ಪುಸ್ತಕ:- L
ಲೇಖಕರು:- ಜೋಗಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ L ಕಾದಂಬರಿ ವಿಚಾರ ತುಂಬಾ ಹರಿದಾಡುವುದನ್ನು ಕಂಡಿದ್ದೆ.. ವಿಭಿನ್ನವಾದ ಮುಖಪುಟವನ್ನು ಕಂಡು ಒಳಗೆ ಏನಿರಬಹುದು ಎಂಬ ಕುತೂಹಲದಿಂದ ಪುಸ್ತಕವನ್ನು ಖರೀದಿಸಿದೆ.. ಮುಖಪುಟವನ್ನು ಕಂಡು ಮನಸ್ಸಿನಲ್ಲಿ ನಾನಾ ರೀತಿಯಾಗಿರುವ ಆಲೋಚನೆಗಳು ಬಂದಿದ್ದವು..
L ಅಂದ್ರೆ ಲವ್ವರ್..??!
L ಅಂದ್ರೆ ಲೀಡರ್..??!
L ಅಂದ್ರೆ ಲೂಸರ್..??!
L ಅಂದ್ರೆ ಲೆಜೆಂಡ್..??!
L ಅಂದ್ರೆ ಲೈಫ್..??!
ಹೀಗೆ ನಾನಾ ಆಲೋಚನೆಗಳನ್ನು ಹೊತ್ತು ಪುಸ್ತಕವನ್ನು ತೆರೆದು ಓದಲಾರಂಭಿಸಿದೆ..
ಇದು ಕಾವ್ಯವಾ, ಕಾದಂಬರಿಯಾ, ಕವಿತೆಯಾ ಎಂದು ಹೇಳುವುದು ಕಷ್ಟ. ಎಲ್ಲವೂ ಹೌದು ಎಂದೇ ಅನಿಸುತ್ತದೆ. ಓದುತ್ತಾ ಹೋದಂತೆ ಓದು ನಿಲ್ಲಿಸಲಾಗದ ಸ್ಥಿತಿ..
ಕವಿ ಜೋಗಿ (ಲಕ್ಷ್ಮಣ ನೀಲಂಗಿ) ತಮ್ಮ ಜೀವನಾನುಭವಗಳನ್ನು ಕಥೆಯ ರೂಪದಲ್ಲಿ ಹಂಚಿಕೊಂಡ ಕಥನ ಕವನವಿದು..
ಕಾದಂಬರಿ ಓದುಗರಿಗೆ ಅವರವರ ಭಾವಕ್ಕೆ ತಕ್ಕಂತೆ ತೆರೆದುಕೊಳ್ಳುವ ಸ್ವಭಾವವನ್ನು ಒಳಗೊಂಡಿದೆ..
ಕವಿಯ ಕಾವ್ಯಕ್ಕೆ ಮೊದಲು ತಾಯಿ ನಂತರ ಪ್ರೇಯಸಿ ಕೊನೆಗೆ ತನಗೆ ತಾನೇ ಸ್ಪೂರ್ತಿ ಎಂಬಂತಿದೆ.
ಕಾದಂಬರಿಯ ನಾಯಕ ಲೀಲಾವತಿಯನ್ನು ಮನಸಾರೆ ಪ್ರೀತಿಸುತ್ತಿದ್ದ ಹಾಗಾಗಿ ಕಾದಂಬರಿಯಲ್ಲಿ ನನಗೊಬ್ಬ ಲವರ್ ಕಂಡನು.. ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳದೆ ಪ್ರೀತಿಯನ್ನು ಕಳೆದುಕೊಳ್ಳುವ ಲೂಸರ್ ಸಹ ಕಂಡನು.. ತನ್ನ ಪ್ರೇಯಸಿಗಾಗಿ ಬರೆದ ಅವಳು ಓದದ ಪತ್ರ ಮನಸ್ಸಿನಲ್ಲಿ ನಮ್ಮನ್ನು ನಾವು ಇಣಿಕಿ ನೋಡಿಕೊಳ್ಳುವಂತೆ ಮಾಡುತ್ತದೆ.. ರೆಂಜೆ ಹೂ,ಹೇಲುಚ್ಚೆ ವಾಸನೆ,ದುಂಡು ಮಲ್ಲಿಗೆ ವಾಸನೆ ಜೀವನದ ವಿಭಿನ್ನ ಮುಖ ದರ್ಶನ ಮಾಡಿಸುತ್ತದೆ..
ಕವಿ ಬಳಸಿರುವ ರೂಪಕಗಳು ಅತ್ಯುತ್ತಮವಾಗಿವೆ.. "ಯಯಾತಿ ತನ್ನ ಮಗನಾದ ಪುರುವಿನ ಯೌವನವನ್ನು ಕಸಿದುಬಿಟ್ಟ" ಎನ್ನುವ ಮಾತು,ಹಾಗೂ "ಯಕ್ಷಗಾನದ ನಳ-ದಮಯಂತಿ ಪ್ರಾತ್ರಧಾರಿಗಳು ಬೀಡಿ ಸೇದುವ ರೂಪಕಗಳು" ಕವಿ ಇಡೀ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ರೂಪಕಗಳ ಮೂಲಕ ಹೇಳುತ್ತಾರೆ..
L ಕಾದಂಬರಿಯಲ್ಲಿ ಲಕ್ಷ್ಮಣ ನೀಲಂಗಿ,ಲೀಲಾವತಿ,ಲವ್ವರ್,ಲೈಫು,ಲೂಸರ್,ಎಲ್ಲವನ್ನು ಕಾಣಬಹುದು, ಕಾಣುವ ಕಣ್ಣು ಬೇಕು ಅಷ್ಟೇ...
ನಾನು ಓದಿದ ಜೋಗಿಯವರ ಮೊದಲ ಕಾದಂಬರಿ ಇದು.ಕವಿ ವಿಭಿನ್ನ ನಿರೂಪಣೆಯ ಮೂಲಕ ಕಥೆಯನ್ನು ಹೆಣೆಯುವುದರಲ್ಲಿ ಯಶಸ್ವಿಯಾಗಿದ್ದಾರೆ..



5 comments:
ಕಾದಂಬರಿಯ ಬಗ್ಗೆ ತುಂಬಾ ಸೊಗಸಾಗಿ ಹೇಳಿದೀರಾ ಓದುವ ಆಸಕ್ತಿ ನನಗೂ ಇದೆ ಕಾದಂಬರಿಯ ಮುಖಪುಟ ತುಂಬಾ ಚೆನ್ನಾಗಿದೆ L
nice
🙏👍
Hi sir khushiyaytu oodi.olle kelsa munduvaresi
🙏 ತಾವು ಸಾಹಿತ್ಯ ಓದಿ...
ಶುಭವಾಗಲಿ..
Post a Comment