ಪುಸ್ತಕ:- ಮುನಿಶಾಮಿ ಮತ್ತು ಮಾಗಡಿ ಚಿರತೆ
ಲೇಖಕರು:- ಪೂರ್ಣಚಂದ್ರ ತೇಜಸ್ವಿ
ಭಾರತದಲ್ಲಿ ನರಭಕ್ಷಕ ಹುಲಿಗಳ ಹೊಡೆದುರುಳಿಸಿದವರಲ್ಲಿ ಪ್ರಸಿದ್ಧರೆಂದರೆ ಜಿಮ್ ಕಾರ್ಬೆಟ್ ಮತ್ತು ಕೆನೆತ್ ಆಂಡರ್ಸನ್ ಅವರು. ಆಂಡರ್ಸನ್ ತಾನು ಬೇಟೆಯಾಡಿದ ನರಭಕ್ಷಕಗಳ ಸಾಹಸ ಕತೆಗಳನ್ನು ಅಷ್ಟೇ ರೋಮಾಂಚಕ, ಹಾಸ್ಯ, ಕುತೂಹಲಕಾರಿಯಾಗಿ ವಿವರಿಸುವಲ್ಲಿ ನಿಸ್ಸಿಮಾ.. ಇವರ ಕತೆಗಳನ್ನು *ಕಾಡಿನ ಕತೆಗಳು* ಎಂಬ ಹೆಸರಿನಿಂದ 4 ಭಾಗಗಳಾಗಿ ಸರಣಿಕೆಯ ರೂಪದಲ್ಲಿ ತೇಜಸ್ವಿ ಅವರು ಕನ್ನಡಿಸಿದ್ದಾರೆ..
ಕಾಡಿನ ಕತೆಗಳು ಭಾಗ-4 ರ ಪುಸ್ತಕವೇ ಈ " ಮುನಿಶಾಮಿ ಮತ್ತು ಮಾಗಡಿ ಚಿರತೆ."
ಪುಸ್ತಕದಲ್ಲಿ ಜನರನ್ನು ಪೀಡಿಸುತ್ತಿದ್ದ ನರಭಕ್ಷಕ ಹುಲಿಗಳನ್ನು ಬೇಟೆಯಾಡುವ ನಾಲ್ಕು ರೋಚಕ ಕತೆಗಳಿವೆ.
1)ಮುನಿಶಾಮಿ ಮತ್ತು ಮಾಗಡಿ ಚಿರತೆ
2)ಅಲ್ಲಾಭಕ್ಷಿಯ ಪುಂಡುಕರಡಿ
3)ಬಾಳೆತೋಟದ ಸ್ವಾಮಿ
4)ರಾಂಪುರದ ಒಕ್ಕಣ್ಣ
"ಮುನಿಶಾಮಿ ಮತ್ತು ಮಾಗಡಿ ಚಿರತೆ" ಮುನಿಶಾಮಿ ತನ್ನನ್ನು ತಾನು ಜಂಟಲ್‌ಮನ್ ಶಿಕಾರಿದಾರರ ಗೈಡು ಎಂದು ಹೇಳಿಕೊಂಡು ತಿರುಗುವ ಬೆಂಗಳೂರಿನ ಪಕ್ಕಾ ಕಂತ್ರಿ.. ಕಂತ್ರಿ ಎನ್ನಲು ಕಾರಣ ಏನಪ್ಪಾ ಎಂದರೆ ಇವನು ತನ್ನ ಹೊಟ್ಟೆ ಹೊರೆಯಲು ಶಿಕಾರಿದಾರರನ್ನು ಹುಡುಕಿ ಅವರಿಗೆ ಟೋಪಿ ಹಾಕುವುದರಲ್ಲಿ ನಿಸ್ಸೀಮಾ.. ಬೇಟೆಯಾಡುವ ಚಪಲ ಹೊಂದಿರುವ ವ್ಯಕ್ತಿಗಳಿಂದ ಹಣ ಪಡೆದು ಅವರಿಗೆ ಶಿಕಾರಿ ಮಾಡಲು ಸೂಕ್ತ ಸ್ಥಳ ದಿನಾಂಕ ನಿಗದಿ ಮಾಡಿ ಪ್ರಾಣಿಗಳು ತೋರಿಸುವುದಾಗಿ ನಂಬಿಸಿ ಅವರಿಂದ ಹಣ ಪೀಕುತ್ತಿದ್ದ. ಗೈಡ್ ವೃತ್ತಿಯ ವರ್ಚಸ್ಸನ್ನು ಹೆಚ್ಚಿಸುವ ಆಸೆಯಿಂದ ಮಾಗಡಿ ಬಳಿಯ ಚಿರತೆ ಬೇಟೆಯಾಡಲು ಹೋಗಿ ನಾನಾ ಸಂಕಷ್ಟಕ್ಕೆ ಸಿಲುಕುವುದು.ನಂತರ ಆಂಡರ್ಸನ್ ಸಹಾಯದಿಂದ ನರಭಕ್ಷಕನನ್ನು ಹೊಡೆದುರುಳಿಸುವ ಕತೆ ಇಲ್ಲಿದೆ.
"ಅಲ್ಲಾಭಕ್ಷಿಯ ಪುಂಡುಕರಡಿ" ಹೆಸರೇ ಹೇಳುವಂತೆ ಜನರ ಕಾಡಿಸುವ ಕರಡಿ ಕೊಂದ ಘಟನೆ ಇದು. ಕರಡಿಗಳು ಸಾಮಾನ್ಯವಾಗಿ ನಿರುಪದ್ರಮಿ ಜೀವಿಗಳು ಆದರೆ ಈ ಕರಡಿ ಅದಕ್ಕೆ ವಿರುದ್ಧವಾಗಿ ಜನರ ಮೇಲೆ ಎರಗಿ ಹಲವರನ್ನು ಗಾಯಗೊಳ್ಳಿಸಿ ಕೊಂದು ಹಾಕಿತ್ತು.ಅಲ್ಲಾಭಕ್ಷಿಯ ಮಗನನ್ನು ಕೊಲ್ಲುವ ಕರಡಿಯನ್ನು ಕೊನೆಗಾಣಿಸವ ಕತೆ..
"ಬಾಳೆತೋಟದ ಸ್ವಾಮಿ" ಈ ಪುಸ್ತಕದಲ್ಲಿರುವ ಕತೆಗಳಲ್ಲಿ ನನಗೆ ಇದು ಅತ್ಯಂತ ಸ್ವಾರಸ್ಯಕರ ಎನ್ನಿಸಿದ ಕತೆ. ಹುಲಿ ಕೊಂದ ಸನ್ನಿವೇಶಕ್ಕಿಂತ ಅದರ ಪೂರ್ವಕತೆ ತುಂಬಾ ರೋಚಕವಾಗಿದೆ. ಕಳ್ಳ ಸಂನ್ಯಾಸಿ ಒಬ್ಬ ಊಟಿಯ ಬಳಿಯ ಒಂದು ಬಾಳೆತೋಟದಲ್ಲಿ ಬಂದು ನೆಲೆಸುತ್ತಾನೆ.ತೋಟದ ಮಾಲೀಕ ಸ್ವಾಮಿಗೆ ಅಲ್ಲೆ ಉಳಿಯಲು ಮನೆ,ಊಟದ ವ್ಯವಸ್ಥೆ ಮಾಡುತ್ತಾನೆ. ಇಲ್ಲೇ ಎಲ್ಲಾ ಪುಕ್ಕಟೆಯಾಗಿ ಸಿಗುವಾಗ ಕಳ್ಳ ಸ್ವಾಮಿ ಅಲ್ಲೆ ಉಳಿಯಲು ನಿರ್ಧಾರಿಸುತ್ತಾನೆ. ಈ ಸ್ವಾಮಿ ಅಲ್ಲಿ ಬಂದ ಕಾಲಕ್ಕೆ ಅಲ್ಲೆ ಕಾಡಿನಲ್ಲಿ ಒಂದು ಹುಲಿಯೂ ಬಂದು ನೆಲೆಸಿರುತ್ತದೆ.ಅದು ಅಲ್ಲಿನ ಜನರ ದನ ಕರುಗಳನ್ನು ಕೊಂದು ತಿನ್ನಲು ಪ್ರಾರಂಭಿಸುತ್ತದೆ. ಅಂಧ ಶ್ರಾದ್ಧರಾದ ಅಲ್ಲಿನ ಬುಡಕಟ್ಟು ಜನರು ಈ ಸ್ವಾಮಿ ಬಂದಾಗಿನಿಂದ ಈ ರೀತಿ ನೆಡೆಯುತ್ತಿದೆ ಈ ಹುಲಿ ಸ್ವಾಮಿಯದೇ ಇರಬೇಕು ಅಥವಾ ಸ್ವಾಮಿಯೇ ಹುಲಿಯಾಗಿ ! ಈ ರೀತಿ ಮಾಡುತ್ತಿರಬಹುದು ಎಂದು ನಂಬುತ್ತಾರೆ. ಈ ರೀತಿ ತಿಳಿಯಲು ಸ್ವಾಮಿಯ ನಡವಳಿಕೆ & ಕೆಲವು ಘಟನೆಗಳು ಕಾರಣವಾಗುತ್ತವೆ.. ಜನರ ಈ ಮೂಢತೆ ತಿಳಿದ ಸ್ವಾಮಿ ಹುಲಿ ಕಾಟ ತಪ್ಪಿಸಲು ಜನರಿಂದ ದಕ್ಷಿಣೆಯ ರೂಪದಲ್ಲಿ ಹಣ ವಸ್ತುಗಳನ್ನು ಪಡೆಯಲು ಪ್ರಾರಂಭಿಸಿದರು. ಕೇವಲ ದನಗಳನ್ನು ಕೊಲ್ಲುತ್ತಿದ್ದ ಹುಲಿ ಒಮ್ಮೆ ಒಬ್ಬ ದಾರಿಹೋಕನನ್ನು ಕೊಂದು ನರಭಕ್ಷಕನಾಗಿ ರೂಪುಗೊಂಡಿತು. ಈ ನರಭಕ್ಷಕ ಹುಲಿ ಕೊಲ್ಲು ಬರುವ ಆಂಡರ್ಸನ್ ಅಲ್ಲಿಯ ಜನರ ಮುಗ್ಧ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಕಳ್ಳ ಸ್ವಾಮಿಯ ವಿರೋಧ ಕಟ್ಟಿಕೊಳ್ಳವುದು. ಅಂತಿಮವಾಗಿ ತಾನೇ ಹುಲಿಯಾಗಿ ರೂಪುಗೊಳ್ಳವೆ ಎಂದು ನಂಬಿಸಿದ್ದ ಸ್ವಾಮಿ ಅದೇ ಹುಲಿ ಕೈಯಲ್ಲಿ ಸಾಯುತ್ತಾನೆ.ಹುಲಿ ಆಂಡರ್ಸನ್ ಗುಂಡಿಗೆ ಶಿಕಾರಿಯಾಗುತ್ತದೆ..
"ರಾಂಪುರದ ಒಕ್ಕಣ್ಣ" ಹುಲಿ ನರಭಕ್ಷಕನಾಗಲು ಮೂಲತಃ ಮನುಷ್ಯನೇ ಕಾರಣ ಎನ್ನಲು ಇದು ಒಳ್ಳೆಯ ಉದಾಹರಣೆ. ಕೊಯಮತ್ತೂರು,ಕೊಳ್ಳೇಗಾಲ ಈ ಪ್ರದೇಶದಲ್ಲಿನ ಅರಣ್ಯ ಭಾಗ ಈ ನರಭಕ್ಷಕ ಕಾರ್ಯ ಕ್ಷೇತ್ರ.. ಅರ್ಧದಷ್ಟು ಕೊಯಮತ್ತೂರು ಜಿಲ್ಲೆಯನ್ನು ಗಡಗಡ ನಡುಗಿಸಿತ್ತು ಇದು..
ಕಾಫಿ ತೋಟದಲ್ಲಿಟ್ಟ ಜಿನ್ ಕತ್ತರಿ ಹಿಡಿತಕ್ಕೆ ಸಿಕ್ಕು ಒಂದು ಕಣ್ಣು ಕಿವಿ ಕಳೆದುಕೊಂಡ ಹುಲಿ ನರಭಕ್ಷಕನಾಗಿ ಪರಿವರ್ತನೆಗೊಳ್ಳುತ್ತದೆ. ಅಲ್ಪಕಾಲದಲ್ಲೇ ಅನೇಕ ನರಮೇಧ ಮಾಡಿದ ಈ ಒಕ್ಕಣ್ಣನನ್ನು ಮಟ್ಟ ಹಾಕುವ ರೋಚಕ ಕತೆ ಇದರಲ್ಲಿದೆ..
No comments:
Post a Comment