ಪುಸ್ತಕ:- ಯಮಳ ಪ್ರಶ್ನೆ
ಲೇಖಕರು:- ಪೂರ್ಣಚಂದ್ರ ತೇಜಸ್ವಿ
ಯಮಳ ಪ್ರಶ್ನೆ ಎಂಬುದು ತೇಜಸ್ವಿ ಅವರು ಬರೆದ ಏಕೈಕ ನಾಟಕ, ಇದೊಂದು ಅಸಂಗತ ನಾಟಕ. ಪೂರ್ಣಚಂದ್ರ ತೇಜಸ್ವಿಯವರು ಯುವ ಬರಹಗಾರರಾಗಿ ರೂಪುಗೊಳ್ಳುತ್ತಿದ್ದ ದಿನಗಳಲ್ಲಿ ಬರೆದಂಥ ಕೃತಿ.. ಗಾತ್ರದಲ್ಲಿ ಇದೊಂದು ಚಿಕ್ಕ ನಾಟಕ (೨೨ಪುಟಗಳು) ಆದರೆ ಮೌಲ್ಯಗಳಲ್ಲಿ ಮಾನವತೆ,ವಾಸ್ತವ ಪ್ರಪಂಚ ಬಿಂಬಿಸುವ ಹಲವು ಪ್ರಸಂಗಗಳನ್ನು ಒಳಗೊಂಡಿದೆ..
ಪಾತ್ರಗಳು:- ದಾರಿಯಲ್ಲಿ ಬಿದ್ದಿರುವ ಶವ,ತೋಟಿ,ಹೇಮಂತ್,ರಮೇಶ,ಪೊಲೀಸ್,ದಾರಿಹೋಕರು,ಛತ್ರಿ ಧಡಿಯ,ಯುವತಿ,ಭಟ್ಟ ..
ಕಥಾವಸ್ತು :- ಮಾರ್ಗ ಮಧ್ಯೆ ಕೆಟ್ಟುನಿಂತ ಮೋಟಾರು ಬೈಕು ಮತ್ತು ತರುಣರಿಬ್ಬರ (ಹೇಮಂತ ಮತ್ತು ರಮೇಶ )ಸಂವಾದದ ಸುತ್ತ ಸಾಗುವ ಈ ನಾಟಕ.. ಜೀವನದ ಸಂಕೀರ್ಣತೆಯನ್ನು, ಅಸಂಗತತೆಯನ್ನು ಬಿಂಬಿಸುವ ಹಲವು ಪ್ರಸಂಗ ಬಂದು ಹೋಗುತ್ತವೆ. ಇಲ್ಲಿನ ಮೋಟಾರು ಬೈಕು ಜಡ್ಡು ಹಿಡಿದ ಹಾಗೂ ಚಿಕಿತ್ಸೆಗೆ ಗುರಿಪಡಿಸಲಾಗದ ನಮ್ಮ ವ್ಯವಸ್ಥೆಯ ಸಂಕೇತವಾಗಿ; ಹಾಗೆಯೇ ತರುಣರ ಸಂವಾದವು ಏನನ್ನೂ ಸಾಧಿಸಲಾಗದ ವ್ಯರ್ಥ ಮಾತುಗಳಾಗಿ, ಅರ್ಥರಹಿತವಾಗಿ ಕಾಣುತ್ತವೆ.
ತೋಟಿ ಎನ್ನುವವ ಆಸ್ಪತ್ರೆಯಿಂದ ಒಂದು ಶವವನ್ನು ಕದ್ದು ರಸ್ತೆಯ ಪಕ್ಕ ಬಿಟ್ಟು ಅದರ ಚಿಕಿತ್ಸೆಗಾಗಿ ಹಣದ ಅಗತ್ಯವಿದೆ ಎಂದು ಭಿಕ್ಷೆ ಬೇಡುವುದು. ಶವ ಕಂಡ ಪೊಲೀಸನ್ನು ಇವನು ಆಕ್ಸಿಡೆಂಟ್ನಿಂದ ಸತ್ತಿದ್ದಾನೆಂದು ಹೇಮಂತ್ ಮತ್ತು ರಮೇಶನನ್ನು ಹಿಡಿದು ವಿಚಾರಿಸುವ ಪ್ರಸಂಗ.. ನಾಟಕದಲ್ಲಿ ಹೇಮಂತನ ಮಾನವೀಯತೆ ಹಾಗೂ ರಮೇಶನ ವಾಸ್ತವವಾದವನ್ನು ಕಾಣಬಹುದು..

No comments:
Post a Comment