ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Wednesday, March 20, 2019

ಸಾಹಿತ್ಯದ ಗೀಳು ಹಚ್ಚಿದವರು

ನಾ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕನ್ನಡ ಸಾಹಿತ್ಯದ ಆಸಕ್ತಿ ತುಂಬಾ ಕಡಿಮೆ, ಇತಿಹಾಸ ನನ್ನ ನೆಚ್ಚಿನ ವಿಷಯವಾಗಿತ್ತು.. ಒಮ್ಮೆ ಮನೆಯಲ್ಲಿನ ಪುಸ್ತಕದ ರಾಶಿಯಲ್ಲಿ ಹರಪನಹಳ್ಳಿಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನಕ್ಕೆ ಸಂಬಂದಿಸಿದ ಪುಸ್ತಕ ಸಿಕ್ಕಿತು,ಅದರಲ್ಲಿ ಹರಪನಹಳ್ಳಿಯ ಇತಿಹಾಸ ಪರಂಪರೆಯ ಹೇಳುವ ಚಿತ್ರಗಳಿದ್ದವು.ಆ ಚಿತ್ರಗಳಲ್ಲಿ ನನ್ನ ಗಮನ ಸೆಳೆದ ಚಿತ್ರವೆಂದರೆ ಬೀchi ಅವರದ್ದ..
ಬೀchi ಅವರ ಬಗ್ಗೆ ನನಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ, ಅವರ ಕೇಶ ವಿನ್ಯಾಸ,ನಗು ಮುಖ,ಅವರ ಹೆಸರು ಬರೆದಿರುವ ರೀತಿ( ಕನ್ನಡ ಇಂಗ್ಲೀಷ್‌ ಬೆರೆಸಿ) ಇದು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿಯಬೇಕು ಎಂಬ ಪ್ರೇರೇಪಿಸಿತು..
ಕಾಲೇಜಿನಲ್ಲಿ ಬೀchi ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದರು, ಆಗ ಅವರ ಬಗ್ಗೆ ಹೇಳುತ್ತಿದ್ದ ಪ್ರತಿಯೊಂದು ಮಾತು ನನಗೆ ರೋಮಾಂಚನ ನೀಡುತ್ತಿತ್ತು..
ಬೀchi ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ.ಅವರ ಪುಸ್ತಕಗಳಲ್ಲಿ ಹರಪನಹಳ್ಳಿಯ ವಿಚಾರಗಳು ಬಂದಾಗ ನಾನು ಹೀಗಿ ಹೋಗುತ್ತಿದ್ದೆ; ಅವರು ಓದಿದ,ಬೆಳೆದ ಸ್ಥಳದಲ್ಲಿ ನಾನಿರುವುದು ಎಂಬ ಹಮ್ಮೆಪಡುತ್ತಿದ್ದೆ..
ಹೀಗೆ ಬೀchi ಅವರ ತಿಳಿಯುವ ಕುತೂಹಲವು ನನಗೆ ಅರಿವಿಲ್ಲದಂತೆ ಕನ್ನಡ ಸಾಹಿತ್ಯದ ಗೀಳು ಹಚ್ಚಿತು..

No comments: