ಪರೀಕ್ಷೆ -💝- ಫಲಿತಾಂಶ
ಪರೀಕ್ಷೆಯ ಕಾಲ ಎಲ್ಲರಿಗೂ ಬಂದೆ ಬರುತ್ತೇ.. ಯಾವ ಪರೀಕ್ಷೆ ಅನ್ಕೊಂಡ್ರಾ ಮಕ್ಕಳಿಗೆ ಎಸ್ಸೆಲ್ಸಿ ,ಯುವಕರಿಗೆ ಸಿಇಟಿ, ವಧು ಪರೀಕ್ಷೆ, ಸಂಸಾರ ಪರೀಕ್ಷೆ.. ನಾನು ಇಲ್ಲಿ ಹೇಳಲು ಹೋಗುತ್ತಿರುವುದು ಇವೆಲ್ಲಕ್ಕಿಂತ ಭಿನ್ನವಾದ ಪರೀಕ್ಷೆ, ಲವ್ ಪರೀಕ್ಷೆ..
ಅದೇ ಕಾಲೇಜಿನ ಆ ಕನಸಿನ ಹುಡುಗಿಯ ಬಗ್ಗೆ ಮತ್ತೊಂದು ವಿಚಾರ ಹಂಚಿಕೊಳ್ಳೊಣ ಎಂದು ಬರೆಯುತ್ತಿದ್ದೆನೆ.. ಈಗಾಗಲೇ ಅವಳ ಬಗ್ಗೆ ಒಂದೆರೆಡು ಬಾರಿ ಬರೆದಿದ್ದೇನೆ, ಹೌದು ಇವಳು ಅವಳೇ.. ಅದೇ ಕಾಲೇಜಿನ ಗೇಟ್ ಬಳಿ ಕಪ್ಪು ಸೀರೆಯನ್ನುಟ್ಟ ನನ್ನ ಚೆಲುವೆ, ಕಾಲೇಜು ಮುಗಿಯುವ ಕಾಲ ಬಂದಿದ್ದರು ಒಬ್ಬರನ್ನೊಬ್ಬರು ಒಮ್ಮೆಯೂ ಮಾತನಾಡಿಸಲಿಲ್ಲ ನಾವು.. ನಾನು ನಮ್ ಗ್ಯಾಂಗ್‌ನ ಮುಂದೆ ಅವಳೆ ನನ್ ಹುಡ್ಗಿ ಕಣ್ರೋ ಅಂತ ದೊಡ್ಡದಾಗಿ ಬಿಲ್ಡಪ್ ಕೊಡ್ತಿದ್ದೆ. ಅವರೂ ಸಹ ಅವಳು ಬಂದಗೆಲ್ಲಾ ನಿನ್ ಹುಡ್ಗಿ ಬಂದ್ಳು ನೋಡೋ ಅಂತ ಹೇಳ್ದಾಗೆಲ್ಲಾ ತುಂಬಾ ಖುಷಿ ಪಡುತ್ತಿದ್ದೆ.. ಅವಳ ಎದುರಿಗೆ ಬಂದಾಗ ಅವಳ ಕಣ್ನೋಟ ನೋಡಿ ನನಗೆ ಮಾತೇ ಬರುತ್ತಿರಲಿಲ್ಲ.. ಭಯ ಆಗುತ್ತಿತ್ತು ಅಂತ ನಾನು ಒಪ್ಪಿಕೊಳ್ಳುತ್ತೇನೆ.. ಕಾಲೇಜಿನ ಕೊನೆ ಪರೀಕ್ಷೆ ಬಂದೇ ಬಿಟ್ಟಿತ್ತು.. ಪರೀಕ್ಷೆ ಸಿದ್ದತೆಗಾಗಿ ಕಾಲೇಜಿಗೆ ರಜೆಯೂ ಕೊಟ್ಟಾಯಿತು.. ಪರೀಕ್ಷೆ ಮುಗಿಯುದರೊಳಗೆ ನನ್ನಾಕೆಗೆ ಮಾತಾಡಬೇಕು ಅನ್ಸಿಸುತ್ತಿತ್ತು, ಅವಳಿಗೂ ಹಾಗೆಯೇ ಅನ್ಸಿತ್ತಿತ್ತು ಅಂತೆ… ಎಲ್ಲಾರೂ ಹಾಲ್ಟಿಕೇಟ್ ಪಡೆಯಲು ಎಲ್ಲಾರೂ ಕಾಲೇಜಿಗೆ ಹೋಗಿದ್ವಿ. ಅದೃಷ್ಟಕ್ಕೆ ಅವಳು ಸಹ ಅಂದೇ ಬಂದಿದ್ದಳು.. ಸರದಿ ಸಾಲಿನಲ್ಲಿ ನಾನು ಅವಳ ಹಿಂದೆಯೇ ನಿಂತಿದ್ದೆ. ಅದರೆ ಆವತ್ತೂ ಮಾತನಾಡಲಿಲ್ಲ.. ಅವಳು ನನ್ನ ಮುಂದೆ ನಿಂತು ನಾನು ಆಡಿದ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಮುಂದೊಂದು ದಿನ ಅದನ್ನೆಲ್ಲಾ ಹೇಳಿದಾಗ ತುಂಬಾ ಖುಷಿ ಪಟ್ಟಿದ್ದೆ..
ಪರೀಕ್ಷೆಗಳು ಪ್ರಾರಂಭವಾದವು ಆದರೆ ನಾನು ಅವಳಿಗೆ ಮಾತನಾಡಿಸಬೇಕೆಂಬ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂದು ತಿಳಿದುಕೊಂಡಿದ್ದೆ.. ಪರೀಕ್ಷೆಯ ಮಧ್ಯದ ಒಂದು ದಿನ ಸಂಜೆ ನಮ್ ತರ್ಲೆ ಗ್ಯಾಂಗ್ನ ಗೆಳೆಯನೊಬ್ಬ ಅವಳ ಪೋನ್ ನಂಬರ್ ಸಿಕ್ಕಿದೆ ಎಂದು ಕಾಡಿಸಲು ಪ್ರಾರಂಭಿಸಿದ.. ನಂಬರ್ ಬೇಕೆಂದರೆ ಒಂದು ಷರತ್ತು.. ಅವಳಿಗೆ ನಮ್ಮ ಮುಂದೆಯೇ ಕರೆ ಮಾಡಿ ಮಾತಾಡಬೇಕು ಅದೂ ಲೌಡ್‌ಸ್ಪಿಕರ್‌ನಲ್ಲಿ ಹಾಗಿದ್ದರೆ ಕೊಡುತ್ತೇನೆ ಎಂದನು.. ಮರುಭೂಮಿಯಲ್ಲಿ ನೀರು ಹುಡುಕುವವನಿಗೆ ಓಯಸಿಸ್ ಸಿಕ್ಕಂತಿತ್ತು ನನ್ನ ಪರಿಸ್ಥಿತಿ.. ಆಯಿತು ಕೊಡ್ರೋ ಏನಾದರೂ ಆಗಲಿ ಮಾತಾಡಿಸೋಣವೆಂದು ನಿರ್ಧರಿಸಿ ಕರೆ ಮಾಡಿದೆ.. ಹಲೋ ನಾನು.. ಹೇಗಿದ್ದಿಯಾ.. ಪರೀಕ್ಷೆ ಚೆನ್ನಾಗಿ ಬರೆದೆಯಾ.. ನಾಳೆಯ ಪರೀಕ್ಷೆಯ ಪ್ರಶ್ನೆಗಳು ಸಿಕ್ಕಿವೆ ಅದನ್ನು ನಿನಗೆ ಹೇಳೋಣಂತ ಕಾಲ್ ಮಾಡ್ದೆ ಅಂದೆ.. ಅವಳು ನನ್ನ ಜೊತೆ ಆತ್ಮೀಯವಾಗಿ, ನಿರ್ಭೀತಿಯಿಂದ, ಪರಿಚಯಸ್ಥರ ಜೊತೆ ಮಾತನಾಡುವಂತೆ ಏಕವಚನದಲ್ಲೇ ಮಾತನಾಡಿದಳು.. ಅವಳ ಮಾತುಗಳನ್ನು ಕೇಳಿಸಿಕೊಂಡ ನಮ್ ಗ್ಯಾಂಗ್‌ಗೆ ಖುಷಿಯ ಜೊತೆ ಸಂಶಯ..
ನೀವು ಇದೇ ಮೊದಲ ಬಾರಿಗಾ ಮಾತಾಡತ್ತಿರೋದು..!!? ನೀವು ಮುಂಚೆನೇ ಕಾಂಟ್ಯಾಕ್ಟ್‌ನಲ್ಲಿ ಇದ್ದಿರಿ ಅಲ್ವಾ..!!? ನಿಜ ಹೇಳೊ ಎಂದು ಕಾಡಿಸಿದರು.. ನಿಜ ನಾನು ಅವತ್ತೇ ಮೊದಲು ಅವಳಿಗೆ ಮಾತನಾಡಿಸಿದ್ದು.. ಮೊದಲ ಬಾರಿಗೆನೇ ಇಷ್ಟೊಂದು ಆತ್ಮೀಯವಾಗಿ ಮಾತಾಡೋಕೆ ಹೇಗೆ ಸಾಧ್ಯ. ಅವಳಿಗೂ ನಿನ್ನ ಮೇಲೆ ಪ್ರೀತಿ ಇರಬೇಕೆಂದರು.. ನಾನು ಧ್ವನಿಯಿಂದ ಮಾತಾಡಿದ್ದು ಅವತ್ತಿದ್ದರೂ ಕಣ್ನೋಟದಿಂದ ಅದೆಷ್ಟು ಮಾತಾಡಿದ್ದೆವೋ ಅನ್ಸಿಸುತ್ತಿತ್ತು ಅದಕ್ಕೆ ಇಷ್ಟೊಂದು ಸಲುಗೆ ಬಂದಿರಬಹುದು ಅಂದ್ಕೊಂಡೆ.. ಮಾತಾಡುವ ಪರೀಕ್ಷೆ ಮುಗಿದಾಗಿತ್ತು. ನಾಳೆ ಫಲಿತಾಂಶದ ದಿನ.. ಪರೀಕ್ಷೆ ಬರೆಯಲೂ ಬಂದಾಗ ಅವಳ ಮುಖ ಭಾವ ಹೇಗಿರುತ್ತದೆಯೋ ಎಂದು ನಿದ್ದೆ ಇಲ್ಲದೇ ಬೇಗ ಕಾಲೇಜಿಗೆ ಬಂದು ಗೇಟ್ ಬಳಿಯೇ ಕಾಯುತ್ತಾ ನಿಂತಿದ್ದೆ..
ಆ ದಿನ ನಾವಿಬ್ಬರೂ ಎಂದಿಗೂ ಮರೆಯಲೂ ಸಾಧ್ಯವಿಲ್ಲ.. ಅವಳ ಮುಖದಲ್ಲಿ ಆ ನಾಚಿಕೆಯ ನಗು ಕಂಡು ನಾನು ಕಳೆದೋದೆ..
ಸಂಜೆ ಅವಳಿಗೆ ಪ್ರಶ್ನೆಗಳು ಸಿಕ್ಕಿವೆ ಎಂದು ಹೇಳಿದ್ದ ಒಂದೂ ಪ್ರಶ್ನೆಯೂ ಸಹ ಬಂದಿರಲಿಲ್ಲ..
ಆದರೆ ಪರೀಕ್ಷೆಯಲ್ಲಿ ಪಾಸ್ ಆಗಿದ್ವಿ….
ಕಾಲೇಜು ಮುಗಿಯಿತು ಮುಂದುವರೆದು ಅವಳ ನಂಬರ್ ಬದಲಾಯಿತು ಮತ್ತೆ ಹೊಸ ತರಹದ ಪರೀಕ್ಷೆ ಪ್ರಾರಂಭವಾಯಿತು.. ಮುಂದೊಂದು ದಿನ ಓಡುವ ಟ್ರಾಫಿಕ್‌ನಲ್ಲಿ ಮನದನ್ನೆಯ ದರ್ಶನದ ಭ್ಯಾಗ ಲಭಿಸಿತು.. ಆ ನೆನಪನ್ನು ಇನ್ನೊಮ್ಮೆ ಹಂಚಿಕೊಳ್ಳುವೆ..

No comments:
Post a Comment