ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.
ಕವನ ಸಂಕಲನ :
ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು (೧೯೬೨)
ಕಾದಂಬರಿಗಳು:
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩)
ನೀಳ್ಗತೆಗಳು ಸಂಪಾದಿಸಿ
ಸ್ವರೂಪ (೧೯೬೬)
ನಿಗೂಢ ಮನುಷ್ಯರು (೧೯೭೩)
ಕಥಾಸಂಕಲನ ಸಂಪಾದಿಸಿ
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕಿರಗೂರಿನ ಗಯ್ಯಾಳಿಗಳು (೧೯೯೧)
ಪಾಕಕ್ರಾಂತಿ ಮತ್ತು ಇತರ ಕತೆಗಳು
ನಾಟಕ:
ಯಮಳ ಪ್ರಶ್ನೆ (೧೯೬೪)
ಆತ್ಮ ಚರಿತ್ರೆ:
ಅಣ್ಣನ ನೆನಪು. (೧೯೯೬) ಕುವೆಂಪು ಅವರ ಕುರಿತು.
ಪ್ರವಾಸ ಕಥನ:
ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)
ವಿಮರ್ಶಾ ಕೃತಿಗಳು:
ವ್ಯಕ್ತಿ ವಿಶಿಷ್ಟ ಸಿಧ್ಧಾಂತ (೧೯೬೪)
ವಿಮರ್ಶೆಯ ವಿಮರ್ಶೆ
ಹೊಸ ವಿಚಾರಗಳು
ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು :
ಪರಿಸರದ ಕತೆ (೧೯೯೧)
ಮಿಸ್ಸಿಂಗ್ ಲಿಂಕ್ (೧೯೯೧)
ಸಹಜ ಕೃಷಿ (೧೯೯೨)
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (೧೯೯೩)
ಹಕ್ಕಿ ಪುಕ್ಕ
ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧
ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨
ವಿಸ್ಮಯ -೧,೨,೩ (೧೯೯೩)
ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨ (೧೯೯೩)
ನಡೆಯುವ ಕಡ್ಡಿ ಹಾರುವ ಎಲೆ
ಮನಸೋಬು ಪೂಕೋವೋಕ ಅವರ "ಒಂದು ಹುಲ್ಲಿನ ಕ್ರಾಂತಿ " ಪುಸ್ತಕದ ವಿವರಣಾತ್ಮಕ ಕೃತಿ
ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ ಸಂಪಾದಿಸಿ
ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಮಹಾಯುಧ್ಧ,
ಹಾರುವ ತಟ್ಟೆಗಳು,
ಮಹಾನದಿ ನೈಲ್ ಇತ್ಯಾದಿ.
ಮಿಲೇನಿಯಮ್ ಸರಣಿ ಸಂಪಾದಿಸಿ
ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.
ಮಿಲೇನಿಯಮ್ ೧ - ಹುಡುಕಾಟ
ಮಿಲೇನಿಯಮ್ ೨ - ಜೀವನ ಸಂಗ್ರಾಮ
ಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳು
ಮಿಲೇನಿಯಮ್ ೪ - ಚಂದ್ರನ ಚೂರು
ಮಿಲೇನಿಯಮ್ ೫- ನೆರೆಹೊರೆಯ ಗೆಳೆಯರು
ಮಿಲೇನಿಯಮ್ ೬ - ಮಹಾಯುದ್ಧ - ೧
ಮಿಲೇನಿಯಮ್ ೭ - ಮಹಾಯುದ್ಧ - ೨
ಮಿಲೇನಿಯಮ್ ೮ - ಮಹಾಯುದ್ಧ - ೩
ಮಿಲೇನಿಯಮ್ ೯- ದೇಶವಿದೇಶ - ೧
ಮಿಲೇನಿಯಮ್ ೧೦-ದೇಶವಿದೇಶ - ೨
ಮಿಲೇನಿಯಮ್ ೧೧-ದೇಶವಿದೇಶ - ೩
ಮಿಲೇನಿಯಮ್ ೧೨ - ದೇಶವಿದೇಶ - ೪
ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧
ಮಿಲೇನಿಯಮ್ ೧೪ - ಮಹಾಪಲಾಯನ
ಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨
ಮಿಲೇನಿಯಮ್ ೧೬ - ಅಡ್ವೆಂಚರ್
ಅನುವಾದ ಸಂಪಾದಿಸಿ
ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
ಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
ಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩) (೧೯೯೪) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
ಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪)
ರುದ್ರಪ್ರಯಾಗದ ಭಯಾನಕ ನರಭಕ್ಷಕ (೧೯೯೫) - ಜಿಮ್ ಕಾರ್ಬೆಟ್‍ರವರ 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ.
ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ

No comments:
Post a Comment