ಪುಸ್ತಕ:- ಸಂಸ್ಕಾರ
ಲೇಖಕರು:- ಯು_ಆರ್_ಅನಂತಮೂರ್ತಿ
ನಾನು ಪಿಯುಸಿ ಓದುವಾಗ ಈ ಕಾದಂಬರಿಯ ಬಗ್ಗೆ ಒಂದು ಲೇಖನ ಓದಿದೆ.ಅದರಲ್ಲಿ ಕಾದಂಬರಿಯ ಪರ-ವಿರೋಧದ ವಿಷಯ ಬಗ್ಗೆ ಚರ್ಚಿಸಲಾಗಿತ್ತು..
ವಿರೋಧಿಸಲು ಪ್ರಮುಖ ಕಾರಣವೆಂದರೆ ಅಂದು ಮಂಗಳೂರು ವಿಶ್ವವಿದ್ಯಾನಿಲಯ ಈ ಕಾದಂಬರಿಯನ್ನು ಪದವಿಯ ಪಠ್ಯ ವಿಷಯವಾಗಿ ಸೇರಿಸಿರುತ್ತದೆ.ಆಗ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳೇಲ್ಲಾ ಈ ಕಾದಂಬರಿಯನ್ನು ತಗೆದು ಹಾಕಲು ಪ್ರತಿಭಟನೆ ಮಾಡುತ್ತಾರೆ ಕಾರಣ ಇದರಲ್ಲಿ ಬಳಸಿರುವ ಕೆಲ ಪದಗಳನ್ನು ಕೀಳುಮಟ್ಟದ್ದು ಎಂದು.?! ಇನ್ನೊಂದು ಕಾರಣವೆಂದರೆ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿ ಬರೆಯಲಾಗಿದೆ ಎಂದು...
ಉಪನ್ಯಾಸಕರು,ವಿದ್ಯಾರ್ಥಿಗಳು ಪ್ರತಿಭಟಿಸಿದ್ದರೆಂದರೆ ಅದೆಂತಹ ಸಾಹಿತ್ಯ ಇರಬಹುದು ಎಂಬ ಕುತೂಹಲ ಕೆರಳಿತು ಈ ಕಾದಂಬರಿಯನ್ನು ಓದಲೇ ಬೇಕೆಂದು ಅಂದೇ ನಿಶ್ಚಯಿಸಿದೆ..ನಾಲ್ಕೈದು ಬಾರಿ ಓದಿದೆ.ಅದ್ಭುತವಾದ ಕಾದಂಬರಿ.ಎಷ್ಟು ಓದಿದರೂ ಮತ್ತೊಮ್ಮೆ ಓದುವ ಬಯಕೆ..
ಸಂಸ್ಕಾರ ಕಾದಂಬರಿಯ ಕೇಂದ್ರಬಿಂದುವೇ ನಾರಣಪ್ಪ..
ಕಾದಂಬರಿ ಪ್ರಾರಂಭವಾಗುವುದೇ ನಾರಣಪ್ಪನ ಶವಸಂಸ್ಕಾರ ವಿಚಾರವಾಗಿ..
ದೂರ್ವಾಸಪುರವೆಂಬ ಅಗ್ರಹಾರದ ಬ್ರಾಹ್ಮಣರ ಯಾಂತ್ರಿಕ ಆಚರಣೆಗಳನ್ನು ಪ್ರಶ್ನಿಸುತ್ತಾ, ತನ್ನ ಇಚ್ಛೆಯಂತೆ ಬದುಕುವ ಬಂಡುಕೋರ ಬ್ರಾಹ್ಮಣ ನಾರಣಪ್ಪ ಜಡ ಸಮಾಜಕ್ಕೆ ಸವಾಲಾಗಿದ್ದಾನೆ.ಅನಿಷ್ಟ ಗೊಡ್ಡು ಸಾಂಪ್ರದಾಯಗಳು ಕಿತ್ತೆಸೆದು ಕೆಳಜಾತಿಯ ಸೂಳೆ ಚಂದ್ರಿಯ ಜೊತೆ ಬದುಕುತ್ತಿದ್ದ ಮದ್ಯಪಾನ ಮಾಂಸಾಹಾರ ಸೇವಿಸುತ್ತಿದ್ದ ಅವನ ಶವಸಂಸ್ಕಾರವನ್ನು ತಾವು ಮಾಡಬಹುದೋ ಇಲ್ಲವೋ ಎಂಬ ಪ್ರಶ್ನೆ ಅವನ ಅಗ್ರಹಾರದ ಬ್ರಾಹ್ಮಣರಿಗೆ ಎದುರಾಗುತ್ತದೆ.
ಅದೇ ಅಗ್ರಹಾರದಲ್ಲಿ ಕಾಯಿಲೆಯಿಂದ ಹಾಸಿಗೆ ಹಿಡಿದ ಹೆಂಡತಿಯ ಆರೈಕೆ ಮಾಡುತ್ತಾ,‘ವೇದಾಂತ ಶಿರೋಮಣಿ’ಮಹಾನ್ ಧರ್ಮ ಜ್ಞಾನಿ ಎನ್ನಿಸಿಕೊಂಡ ಪ್ರಾಣೇಶಾಚಾರ್ಯರು ಜನರಿಗೆ ಧರ್ಮಸೂಕ್ಷ್ಮಗಳನ್ನು ವಿವರಿಸುತ್ತಾ ಬದುಕುತ್ತಿರುತ್ತಾರೆ.
"ನಾರಣಪ್ಪನನ್ನು ಅವರು ಬದಲಿಸಲೆತ್ನಿಸಿದರೆ, ನಾರಣಪ್ಪನೂ ಅವರನ್ನು ಬದಲಿಸಲೆತ್ನಿಸುತ್ತಾನೆ"; ಅವರ ಪಾವಿತ್ರ್ಯದ ಕಲ್ಪನೆಗಳಿಗೆ ಸವಾಲೆಸೆಯುತ್ತಾನೆ..
ನಾರಣಪ್ಪನ ಶವಸಂಸ್ಕಾರದ ಪ್ರಶ್ನೆಗೆ ಪ್ರಾಣೇಶಾಚಾರ್ಯರು ತಿರುವಿ ಹಾಕುವ ಧರ್ಮಶಾಸ್ತ್ರಗಳಲ್ಲೂ ಉತ್ತರವಿಲ್ಲ ಹಾಗೂ ಆಕಸ್ಮಿಕವಾಗಿ ಅವರೂ ಚಂದ್ರಿಯ ಜೊತೆ ಹಾಸಿಗೆ ಹಂಚಿಕೊಳ್ಳವ ಘಟನೆ!; ಅಲ್ಲಿಂದಾಚೆಗೆ ಅವರ ಜೀವನದ ದಿಕ್ಕು ಬದಲಾಗುತ್ತದೆ..
ಜೀವನದಲ್ಲಿ ಯಾವುದು ಮುಖ್ಯ..??
ಆಸೆ ಆಕಾಂಕ್ಷೆಗಳೇ-ಸಂಪ್ರದಾಯ ರೀತಿನೀತಿಗಳೇ..??
ನಾರಣಪ್ಪನ ರೀತಿ ಬದುಕಬೇಕೇ-ಪ್ರಾಣೇಶಚಾರ್ಯರ ರೀತಿಯೇ..??
ಯಾರು ಸರಿ..??
ಕಾದಂಬರಿ ಇಂತಹ ಹಲವು ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ..
ಕೊನೆಗೆ ಇಡೀ ಅಗ್ರಹಾರವೇ ಪ್ಲೇಗ್ ರೋಗಕ್ಕೆ ತುತ್ತಾಗಿ ಜೀವನ ನಶ್ವರ ಎಂಬ ಅರ್ಥವನ್ನು ಕೊಡುತ್ತದೆ...

2 comments:
Thank u for sharing,it's great book
Thank u
Post a Comment