ಪುಸ್ತಕ:- ಕಂಪನಿ ಆಫ್ ವಿಮೆನ್
ಲೇಖಕರು:- ಖುಷ್ವಂತ್ ಸಿಂಗ್
ಅನುವಾದಕರು:- ರವಿ ಬೆಳಗೆರೆ
ವಿ.ಸೂಚನೆ:- “ಇದೊಂದು ಪೋಲಿ ಪುಸ್ತಕ. ಪಕ್ಕಾ ಎ ಗ್ರೇಡ್ ಸಿನಿಮಾ ತರ ಇದೆ. ನೀವು ವಯಸ್ಕರಲ್ಲದಿದ್ದರೆ ಓದಬೇಡಿ, ಓದಿ ರೋಮಾಂಚಿತರಾಗಲಾರದಷ್ಟು ವಯಸ್ಸಾಗಿದ್ದರೆ ಓದಲೇ ಬೇಡಿ.”
ಮೂಲ ಲೇಖಕರಾದ ಖುಷ್ವಂತ್ ಸಿಂಗ್ ಪ್ರಖ್ಯಾತ ಪತ್ರಕರ್ತರು, ಸಂಪಾದಕರು, ವಕೀಲರು, ಚಿಂತಕರು, ಅದ್ಭುತವಾದ ಬರಹಗಾರರಾಗಿದ್ದವರು. ಇವರ ಪ್ರಸಿದ್ಧ ಪುಸ್ತಕಗಳೆಂದರೆ “ದಿ ಟ್ರೈನ್ ಟು ಪಾಕಿಸ್ತಾನ್, ದಿಲ್ಲಿ, “ ಇವರ ಕಂಪನಿ ಆಫ್ ವಿಮೆನ್ ಪುಸ್ತಕವನ್ನು ಕನ್ನಡಿಸಿದವರು ಮೆಚ್ಚಿನ ಲೇಖಕರು ರವಿ ಬೆಳಗೆರೆ.
ಖುಷ್ವಂತ್ ಸಿಂಗ್ ಮತ್ತು ರವಿ ಬೆಳಗೆರೆ ಅವರು ನಡುವಿನ ಬಾಂದವ್ಯ ದ್ರೋಣಾಚಾರ್ಯ – ಏಕಲವ್ಯ ಅಂತಹದು. ಖುಷ್ವಂತ್ ಸಿಂಗ್ ಅವರಿಗೆ ಬೆಳಗೆರೆ ವಯಸ್ಸಿಗಿಂತ ಎರಡು ಪಟ್ಟು ವಯಸ್ಸಾಗಿದ್ದರೂ ತುಂಬಾ ಆತ್ಮೀಯತೆ. ಬೆಳಗೆರೆ ಅವರ ದಿಲ್ಲಿ ಪುಸ್ತಕವನ್ನು ಅನುವಾದಿಸಿದರು. ನಂತರ ಅನುವಾದಿಸಿದೇ ದಿ ಕಂಪನಿ ಆಫ್ ವಿಮೆನ್..
ಗೆಳೆಯನಿಂದ ಓದಲು ಪ್ರೇರಣೆಯಾದ ಈ ಪುಸ್ತಕದ ಹೆಸರು ಕೇಳಿ ಮಹಿಳೆಯರೆಲ್ಲಾ ಸೇರಿ ನೆಡೆಸುವ ಕಂಪನಿ/ ಸಂಸ್ಥೆ ಇರಬಹುದು ಎಂದು ಊಹಿಸಿದ್ದೆ. ಆದರೆ ಕಂಪನಿ ಪದಕ್ಕೆ ಸಹಚಾರ್ಯ ಸಹವಾಸ ಎಂದೂ ಅರ್ಥೈಸಿಕೊಂಡಾಗ ನಿಮಗೆ ಪುಸ್ತಕದೊಳಗಿರುವ ವಿಷಯಗಳು ಕಲ್ಪನೆಗೆ ಬರಬಹುದು.. ಪ್ರತಿಯೊಂದು ಜೀವಿಗೂ ಆಹಾರ ವಸತಿ ಎಷ್ಟು ಮುಖ್ಯವೋ ಅಷ್ಟೇ ಲೈಂಗಿಕತೆ..
ಪುಸ್ತಕದ ಪ್ರಮುಖ ಪಾತ್ರವೇ ಮೋಹನ್ ಕುಮಾರ್.. ಅವನ ಜೀವನದ ಪ್ರತಿಯೊಂದು ಹಂತದಲ್ಲಿ ಬರುವ ಸ್ತ್ರೀಯರು ಅವರೊಂದಿಗೆ ಅವನು ಅನುಭವಿಸಿದ ಕಷ್ಟಗಿಂತಲೂ ಸುಖದ ಬಗ್ಗೆನೇ ಹೇಳುವ ಪುಸ್ತಕವಿದು. ಪ್ರತಿ ಬಾರಿಯೂ ಹೊಸಬಳು ಅವಳೊಂದಿಗೆ ಆದ ಅನುಭಾವವೂ ಹೊಸದು, ಅದೆಲ್ಲಾ ಓದುತ್ತಾ ತಮ್ಮ ಮನಸ್ಸಿನಲ್ಲಿ ಕಾಮನೆಗಳ ಕಾಮನಬಿಲ್ಲು ಮೂಡದಿದ್ದರೆ ನೀವು ಪುಸ್ತಕ ಓದುವುದು ವ್ಯರ್ಥ ಅನ್ನಿಸಬಹುದು..
ಮೋಹನ್ ಹುಟ್ಟಿನಿಂದಲೇ ಶ್ರೀಮಂತನಲ್ಲ, ಆದರೆ ತನ್ನ ಚೊಚ್ಚಲ ಮಗ ಮೊದಲ ಬಾರಿಗೆ ಮನೆಗೆ ಬರುವನು ಎಂದು ಅವನಿಗಾಗಿ ದಿಲ್ಲಿಯ ಪ್ರತಿಷ್ಟಿತ ಪ್ರದೇಶದಲ್ಲಿ ಎರಡು ಕೋಟಿಯ ಬಂಗಲೆ ಖರೀದಿಸುವ ಶ್ರೀಮಂತ ಉದ್ಯಮಿಯಾಗಿ ಬೆಳೆದವನು.
ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡ ಮೋಹನ್‌ಗೆ ತಾಯಿ ಪ್ರೀತಿ ಸಿಕ್ಕಿದ್ದು ತಂದೆಯಿಂದಲೆ.. ಬಾಲ್ಯದಿಂದಲೇ ಜಾಣನಾಗಿದ್ದ ಮೋಹನ್ ಮುಂದೆ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಪ್ರಿನ್ಸ್‌ಟನ್ ಹೋಗುವನು ಅಲ್ಲಿದ್ದಷ್ಟು ಕಾಲದಲ್ಲಿ ಅವನು ಲೆಕ್ಕವಿಲ್ಲದಷ್ಟು ಮಹಿಳೆಯರ ಜೊತೆ ಮಲಗಿದ್ದ.. ಮೊದಲನೆಯವಳೇ ಜಾಸ್ಸಿಕಾ ಬ್ರೌನ್.. ಮಂಚದ ಮೇಲೆ ಹೇಗಿರಬೇಕೆಂದು ಕಲಿಸಿದ ಗುರು, ನಂತರ ಪಾಕಿಸ್ತಾನ ಮೂಲದ ಯಾಸ್ಮೀನ್ ವಾಂಚೂ ಎಂಬುವಳು.. ಇವರಾಡುವ ಆಟವನ್ನು ಓದಿಯೇ ಅನುಭವಿಸಬೇಕು.. ಪ್ರಪಂಚದ ನಾನಾ ಭಾಗದ ಹಲವು ಮಹಿಳೆಯರ ಭೇಟಿಯಾಡಿ ಓಳ್ಳೆಯ ನುರಿತ ಆಟಗಾರನಾಗಿದ್ದ ಮೋಹನ್.. ಅಮೆರಿಕದಿಂದ ಮರಳುವ ಮಗನಿಗೆ ಶ್ರೀಮಂತ ಮನೆ ಹುಡುಗಿ ನೋಡಿ ಮದುವೆ ಮಾಡುವ ತಂದೆಗೆ ತನ್ನ ಸೊಸೆಯಿಂದಲೇ ಮನೆಯಿಂದಾಚೆ ಹೋಗುವ ಪ್ರಸಂಗ, ಶ್ರೀಮಂತಿಕೆ ಇದ್ದರೂ ಕೊನೆಯಲ್ಲಿ ಹರಿದ್ವಾರದಲ್ಲಿ ಅನಾಥನಂತೆ ಸಾಯುವ ತಂದೆಯನ್ನು ಕಳೆದುಕೊಂಡ ಮೋಹನ್ ದುಃಖ ಕರಳು ಹಿಂಡುತ್ತದೆ.. ಶಿವಾಲಿಕ್ ಬೆಟ್ಟಗಳ ಮೇಲೆ ಹನಿಮೂನ್‌ನಲ್ಲಿ ಸುಂದರ ಕ್ಷಣಗಳ ನಂತರದಲ್ಲಿ ಹೆಂಡತಿಯ ಅನ್ಯೋನ್ಯತೆ ಪ್ರೀತಿಯ ಕೊರತೆಯಿಂದ ಇಬ್ಬರು ಮಕ್ಕಳ ನಂತರ ಸಂಸಾರ ಇಬ್ಭಾಗವಾಗುತ್ತದೆ.. ಮನ ಒಪ್ಪದಿದರೂ ತನು ಒಪ್ಪಿತೇ ಎನ್ನುವಂತೆ ಮೋಹನ್‌ನ ಲೈಂಗಿಕ ಬಯಕೆಗಳ ತೃಪ್ತಿಗಾಗಿ ಹಲವಾರ ಜೊತೆ ಸಹವಾಸ ಮಾಡುತ್ತಾನೆ.. ದೈಹಿಕ ಸುಖಕ್ಕಾಗಿ ಒಂದೆರಡು ತಿಂಗಳಿಗೆ ಜೊತೆಯಲ್ಲಿ ಇರಲು ಬಯಸುವ ಮಹಿಳೆಯರು ಬೇಕಾಗಿದರೆ ಇಚ್ಚೆ ಇರುವವರು ಸಂಪರ್ಕಿಸಿ ಎಂದು ಪತ್ರಿಕೆಯಲ್ಲಿ ಪ್ರಕಟಣೆ ನೀಡುತ್ತಾನೆ.. ದೇಶದ ಮೂಲೆ ಮೂಲೆಯಿಂದ ಬಂದ ಪತ್ರಗಳನ್ನು ಓದಿ ತನಗಿಷ್ಟದವರನ್ನು ಮನೆಗೆ ಕರೆಸಿಕೊಂಡು ಅನುಭವಿಸುತ್ತಾನೆ.. ಮನೆಗೆಲಸದ ಧನೂ.. ಪ್ರೋಪೆಸರ್ ಸರೋಜಿನಿ.. ತಮಿಳುನಾಡು ಮೂಲದ ನರ್ಸ್ ಮೇರಿ ಜೊಸೆಫ್.. ಗೋವಾದ ಮಸಾಜರ್ ಮೋಲಿ ಗೊಮ್ಸ್.. ಶ್ರೀಲಂಕಾದ ಸುಸಾಂತಿಕಾ ಗುಣತಿಲಕೆ.. ಹೀಗೆ ಮೋಹನನ ಜೀವನದಲ್ಲಿ ಬರುವ ಮಹಿಳೆಯರು ಒಬ್ಬರೊಂದಿಗೆ ಕಳೆದ ಆ ಕ್ಷಣಗಳ ವರ್ಣನೆ ಹಾಗೂ ಮಹಿಳೆಯ ತೋಳುಗಳಲ್ಲಿ ಬಂಧಿಯಾಗಿ ಅನುಭವಿಸುವ ಆ ಸುಖದ ಮುಂದೆ ಎಲ್ಲವೂ ಶೂನ್ಯವೆನೋ ಎಂಬುಂತೆ ಬದುಕಿ ಕೊನೆಗಾಲದಲ್ಲಿ ನಿದ್ದೆ ಇಲ್ಲದ ರಾತ್ರಿಗಳ ಕಳೆದು, ನಿದ್ರಾ ಮಾತ್ರೆಗಳಿಂದ ಚಿರನಿದ್ರೆಗೆ ಜಾರುತ್ತಾನೆ..
ಪುಸ್ತಕದಲ್ಲಿ ಮೋಹನನ ರಸಿಕತೆ ಪೋಲಿತನ ನಿಮ್ಮಲ್ಲಿ ಮೋಹವನ್ನು ಜಾಗೃತಗೊಳಿಸುತ್ತದೆ.. ಇದೂ ಪಕ್ಕಾ A+ ಬುಕ್, ಒಮ್ಮೆ ಓದಿ ನೋಡಿ…



No comments:
Post a Comment