ಪುಸ್ತಕ:- ಅರಮನೆ ಗುಡ್ಡದ ಕರಾಳ ರಾತ್ರಿಗಳು
ಲೇಖಕರು:- ಗಿರಿಮನೆ ಶ್ಯಾಮರಾವ್
ರೋಚಕ ಕತೆಗಳ ಜೊತೆಯಲ್ಲಿ ಪಶ್ಚಿಮ ಘಟ್ಟಗಳ ರಮಣೀಯ ಸೌಂದರ್ಯ ಮತ್ತು ಅಲ್ಲಿನ ನಿಗೂಢತೆಗಳ ಅನಾವರಣಗೊಳಿಸುವ "ಮಲೆನಾಡಿನ ರೋಚಕ ಕತೆಗಳು" ಎಂಬ ಕಾದಂಬರಿ ಸೀರಿಯಲ್ಲಿನ ಭಾಗ-2 ಈ "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಎಂಬ ಕೃತಿ..
ಪೇಟೆಯಿಂದ ಟ್ರಕ್ಕಿಂಗ್‌ಗೆ ಎಂದು ಮಲೆನಾಡಿನ ಪಶ್ಚಿಮಘಟ್ಟದ ಬೆಟ್ಟಗಳನ್ನು ಹತ್ತಲು ಬರುವ ನವ ಜೋಡಿಗಳು ಇಲ್ಲಿನ ಕಾನನದಲ್ಲಿ ದಿಕ್ಕು ತಪ್ಪಿ ಅಲೆಯುವುದು ಹಾಗೂ ಇಲ್ಲಿಂದ ಪಾರಾಗುವ ಕಥಾ ಹಂದರ ಈ ಕೃತಿಯಲ್ಲಿದೆ..
ಮಾಯ ಬೆಂಗಳೂರಿನ ನಿವಾಸಿ, ಸುಂದರಿ ಅಪ್ಸರೆಯಂತ ಹುಡುಗಿ ಹಾಗೂ ಟ್ರಕ್ಕಿಂಗ್ ಪ್ರಿಯೆ.. ಟ್ರಕ್ಕಿಂಗ್ ಟ್ರೂಪಿನಲ್ಲಿದ್ದ ಕೀರ್ತಿ ಎಂಬುವನನ್ನು ಪ್ರೀತಿಸಿ ಮದುವೆಯಾದಳು. ಇದೇ ಟ್ರೂಪಿನಲ್ಲಿದ್ದ ಇನ್ನೊಂದು ಜೋಡಿ ಶ್ರೀಕರ ಮತ್ತು ದೀಪ್ತಿ..
ಮಾಯ-ಕೀರ್ತಿ & ಶ್ರೀಕರ-ದೀಪ್ತಿ ನಾಲ್ವರು ಆತ್ಮೀಯ ಗೆಳೆಯರು ಹೌದು.ಗೆಳೆತನಕ್ಕೆ ಮುಖ್ಯ ಕಾರಣ ಟ್ರಕ್ಕಿಂಗ್ ಅಭಿರುಚಿ.ಇದೇ ಟ್ರಕ್ಕಿಂಗ್ ಮುಂದೆ ಅವರ ಜೀವಕ್ಕೆ ಕುತ್ತು ತಂದೊಡ್ಡತ್ತದೆ..!?
ಪೋಷಕರ ಸಮ್ಮತಿ ಇಲ್ಲದಿದ್ದರೂ ಅವರಿಗೆ ಬಲವಂತವಾಗಿ ಒಪ್ಪಿಸಿ ಈ ನವ ವಿವಾಹಿತ ಜೋಡಿಗಳು ಮಳೆಗಾಲದ ಸಮಯದಲ್ಲಿ ಮಲೆನಾಡ ಬೆಟ್ಟಗಳ ಟ್ರಕ್ಕಿಂಗ್ ಮಾಡುವ ಹುಚ್ಚು ಸಾಹಸಕ್ಕೆ ಕೈಹಾಕುತ್ತಾರೆ..
ಬೆಂಗಳೂರಿನ ಸುತ್ತಮುತ್ತಲಿನ ಸಣ್ಣ ಪುಟ್ಟ ಬೆಟ್ಟ ಹತ್ತಿಳಿದ ಇವರು ನಿಗೂಢವಾದ ಅಭೇಧ್ಯ ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ಹತ್ತಲು ಬರುತ್ತಾರೆ. ಇಲ್ಲಿನ ಮಳೆ ರುದ್ರ ನರ್ತನ ನೋಡಿಯೇ ನಡುಗಿ ಹೋಗತ್ತಾರೆ.
ಇಲ್ಲಿನ ಪರಿಸರ ಪ್ರಾಣಿಗಳು ಮಳೆ ಕಾಡುದಾರಿಗಳ ಬಗ್ಗೆ ಅನುಭವ ಇರುವವರನ್ನೇ ದಾರಿ ತಪ್ಪಿಸುವಂತಹ ಭಯಾನಕ ಅರಣ್ಯಪ್ರದೇಶ ಈ ಪಶ್ಚಿಮ ಘಟ್ಟಗಳದ್ದು.
ಕಾಡಿನಲ್ಲಿ ದಾರಿ ತಪ್ಪುವ ಇವರು ಇಲ್ಲಿ ನಾನಾ ರೀತಿಯ ಕಷ್ಟ ಅನುಭವಿಸುತ್ತಾರೆ.ಕಾಡಿನಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಹೊರಜಗತ್ತಿನಿಂದ ಕಳೆದೋಗುತ್ತಾರೆ.ಇತ್ತ ಮಕ್ಕಳ ದಾರಿ ಕಾಯುತ್ತಿದ್ದ ತಂದೆ ತಾಯಿಯ ಕಳವಳ ಹೇಳತೀರದ್ದು..
ಕಾಡಿನಲ್ಲಿ ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಕೊಳೆತ ಹಲಸಿನ ಹಣ್ಣು,ಹಕ್ಕಿ ಮೊಟ್ಟೆಗಳು, ಅಣಬೆ, ಕಾಡುಕೋಳಿಯ ಹಸಿಮಾಂಸ ತಿನ್ನುವ ಪರಿಸ್ಥಿತಿ ಬರುತ್ತದೆ. ಹೇಗೋ ಜೀವ ಉಳಿಯಿತು ಎಂದುಕೊಳ್ಳುವಷ್ಟರಲ್ಲಿ ಶ್ರೀಕರನ ಭೀಕರ ಸಾವು..!
ದೀಪ್ತಿಯ ಕಣ್ಣ ಮುಂದೆಯೇ ಸೀಳು ನಾಯಿಗಳು ಶ್ರೀಕರನನ್ನು ಕಚ್ಚಿ ತಿನ್ನುತ್ತವೆ, ಕಣ್ಣ ಮುಂದೆಯೇ ಗಂಡನ ಈ ಸ್ಥಿತಿ ಕಂಡ ದೀಪ್ತಿ ಅರೆ ಹುಚ್ಚಿಯಂತೆ ಕಾಡಿನಲ್ಲಿ ಅಲೆಯುತ್ತಾಳೆ.. ಕೊನೆಗೆ ಅರಮನೆಗುಡ್ಡ ಹತ್ತಿ ಮೊಬೈಲ್ನಿಂದ ತಮ್ಮ ಪೋಷಕರಿಗೆ ತಮ್ಮ ಪರಿಸ್ಥಿತಿಯನ್ನು ತಿಳಿಸುತ್ತಾರೆ. ಪಶ್ಚಿಮಘಟ್ಟಗಳಲ್ಲಿ ಇವರನ್ನು ಹುಡುಕುವ ಕಾರ್ಯ ಪ್ರಾರಂಭವಾಗುತ್ತದೆ. ಬೆಟ್ಟಗುಡ್ಡಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಸ್ಥಳೀಯ ಸಿದ್ದರಾಜು
ಎಂಬುವನ ನೆರವನಿಂದ ಇವರನ್ನು ಕರೆತರಲು ಹೊರಡುತ್ತಾನೆ. ಸಿದ್ದರಾಜು ಗಾಢ ಕತ್ತಲಿನಲ್ಲೂ ಕಾಡಿನಲ್ಲಿ ದಾರಿ ಗುರುತಿಸಬಲ್ಲ ಹಾಗೂ ಇಲ್ಲಿನ ಪ್ರಾಣಿಗಳ ಬಗ್ಗೆ, ಗಿಡಮೂಲಿಕೆಗಳ ಬಗ್ಗೆ ತಿಳಿದಂತವನು. ಹುಚ್ಚಿಯಂತೆ ಅಲೆದು ಸತ್ತಳೆಂದೇ ಭಾವಿಸಿದ ದೀಪ್ತಿ ಸಿಗುವುದು ಮತ್ತು ಸೀಳು ನಾಯಿಗಳಿಂದ ಸತ್ತನೆಂದು ತಿಳಿದಿದ್ದ ಶ್ರೀಕರನ್ನು ಸಹ ಪವಾಡದಂತೆ ಬದುಕುಳಿಯುತ್ತಾನೆ.. ಇವರನ್ನು ರಕ್ಷಿಸಿ ಕಾಡಿನಿಂದ ಹೊರತರಲು ಸಿದ್ಧರಾಜು ಸಫಲನಾಗುತ್ತಾನೇ..? ಮಗ ಸತ್ತನೆಂದೇ ತಿಳಿದ ಶ್ರೀಕರನ ತಂದೆ ಏನು ಮಾಡುತ್ತಾನೆ ಎಂಬುದನ್ನು ಅರಿಯಲು ಕಾದಂಬರಿ ಓದಲೇ ಬೇಕು..
ಕೃತಿಯಲ್ಲಿ ಕತೆಯ ರೋಚಕತೆಯ ಜೊತೆ ಜೊತೆಯಲ್ಲಿ ಮಲೆನಾಡಿನ ಚಿತ್ರಣವನ್ನು,ಇಲ್ಲಿನ ಮಳೆಗಾಲದ ವೈಭವವನ್ನು ಹಾಗೂ ಕಾಡಿನಲ್ಲಿ ನಡೆಯುವ ಕೆಲವು ಅನಾಚಾರಗಳು ಹಾಗೂ ಅರಮನೆ ಗುಡ್ಡದ ವಿವರಣೆಯನ್ನು ತುಂಬಾ ಸುಂದರವಾಗಿ ಹೆಣೆಯಲಾಗಿದೆ..

3 comments:
Very interesting Book......
nice sir
Thank you
Post a Comment