವುದಿಲ್ಲ. ಸಾಕ್ಷರತೆಯ ಉಪಯೋಗ ಮಾಡದ ಜನ ಸಮುದಾಯ ಬಹುಬೇಗ ಮತ್ತೇ ಅನಕ್ಷರತೆಗೇ ಮರಳುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಮುನ್ನುಡಿ
ಅವಾರ್ಡ್ಗಳಿಗೋಸ್ಕರ ಚಿತ್ರ ಮಾಡೋದು ನಿಲ್ಸಿ, ಯು ಮಸ್ಟ್ ವಿನ್ ಇನ್ ಬಾಕ್ಸ್ ಆಫೀಸ್. ಸುಮ್ಮನೇ ಆರ್ಟ್ ಫಿಲಂ ಮಾಡಿ, ಡಬ್ಬ ಸೇರಿಸಿ, ನಂತರ ಟಿವಿಗೆ ಕೊಡೋದು ಯಾಕೆ? ಕನಿಷ್ಟ ನೂರು ದಿನ ಓಡುವಂಥ ಸಿನಿಮಾ ಮಾಡಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 512, 2001, ಉದಯವಾಣಿ
ಆಡಳಿತ, ಆರ್ಥಿಕ, ವಹಿವಾಟು ಇತ್ಯಾದಿಗಳ ಜನಬಳಕೆಯನ್ನು ತಪ್ಪಿಸಿಬಿಟ್ಟರೆ ಸಾಕು, ಕನ್ನಡವನ್ನು ಕೊಲ್ಲುವುದಕ್ಕೆ ಬೇರೆ ಸಮರ್ಥ ವಿಧಾನ ಬೇಕಿಲ್ಲ. ಕನ್ನಡದಲ್ಲಿ ಎಂಥಾ ಸಾಹಿತಿಗಳಿದ್ದರೂ, ಕನ್ನಡಕ್ಕೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರೂ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಿದರೂ, ಜನ ಬಳಸುವುದನ್ನು ನಿಲ್ಲಿಸುತ್ತಿದಂತೆಯೇ ಆ ಭಾಷೆಯ ಅವಸಾನ ಶುರುವಾಗುತ್ತದೆ. ಇದಕ್ಕೆ ಸಂಸ್ಕೃತವೆ ಜ್ವಲಂತ ಉದಾಹರಣೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2005, ಹೊಸ ವಿಚಾರಗಳು, ಪುಟ 308
ಸಾವಿರಾರು ವರ್ಷದಿಂದ ಇರುವ ಕನ್ನಡ ನಾಡು ಪಂಪನಿಂದ ಇವತ್ತಿಗೆ ಒಂದು ಸಾವಿರ ವರ್ಷದ ಮೇಲಾಯಿತು. ಎಂತೆಂಥ ಕಲ್ಲಿನ ಮಾನ್ಯುಮೆಂಟ್ಸ್ ಎಲ್ಲ ನಾಶ ಆಗಿ ಹೋಗಿರುವುದು ನೋಡಿದೀವಿ. ಆದರೆ ಅವನ ಕಾವ್ಯ ಮತ್ತೆ ‘ಮನುಷ್ಯ ಜಾತಿ ತಾನೊಂದೆ ವಲಂ’ ಅಂತ ಹೇಳಿದ ಒಂದು ಉದ್ಗಾರ ಒಂದು ಸಾವಿರ ವರ್ಷ ದಾಟಿಕೊಂಡು ಬಂದಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 564
ಸಂಪರ್ಕ ಮಾಧ್ಯಮಗಳ ಮುಖಾಂತರ, ಆಡಳಿತ ಮಾಧ್ಯಮಗಳ ಮುಖಾಂತರ ಹಿಂದಿಯನ್ನು ಉಪಯೋಗಿಸಿ ಇತರ ಭಾಷೆಗಳ ಜನರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ಕೇಂದ್ರ ಪರಿವರ್ತಿಸುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿಲ್ಲವೇ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ಕನ್ನಡ ದ್ರೋಹಿಗಳಿಗೆ ಮಸಿ ಅಲ್ಲದೆ ಫೇರ್ ಅಂಡ್ ಲವ್ಲಿ ಹಚ್ಚಬೇಕಾ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು (11/11/2005 ರಂದು ನಾಡದ್ರೋಹಿ ಬೆಳಗಾವಿ ಮೇಯರ್ ವಿಜಯ್ ಮೋರೆ ಮುಖಕ್ಕೆ ಕನ್ನಡ ಪರ ಸಂಘಟನೆಯವರು ಮಸಿ ಬಳಿದ ಪ್ರಕರಣದ ಬಗ್ಗೆ ತೇಜಸ್ವಿ ಪ್ರತಿಕ್ರಿಯೆ)
ನಾನು ಬೇಕೂಂತ ಬೇರೆಯಾಗಿ ಬರೆಯೋಕೆ ಯತ್ನಿಸಲಿಲ್ಲ. ನನ್ನ ಬದುಕೇ ಬೇರೆ ಥರ ಇತ್ತು. ಬೇರೆ ಥರ ಬರೆದೆ ಅಷ್ಟೇ. ನೀವು ಬೆಂಗಳೂರಲ್ಲಿ ಕೂತು ಅದೇ ರಸ್ತೇಲಿವಾಕಿಂಗ್ ಮಾಡ್ತಾ ಬೇರೆ ಥರ ಬರೀಬೇಕು ಅಂದ್ರೆ ಹ್ಯಾಗಾಗುತ್ತೆ ಹೇಳಿ ? – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 538
ಭಿನ್ನವಾಗಿ ಬರೀಬೇಕಾದರೆ ಭಿನ್ನವಾಗಿ ಬದುಕಬೇಕು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 538
ಒಂದು ಭಾಷೆಯನ್ನು ಜನ ಎಲ್ಲಿಯವರೆಗೂ ಬಳಸುತ್ತಾರೋ ಅಲ್ಲಿಯವರೆಗೆ ಮಾತ್ರ ಅದು ಬದುಕಿರುತ್ತದೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 782
ಸಾಹಸ ಜೀವನ ಇದೆಯಲ್ಲ, ಅದರಲ್ಲಿ ಕಾರಂತರನ್ನು ಸರಿಗಟ್ಟುವವರು ಯಾರೂ ಇಲ್ಲ. ಆದ್ದರಿಂದ ಆ ಪ್ರಭಾವಗಳೂ ಆಗಿವೆ, ಮತ್ತೆ ಹೇಳ್ತೀನಿ ನನ್ನ ಜೀವನದ ಮೇಲೆ; ಬರಹದ ಮೇಲಲ್ಲ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 560
ನನ್ನ ಮೆಚ್ಚಿನ ಲೇಖಕರು ಯಾವತ್ತಿಗೂ ಶಿವರಾಮ ಕಾರಂತರು, ಕುವೆಂಪು. ಅದೇ ಆರ್ಟಿಸ್ಟ್ರಿ ತಗೊಂಡ್ರೆ ಕುವೆಂಪು IS THE GREATEST EXAMPLE. ಜೀವನದ EXPERIMENTATION ಮತ್ತು ಪ್ರಯೋಗಶೀಲತೆ ಇವುನ್ನೆಲ್ಲ ತಗೊಂಡ್ರೆ ಕಾರಂತ್ IS MY GREATEST EXAMPLE. I HAVE LEARNT A LOT FROM THESE PEOPLE. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 508
ಯಾವುದೇ ಭಾಷೆ ಬೆಳೆಯುವುದು ಅದರಲ್ಲಿ ಉತ್ತಮ ಸಾಹಿತ್ಯ ನಿರ್ಮಿತಿ ಸಾಧ್ಯವಾಗುವುದು ಸಮ್ಮೇಳನಗಳಿಂದ ಅಲ್ಲ. ಜನ ಅದನ್ನು ಬಳಸುವುದರಿಂದ ಮಾತ್ರ. ಇಲ್ಲದಿದ್ದರೆ ಯಾವ ಪಂಡಿತಾರಾಧನೆಯ ಯಾವ ರಾಜಾಶ್ರಯವೂ ಅವನತಿಯನ್ನು ತಡೆಯಲಾರವು ಇದಕ್ಕೆ ಸಂಸ್ಕೃತವೇ ಸಾಕ್ಷಿ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 768 ಭಾಷೆ ಮತ್ತು ಸಮ್ಮೇಳನಗಳು
ನಾನು ಕಣ್ಣೆದುರಿಗಿನ ಪಶು, ಪಕ್ಷಿ, ಪ್ರಾಣಿಗಳ ಬಗ್ಗೆ ಬರೀತಿದ್ದ ಹಾಗೆ ಇವನು ಪರಿಸರ ಬರಹಗಾರ ಅಂತ ಹೇಳಿ ನಾಮಕರಣ ಮಾಡಿದರೆ ಅದು ಒಳ್ಳೆಯದಲ್ಲ. ಬೈಫರ್ಕೇಟ್ ಮಾಡಿದ ಹಾಗೆ ಆಗುತ್ತೆ. ಮನುಷ್ಯ ಇರಬೇಕಾದ್ದೇ ಹೀಗೆ. ಅವೆಲ್ಲ ನಮ್ಮ ಜೀವನದ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು ಅವು. ಆದ್ದರಿಂದ ಬರಹಗಾರ ಇರಬೇಕಾದ್ದೇ ಹೀಗೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 598
ಒಬ್ಬ ಬರಹಗಾರನಿಗೆ ಕೆಲವು ವಾಸ್ತವ ಸಂಗತಿಗಳನ್ನು ತಿಳಿಸಿದರೆ ಅವನು ಸತ್ಯಕ್ಕೆ ತೀರಾ ಹತ್ತಿರವಾದ ಕಲಾಕೃತಿ ರಚಿಸ್ತಾನೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 39
ಒಬ್ಬ ಸಾಹಿತಿಗೆ ಯಾರೂ ಬರೀಬೇಡ ಅಂತಾಗಲೀ, ಬರೀ ಅಂತಾಗಲಿ ಹುಕುಂ ಚಲಾಯಿಸೋ ಹಾಗಿಲ್ಲ. ಸ್ವತಃ ಬರಹಗಾರನಿಂದಲೂ ಅದು ಅಸಾಧ್ಯ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 92
ರಾಜಕೀಯ ನುಡಿಗಳು
ಕನ್ನಡಿಗರ ಆಶೋತ್ತರಗಳನ್ನು ಬಲವಾಗಿ ಪ್ರತಿಪಾದಿಸುವ ಪಕ್ಷ ಮತ್ತು ರಾಜಕಾರಣಿಗಳು ಕನ್ನಡ ನಾಡಿನಲ್ಲಿ ಇಲ್ಲದಿದ್ದರೆ ನಾವು ನದಿ ನೀರಿನಂತೆಯೇ ನೆಲವನ್ನೂ ಕಳೆದುಕೊಳ್ಳುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೧೫೦
ದೇಶ ಬದಲಾಗಬೇಕೆಂದು ನಾವೆಲ್ಲ ಬಹಿರಂಗದಲ್ಲಿ ಹೇಳುತ್ತೇವೆ. ನಮ್ಮ ಅಂತರಂಗಕ್ಕೂ ಬಹಿರಂಗಕ್ಕೂ ನಡುವಿನ ಕಂದರ ನಾವು ಗಮನಿಸಿರುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಸಾಮಾಜಿಕ ಜವಾಬ್ದಾರಿ, ದೇಶದ ಬಗ್ಗೆಯ ಕಳಕಳಿ ಬೇರೆಯವರಿಂದ ಅಪೇಕ್ಷಿಸುವಂಥದೇ ಅಲ್ಲ. ನಮ್ಮಲ್ಲೇ ಇರಬೇಕಾದುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಾವು ಎಷ್ಟು ಕೆಟ್ಟ ರಾಜಕಾರಣಿಗಳನ್ನೂ ಅಧಿಕಾರಶಾಹಿಯನ್ನೂ ನಿರ್ಮಾಣ ಮಾಡಿದ್ದೇವೆಂದರೆ ಅತಿವೃಷ್ಟಿ, ಅನಾವೃಷ್ಟಿ, ಬರ, ಭೂಕಂಪ, ಯುದ್ಧ ಮೊದಲಾದ ಯಾವುದೇ ವಿಪತ್ತು ಬಂದರೂ ಅದನ್ನು ಸ್ವಾರ್ಥಕ್ಕೆ ಉಪಯೋಗಿಸುತ್ತಾರೆ. ಮುಂದುವರೆದ ರಾಷ್ಟ್ರಗಳ ಕುತಂತ್ರಿ ನೀತಿಯಷ್ಟೇ ಇವರು ನಮಗೆ ಅಪಾಯಕಾರಿಗಳು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಮ್ಮ ರಾಜಕಾರಣಿಗಳಲ್ಲಿ ಅನೇಕರು ಕೇಂದ್ರೀಕೃತ ಆಡಳಿತ ಪದ್ಧತಿಯ ರುಚಿ ಕಂಡಿದ್ದಾರೆ. ಹಳ್ಳಿಗಳ ಸಂಪತ್ತನ್ನೆಲ್ಲಾ ಸೂರೆ ಹೊಡೆದು ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಾ ಮಜಾ ಉಡಾಯಿಸುವುದೇ ರಾಜಕಾರಣ ಎಂದು ತಿಳಿದಿದ್ದಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಭಾರತದಲ್ಲಿ ಇರುವುದು ಪ್ರಜಾಪ್ರಭುತ್ವವಾದರೂ ಮಿತಿಮೀರಿದ ಕೇಂದ್ರೀಕರಣದ ದೆಸೆಯಿಂದ ಸರ್ಕಾರದ ಧೋರಣೆಗಳನ್ನು ರೀತಿ ನೀತಿಗಳನ್ನು ರೂಪಿಸುವವರು ಗ್ರಾಮಗಳ ಮತ್ತು ಕೃಷಿಕ್ಷೇತ್ರದ ವಾಸ್ತವಾಂಶಗಳನ್ನು ಗ್ರಹಿಸದಷ್ಟು ದೂರಾಗಿದ್ದಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾ ಸಾಹಸವಾಗುತ್ತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಮತಧರ್ಮ ನಮ್ಮಲ್ಲಿ ಪ್ರಜ್ಞಾಪೂರ್ವಕ ವಲಯದಲ್ಲಿ ಮಾಡುವ ಹಾನಿಗಿಂತ ಭೀಕರವಾದುದು ಪ್ರಜ್ಞಾತೀತ ವಲಯದಲ್ಲಿ ಅದು ಮಾಡುವ ಹಾನಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ನಮ್ಮ ಆಡಳಿತ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ನಮ್ಮ ಗ್ರಾಮಗಳಿಂದಲೂ ರೈತರಿಂದಲೂ ದೂರವಾಗುತ್ತಾ ಪರೋಕ್ಷವಾಗುತ್ತಾ ಹೋಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ (THE SUBJECT OF MODERNIZATION OF INDIA IS THAT ONE STEALING SOMEONE’S FOOD) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಗ್ರಾಮೀಣ ಜನರಾದ ದಲಿತರನ್ನೂ ಶೂದ್ರರನ್ನೂ ಇಂಗ್ಲಿಷರು ಸಹ ನಾಚುವಂತೆ ಸರಕಾರ ಮತ್ತು ಅಧಿಕಾರಶಾಹಿ ಇಂದಿಗೂ ಇಂಗ್ಲಿಷಿನ ಸಹಾಯದಿಂದ ತುಳಿಯುತ್ತಿದೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೨೮೫
ಪ್ರಾದೇಶಿಕ ಪಕ್ಷ ನಮ್ಮ ರಾಜಕೀಯ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಬರೇ ಕಾವೇರಿ ಒಂದೇ ಕಾರಣ ಅಲ್ಲ. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳು ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕುಸಿದು ಸಣ್ಣ ಸಣ್ಣ ರಾಷ್ಟ್ರಗಳಾಗಿ ಇಲ್ಲವೇ ಒಕ್ಕೂಟಗಳಾಗಿ ರೂಪುಗೊಳ್ಳುತ್ತಿವೆ. ಈಗಿನ ರೀತಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಾಕಲು ಹಿಂದುಳಿದ ದೇಶಗಳಿಗೆ ಸಾಧ್ಯವೇ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಈ ಅವಾಸ್ತವಿಕ ರಾಷ್ಟ್ರೀಯತೆಯ ದೆಸೆಯಿಂದಾಗಿ ಅಧಿಕಾರಶಾಹಿ ಭೀಕರವಾಗಿದೆ. ಭ್ರಷ್ಟಾಚಾರ ಯೋಜನಾಬದ್ಧ ಪ್ರಗತಿಯನ್ನು ಅರ್ಥಹಿನವನ್ನಾಗಿ ಮಾಡಿದೆ. ಕಾಳಧನ ಉದ್ದೇಶಪೂರ್ವಕ ಬಂಡವಾಳ ಹೂಡಿಕೆಯನ್ನೇ ಸ್ಥಗಿತಗೊಳಿಸಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾವೇರಿ ನೀರಿನ ಬಗ್ಗೆ ಕರ್ನಾಟಕದ ಹಿತಾಸಕ್ತಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವವರು ಶಾಸಕರ ರಾಜೀನಾಮೆಗೆ ಆಗ್ರಹ ಪಡಿಸುವುದಾಗಲಿ ಅವರು ಕೊಡುತ್ತೇನೆಂದು ಹೇಳುವುದಾಗಲಿ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಶಾಸಕರೆಲ್ಲ ರಾಜೀನಾಮೆ ಕೊಟ್ಟು ಮೊನ್ನೆ ಮಾಡಿದ ಹಾಗೆ ಎಲ್ಲ ಪಕ್ಷಗಳು ಬಂದ್ ಗೆ ಕರೆಕೊಟ್ಟು ದೊಂಬಿ ಎಬ್ಬಿಸಿದರೆ ಕರ್ನಾಟಕವನ್ನು ಗಲಭೆ ಪೀಡಿತ ಪ್ರದೇಶ ಎಂದು ಘೋಷಿಸಿ ಒಬ್ಬ ಖದೀಮ ರಾಜ್ಯಪಾಲನನ್ನು ನೇಮಿಸಿ ಚುನಾವಣೆಯೇ ನಡೆಸದೆ ಕೇಂದ್ರ ಕರ್ನಾಟಕವನ್ನು ವರ್ಷಗಳವರೆಗೆ ಆಳಬಹುದು. ದೊಂಬಿ ಗಲಭೆಗಳಿಂದ ಕರ್ನಾಟಕದಲ್ಲಿ ಇಂಥ ಪರಿಸ್ಥಿಯನ್ನು ರೂಪಿಸುತ್ತೇವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಆಂಧ್ರ, ತಮಿಳುನಾಡುಗಳಲ್ಲಿ ಬಲವಾದ ಪ್ರಾದೇಶಿಕ ಪಕ್ಷಗಳಿವೆ. ಆದ್ದರಿಂದ ಅವರ ಮಾತಿಗೆ ಕೇಂದ್ರ ಸರ್ಕಾರವಾಗಲೀ ನ್ಯಾಯಮಂಡಳಿಯಾಗಲಿ ಹೆಚ್ಚು ಬೆಲೆ ಕೊಡುತ್ತವೆ. ಕರ್ನಾಟಕ ಈವರೆಗೂ ಅಂಥ ರಾಜಕೀಯ ಪಕ್ಷವನ್ನಾಗಲಿ ರಾಜಕಾರಣಿಯನ್ನಾಗಲಿ ರೂಪಿಸಲಿಲ್ಲ. ಕೇಂದ್ರಕ್ಕೆ ನಜರು ಒಪ್ಪಿಸುವ ಸಾಮಂತರು ಮಾತ್ರ ಇಲ್ಲಿ ಬಂದಿದ್ದಾರೆ. ಕೇಂದ್ರ ಮಂತ್ರಿಗಳಿಗೆ ಭೇಟಿಗೆ ಅವಕಾಶ ಕೊಡದೆ ಜಯಲಲಿತ ಹಿಂದಕ್ಕೆ ಕಳಿಸಿದರು. ನಮ್ಮವರು ಕರ್ನಾಟಕ ಭವನದಲ್ಲಿ ವಾರಗಟ್ಟಲೆ ತಂಗಿದ್ದು ಭೇಟಿಗೆ ಕಾಯುತ್ತಾರೆ. ಆದ್ದರಿಂದ ಕರ್ನಾಟಕ ಸಹ ತನ್ನ ಪ್ರಾದೇಶಿಕ ಹಿತಾಸಕ್ತಿಯನ್ನು ಪ್ರಧಾನವಾಗಿ ಕಾಯುವ ಒಂದು ರಾಜಕೀಯ ಪಕ್ಷ ರೂಪಿಸಬೇಕು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಗಣಿಮಂತ್ರಿ ಗ್ರಾನೈಟ್ ತೆಗೆಯಲು ಪರವಾನಗಿ ಕೊಡುತ್ತಾನೆ. ಅರಣ್ಯಮಂತ್ರಿ ಅವನ ಮೇಲೆ ಕೇಸ್ ಹಾಕುತ್ತಾನೆ. ಮೀನುಮಂತ್ರಿ ಮೀನು ಕೆರೆಗೆ ಬಿಟ್ಟರೆ ಕಾಮಗಾರಿ ಮಂತ್ರಿ ಕೆರೆ ಒಡೆಸುತ್ತಾನೆ. ಬಾಯಲ್ಲಿ ಭಜನೆ ಮಾಡುವ ನಮ್ಮ ಅಖಂಡನೆಗೂ ನಮ್ಮ ವರ್ತನೆಗೂ ಸಂಬಂಧವಿದೆಯೇ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ಇಲ್ಲಿ ದೇಶದಾದ್ಯಂತ ಯಾತ್ರೆ ಹೋಗಿ ಅಖಂಡತೆಯ ಬಾವುಟ ಹಾರಿಸುವವರೂ, ಭಾರತಮಾತೆ ಎಂದು ಭಾವುಕವಾಗಿ ಮಾತನಾಡುವವರೂ ಭಾರತದ ಉಗ್ರವಾಸ್ತವವನ್ನು ನೋಡಲು ಹೆದರುವ ಪಲಾಯನವಾದಿಗಳಂತೆ ಕಾಣುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ಭ್ರಷ್ಟಾಚಾರ ಎಲ್ಲಿ ನಮ್ಮ ಅಭಿವೃದ್ಧಿಕಾರ್ಯಗಳ ಅಂತರ್ಗತ ಅಂಶವಾಗುತ್ತದೆಯೋ ಅಲ್ಲಿ ಯೋಜನೆ ಎನ್ನುವ ಹೆಸರು ಕೇವಲ ನಾಮ ಮಾತ್ರ. ಇದನ್ನು ಯೋಜನಾ ಬದ್ಧ ಪ್ರಗತಿ ಎಂದು ಕರೆದುಕೊಳ್ಳುವುದು ಆರ್ಥಿಕ ತಜ್ಞರು ಮಾಡಿಕೊಳ್ಳಬಹುದಾದ ಆತ್ಮವಂಚನೆಯಷ್ಟೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ಈ ಶತಮಾನದ ಬಹುಪಾಲನ್ನು ಕಾಡಿದ ರಾಜಕೀಯ ಮೂಲಭೂತವಾದದ ಯುಗವೇನೋ ಕೊನೆಯಾಗುತ್ತಿದೆ, ಆದರೆ ಅದರ ಜಾಗವನ್ನು ಧಾರ್ಮಿಕ ಮೂಲಭೂತವಾದ ಆಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಹಾ ಪಲಾಯನ (ಮುನ್ನುಡಿ)
ರಾಜಕಾರಣಿಗಳು ಎಂದೆಂದೂ ಭಾರತವನ್ನು ಜಾತ್ಯಾತೀತ ಸಮಾಜ ಆಗದಹಾಗೆ ನೋಡಿಕೊಳ್ಳುತ್ತಾರೆ. ಏಕೆಂದರೆ ಇನ್ಯಾವ ಅರ್ಹತೆಗಳೂ ಇಲ್ಲದ ಅವರಿಗೆ ಜಾತಿ ಬಿಟ್ಟರೆ ಓಟಿಗೆ ಬೇರೆ ಗತಿಯೇ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ತಮ್ಮ ಧಾರ್ಮಿಕತೆಯನ್ನು ಹೆಂಗಸರನ್ನು ತುಳಿಯುವುದರ ಮೂಲಕ, ಇತರ ಧರ್ಮಗಳನ್ನು ದ್ವೇಷಿಸುವುದರ ಮೂಲಕ ಉಳಿಸಿಕೊಳ್ಳಲು ಎಲ್ಲರೂ ಯತ್ನಿಸುತ್ತಿದ್ದಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ
ಅವನತಿಯಿಂದಲೇ ತಮ್ಮ ವೈಯಕ್ತಿಕ ಉನ್ನತಿಯನ್ನು ಸಾಧಿಸುವ ಅಗಾಧವಾದ ಒಂದು ವರ್ಗವೇ ನಮ್ಮಲ್ಲಿ ಇಂದು ತಯ್ಯಾರಾಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೪೨೫
ನಿಧಾನವಾಗಿ ವಿಕೇಂದ್ರೀಕರಣ ಮಾತೃ ಭಾಷೆ ಮುಂತಾದವನ್ನು ಪ್ರತಿಬಂಧಿಸುತ್ತ ಕೆಲಸಕ್ಕೆ ಬಾರದ ಬೊಫೊರ್ಸ್, ರಾಮ ಮಂದಿರ ಮುಂತಾದವುಗಳು ಮಾತ್ರ ಚುನಾವಣೆಯ ಸಂದರ್ಭದಲ್ಲಿ ಪ್ರಸ್ತಾಪಿಸಲು ಅರ್ಹವಾದ ವಿಷಯಗಳಾದರೆ ಭಾರತದ ಜೀವಂತ ಸಮಸ್ಯೆಗಳಿಂದ ಚುನಾವಣೆ ಪ್ರತ್ಯೇಕವಾಗಿಯೇ ಉಳಿಯುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು
ಅನೇಕ ರಾಜಕೀಯ ಪಕ್ಷಗಳು ವೋಟಿಗಾಗಿ ಸಂಸತ್ತಿನಲ್ಲೇ ಒಂದು ನಡವಳಿಕೆ, ಸಂಸತ್ತಿನ ಹೊರಗೆ ಒಂದು ನಡವಳಿಕೆ ರೂಢಿಸಿಕೊಳ್ಳುತ್ತಿರುವುದಂತೂ ಖಂಡನೀಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 164
ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೆ ತರಬೇಕು ಅದರೆ ಅದನ್ನು ಯಾರಿಗೆ ಆಗಲಿ ಕಡ್ಡಾಯ ಮಾಡುವುದು ಬೇಡ. ಆಯ್ಕೆಯ ಪ್ರಶ್ನೆ ಜನರಿಗೆ ಬಿಡಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ,ಪುಟ 173
ಇವತ್ತು ಭಾರತಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಏನಾದರೂ ಹೆಸರು ಬಂದಿದ್ದರೆ ಅದನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರ ತಂದುಕೊಟ್ಟಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 174
ಕೆಲವು ಕ್ಷೇತ್ರಗಳಲ್ಲಿ ನಮಗೆ ಏಕರೂಪತೆ ಬೇಕು. ಒಂದೊಂದು ಜಾತಿಯವರಿಗೆ ಒಂದೊಂದು ನೀತಿ ಸಂಹಿತೆ ಇದೆ ಈ ದೇಶದಲ್ಲಿ. ಈ ಸನಾತನ ಧರ್ಮ, ಕುರಾನ್ ಮುಂತಾಗಿ ನಾವು ರೋಸಿಹೋಗಿದ್ದೇವೆ. ಎಲ್ಲರಿಗೂ ಒಂದೇ ರೀತಿಯ ಕಾನೂನು ತರೋದರಲ್ಲಿ ತಪ್ಪೇನಿದೆ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 173
ನಮ್ಮನ್ನು ಕೇವಲ ಭಾರತೀಯರಾಗಲು ಬಿಡಿ, ಮೊದಲು ಏಕರೂಪದ ಕಾಯ್ದೆ ತನ್ನಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 173
ಆಡುವುದು ಸುಲಭ. ಅದರೆ ಆಡಿದಂತೆ ಮಾಡುವುದು ಕಷ್ಟ. ಅದಕ್ಕೆ ಅಧಿಕಾರದಲ್ಲಿ ಇಲ್ಲದ ಸೌಲಭ್ಯ ಉಪಯೋಗಿಸಿಕೊಂಡು ಮನಬಂದಂತೆ ಮಾತಾಡಬಾರದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ,ಪುಟ 185
ಸರ್ಕಾರಿ ಉದ್ಯಮಗಳು ಖಾಸಗಿಯವರಿಗೆ ಹಸ್ತಾಂತರವಾದರೆ ಅಧಿಕಾರಶಾಹಿ ತಮ್ಮ ಢಕಾಯ್ತಿಗೆ ಚಂಬಲ್ ಕಣಿವೆಗೆ ಹೋಗಬೇಕಾಗುತ್ತದೆ. ಆದ್ದರಿಂದ ಇವರು ಖಾಸಗಿಕರಣವನ್ನು ವಿರೋಧಿಸಬೇಕಾದುದು ನ್ಯಾಯ ಮತ್ತು ಸಹಜ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಇವತ್ತು ನಮ್ಮ ದೇಶದಲ್ಲಿ ಒಂದು ಜಾತ್ಯತೀತ ಸಂವಿಧಾನವಿದೆ. ಆ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು. ಅದರಲ್ಲಿನ ಜಾತ್ಯಾತೀತ ತತ್ವಗಳನ್ನು ನಾವು ಅವಲಂಬಿಸಿದರೆ, ಅದು ಜಾತಿ ವಿನಾಶಕ್ಕೆ ಮತ್ತು ಕೋಮುದಳ್ಳುರಿಗೆ ಉತ್ತಮ ಪರಿಹಾರವಾಗುತ್ತದೆ. ಈ ಆಧುನಿಕ ಕಾಲದಲ್ಲಿ ಯಾರಿಗೆ ಬೇಕು ಅಂಧಾಕಾರದ ಧರ್ಮ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೫೨೧
ಬಸವಣ್ಣನವರ ಚಳವಳಿ ಜಾತ್ಯತೀತ ಚಳವಳಿಯಾಗಿತ್ತು, ಏಕೆಂದರೆ ಬ್ರಾಹ್ಮಣ ಧರ್ಮದ ಪ್ರಕಾರ ಹುಟ್ಟಿನಿಂದಲೇ ಜಾತಿ ನಿರ್ಧಾರವಾಗುತ್ತದಲ್ಲದೇ, ಮತಾಂತರಕ್ಕೆ ಅವಕಾಶವಿಲ್ಲದಿದ್ದರಿಂದ ಯಾವನಿಗೂ ಹುಟ್ಟಿದ ಜಾತಿಯಿಂದ, ಆ ಜಾತಿ ವ್ಯವಸ್ಥೆಯಿಂದ ಬಿಡುಗಡೆಯೇ ಇರಲಿಲ್ಲ. ಆದರೆ ಬಸವಣ್ಣ ಮತಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಅದು ಜಾತ್ಯತೀತ ಚಳವಳಿಯಾಗಿತ್ತು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೫೨೧
ನನಗನ್ನಿಸುವುದು ಬಸವಣ್ಣ ಮತಾಂತರಕ್ಕೆ ಅವಕಾಶ ಮಾಡಿದ್ದರಿಂದ ಆ ಮೂಲಕ ಎಲ್ಲರೂ ಸಮನಾದ್ದರಿಂದ, ಹುಟ್ಟಿನಿಂದ ಜಾತಿ ಎಂಬ ಬ್ರಾಹ್ಮಣ ಧರ್ಮದ ಜಾತಿ ಪದ್ಧತಿಯಿಂದ ಬಿಡುಗಡೆ ಕೊಟ್ಟಿದ್ದರಿಂದ, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ್ದರಿಂದ, ನನ್ನ ಪ್ರಕಾರ ಆಧ್ಯಾತ್ಮಿಕವಾಗಿ ಲಿಂಗಾಯತರು ಹಿಂದೂಗಳಲ್ಲ ಹಾಗೆ ನೋಡಿದರೆ, ಬೌದ್ಧ ಧರ್ಮ ಮತ್ತು ವೀರಶೈವ ಲಿಂಗಾಯತ ಎರಡೂ ಜಾತ್ಯತೀತ ಮಾತ್ರವಲ್ಲ ಎರಡು ಅಹಿಂದೂ ಧರ್ಮಗಳು ಆಗಿವೆ. ಹೊರನೋಟಕ್ಕೆ ವೀರಶೈವ ಹಿಂದೂ ಧರ್ಮದಂತೆ ಕಾಣುತ್ತದೆ ಆದರೆ ಆಳದಲ್ಲಿ ಅದು ಹಿಂದೂಧರ್ಮವಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೫೨೨
ಗುಂಪುಗಾರಿಕೆ, ಮನಸ್ತಾಪ, ಜಾತಿಜನಗಳು, ದುರಾಸೆ ಇವುಗಳನ್ನೇ ನಮ್ಮ ರಾಜಕಾರಣ ತನ್ನ ಪ್ರಧಾನ ಚೈತನ್ಯಶಕ್ತಿಯನ್ನಾಗಿ ಉಪಯೋಗಿಸುತ್ತಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 193
ಯಾವತ್ತಾದ್ರು, ಈ ಕಳ್ಳ ಜಗದ್ಗುರುಗಳು , ಮುಲ್ಲಾಗಳು ನಮಗೆ ಇನ್ಸ್ಪಾಯರ್ ಮಾಡೋದಿಕ್ಕೆ ಸಾಧ್ಯನಾ !. ಹಿಂದುತ್ವವಾದಿಗಳು ಜಿಹಾದಿಗಳು ಇವರೆಲ್ಲಾ ಒಂದೇ ರಾಕ್ಷಸನ ವಿವಿಧ ಮುಖಗಳು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 552
ಸಾಯೋದಿಕ್ಕೆ ಬೆನ್ನಿಗೆ ಬಾಂಬು ಕಟ್ಟಿಕೊಂಡು ಓಡಾಡೊ ಮುಠ್ಠಾಳರಿಗೆ ಹೇಗೆ ಬುದ್ಧಿ ಹೇಳೊದಿಕ್ಕೆ ಸಾಧ್ಯ ಆಗುತ್ತೆ ಅನ್ನೋದನ್ನ ಯೋಚನೆ ಮಾಡಿ. ನೂರು ರೂಪಾಯಿಗೊ ಇನ್ನೂರು ರೂಪಾಯಿಗೊ ಕೆಲಸ ಮಾಡೋದಿಕ್ಕೆ ಹೋಗೊರಿಗೆ ‘ ಬ್ಯಾಡ ಬಾರಯ್ಯ ಮುನ್ನೂರ ರೂಪಾಯಿ ಕೋಡ್ತೀನಿ’ ಅಂತ ಹೇಳಬಹುದು. ಸ್ವರ್ಗದಲ್ಲಿ ಹದಿನಾಲ್ಕು ಜನರೇಷನ್ನಿಗೂ ಸದ್ಗತಿ ಸಿಗುತ್ತಂತೆ ; ಅದಕ್ಕೆ ಬಾಂಬು ಇಡೋದಿಕ್ಕೆ ಹೋಗ್ತಿವಿ ಅಂತ ಹೇಳೊರಿಗೆ ಹೇಗೆ ಬುದ್ಧಿ ಹೇಳ್ತಿರಾ ಹೇಳಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 553
ಚುನಾವಣೆ ಒಂದು ಮಾಯಾಲೋಕ. ಜಾತಿ, ಗೆಳೆತನ,ಬಾಂಧವ್ಯ, ಹಣ, ಯಾವಯಾವುದೋ ಆಮಿಷಗಳಿಗೆ ಸಿಕ್ಕು ನಾವು ಒಂದು ಕ್ಷಣ ನಮ್ಮ ಜೀವನದ ಧ್ಯೇಯವನ್ನೂ ನಮ್ಮ ಪ್ರೀತಿಯ ಕರ್ನಾಟಕವನ್ನೂ ಮರೆಯುತ್ತಿದ್ದೇವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 228
ಪುಂಡುಪೋಕರಿಗಳನ್ನು ಚುನಾಯಿಸಿ ಕಳಿಸಿದರೆ, ಆದರ ಪರಿಣಾಮವನ್ನು ಪ್ರಜೆಗಳು ಅನುಭವಿಸಲೇಬೇಕು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 196
ದುಷ್ಟರಾಗದೆ, ನೀಚರಾಗದೆ, ಭ್ರಷ್ಟರಾಗದೆ ಉಳಿಯುವುದೇ ಒಂದು ದುರ್ದಮ್ಯವಾದ ಸಾಹಸವಾಗಬೇಕಾದ ಪರಿಸ್ಥಿತಿ ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿಯೇ ನಿರ್ಮಾಣವಾಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 215
ಅಧಿಕಾರ ಸ್ಥಾನಗಳೆಲ್ಲಾ ಅವೀವೆಕಿಗಳ, ಭ್ರಷ್ಟರ, ಕೊಲೆಗಡುಕರ ಕೈಗೆ ನಿರಂತರವಾಗಿ ಹೋಗುತ್ತಿದ್ದರೆ ನಮ್ಮ ಮಾತು, ಚಿಂತನೆ, ಕಲಾಸೃಷ್ಟಿ, ಪ್ರಶಸ್ತಿಗಳು, ಸನ್ಮಾನಗಳು ಎಲ್ಲ ದಿನದಿಂದ ದಿನಕ್ಕೆ ಅಸಂಗತವಾಗುತ್ತಾ ಹೋಗುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 220
ನಾವು ಕೇವಲ ಅಭಿವೃದ್ಧಿ ಮತ್ತು ಅಧಿಕಾರಗಳಿಗಾಗಿ ಮಾತ್ರ ಹುಟ್ಟಿ ಬದುಕುತ್ತಿರುವವರಲ್ಲ, ನಮ್ಮ ಆತ್ಮಗೌರವ ಎಲ್ಲಕ್ಕಿಂತ ಮುಖ್ಯವಾದುದ್ದಲ್ಲವೇ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 214
ಚುನಾವಣೆಯ ರಂಗಸ್ಥಳದಲ್ಲಿ ಕೊನೆಗೂ ನಮಗೆ ಅಯ್ಕೆ ಸೌಲಭ್ಯ ಇರುವುದು ಇದ್ದುದರಲ್ಲಿ ಅತ್ಯಂತ ಕಡಿಮೆ ಖೇಡಿ ಯಾರೆಂದು ನೋಡಿ ಆಯಲು ಅಲ್ಲವೇ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 245
ಯುವಜನ ಕ್ರೀಡಾ ಖಾತೆಗಳು, ಮಂತ್ರಿಗಳು, ರಿಸರ್ಚ್ ಹುದ್ದೆಗಳು, ಏಲಕ್ಕಿ ಮಂಡಳಿಗಳು, ಭಾರತ ಮಾತೆಯ ತಿಥಿ ಊಟಕ್ಕೆ ಬಾಳೆ ಎಲೆ ಹಾಕಿಕೊಳ್ಳುತ್ತಾರೆ. ಈ ದೇಶಕ್ಕೆ ಮಳೆಯಿಲ್ಲದೆ ಬರಗಾಲ ಬರಲಿ, ಪ್ರವಾಹ ವಿಕೋಪವಾಗಲಿ, ಭೂಕಂಪಗಳಾಗಲಿ , ಯುದ್ಧ ಶುರುವಾಗಲಿ ಈ ಪಿಶಾಚಿಗಳಿಗೆ ಆನಂದವೋ ಆನಂದ. ದುಡ್ಡು ಮಂಜೂರು ಮಾಡಿಸಿಕೊಂಡು ಕ್ರೀಡಾಂಗಣಗಳಿಗೆ ಅಸ್ತಿಭಾರ ಶಿಲೆ ಇಡುತ್ತಾ, ರೈತರಿಗೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇವೆಂದು ಬೊಗಳುತ್ತಾ ಹಣ ದೋಚ ತೊಡಗುತ್ತಾರೆ. ರೋಗಿಗೆ ರೋಗ ಬಿಗಡಾಯಿಸಿ ದಷ್ಟು ಸುಲಿಯಲು ಸಿಕ್ಕನೆಂದು ಸಂತಸ ಪಡುವ ವೈದ್ಯರ ಹಾಗೆ ನಮ್ಮ ಮಂತ್ರಿಗಳು, ರಾಷ್ಟ್ರಪತಿಗಳು ಮುಂತಾದವರೆಲ್ಲ ನಮ್ಮ ಆಟಗಾರರು ಕೋಚುಗಳನ್ನು ಹುಡುಕಿಕೊಂಡು ವಿದೇಶಕ್ಕೆ ಹೋದಹಾಗೆ ವೈದ್ಯರನ್ನು ಹುಡುಕಿಕೊಂಡು ಪರದೇಶಕ್ಕೆ ದೌಡಾಯಿಸುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೪೩೫
ಜನತೆಯ ಮುಂದೆ ಮಂಡಿಸಲು ಏನೂ ಇಲ್ಲದ ಎಲ್ಲ ರಾಜಕೀಯ ಪಕ್ಷಗಳೂ ಜಾತಿವಾದ, ಮತೀಯತೆ, ಧರ್ಮ ಇತ್ಯಾದಿಗಳನ್ನೇ ಮೂಲ ಬಂಡವಾಳ ಮಾಡಿಕೊಂಡು ಇಲ್ಲಿಯವರೆಗೂ ಬೆಳೆದವು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 486, 2018
ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ಜನರ ಮನೋಬಲ ಮಾತ್ರ ಪ್ರಪಂಚವನ್ನು ಬದಲಿಸಬಲ್ಲದೇ ಹೊರತು ರಾಜಕೀಯವಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 515, 1.10.2004
ನಮ್ಮ ಟೀಕೆಗಳಿಗೆ ಈ ರಾಜಕೀಯದವರು ಎಲ್ಲಿ ಸೊಪ್ಪು ಹಾಕ್ತಾರೆ ಹೇಳ್ರೀ. ಅವರಿಗೆ ಭಿನ್ನಮತೀಯರು ಪಿಸುಗುಟ್ಟಿದರೂ ಕೇಳುತ್ತೇ. ನಮ್ಮಂಥವರು ಚೀತ್ಕಾರ ಮಾಡಿದರೂ ಕೇಳೋದಿಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 536, DEC 22, 2001
ಪ್ರತಿ ಚುನಾವಣೆಲೂ ಜಾತೀಯತೆ ಉಪಯೋಗಿಸಿಕೊಂಡು ಎಲೆಕ್ಟ್ ಆಗೋರು ಜಾತಿ ಎರಾಡಿಕೇಟ್ ಮಾಡ್ತಾರಾ? – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ, ಪುಟ 95, 30 ಡಿಸೆಂಬರ, 2001
ಪಾಶ್ಚಿಮಾತ್ಯರು ಆಗಲೇ ಹೊಸ ಹೊಸ ಅಮೇರಿಕಾ, ಆಸ್ಟ್ರೇಲಿಯಾಗಳಂಥ ಖಂಡಗಳನ್ನು ಕಂಡುಹಿಡಿದು ತಮಗಾಗಿ ಕಾದಿರಿಸಿಕೊಂಡಿದ್ದರಿಂದ ಹೊಸ ತಂತ್ರಜ್ಞಾನದಿಂದ ಕೆಲಸ ಕಳೆದುಕೊಂಡ ಹೆಚ್ಚುವರಿ ಜನಸಂಖ್ಯೆ ದೂರ ದೇಶಗಳಿಗೆ ವಲಸೆ ಹೋಗಿ ಹೊಸ ಬದುಕನ್ನು ಪ್ರಾರಂಭಿಸಲು ಅವಕಾಶವಿತ್ತು. ಈ ಅನುಕೂಲ ಹೊಸದಾಗಿ ಆಧುನೀಕರಣದತ್ತ ಹೆಜ್ಜೆ ಇಡುತ್ತಿರುವ ಹಿಂದುಳಿದ ರಾಷ್ಟ್ರಗಳಿಗೆ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ 1991, ಪುಟ೩
ಚುನಾವಣೆ ಒಂದು ಮಾಯಾಲೋಕ. ಜಾತಿ, ಗೆಳೆತನ, ಬಾಂದವ್ಯ, ಹಣ ಯಾವುಯಾವುದೋ ಆಮಿಷಗಳಿಗೆ ಸಿಕ್ಕು ನಾವು ಒಂದು ಕ್ಷಣ ನಮ್ಮ ಜೀವನದ ಧ್ಯೇಯವನ್ನೂ ನಮ್ಮ ಪ್ರೀತಿಯ ಕರ್ನಾಟಕವನ್ನೂ ಮರೆಯುತ್ತಿದ್ದೇವೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1989, ಪುಟ 228
ಚಾಣಾಕ್ಷತೆಯೊಂದರಿಂದಲೇ ರಾಜಕಾರಣದಲ್ಲಿ ಅನಂತಕಾಲದವರೆಗೂ ಮುಂದುವರೆಯುವುದು ಸಾಧ್ಯವಿಲ್ಲ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 236
ಚುನಾವಣೆ ದುಬಾರಿಯಾಗುತ್ತ ಬಂದಂತೆ ರಾಜಕಾರಣಕ್ಕೆ ಬೇಕಾದ ಬಂಡವಾಳ ಲಕ್ಷದ ಎಲ್ಲೆಯನ್ನು ಮೀರುತ್ತ ಬಂದಂತೆ ರಾಜಕಾರಣಿ ಉದ್ಯಮಗಳ ಕಡೆಗೆ ನಾಲಿಗೆ ಚಾಚಿತೊಡಗಿದ. ಅಧಿಕಾರಶಾಹಿಯಲ್ಲಿ ತಿನ್ನುವುದರ ಬಗ್ಗೆ ಪೈಪೋಟಿ ಆರಂಭವಾಯ್ತು. ಇವತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ತಿನ್ನುವುದರ ಬಗ್ಗೆ ಟೂರ್ನಮೆಂಟುಗಳೇ ನಡೆಯುತ್ತಿವೆ. ಉತ್ಪಾದನೆಗೆ ಹೊಸಹೊಸ ಕಾನೂನಿನ ಅಡ್ಡಿ ಆತಂಕಗಳನ್ನು ನಿರ್ಮಿಸುತ್ತಾ ಹೆಚ್ಚು ಹೆಚ್ಚು ಕಬಳಿಕೆಯ ಸುರಂಗಗಳನ್ನು ತೋಡುತ್ತಾ ರಾಜಕಾರಣಿಗೆ ಎಷ್ಟೆಷ್ಟು ಕಾಣಿಕೆ ಸಲ್ಲಿಸುತ್ತಾನೋ ಅವನು ಸರಸರ ಏಣಿ ಮೆಟ್ಟಲು ಹತ್ತಬಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹ ಆಗಬಲ್ಲ. ಈ ಪರಿಸ್ಥಿತಿಯಲ್ಲಿ ದಕ್ಷರು ನಿಷ್ಠರು ಮನೆಗೆ ಹೋದರು. ಪನಿಷ್ಮೆಂಟ್ ಟ್ರಾನ್ಸ್ಫರುಗಳಿಗೆ ಸಿಕ್ಕಿಕೊಂಡರು. ಸರ್ಕಾರದ ಮುಖ್ಯವಾಹಿನಿಯಿಂದಲೇ ತಿರಸ್ಕರಿಸಲ್ಪಟ್ಟರು – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೧೯೯೧, ಪುಟ ೨
ಉದ್ಯೋಗ ಸೃಷ್ಟಿಸುವುದು ಎಂದರೆ ಕೆಲವು ಕಾನೂನುಗಳನ್ನು ಮಾಡಿ ಅದಕ್ಕೆ ಕೆಲವರನ್ನು ನಿಯಮಿಸಿ ಮೇಜು ಕುರ್ಚಿ ಹಾಕಿಕೊಡುತ್ತೇವೆ. ಅವನು ಅಲ್ಲಿ ಕುಳಿತುಕೊಂಡು ಎಲ್ಲರಿಗೂ ನೋಟೀಸು ಕೊಡುತ್ತಾ, ವಿವರಣೆ ಕೇಳುತ್ತಾ, ಇವತ್ತು ಬಾ, ನಾಳೆ ಬಾ, ಎಂದು ಸತಾಯಿಸುತ್ತಾ ಕೇಸು ಹಾಕದಿರಲು ಗಿಂಬಳ ಗಿಟ್ಟಿಸುತ್ತಾ ಒಂದು ನರಕ ಸೃಷ್ಟಿಸುತ್ತಾನೆ. ಕಷ್ಟಪಟ್ಟು ಕೆಲಸ ಮಾಡಿ ಸಂಪತ್ತು ಸೃಷ್ಟಿಸಲು ಹೊರಟ ಪ್ರತಿಯೊಬ್ಬನ ಪ್ರತಿ ನೂರು ರೂಪಾಯಿಗೂ ನೂರಾರು ರೀತಿಯ ಜಿಗಣೆಗಳು ಕಾನೂನಿನ ಸಹಾಯದಿಂದ ನೇತುಕೊಂಡಿರುತ್ತವೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೧೯೯೧, ಪುಟ ೨೩
ಸರ್ಕಾರ ಸಂವಿಧಾನ ಕಾನೂನುಗಳು ಇವೆ. ಆದರೆ ಇವು ಯಾವಾಗ ಇರುತ್ತವೆ ಎಂದರೆ ಇವುಗಳಿಂದ ಶೋಷಕರಿಗೆ, ಬಲಾಢ್ಯರಿಗೆ, ಲಂಚಗುಳಿಗಳಿಗೆ ಸಹಾಯ ಆಗಬೇಕು ಆಗ ಮಾತ್ರ ದೇಶದಲ್ಲಿ ಕಾನೂನುಗಳು ಸಂವಿಧಾನ ಶಾಸನ ಸಭೆ ಮುಂತಾದವು ಇರಬಹುದು. ಇವರಿಗೆ ಕಾನೂನುಗಳಿಂದ ಅಡಚಣೆ ತೊಂದರೆಗಳು ಉಂಟಾದವೋ ಕಾನೂನುಗಳನ್ನೇ ತೆಗೆದು ಕಸದ ಬುಟ್ಟಿಗೆ ಎಸೆಯಲಾಗುತ್ತದೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1991, ಪುಟ 662
ಒಬ್ಬೊಬ್ಬ ಅಧಿಕಾರಿಯ ಒಂದೊಂದು ಸಣ್ಣ ರುಜುವಿನ ಹಿಂದೆಯೂ ನೂರಾರು ಲೀಟರ್ ಪೆಟ್ರೋಲ್ ವ್ಯಯದ ಒಂದೊಂದು ಮಹಾಭಾರತವೇ ಇರುತ್ತದೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1990, ಪುಟ 715
ನಮ್ಮ ಸರ್ಕಾರದ ಆಡಳಿತ ಪದ್ಧತಿಗಳು, ಅಭಿವೃದ್ಧಿ ಶೈಲಿ, ಯೋಜನೆಗಳು ಇವೆಲ್ಲಾ ತಯ್ಯಾರಾಗುವುದು ಆಯಾ ಕಾಲದ ಸಾರಿಗೆ ಸಂಪರ್ಕ ವ್ಯವಸ್ಥೆ ಮತ್ತು ಸಂಪನ್ಮೂಲಗಳನ್ನು ಆಧರಿಸಿ. ಅಖಂಡ ಭಾರತ, ದೇಶ ಪ್ರೇಮ ಇವೆಲ್ಲಾ ನಿಂತಿರುವುದು ಧರ್ಮದ ಮೇಲೂ ಅಲ್ಲ, ಸಂಸ್ಕೃತಿ ಮೇಲೂ ಅಲ್ಲ ನಮ್ಮ ಸಾರಿಗೆ ಸಂಪರ್ಕ ಶೈಲಿಯ ಮೇಲೆ. ಬ್ರಿಟಿಷರಿಗಿಂತ ಹಿಂದೆ ಇಡೀ ಇಂಡಿಯಾ ದೇಶ ಯಾಕೆ ಒಂದಾಗಿರಲಿಲ್ಲ ಎನ್ನುವುದಕ್ಕೆ ಇದೇ ಕಾರಣ ಮುಖ್ಯವಾದುದೆಂದು ಕಾಣುತ್ತದೆ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1990, ಪುಟ 714
ನಮ್ಮ ದೇಶಪ್ರೇಮ ಎನ್ನುವುದು ನಮ್ಮ ಹತ್ತಿರ ಓಡಾಡಲು ಏನಿದೆ ಎಂಬುದನ್ನು ಅವಲಂಬಿಸಿರುತ್ತದೆ. ಎತ್ತಿನ ಗಾಡಿಯೋ ಕುದುರೆ ಗಾಡಿಯೋ ಸೈಕಲ್ಲೋ ಬಸ್ಸೋ ಕಾರೋ ರೈಲೋ ಯಾವುದು ಇದೆಯೋ ಅದಕ್ಕೆ ತಕ್ಕಂತೆ ದೇಶಪ್ರೇಮ ಇರುತ್ತೆ. ಚಾರಿತ್ರಿಕವಾಗಿ ನೋಡಿದರೆ ಆಯಾಕಾಲದ ರಾಷ್ಟ್ರೀಯತೆ ಆಯಾಕಾಲದ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಆಧರಿಸಿ ವಿಸ್ತರಿಸುತ್ತಾ ಕುಗುತ್ತಾ ಇದ್ದುದು ಕಾಣಬರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1990, ಪುಟ 714
ಸಾರ್ವಜನಿಕರಿಗೆ ಒಬ್ಬ ಮಂತ್ರಿ ಲಂಚಗುಳಿಯೋ ಅಲ್ಲವೋ ಎಂದು ತಿಳಿಯುವುದು ಅವರ ಕಾರ್ಯವಿಧಾನ, ನಡವಳಿಕೆ ಕ್ರಮ ಮತ್ತು ಮಾತುಗಳ ಮುಖಾಂತರವೇ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1988, ಪುಟ 241
ಬುದ್ದಿಗೇಡಿಗಳು ಅಧಿಕಾರದಲ್ಲಿ ಉಳಿಯಲು ಮಾಡುವ ಪ್ರಯತ್ನಗಳೇ ಅಧಿಕಾರದಿಂದಿಳಿಯುವ ಮೆಟ್ಟಲುಗಳಾಗಿರುವುದನ್ನು ಗಮನಿಸಬಹುದು. ಇವರು ಇಳಿಯುವಾಗ ಇಪ್ಪತ್ತೆಂಟು ತನಿಖಾ ಆಯೋಗಗಳು, ಕೊನೆ ಇರದ ಆಪಾದನೆಗಳ ಪಟ್ಟಿಯನ್ನು ಕೊರಳಿಗೆ ಸುತ್ತಿಕೊಂಡು ಇಳಿಯುತ್ತಾರೆ. ಮತ್ತೆ ಅಧಿಕಾರಕ್ಕೆ ಬರುವವರು ಇನ್ನೈದು ವರ್ಷಗಳವರೆಗೆ ಹೇಳಿಕೊಂಡು ಕಾಲಹರಣ ಮಾಡಲು ಸಾಕಷ್ಟು ಗ್ರಾಸ ಒದಗಿಸಿ ತೊಲಗುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1988, ಪುಟ 241
ಈ ರಾಜಕಾರಣಿಗಳು ಪಾತಾಳಕ್ಕೆ ಬೀಳುವ ರೀತಿ ವಿಚಿತ್ರ. ಮೊದಲು ದುಡ್ಡಿಲ್ಲದ ಇವರು ಚುನಾವಣೆಗಾಗಿ ಜನರಿಂದ ಹಣ ಕೇಳುತ್ತಾರೆ. ಆಮೇಲೆ ಮೆಲ್ಲಗೆ ಇದರ ಹಿಂದಿನಿಂದಲೇ ಪಾರ್ಟಿಫಡ್ ಅಥವಾ ಪಕ್ಷದ ನಿಧಿ ಆರಂಭವಾಗುತ್ತೆ. ಇಂದೊಂದು ಲೆಕ್ಕಪತ್ರವಿಲ್ಲದ ವ್ಯವಹಾರ. ಪಕ್ಷಕ್ಕೆ ಎಷ್ಟು ಹೋಯ್ತು, ಮಂತ್ರಿ ಜೇಬಿಗೆ ಎಷ್ಟು ಹೋಯ್ತು ಯಾರಿಗೂ ಗೊತ್ತಾಗುವುದಿಲ್ಲ. ಈ ವೇಳೆಗಾಗಲೇ ಸರ್ಕಾರದ ಯಂತ್ರವನ್ನು ಉಪಯೋಗಿಸಿಕೊಂಡು ಹೆಚ್ಚುಹೆಚ್ಚು ಪಾರ್ಟಿಫಂಡ್ ಒದಗಿಸುವ ಕುಳಗಳಿಗೆ ವಿಶೇಷ ಸೌಕರ್ಯಗಳನ್ನು ಒದಗಿಸಲಾರಂಭಿಸಿರುತ್ತಾರೆ. ಇವರಿಗೆ ಓಟು ಕೊಟ್ಟ ಜನರಲ್ಲಿಯೂ ಈ ವೇಳೆಗೆ ಸೂಕ್ಷ್ಮ ಬದಲಾವಣೆಗಳನ್ನು ಕಾಣಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1988, ಪುಟ 241
ರಾಕ್ಷಸ ರಾಕ್ಷಸರ ನಡುವಿನ ಕಾಳಗದಲ್ಲಿ ಯಾರು ಗೆದ್ದರು ಕೊನೆಗೆ ಯಜ್ಞಪಶು ಶ್ರೀಸಾಮಾನ್ಯನಿಗೆ ಉಳಿದಿರುವುದು ಒಂದೇ ಗತಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1989, ಪುಟ 245
ನಮ್ಮ ನಾಗರಿಕತೆಯ ಇತಿಹಾಸದಲ್ಲಿ ಕೇವಲ ಒಳಿತು ಮತ್ತು ಕೇವಲ ಕೆಡಕುಗಳ ನಡುವೆ ಎಂದೂ ಯುದ್ಧವಾಗಿಲ್ಲ. ಅದೆಲ್ಲಾ ನಮ್ಮ ಪುರಾಣಗಳಲ್ಲಿ ಮತ್ತು ದೂರದರ್ಶನದಲ್ಲಿ ಮಾತ್ರ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1989, ಪುಟ 245
ಚುನಾವಣೆಯ ರಂಗಸ್ಥಳದಲ್ಲಿ ಕೊನೆಗೂ ನಮಗೆ ಆಯ್ಕೆ ಸೌಲಭ್ಯ ಇರುವುದು ಇದ್ದುದರಲ್ಲಿ ಅತ್ಯಂತ ಕಡಿಮೆ ಖೇಡಿ ಯಾರೆಂದು ನೋಡಿ ಆಯಲು ಅಲ್ಲವೇ? ಮುಂಬರುವ ಚುನಾವಣೆಗಳೊಳಗೆ ಇವರಲ್ಲಿ ಯಾರು ದೆವ್ವ ಯಾರು ಪಿಶಾಚಿ ಯಾರು ಬ್ರಹ್ಮರಾಕ್ಷಸ ಎಂದು ವಿವೇಚಿಸಿ ಇವುಗಳಲ್ಲಿ ಯಾವುದು ಕಡಿಮೆ ಪೀಡೆ ಕೊಡುವ ಬೆಂತರ ಎಂದು ನಿರ್ಧರಿಸಬೇಕು. ಸದ್ಯಕ್ಕಂತೂ ಎಲ್ಲಾ ಪಕ್ಷಗಳೂ ಬ್ರಹ್ಮರಾಕ್ಷಸರಾಗಲು ಪಣತೊಟ್ಟಂತೆ ತೋರುತ್ತಿವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1989, ಪುಟ 245
ಜಾತಿಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪೃಶ್ಯತೆ, ಅನಕ್ಷರತೆ ಇತ್ಯಾದಿಗಳೆಲ್ಲಾ ನಮ್ಮ ಧರ್ಮದ ಅವಿಭಾಜ್ಯ ಅಂಗಗಳಾಗಿ ಆಚರಣೆಯಲ್ಲಿದ್ದ ಈ ದೇಶ ಒಂದು ದೇಶವಾಗಿ ರೂಪುಗೊಂಡಿರುವುದು ಪವಾಡದಂತೆ ಕಾಣುತ್ತದೆ. ಇಷ್ಟೊಂದು ಭ್ರಷ್ಟತೆ, ಅನಾಯಕತ್ವ ಅರಾಜಕತೆ, ದುರಾಡಳಿತಗಳಿದ್ದೂ ಅಭಿವೃದ್ಧಿ ಸಾಧಿಸುತ್ತಿರುವ ಈ ದೇಶಕ್ಕೆ ಅಗಾಧವಾದ ಆಂತರಿಕ ಶಕ್ತಿ ಇರುವುದಂತೂ ನಿಜ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೬
ಪ್ರಜಾಪ್ರಭುತ್ವದಲ್ಲಿ ಸರ್ಕಾರ ತನ್ನನ್ನು ಚುನಾಯಿಸಿದ ಜನತೆಯನ್ನು ಪ್ರತಿನಿಧಿಸಿಯೇ ಪ್ರತಿನಿಧಿಸುತ್ತದೆ. ಕೆಟ್ಟ ಸರ್ಕಾರ ಕೆಟ್ಟ ಮತದಾರರ ಸೃಷ್ಟಿಯೇ ಸರಿ. ಅವಿವೇಕಿ ರಾಜಕಾರಣಿಗಳನ್ನು ಚುನಾಯಿಸಿದ ತಪ್ಪಿಗೆ ನಾವು ದಂಡ ತೆತ್ತೇ ಬುದ್ಧಿ ಕಲಿಯಬೇಕಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೬
ಅಭಿವೃದ್ಧಿಗೆ ಕ್ಷಿಪ್ರ ಮಾರ್ಗಗಳಾಗಲೀ ಒಳದಾರಿಗಳಾಗಲೀ ಪ್ರಜಾ ಪ್ರಭುತ್ವದಲ್ಲಿ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೬
ನಮ್ಮ ರಾಜಕಾರಣಿಗಳು ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುತ್ತಾರೆಯೇ ಹೊರತು ಕ್ರಿಯಾಶೀಲರಾಗಿ ಕಾನೂನು ಮಾಡುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೫
ಕೋಟಿ ರೂಪಾಯಿ ಲಂಚ ಹೊಡೆದವನೂ ಸಾವಿರ ರೂಪಾಯಿ ಲಂಚ ಹೊಡೆದವನೂ ನೈತಿಕವಾಗಿ ಪರಿಗಣಿಸಿದಾಗ ಸಮಾನವಾಗಿ ಭ್ರಷ್ಟರೇ. ಲಂಚದ ಬಹುದೊಡ್ಡ ದುರಂತ ಅಲ್ಲಿ ದುರ್ವಿನಿಯೋಗವಾಗುವ ಹಣವಲ್ಲ. ಏಕೆಂದರೆ ಹಣ ಮನುಷ್ಯ ಸೃಷ್ಟಿ ಮಾಡಿದ್ದು. ಹಾಳಾಗುವುದೆಲ್ಲಾ ಸಮಾಜದ ಮೌಲ್ಯಗಳಿಗೆ ಸಂಬಂಧಪಟ್ಟಿದ್ದು. ಇದು ಹಾಳಾದರೆ ಪುನರುಜ್ಜೀವನ ತುಂಬಾ ಕಷ್ಟ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೩೩
ನಮ್ಮ ರಾಜಕೀಯ ಪಕ್ಷಗಳು ಹಳೆಯ ಅವಕಾಶವಾದಿ ರಾಜಕಾರಣವನ್ನೇ ಮುಂದುವರಿಸುತ್ತಾ ಹೋದರೆ ಮುಂಬರುವ ದಿನಗಳು ಭಾರತದ ಇತಿಹಾಸದ ಕರಾಳ ಯುಗವೆಂದು ಕರೆಯಲ್ಪಡುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೦೫
ಭ್ರಷ್ಟಾಚಾರ ಕಾಳಧನ ಸುಳ್ಳು ಮೋಸಗಳನ್ನು ರಾಜಕೀಯದಲ್ಲಿ ಒಪ್ಪಿಕೊಂಡ ನಂತರ ಅದರ ವಿಸ್ತರಣೆಯಾಗಿ ಕೊಲೆ ಖೂನಿಗಳು ಅನಿವಾರ್ಯ. ಇದರಿಂದ ಯಾರಿಗೂ ವಿನಾಯ್ತಿ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೮೦೪
ಭಾರತದ ಪತ್ರಿಕೋದ್ಯಮವಾದರೋ ಈಗಲಾದರೂ ಒಂದು ಸರಿಯಾದ ದೃಷ್ಟಿಕೋನ ತಳೆಯದೆ ಎಂದಿನಂತೆ ಸ್ವಹಿತಾಸಕ್ತಿಗಳನ್ನೇ ಪ್ರತಿಪಾದಿಸುವುದಾದರೆ ಅದು ದೇಶದ ಜನತೆಯನ್ನು ಅಧೋಗತಿಗೆ ತಳ್ಳುವುದಲ್ಲದೆ ಈ ರಾಷ್ಟ್ರ ಅವರಿಗಿತ್ತಿರುವ ಸ್ವಾತಂತ್ರ್ಯವನ್ನು ಅವರು ಒಮ್ಮಿಂದೊಮ್ಮೆಲೆ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ೧೯೮೪ ಹೊಸವಿಚಾರಗಳು, ಪುಟ ೭೬೨
ಸದಾ ಗಡಿಬಿಡಿಯ ಉನ್ನತ ಸ್ಥಾನಗಳಿಗೆ ಸೂಕ್ಷ್ಮ ಆಲೋಚನೆಗಳು ಪ್ರಭಾವ ಬೀರುವುದು ಕಷ್ಟವೇ ಸರಿ. ಅವರಿಗೆ ಹಕ್ಕಿಗಳ ಚಿಲಿಪಿಲಿ ಸಹ ಕೇಳಿದಷ್ಟು ಕಿವಿ ಮಂದವಾಗುತ್ತದೆ. ಸದಾ ಶತ್ರುಪಾಳಯದ ಪಿಸುಮಾತುಗಳತ್ತ, ಚಲನವಲನಗಳತ್ತ ತಮ್ಮ ಕಣ್ಮನ ಕಿವಿಗಳನ್ನು ಕೇಂದ್ರೀಕರಿಸಿಕೊಂಡು ಕೂತಿರುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೬೨
ಯುವಜನ ಕ್ರೀಡಾ ಖಾತೆಗಳು, ಮಂತ್ರಿಗಳು, ರಿಸರ್ಚ್ ಹುದ್ದೆಗಳು, ಏಲಕ್ಕಿ ಮಂಡಳಿಗಳು, ಭಾರತ ಮಾತೆಯ ತಿಥಿ ಊಟಕ್ಕೆ ಬಾಳೆ ಎಲೆ ಹಾಕಿಕೊಳ್ಳುತ್ತಾರೆ. ಈ ದೇಶಕ್ಕೆ ಮಳೆಯಿಲ್ಲದೆ ಬರಗಾಲ ಬರಲಿ, ಪ್ರವಾಹ ವಿಕೋಪವಾಗಲಿ, ಭೂಕಂಪಗಳಾಗಲಿ , ಯುದ್ಧ ಶುರುವಾಗಲಿ ಈ ಪಿಶಾಚಿಗಳಿಗೆ ಆನಂದವೋ ಆನಂದ. ದುಡ್ಡು ಮಂಜೂರು ಮಾಡಿಸಿಕೊಂಡು ಕ್ರೀಡಾಂಗಣಗಳಿಗೆ ಅಸ್ತಿಭಾರ ಶಿಲೆ ಇಡುತ್ತಾ, ರೈತರಿಗೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇವೆಂದು ಬೊಗಳುತ್ತಾ ಹಣ ದೋಚ ತೊಡಗುತ್ತಾರೆ. ರೋಗಿಗೆ ರೋಗ ಬಿಗಡಾಯಿಸಿ ದಷ್ಟು ಸುಲಿಯಲು ಸಿಕ್ಕನೆಂದು ಸಂತಸ ಪಡುವ ವೈದ್ಯರ ಹಾಗೆ ನಮ್ಮ ಮಂತ್ರಿಗಳು, ರಾಷ್ಟ್ರಪತಿಗಳು ಮುಂತಾದವರೆಲ್ಲ ನಮ್ಮ ಆಟಗಾರರು ಕೋಚುಗಳನ್ನು ಹುಡುಕಿಕೊಂಡು ವಿದೇಶಕ್ಕೆ ಹೋದಹಾಗೆ ವೈದ್ಯರನ್ನು ಹುಡುಕಿಕೊಂಡು ಪರದೇಶಕ್ಕೆ ದೌಡಾಯಿಸುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೪೩೫
ಜನತೆಯ ಮುಂದೆ ಮಂಡಿಸಲು ಏನೂ ಇಲ್ಲದ ಎಲ್ಲ ರಾಜಕೀಯ ಪಕ್ಷಗಳೂ ಜಾತಿವಾದ, ಮತೀಯತೆ, ಧರ್ಮ ಇತ್ಯಾದಿಗಳನ್ನೇ ಮೂಲ ಬಂಡವಾಳ ಮಾಡಿಕೊಂಡು ಇಲ್ಲಿಯವರೆಗೂ ಬೆಳೆದವು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 486, 2018
ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ಜನರ ಮನೋಬಲ ಮಾತ್ರ ಪ್ರಪಂಚವನ್ನು ಬದಲಿಸಬಲ್ಲದೇ ಹೊರತು ರಾಜಕೀಯವಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 515, 1.10.2004
ನಮ್ಮ ಟೀಕೆಗಳಿಗೆ ಈ ರಾಜಕೀಯದವರು ಎಲ್ಲಿ ಸೊಪ್ಪು ಹಾಕ್ತಾರೆ ಹೇಳ್ರೀ. ಅವರಿಗೆ ಭಿನ್ನಮತೀಯರು ಪಿಸುಗುಟ್ಟಿದರೂ ಕೇಳುತ್ತೇ. ನಮ್ಮಂಥವರು ಚೀತ್ಕಾರ ಮಾಡಿದರೂ ಕೇಳೋದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 536, DEC 22, 2001
ಸುಳ್ಳು ಮಾಹಿತಿಗಳಿಂದ, ಪೊಳ್ಳು ಆಶಾವಾದಗಳಿಂದ ಆಗಲೇ ಸಾಕಷ್ಟು ಜರ್ಝರಿತವಾಗಿರುವ ರೈತ ಸಮುದಾಯವನ್ನು ಮತ್ತಷ್ಟು ಮರೀಚಿಕೆಗಳು ಬೆನ್ನು ಹತ್ತುವಂತೆ ಪ್ರಚೋದಿಸುವುದು ತಪ್ಪು. ಕೃಷಿ ಕ್ಷೇತ್ರ ಇಂದು ಭಯಂಕರ ವಿರೋಧಾಭಾಸಗಳ ಗೊಂದಲಗಳ ಅಲ್ಲೋಲ ಕಲ್ಲೋಲಗಳಲ್ಲಿ ಸಿಕ್ಕಿಕೊಂಡಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜ ಕೃಷಿ, ಮುನ್ನುಡಿ
ಯಾವುದೇ ಅಭಿವೃದ್ಧಿ ಕಾರ್ಯಕ್ರಮಕ್ಕೂ ಅದು ಜನಗಳ ಮೇಲೆ ಬೀರುವ ನೈತಿಕ ಪರಿಣಾಮವೇ ಮೂಲ ಅಳತೆಗೋಲಾಗಬೇಕೆಂಬುದು ನನ್ನ ಅಭಿಪ್ರಾಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 647,
ಜನಗಳಲ್ಲಿ ಸ್ವಾರ್ಥ ದುರಾಶೆಗಳನ್ನು ಪ್ರಚೋದಿಸುತ್ತಾ ನಾವು 21ನೇ ಶತಮಾನಕ್ಕೆ ಹೋಗಬೇಕು ಎಂತಾದರೆ ನಾವು ಮುಂದುವರೆಯುವುದರ ಬದಲು ಹಿಂದುವರಿಯುದನ್ನು ಆರಿಸಿಕೊಳ್ಳೋಣ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 647
ವೈದಿಕ ಧರ್ಮದ ಮೌಲ್ಯಗಳನ್ನು ಎಲ್ಲರ ಮೇಲೂ ಹೇರುತ್ತಾ ಈ ಬ್ರಾಹ್ಮಣೀಕರಣವನ್ನು ಹಿಂದುತ್ವ ಎಂದು ಕರೆಯುತ್ತಿರುವುದು ಕುತಂತ್ರದ ರಾಜಕಾರಣ. ಈ ಧೋರಣೆಯನ್ನು ನಾವು ಹಿಂದುತ್ವ ಎಂದು ಒಪ್ಪಿಕೊಳ್ಳುವುದಾದರೆ ಬಹುಬೇಗ ಜಾತಿ ಪದ್ಧತಿ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ಸತಿ ಪದ್ಧತಿ, ಇತ್ಯಾದಿ ಸನಾತನ ಮೌಲ್ಯಗಳ ಇವರ ನೂತನ ಆವೃತ್ತಿಗಳನ್ನು ಒಪ್ಪಿಕೊಂಡು ಭಾರತದ ಸಂವಿಧಾನಕ್ಕೆ ತಿಲಾಂಜಲಿ ಕೊಡಬೇಕಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 470 (9 ಮಾರ್ಚ್, 2003, ಪ್ರಜಾವಾಣಿ)
ಸಮಸ್ಯೆಗಳನ್ನು ಪರಿಹರಿಸುತ್ತೇವೆಂದು ಹೇಳಿ ಓಟು ತೆಗೆದುಕೊಂಡು ಸಮಸ್ಯೆಗಳನ್ನು ಸೃಷ್ಟಿಸುತ್ತಾ ಹೋಗುವುದೇ ರಾಜಕಾರಣ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ -672 (ಜೂನ್ 8, 1994, ಲಂಕೇಶ್ ಪತ್ರಿಕೆ)
ಸರ್ಕಾರ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅಂತೀವಿ. ನಮ್ಮ ಸರ್ಕಾರಗಳೋ ಬೆಳಿಗ್ಗೆ ಎದ್ದರೆ ಮುಖ ತೊಳೆದುಕೊಳ್ಳುವುದಕ್ಕೂ ಪುರುಸೊತ್ತಿಲ್ಲದೆ ನಿಸ್ಸಹಾಯಕರಾಗಿರುವಂತಹ ದರಿದ್ರ ಸರ್ಕಾರಗಳು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 733 (ಲಂಕೇಶ್ 60, ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣದಿಂದ)
ಈ ದೇಶದ PLUS POINT AND MINUS POINT ಎರಡೂ ಆಗಿರೋದು ಏನು ಅಂದ್ರೆ THIS COUNTRY CAN SURVIVE IN EXTREME ANARCHY ಬೇರೆ ಇನ್ನು ಯಾವುದೇ ದೇಶ ಆಗಿದ್ರೆ ನುಚ್ಚುನೂರಾಗಿ ಅಂತಃಕಲಹ ಆಗಿ ರಂಪ ಹೋಗಿ ಬಿಟ್ಟಿತ್ತು. ಆ ಹರಕಲು ನೋಟುಗಳನ್ನು ನೋಡಿ ಯಾರಾದರೂ ಎಲ್ಲಾದರೂ ಅದನ್ನು ತಗೊಂಡು ಉಪಯೋಗಿಸ್ತಾರ ಎಷ್ಟೋ… ಪಾಪರಾ ಆಗೋಗಿ ಸರ್ಕಾರದವರೆಗೂ ತೊಂದರೆಯಲ್ಲಿರಿಸಿ ಚೂರು ಹರಿದೋದ್ರೇನಂತೆ ಕೊಡಿ ಇತ್ಲಾಗೆ ಅಂತ ಜೇಬಲ್ಲಿ ಇಟ್ಟು ಬಿಡ್ತಾರೆ. SO THIS IS A MYSTERIOUS NATION WHICH HAS LEARNT TO SURVIVE EVEN IN TOTAL ANARCHY. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 502 503
ಸರ್ಕಾರ ಅಂದ್ರೆ, ಅವು ನಮ್ಮಿಂದನೇ ಎಲೆಕ್ಟ್ ಆಗಿ ಹೋಗಿರೋದು. ನೂರಾರು ಸಮಸ್ಯೆಗಳು ಇದ್ದರೂ, ನಾಳೆ ಬೆಳಗಾಗುವುದರೊಳಗೆ ಅವು ಕೆಲಸ ಮಾಡ್ಬೇಕಾಗಿದೆ. ನೀವು ಯಾವತ್ತಿಗೂ ಬಗೆಹರಿಯದಿರುವಂತಹ ಸಮಸ್ಯೆಗಳನ್ನು ಎತ್ಕೊಂಡು ವಾಗ್ವಾದ ಮಾಡ್ತಾ ಇದ್ದರೆ, ನಾಳೆ ಬೆಳಗ್ಗೆ ಎದ್ದು ಕೆಲಸ ಮಾಡಬೇಕಾಗಿರೋನು ಏನ್ ಮಾಡ್ಬೇಕು? ಆದ್ದರಿಂದ ವಿ ಮಸ್ಟ್ ಫೈಂಡ್ ಔಟ್ ಎ ಕಾಂಪ್ರಮೈಸ್. ಇದು ಮಾಡಬೇಡಿ ಅಂತ ಹೇಳೋದಿಕ್ಕೆ ಮುಂಚೆ ಇದನ್ನು ಮಾಡಿ ಅದರ ಬದಲು ಅಂತ ಇನ್ನೊಂದು ಅದಕ್ಕೆ ಬದಲಿಯಾದ ಯೋಜನೆಯನ್ನು ನಾವು ಅವರಿಗೆ ಸಜೆಸ್ಟ್ ಮಾಡಬೇಕಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 595 596
ರಾಜಕೀಯವು ಜನರಿಗೆ ಯಾವುದೇ ಸ್ಪೂರ್ತಿದಾಯಕವಾದ ನವೀನ ಭವಿಷ್ಯದ ಕಲ್ಪನೆಯನ್ನು ಕೊಡಲು ಅಸಮರ್ಥವಾಗಿ ಪರಸ್ಪರ ದ್ವೇಷ, ಅಸೂಯೆ, ಜಾತಿ ದ್ವೇಷ ಇತ್ಯಾದಿಗಳ ಮೇಲೆ ರಾಜಕೀಯವು ಕಾಲಯಾಪನೆ ಮಾಡಬೇಕಾಗಿದೆ. ಒಬ್ಬರನ್ನು ಇನ್ನೊಬ್ಬರು ಶೋಷಕರೆಂದು ವ್ಯಾಖ್ಯಾನಿಸುತ್ತಾ ಗುಂಪುಗಾರಿಕೆ ನಡೆಸುವುದು ಪುಢಾರಿಗಳಿಗೆ ಅನಿವಾರ್ಯವಾಗಿ ಹೋಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 119
ನಮ್ಮ ಗ್ರಾಮೀಣ ಸಮಾಜದಲ್ಲಿ ಅಂತರ್ಜಾತೀಯ ವಿವಾಹ ಆದವರೆಲ್ಲರಿಗೂ ತೊಂದರೆಗಳು ಒಂದೇರೀತಿ ಇದೆ. ಎರಡು ಕಡೆ ಜಾತಿಗಳಿಂದಲೂ ಬಹಿಷ್ಕಾರ, ಅನೇಕ ವೇಳೆ ದಂಡ ವಿಧಿಸುವುದು ಹಾಗೂ ಊರು ಬಿಟ್ಟು ಓಡಿಸುವುದು ಇತ್ಯಾದಿಗಳೆಲ್ಲ ನಡೆಯುತ್ತವೆ. ಇಷ್ಟೊಂದು ವ್ಯತಿರಿಕ್ತ ಸನ್ನಿವೇಶಗಳಲ್ಲಿ ಮದುವೆಯಾಗಿ ಒಂದು ಜಾತ್ಯಾತೀತ ಸಮಾಜ ನಿರ್ಮಿಸಲು ನೆರವಾಗುವವರಿಗೆ ಸರ್ಕಾರದ ಸಹಾಯಹಸ್ತ ಮೀಸಲಾತಿಯ ಮುಖಾಂತರ ನೀಡುವುದು ಸರಿಯಾದುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 618
ದೇಶದ ಉನ್ನತಿಗೆ ಸಮಗ್ರ ಬದಲಾವಣೆಗೆ ನನ್ನನ್ನೊಳಗೊಂಡು ಎಲ್ಲರೂ ಶ್ರಮಿಸಬೇಕೆಂಬ ಸಲಹೆಯನ್ನು ಒಪ್ಪೋಣ. ಆದರೆ ಈ ಭ್ರಮಾಧೀನ ಯೋಜನಾ ತಜ್ಞರು ಭ್ರಷ್ಟ ರಾಜಕಾರಣಿಗಳೂ ಹಾಕಿಕೊಟ್ಟಿರುವ ಅವನತಿ ಮುಖವಾದ ಯೋಜನೆಗಳನ್ನಿಟ್ಟುಕೊಂಡು ಇದಕ್ಕೆ ಬೆವರು ಸುರಿಸಿ ಶ್ರಮಿಸುವುದರಲ್ಲಿ ಅರ್ಥವಿಲ್ಲ. ದೆಹಲಿಯ ಸೆಕ್ರೆಟರಿಯೇಟುಗಳಿಂದ ಇವರನ್ನು ಕಸದ ಬುಟ್ಟಿಗೆ ವರ್ಗಾಯಿಸಿದ ನಂತರವೇ ಪ್ರಗತಿಯ ಬಗ್ಗೆ ಯೋಚನೆ ಸಾಧ್ಯ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 103
ಭಾರತದ ಅತಿ ಕೇಂದ್ರೀಕೃತ ಆಡಳಿತ ಪದ್ಧತಿ, ಹಿಂದಿ ಮಾತನಾಡುವ ಜನರ ದಬ್ಬಾಳಿಕೆ ಮೊದಲಾದವುಗಳಿಂದ ಪ್ರತ್ಯೇಕತಾವಾದ ಭಾರತದ ಒಂದಲ್ಲ ಒಂದು ಕಡೆ ಹೊಗೆಯಾಡುತ್ತಲೇ ಇರುವುದನ್ನು ಕಾಣಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 113
ರಾಜಕೀಯವು ಜನರಿಗೆ ಯಾವುದೇ ಸ್ಪೂರ್ತಿದಾಯಕವಾದ ನವೀನ ಭವಿಷ್ಯದ ಕಲ್ಪನೆಯನ್ನು ಕೊಡಲು ಅಸಮರ್ಥವಾಗಿ ಪರಸ್ಪರ ದ್ವೇಷ, ಅಸೂಯೆ, ಜಾತಿ ದ್ವೇಷ ಇತ್ಯಾದಿಗಳ ಮೇಲೆ ರಾಜಕೀಯವು ಕಾಲಯಾಪನೆ ಮಾಡಬೇಕಾಗಿದೆ. ಒಬ್ಬರನ್ನು ಇನ್ನೊಬ್ಬರು ಶೋಷಕರೆಂದು ವ್ಯಾಖ್ಯಾನಿಸುತ್ತಾ ಗುಂಪುಗಾರಿಕೆ ನಡೆಸುವುದು ಪುಢಾರಿಗಳಿಗೆ ಅನಿವಾರ್ಯವಾಗಿ ಹೋಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 119
ಅಶ್ವಾಸನೆಗಳನ್ನು ಪ್ರಣಾಳಿಕೆಗಳಲ್ಲಿ ಪ್ರಕಟಿಸುವಷ್ಟು ಸುಲಭವಾಗಿ ಅಧಿಕಾರಕ್ಕೆ ಬಂದಾಗ ಜಾರಿಗೆ ತರುವುದಕ್ಕೆ ಆಗುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 33
ಇನ್ನಾದರೂ ನಮ್ಮ ಆರ್ಥಿಕ ತಜ್ಞರು ತಮ್ಮ ತುಕ್ಕು ಹಿಡಿದ ಹತಾರುಗಳನ್ನೂ ಪಾಶ್ಚಿಮಾತ್ಯರ ಗಿಳಿಪಾಠಗಳನ್ನೂ ತೊರೆದು ಭಾರತದ ವಾಸ್ತವಕ್ಕೆ ಕಣ್ತೆರೆಯಬೇಕಾಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 55
ಎಲ್ಲರ ಎಲ್ಲ ದೇವರೂ ಒಂದೇ ಅಲ್ಲವೇ ? ಸಾಬರೋ ಬ್ರಾಹ್ಮಣರೋ ಲಿಂಗಾಯ್ತರೊ ಒಕ್ಕಲಿಗರೋ ಕಳ್ಳರೋ ಖದೀಮರೋ ಎಲ್ಲರ ಬಾಸ್ ಕೊನೆಗೆ ಒಬ್ಬನೇ. ಎಲ್ಲ ಧರ್ಮಗಳು ಸೇರುವುದು ಕೊನೆಗೆ ಒಂದೇ ಬಾಸ್ ಹತ್ತಿರ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ 19
ಇವತ್ತು ನಮ್ಮ ದೇಶದಲ್ಲಿ ಒಂದು ಜಾತ್ಯತೀತ ಸಂವಿಧಾನವಿದೆ. ಆ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು. ಅದರಲ್ಲಿನ ಜಾತ್ಯತೀತ ತತ್ವಗಳನ್ನು ನಾವು ಅವಲಂಬಿಸಿದರೆ ಅದು ಜಾತಿ ವಿನಾಶಕ್ಕೂ ಮತ್ತು ಕೋಮುದಳ್ಳುರಿಗೂ ಉತ್ತಮ ಪರಿಹಾರವಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 521, (ಜುಲೈ, 10, 2002, ಲಂಕೇಶ್ ಪತ್ರಿಕೆ)
ಜನ ಗೆದ್ದವನು ಅಧಿಕಾರದಲ್ಲಿ ಯಾವರೀತಿ ವರ್ತಿಸಿದ ಎಂದು ನೋಡುವಂತೆಯೇ ಸೋತವನ ವರ್ತನೆಯನ್ನೂ ಗಮನಿಸುತ್ತಾರೆಂಬುದು ಮರೆಯಬಾರದು. ಜನಪ್ರಿಯ ಘೋಷಣೆಗಳನ್ನು ಪ್ರಣಾಳಿಕೆಗಳಲ್ಲಿ ಸೇರಿಸಿ ಓಟು ಗಿಟ್ಟಿಸುವುದಕ್ಕಿಂತ ತಾವು ನಂಬಿದ ಧ್ಯೇಯ ಧೋರಣೆಗಳಿಗೆ ಜನ ಬೆಂಬಲ ದೊರಕಿಸಿಕೊಡುವುದು ರಾಜಕಾರಣಿಯ ಕರ್ತವ್ಯ ಎಂದು ತಿಳಿದಿದ್ದೇನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 206, (ಜುಲೈ 7, 1991, ಲಂಕೇಶ್ ಪತ್ರಿಕೆ)
ಎಲ್ಲ ಧರ್ಮದ ಮೂಲಭೂತವಾದಿಗಳು ಇರುವುದು ಆಯಾ ಧರ್ಮೀಯರನ್ನು ಶೋಷಿಸುವುದಕ್ಕೆ. ಆದರೆ ಅವರು ಮೇಲೆ ಹಾಕುವ ಸೋಗು ಧರ್ಮ ರಕ್ಷಿಸಲು ಎಂದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳು ಇರುತ್ತವೆ. ಅಲ್ಲಿನ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯ ಮೇಲಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಜರು ಒಪ್ಪಿಸುವ ಹುಜೂರುಗಳಾಗಿರುವ ನಮ್ಮ ಪ್ರಸ್ತುತ ರಾಜಕಾರಣಿಗಳು ತಾವು ಅಧಿಕಾರದಲ್ಲಿ ಮುಂದುವರೆಯಲು ನಾಡಿನ ಹಿತಾಸಕ್ತಿಗಳನ್ನು ಅಲಕ್ಷಿಸಲು ಹೇಸುವುದಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಒಂದು ರಾಷ್ಟ್ರದ, ಸರ್ಕಾರದ, ಸಂಕ್ಷಿಪ್ತ ರೂಪವೇ ಪ್ರಜೆ. ಇಡೀ ದೇಶದ ಎಲ್ಲ ಬುದ್ದಿ ವಿಕಲತೆಗಳನ್ನೂ ಒಂದಲ್ಲೊಂದು ತೀವ್ರತೆಯಲ್ಲಿ ಸೂಕ್ಷ್ಮವಾಗಿ ಆ ದೇಶದ ಪ್ರತಿಯೊಬ್ಬನ ವ್ಯಕ್ತಿತ್ವದಲ್ಲೂ ಗುರುತಿಸಬಹುದು. ದೇಶ ಬದಲಾಗುವುದು ಎಂದರೆ ವ್ಯಕ್ತಿಗಳ ವ್ಯಕ್ತಿತ್ವ ಬದಲಾಗುವುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸಹಜಕೃಷಿ, ಪುಟ ೫೩
ಸಾವಿರ ವರ್ಷದ ಹಿಂದೆ ಪಂಪ ‘ಮನುಜ ಜಾತಿ ತಾನೊಂದೆ ವಲಂ’ ಅಂತ ಹೇಳ್ದ. ಸಾವಿರ ವರ್ಷ ಆದ ಮೇಲೂ ಸಹ ನಾವು ಅದೇ ಸಮಸ್ಯೆಯನ್ನು ಫೇಸ್ ಮಾಡ್ತಾ ಇದ್ದೀವಿ. ಆದ್ದರಿಂದ ನಾವು ನಮ್ಮ ನಿಜವಾದ ಸಾಮಾಜಿಕ ಕಳಕಳಿ ಏನಾದ್ರು ಇದ್ದ ಪಕ್ಷದಲ್ಲಿ ಈ ಧಾರ್ಮಿಕತೆಯನ್ನು ಬಿಟ್ಟು ಕೇವಲ ಸಾಮಾಜಿಕತೆಯನ್ನೇ, ಸಾಮಾಜಿಕ ಕಳಕಳಿಯನ್ನೇ ನಮ್ಮ ಸಾಂಸ್ಕೃತಿಕ ಉದ್ದೇಶವನ್ನಾಗಿ ಮಾಡಿಕೊಳ್ಳಬೇಕೂಂತ ಯೋಚನೆ ಮಾಡಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 532
ಜನ ಈ ಅವಿವೇಕಿ ಪತ್ರಿಕೆಗಳ ಬುಡುಬುಡಿಕೆಗೆ ತಕ್ಕಂತೆ ಅಂತರ್ಲಾಗ ಹಾಕುವ ಕೋತಿಗಳಾಗುವುದನ್ನು ಬಿಟ್ಟು ವಾಸ್ತವವನ್ನು ಸ್ವಚ್ಛ ಕಣ್ಣುಗಳಿಂದ ನೋಡುವುದನ್ನು ಕಲಿತುಕೊಳ್ಳಬೇಕಾಗಿದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೭೩೧
ಜನ ಇವತ್ತು ವಿಕೃತ ವರದಿಗಳಿಗೆ ಎಷ್ಟೊಂದು ಒಗ್ಗಿ ಹೋಗಿದ್ದಾರೆಂದರೆ ನಿಜ ಹೇಳುವವರನ್ನೇ ಪೀತ ಪತ್ರಿಕೆಗಳೆಂದು ಜರಿಯ ತೊಡಗಿದ್ದಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ ೭೩೧
ವೈಜ್ಞಾನಿಕ ತಿಳುವಳಿಕೆಗಳಿಂದ ನೋಡಿದಾಗ ಧರ್ಮಗ್ರಂಥಗಳ ತಿಳುವಳಿಕೆಗಳೆಲ್ಲಾ ಆಯಾಕಾಲದ ಜ್ಞಾನಕ್ಕೆ ಸೀಮಿತವಾಗಿರುವುದು ಕಾಣುತ್ತದೆ. ಆಗಿನ ಕಾಲದ ಜ್ಞಾನ ಮತ್ತು ಅಜ್ಞಾನ ಈ ಎರಡನ್ನೂ ಆಯಾ ಧರ್ಮಗ್ರಂಥಗಳು ಪೃಥಃಕರಿಸುತ್ತವೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ-೧, ಪುಟ ೧೨
ತ್ಯಾಗ ಮಾಡಲು ಪ್ರಾಣ ಮಾತ್ರ ಇರುವವರಿಗೆ ದೇಶಕ್ಕಾಗಿ ತ್ಯಾಗ ಮಾಡಬೇಕೆಂದು ಹೇಳುವುದೂ, ಹೊಟ್ಟೆಪಾಡಿನ ಜಂಜಡದಲ್ಲಿ ಸೋತು ಬೆಲೆಯೇರಿಕೆಯಡಿ ಅಪ್ಪಚ್ಜಿಯಾಗಿರುವ ಜನತೆ ಭ್ರಷ್ಟಾಚಾರದ ವಿರುದ್ಧ ಆಂದೋಳನ ಮಾಡಬೇಕೆಂದು ಕರೆಕೊಡುವುದೂ ನಮ್ಮ ರಾಜಕಾರಣಿಗಳ ಮಾತುಗಳನ್ನು ದೇಶಾವರಿ ಹೇಳಿಕೆಗಳನ್ನಾಗಿ ಮಾಡಿವೆ. ಜವಾಬ್ದಾರಿ ಇಲ್ಲದ ಈ ರಾಜಕಾರಣಿಗಳು ಜನತೆಗೆ ಈ ರೀತಿ ಕರೆಕೊಡುವ ಮೊದಲು ಇವುಗಳ ವಿರುದ್ಧ ಹೋರಾಡಲು ಜನತೆಗೆ ಏನಾದರೂ ಅಧಿಕೃತ ಮಾರ್ಗಗಳನ್ನು ಕಲ್ಪಿಸಿದ್ದೇವೆಯೇ ಯೋಚಿಸಬೇಕು. ಸರ್ಕಾರದ ನಿಜವಾದ ಇಚ್ಛಾಶಕ್ತಿ ಗೊತ್ತಾಗುವುದು ಈ ರೀತಿಯ ಕರೆಗಳಿಂದಲ್ಲ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜನತೆಗೆ ಶಾಸನಬದ್ದ ಮಾರ್ಗಗಳನ್ನು ಕಲ್ಪಿಸುವುದರಿಂದ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 705
ಅನೇಕ ರಾಜಕೀಯ ಪಕ್ಷಗಳು ವೋಟಿಗಾಗಿ ಸಂಸತ್ತಿನಲ್ಲೇ ಒಂದು ನಡವಳಿಕೆ, ಸಂಸತ್ತಿನ ಹೊರಗೆ ಒಂದು ನಡವಳಿಕೆ ರೂಢಿಸಿಕೊಳ್ಳುತ್ತಿರುವುದಂತೂ ಖಂಡನೀಯ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 164
ನಮ್ಮ ಗ್ರಾಮೀಣ ಸಮಾಜದಲ್ಲಿ ಅಂತರ್ಜಾತೀಯ ವಿವಾಹ ಆದವರೆಲ್ಲರಿಗೂ ತೊಂದರೆಗಳು ಒಂದೇರೀತಿ ಇದೆ. ಎರಡು ಕಡೆ ಜಾತಿಗಳಿಂದಲೂ ಬಹಿಷ್ಕಾರ, ಅನೇಕ ವೇಳೆ ದಂಡ ವಿಧಿಸುವುದು ಹಾಗೂ ಊರು ಬಿಟ್ಟು ಓಡಿಸುವುದು ಇತ್ಯಾದಿಗಳೆಲ್ಲ ನಡೆಯುತ್ತವೆ. ಇಷ್ಟೊಂದು ವ್ಯತಿರಿಕ್ತ ಸನ್ನಿವೇಶಗಳಲ್ಲಿ ಮದುವೆಯಾಗಿ ಒಂದು ಜಾತ್ಯಾತೀತ ಸಮಾಜ ನಿರ್ಮಿಸಲು ನೆರವಾಗುವವರಿಗೆ ಸರ್ಕಾರದ ಸಹಾಯಹಸ್ತ ಮೀಸಲಾತಿಯ ಮುಖಾಂತರ ನೀಡುವುದು ಸರಿಯಾದುದು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 618
ದೇಶದ ಉನ್ನತಿಗೆ ಸಮಗ್ರ ಬದಲಾವಣೆಗೆ ನನ್ನನ್ನೊಳಗೊಂಡು ಎಲ್ಲರೂ ಶ್ರಮಿಸಬೇಕೆಂಬ ಸಲಹೆಯನ್ನು ಒಪ್ಪೋಣ. ಆದರೆ ಈ ಭ್ರಮಾಧೀನ ಯೋಜನಾ ತಜ್ಞರು ಭ್ರಷ್ಟ ರಾಜಕಾರಣಿಗಳೂ ಹಾಕಿಕೊಟ್ಟಿರುವ ಅವನತಿ ಮುಖವಾದ ಯೋಜನೆಗಳನ್ನಿಟ್ಟುಕೊಂಡು ಇದಕ್ಕೆ ಬೆವರು ಸುರಿಸಿ ಶ್ರಮಿಸುವುದರಲ್ಲಿ ಅರ್ಥವಿಲ್ಲ. ದೆಹಲಿಯ ಸೆಕ್ರೆಟರಿಯೇಟುಗಳಿಂದ ಇವರನ್ನು ಕಸದ ಬುಟ್ಟಿಗೆ ವರ್ಗಾಯಿಸಿದ ನಂತರವೇ ಪ್ರಗತಿಯ ಬಗ್ಗೆ ಯೋಚನೆ ಸಾಧ್ಯ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 103
ಭಾರತದ ಅತಿ ಕೇಂದ್ರೀಕೃತ ಆಡಳಿತ ಪದ್ಧತಿ, ಹಿಂದಿ ಮಾತನಾಡುವ ಜನರ ದಬ್ಬಾಳಿಕೆ ಮೊದಲಾದವುಗಳಿಂದ ಪ್ರತ್ಯೇಕತಾವಾದ ಭಾರತದ ಒಂದಲ್ಲ ಒಂದು ಕಡೆ ಹೊಗೆಯಾಡುತ್ತಲೇ ಇರುವುದನ್ನು ಕಾಣಬಹುದು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 113
ಸರ್ಕಾರ ಅಂದ್ರೆ, ಅವು ನಮ್ಮಿಂದನೇ ಎಲೆಕ್ಟ್ ಆಗಿ ಹೋಗಿರೋದು. ನೂರಾರು ಸಮಸ್ಯೆಗಳು ಇದ್ದರೂ, ನಾಳೆ ಬೆಳಗಾಗುವುದರೊಳಗೆ ಅವು ಅವರು ಕೆಲಸ ಮಾಡ್ಬೇಕಾಗಿದೆ. ನೀವು ಯಾವತ್ತಿಗೂ ಬಗೆಹರಿಯದಿರುವಂತಹ ಸಮಸ್ಯೆಗಳನ್ನು ಎತ್ಕೊಂಡು ವಾಗ್ವಾದ ಮಾಡ್ತಾ ಇದ್ದರೆ, ನಾಳೆ ಬೆಳಗ್ಗೆ ಎದ್ದು ಕೆಲಸ ಮಾಡಬೇಕಾಗಿರೋನು ಏನ್ ಮಾಡ್ಬೇಕು ? ಆದ್ದರಿಂದ ವಿ ಮಸ್ಟ್ ಫೈಂಡ್ ಔಟ್ ಎ ಕಾಂಪ್ರಮೈಸ್. ಇದು ಮಾಡಬೇಡಿ ಅಂತ ಹೇಳೋದಿಕ್ಕೆ ಮುಂಚೆ ಇದನ್ನು ಮಾಡಿ ಅದರ ಬದಲು ಅಂತ ಇನ್ನೊಂದು ಅದಕ್ಕೆ ಬದಲಿಯಾದ ಯೋಜನೆಯನ್ನು ನಾವು ಅವರಿಗೆ ಸಜೆಸ್ಟ್ ಮಾಡಬೇಕಾಗುತ್ತದೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 595 & 596
ಒಬ್ಬ ಪ್ರಾಮಾಣಿಕ ಸಂಶೋಧಕ ಒಂದು ಯೋಜನೆ ಹಾಕಿಕೊಂಡು ಕೆಲಸ ಆರಂಭಿಸೋದರೊಳಗೆ ಅವನಿಗೆ ವರ್ಗ ಮಾಡಿಸಲು ಕುತಂತ್ರ ಆರಂಭ ಆಗಿರ್ತದೆ. ಅವನು ಅತ್ತಲಾಗಿ ಹೋದ ಅಂದರೆ ಇತ್ತ ಅವನ ಕೆಲಸ ಅರ್ಧಕ್ಕೆ ಮಣ್ಣು ತಿಂತದೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 51
ದೊಂಬಿ ದಂಗೆ ಕ್ರಾಂತಿ ಇದರಲೆಲ್ಲಾ ಪ್ರಾಣ ಕಳಕೊಳ್ಳೋರು ಕಡ್ಡಾಯವಾಗಿ ನಿರಪರಾಧಿಗಳು ಮುಗ್ದರು. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 187
ನಾವು ಕುರುಡು ಕುರುಡಾಗಿ ಯೋಜನೆಗಳನ್ನೂ, ಕೈಗಾರಿಕೀಕರಣವನ್ನೂ ರೂಢಿಸುತ್ತ ಹೋದರೆ ಶಾಶ್ವತವಾಗಿ ನಾವು ಮುಂದುವರಿದ ರಾಷ್ಟ್ರಗಳ ವಸಾಹತುಗಳಾಗಿ ಸದಾ ವಿದೇಶಿ ಧನಸಹಾಯಕ್ಕೆ ಅಂಗಲಾಚುತ್ತಾ ಭಾರತದೊಳಕ್ಕೆ ದುರ್ಬರ ದಾರಿದ್ರ್ಯ ನಿರ್ಮಾಣಕ್ಕೆ ತಳಹದಿ ಹಾಕುತ್ತೇವೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 59
ಇನ್ನಾದರೂ ನಮ್ಮ ಆರ್ಥಿಕ ತಜ್ಞರು ತಮ್ಮ ತುಕ್ಕು ಹಿಡಿದ ಹತಾರುಗಳನ್ನೂ ಪಾಶ್ಚಿಮಾತ್ಯರ ಗಿಳಿಪಾಠಗಳನ್ನೂ ತೊರೆದು ಭಾರತದ ವಾಸ್ತವಕ್ಕೆ ಕಣ್ತೆರೆಯಬೇಕಾಗಿದೆ. – ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 55
ಫೋಟೋಗ್ರಫಿ ನುಡಿಗಳು
PHOTOGRAPHER CAN NOT BE A HERO BECAUSE HE HAS TO BE BEHIND THE CAMERA. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, INTERVIEW VIDEO
ನೀವು ಸಹ ಚಿತ್ರಗ್ರಾಹಕರಾಗದ ಹೊರತು ಚಿತ್ರಗಳನ್ನು ನೋಡಿ ಮೆಚ್ಚಬಹುದೇ ವಿನಃ ಅವುಗಳನ್ನು ತೆಗೆಯುವ ಕಷ್ಟ ಏನೆಂಬುದು ನಿಮಗೆ ಗೊತ್ತಾಗುವುದೇ ಇಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ, ಪುಟ 38
ಒಳ್ಳೆಯ ಚಿತ್ರಗಳನ್ನು(ಫೋಟೊ) ತೆಗೆಯುವುದಕ್ಕೆ ಕೆಲವು ಕಾಲದ ಪರಿಶ್ರಮ ಮತ್ತು ತಾಳ್ಮೆ ಬೇಕು. ಇದು ಹೇಳಿಸಿಕೊಂಡು ಕಲಿಯುವ ವಿದ್ಯೆಯೆಂದು ನನಗೆ ಅನ್ನಿಸುವುದಿಲ್ಲ. ನೀವೇ ಪ್ರಯೋಗ ಮಾಡಿ ಮಾಡಿ ನಿಧಾನವಾಗಿ ಕಲಿಯುತ್ತೀರಿ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 343
ಫೋಟೋಗ್ರಫಿ,ಸಂಗೀತ,ಪೇಂಟಿಂಗ್,ಇವನ್ನೆಲ್ಲಾ ಹಚ್ಚಿಕೊಂಡು ತೊಳಲಾಡಿದ್ದು ಹೇಗೆ ನನಗೆ ಉಪಯುಕ್ತವಾಯ್ತೋ ಸ್ಪಷ್ಟವಾಗಿ ಹೇಳಲಾರೆ. ಆದರೆ ಫೋಟೋಗ್ರಫಿ ನನ್ನ ಬರವಣಿಗೆಗೆ ಹಲವು ಅಸಾಧಾರಣ ಶಿಸ್ತು ಸಂಯಮಗಳನ್ನು ಕಲಿಸಿತೆಂದು ಅನ್ನಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು
ಶ್ರೇಷ್ಠ ಛಾಯಾಚಿತ್ರಗಳಿಗೆ ಸಲಕರಣೆಗಳು ಮುಖ್ಯವಲ್ಲ, ಅದರ ಹಿಂದಿರುವ ಮನಸ್ಸು ಮತ್ತು ಪ್ರತಿಭೆ ಎಂದು ತಿಳಿಯಲು ನನಗೆ ಬಹುಕಾಲ ಬೇಕಾಯ್ತು. ಈಗಲೂ ಅನೇಕ ಯುವಕರು ಸಾಧನ ಸಲಕರಣೆಗಳತ್ತಲೇ ಹೆಚ್ಚು ಗಮನ ಕೊಡುವುದನ್ನು ನೋಡಿದ್ದೇನೆ. ಸಾಧನ ಸಲಕರಣೆಗಳು ಅಷ್ಟು ಮುಖ್ಯವಲ್ಲ ಎಂದು ನಾನು ಹೇಳಿದರೆ ಅವರು ಮನಸ್ಸಿಗೇ ಹಾಕಿಕೊಳ್ಳುವುದಿಲ್ಲ. ಸದಾ ಯಾವುದೋ ಕ್ಯಾಮರಾ ಕೊಳ್ಳಲೋ ಲೆನ್ಸ್ಗಳನ್ನು ಕೊಳ್ಳಲೋ ಹಂಬಲಿಸುತ್ತಾ ಹುಡುಕಾಡುತ್ತಾರೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೯೪, ವರ್ಷ ೧೯೯೬
ಫೋಟೊಗ್ರಫಿಯಲ್ಲಿ ಛಾಯಾಗ್ರಾಹಕ ಎಂದೂ ತನ್ನ ಕೃತಿಯ ವಸ್ತುವಾಗಲೀ ಅಥವಾ ತನ್ನ ಕೃತಿಯ ನಾಯಕನಾಗಲೀ ಆಗುವುದು ಸಾಧ್ಯವಿಲ್ಲ. ಆತ ಎಂದಿದ್ದರೂ ಕ್ಯಾಮರಾದ ಹಿಂದೆಯೇ ಇರಬೇಕು. ಹಾಗಾಗಿ ವಸ್ತುನಿಷ್ಠತೆ ಫೋಟೋಗ್ರಫಿಯಲ್ಲಿ ಅನಾಯಾಸವಾಗಿ ತನ್ನಿಂದ ತಾನೇ ಬರುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೨೦೦೩, ಪುಟ೨೯೭
ಫೋಟೋಗ್ರಫಿಯ ಇನ್ನೊಂದು ಅಸಾಧಾರಣ ಅಂಶ ಎಂದರೆ ಕಣ್ಣೆದುರು ಕಾಣುವ ಖಚಿತ ವಾಸ್ತವವನ್ನೇ ಕ್ಯಾಮರಾದ ಫ್ರೇಮಿನಲ್ಲಿ ನೋಡಿದಾಗ, ಅದಕ್ಕೊಂದು ಚೌಕಟ್ಟು ಹಾಕಿ ವಿಶಿಷ್ಟ ಕೋನದಿಂದ, ಪರಿಭಾವಿಸಿದ ಕೂಡಲೇ, ಯಾವ ಉತ್ಪ್ರೇಕ್ಷೆಯ, ಅಲಂಕಾರದ ಅಗತ್ಯವೂ ಇಲ್ಲದೆ ಕ್ಯಾಮೆರಾ ಎದುರಿನ ವಸ್ತು ಅಥವಾ ದೃಶ್ಯ ಕಲಾಕೃತಿಯಾಗಿ ಮಾರ್ಪಡುವುದನ್ನು ನೋಡಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೨೦೦೩, ಪುಟ೨೯೭
ವಾಸ್ತವ ಜಗತ್ತಿನ ಸರ್ವೇಸಾಧಾರಣ ದೃಶ್ಯ ಒಂದು ವಿಶಿಷ್ಟ ದೃಷ್ಟಿಕೋನದ ಚೌಕಟ್ಟಿನೊಳಗೆ ಸ್ಥಗಿತಗೊಳಿಸಿದ ಕೂಡಲೇ ಅನೇಕ ಧ್ವನ್ಯಾರ್ಥಗಳಿಂದ ಕೂಡಿದ ಪ್ರತಿಮೆಯಾಗಿ ಕಲಾಭಿವ್ಯಕ್ತಿಯಾಗುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ೨೦೦೩, ಪುಟ೨೯೭
ಕುವೆಂಪು ಕುರಿತ ನುಡಿಗಳು
ತೇಜಸ್ವಿಯವರು ಅವರ ತಂದೆ ಬಗ್ಗೆ ಹೇಳಿರುವ ಮಾತುಗಳು
ವಿಪರೀತ ದಾಕ್ಷಿಣ್ಯ ಮತ್ತು ಸಂಕೋಚಗಳ ಅಣ್ಣ ಕರ್ನಾಟಕ ಮತ್ತು ಕನ್ನಡದ ವಿಷಯ ಬಂದಾಗ ಮಾತ್ರ ಯಾವುದೇ ಮುಲಾಜನ್ನೂ ತೋರಿಸಿದ್ದು ನನಗೆ ಕಂಡಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೬೫
ನನಗೆ ತಿಳಿದಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದವರು. ಬದಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಠರಂತೆ ಅವಡುಗಚ್ಚಿ ಜೀವಿಸುತ್ತಿದ್ದುದ್ದನ್ನು ನಾನಂತೂ ಕಂಡಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಅಣ್ಣನ ನೆನಪು, ಪುಟ ೩೩
ಅಣ್ಣನಿಗೆ ವಯಸ್ಸಿನ ಪರಿಮಿತಿ ಇಲ್ಲದಿದ್ದರೆ ಮಹಾಕವಿ ರಾಷ್ಟ್ರಕವಿ ಪದವಿಗಳನ್ನೆಲ್ಲಾ ಕಸದಬುಟ್ಟಿಗೆ ಎಸೆದು ನಮ್ಮ ಜೊತೆ ಗಾಳ ಹಿಡಿದು ಹೊರಡುತ್ತಿದ್ದರೆಂದು ಅನ್ನಿಸುತ್ತದೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಅಣ್ಣನ ನೆನಪು, ಪುಟ ೬೦
ಅಕ್ಷರ ಕಲಿಯುವದಕ್ಕಿಂತ ಮೊದಲೇ ಚಿತ್ರ ಬರೆಯಲು ಶುರು ಮಾಡಿದವನು. ಇ ಅಕ್ಷರವನ್ನು ಸುಲಭವಾಗಿ ಮಾರ್ಪಡಿಸಿ ಇಲಿಯನ್ನೂ,’ಬ’ ಅಕ್ಷರವನ್ನು ಮಾರ್ಪಡಿಸಿ ಸುಲಭವಾಗಿ ಬಾತನ್ನು ಬರೆಯಬಹುದೆಂದು ನಮ್ಮ ತಂದೆಯವರು ತೋರಿಸಿಕೊಟ್ಟ ದಿನದಿಂದಲೇ ಬಹುಶಃ ಚಿತ್ರ ಬರೆಯುವುದಕ್ಕೆ ಆಸಕ್ತಿ ಶುರುವಾಯ್ತೆಂದು ಹೇಳಬಹುದು. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಹೊಸ ವಿಚಾರಗಳು ಪುಸ್ತಕದಲ್ಲಿನ ಸಂದರ್ಶನದಿಂದ
ಆಗಿನ ಗೊಂದಲ ದ್ವೇಷಾಸೂಯೆಗಳ ವಾತಾವರಣದಲ್ಲೂ ದೃಢವಾಗಿ ಸಾಹಿತ್ಯ ನಿಷ್ಠೆಯಿಂದ ತಾವು ನಂಬಿದ ಮೌಲ್ಯಗಳ ಆಧಾರದ ಮೇಲೆ ಗಟ್ಟಿಯಾಗಿ ನಿಂತು ಸ್ಪಷ್ಟವಾಗಿ ಮಾತಾಡುತ್ತಿದ್ದವರೆಂದರೆ ಅಣ್ಣ ಒಬ್ಬರೇ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಅಣ್ಣನ ನೆನಪು’ ಪುಸ್ತಕದಿಂದ
ಕುವೆಂಪುರವರ ಸಾಮಾಜಿಕ ಕಳಕಳಿ, ಸುಧಾರಣ ದೃಷ್ಟಿ, ವಿಚಾರಶೀಲತೆ ಮೊದಲಾದ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಮರೆತು ಅವರನ್ನು ಕೇವಲ ಕವಿ ಹಾಗೂ ಕಲಾವಿದ ಎನ್ನುವ ನೆಲೆಯಲ್ಲೇ ನಾವು ಗುರುತಿಸುತ್ತಾ ಹೋದರೆ ಅವರ ಅತಃಸ್ಸತ್ವವನ್ನು ನಾವು ತಪ್ಪಾಗಿ ಪ್ರತಿನಿಧಿಸಿದಂತೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕವಿಶೈಲದಲ್ಲಿ ಅಣ್ಣನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಎಲ್ಲಾ ಚಿತೆಯಮೇಲೆ ಒಂದೊಂದು ಗಂಧದ ಚಕ್ಕೆಯನ್ನಿಡುತ್ತಿದ್ದರು. ನನಗೂ ಹೇಳಿದರು. ನನಗೆ ಇದೊಂದು ಶಾಸ್ತ್ರ ಎಂದು ಗೊತ್ತಿರಲಿಲ್ಲ. ಅಂತಿಮ ಗೌರವ ಈ ರೀತಿ ಸಮರ್ಪಿಸುತ್ತಿದ್ದಾರೆ ಎಂದು ಹೋದೆ. ಚಕ್ಕೆ ತೆಗೆದು ಇಡುತ್ತಾ ಇರಬೇಕಾದರೆ ಹಿಂದಿನಿಂದ ಯಾರೋ ಅಯ್ಯಯ್ಯೋ ಬಲಗೈಲಿ ಇಡಬಾರದು, ಎಡಗೈಲಿ ಇಡಬೇಕು ಎಂದರು. ಹಿಂದುರಿಗಿ ನೋಡಿದೆ! ನನ್ನ ಮಿತ್ರರಾದ ಡಿ.ಬಿ.ಚಂದ್ರೆಗೌಡರೇ ನಿಂತಿದ್ದಾರೆ! ನನಗೆ ಅಣ್ಣನ ಇಡೀ ಜೀವನದ ಬೋಧನೆ, ಅವಿರತ ಹೋರಾಟ, ಕೊಟ್ಟ ಕೊನೆಯ ಅವರ ಸಂದೇಶ ಎಲ್ಲ ಮನಃಪಲಟದಲ್ಲಿ ಒಂದು ಕ್ಷಣ ಸುಳಿದುಹೊಯ್ತು. ಒಕ್ಕಲಿಗರ, ಶೂದ್ರರ, ದೌರ್ಬಲ್ಯಗಳನ್ನು ನೆನೆದು ದುಃಖವಾಯ್ತು. ಇದು ಮಾತಿಗೆ ಸಮಯವಲ್ಲವೆಂದು ಚೆನ್ನಾಗಿ ಗೊತ್ತಿದ್ದೂ ಚಂದ್ರೆಗೌಡರೆ, ಕುವೆಂಪು ಇಡೀ ಜೀವಮಾನ ಹೇಳಿದ್ದೆಲ್ಲಾ ನಿರರ್ಥಕ, ನಾನೀಗ ಎಡಗೈಯಲ್ಲಿ ಇಟ್ಟರೆ! ಏನು ಮಾಡಲಿ ಹೇಳಿ! ಎಂದೆ. ಚಂದ್ರೆಗೌಡರಿಗೆ ನನ್ನ ಪ್ರಶ್ನೆಯ ಅರ್ಥ ತಾಗಿರಬೇಕು. ನಿಮ್ಮ ಇಷ್ಟ, ಸ್ಸಾರಿ!! ಎಂದರು. ನಾನು ಎಡಗೈಲಿ ಇಡಲಿಲ್ಲ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪುಗಳು
No comments:
Post a Comment